ಪ್ರಧಾನ ಮಂತ್ರಿಯವರ ಕಛೇರಿ
ಯುನೈಟೆಡ್ ಸ್ಟೇಟ್ ಆಫ್ ಅಮೆರಿಕಾದ ಅಧ್ಯಕ್ಷರ ಜೊತೆ ಪ್ರಧಾನಮಂತ್ರಿ ಸಮಾಲೋಚನೆ
Posted On:
24 MAY 2022 2:23PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 24 ಮೇ 2022ರಂದು ಟೋಕಿಯೋದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಧ್ಯಕ್ಷರ ಗೌರವಾನ್ವಿತ ಶ್ರೀ ಜೋಸೆಫ್ ಆರ್ ಬೈಡನ್ ಅವರೊಂದಿಗೆ ಆತ್ಮೀಯ ಮತ್ತು ಫಲಪ್ರದ ಚರ್ಚೆ ನಡೆಸಿದರು. ಈ ಸಭೆಯು ದ್ವಿಪಕ್ಷೀಯ ಪಾಲುದಾರಿಕೆಗೆ ಮತ್ತಷ್ಟು ಆಳ ಮತ್ತು ಚುರುಗೊಳಿಸಲು ಗಣನೀಯ ಫಲಿತಾಂಶಗಳಿಗೆ ಕಾರಣವಾಗಲಿದೆ.
2021ರ ಸೆಪ್ಟೆಂಬರ್ ನಲ್ಲಿ ವಾಷಿಂಗ್ಟನ್ ಡಿ.ಸಿ. ಯಲ್ಲಿ ಇಬ್ಬರು ನಾಯಕರು ವೈಯಕ್ತಿಕವಾಗಿ ಭೇಟಿಯಾದ ನಂತರ ಜಿ-20 ಮತ್ತು ಸಿಒಪಿ-26 ಶೃಂಗಸಭೆಗಳಲ್ಲಿ ಸಂವಾದ ನಡೆಸಿದ್ದರು, ಈ ಸಭೆ ಇಬ್ಬರು ನಾಯಕರ ನಡುವಿನ ನಿಯಮಿತ ಉನ್ನತ ಮಟ್ಟದ ಸಂವಾದದ ಮುಂದುವರಿಕೆಯ ಭಾಗವೆಂದು ಗುರುತಿಸುತ್ತದೆ. ಇತ್ತೀಚೆಗೆ ಅವರು 2022ರ ಏಪ್ರಿಲ್ 11 ರಂದು ವರ್ಚುವಲ್ ಸಂವಾದವನ್ನು ನಡೆಸಿದರು.
ಭಾರತ- ಅಮೆರಿಕಾ ಸಮಗ್ರ ಕಾರ್ಯತಂತ್ರದ ಜಾಗತಿಕ ಪಾಲುದಾರಿಕೆಯು ಪ್ರಜಾಪ್ರಭುತ್ವದ ಮೌಲ್ಯಗಳು, ಕಾನೂನಿನ ನಿಯಮ ಮತ್ತು ನಿಯಮಗಳ ಆಧಾರದ ಮೇಲೆ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಎತ್ತಿಹಿಡಿಯುವ ಬದ್ಧತೆ ಹೊಂದಿವೆ. ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಗೆ ಉಭಯ ನಾಯಕರು ಸಂತಸ ವ್ಯಕ್ತಪಡಿಸಿದರು.
ಆರೋಗ್ಯ ರಕ್ಷಣೆ, ನವೀಕರಿಸಬಹುದಾದ ಇಂಧನ, ಎಸ್‌ಎಂಇಗಳು, ಮೂಲಸೌಕರ್ಯ ಇತ್ಯಾದಿ ಹಂಚಿಕೆಯ ಆದ್ಯತೆಯ ಕ್ಷೇತ್ರಗಳಲ್ಲಿ ಭಾರತದಲ್ಲಿ ಹೂಡಿಕೆ ಬೆಂಬಲವನ್ನು ನೀಡುವುದನ್ನು ಮುಂದುವರಿಸಲು ಅಮೆರಿಕಾದ ಅಭಿವೃದ್ಧಿ ಹಣಕಾಸು ನಿಗಮ ಅನುವು ಮಾಡಿಕೊಡುವ ಹೂಡಿಕೆ ಪ್ರೋತ್ಸಾಹಕ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಇಬ್ಬರು ನಾಯಕರು ಸ್ವಾಗತಿಸಿದರು.
ಎರಡೂ ದೇಶಗಳು ಫಲಿತಾಂಶ-ಆಧಾರಿತ ಸಹಕಾರಕ್ಕೆ ಪೂರಕ ನೆರವು ನೀಡಲು ನಿರ್ಣಾಯಕ ಮತ್ತು ಉದಯವಾಗುತ್ತಿರುವ ತಂತ್ರಜ್ಞಾನ (ಐಸಿಇಟಿ) ಕುರಿತ ಉಪಕ್ರಮವನ್ನು ಭಾರತ-ಅಮೆರಿಕಾ ಆರಂಭಿಸಿವೆ. ಭಾರತದಲ್ಲಿನ ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯ ಮತ್ತು ಅಮೆರಿಕಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಹ-ನೇತೃತ್ವದಲ್ಲಿ, ಐಸಿಇಟಿ ಕೃತಕ ಬುದ್ದಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, 5ಜಿ/6ಜಿ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಎರಡು ದೇಶಗಳ ಸರ್ಕಾರಗಳು ಶೈಕ್ಷಣಿಕ ಮತ್ತು ಉದ್ಯಮದ ನಡುವೆ ನಿಕಟ ಸಂಪರ್ಕವನ್ನು ರೂಪಿಸುತ್ತಿವೆ.
ಭಾರತ-ಅಮರಿಕಾ ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿ ರಕ್ಷಣಾ ಮತ್ತು ಭದ್ರತಾ ಸಹಕಾರವು ನಿರ್ಣಾಯಕ ಸ್ತಂಭವಾಗಿದೆ ಎಂದು ಉಲ್ಲೇಖಿಸಿದ ಎರಡೂ ದೇಶಗಳು, ಸಹಭಾಗಿತ್ವವನ್ನು ಮತ್ತಷ್ಟು ಬಲವರ್ಧನೆಗೊಳಿಸುವುದು ಹೇಗೆ ಎಂಬ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ್ ಭಾರತ್ ಅಥವಾ ಸ್ವಾವಲಂಬಿ ಭಾರತ ಕಾರ್ಯಕ್ರಮಗಳ ಅಡಿಯಲ್ಲಿ ಭಾರತದಲ್ಲಿ ತಯಾರಿಸಲು ಭಾರತದೊಂದಿಗೆ ಪಾಲುದಾರಿಕೆ ಮಾಡಲು ಅಮೆರಿಕಾದ ಉದ್ಯಮವನ್ನು ಆಹ್ವಾನಿಸಿದರು, ಅದು ಎರಡೂ ದೇಶಗಳಿಗೆ ಪರಸ್ಪರ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.
ಆರೋಗ್ಯ ವಲಯದಲ್ಲಿ ಬೆಳೆಯುತ್ತಿರುವ ಸಹಯೋಗವನ್ನು ಮುಂದುವರಿಸಿಕೊಂಡು ಹೋಗಲು ಜೊತೆಗೆ, ಜಂಟಿ ಬಯೋ ಮೆಡಿಕಲ್ ಸಂಶೋಧನೆಯನ್ನು ಮುಂದುವರಿಸಲು 2027 ರವರೆಗೆ ದೀರ್ಘಕಾಲದ ಲಸಿಕೆ ಕ್ರಿಯಾ ಕಾರ್ಯಕ್ರಮವನ್ನು (ವಿಎಪಿ) ಭಾರತ ಮತ್ತು ಅಮೆರಿಕಾ ವಿಸ್ತರಿಸಿವೆ, ಇದು ಲಸಿಕೆಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳ ಅಭಿವೃದ್ಧಿಗೆ ಕಾರಣವಾಗಿದೆ.
ಉಭಯ ದೇಶಗಳ ನಡುವಿನ ಜನರ ನಡುವಿನ ಸಂಪರ್ಕಕ್ಕೆ ಸದೃಢ ಜನರನ್ನು ಹೊಂದಬೇಕಾಗಿರುವುದರಿಂದ, ಪರಸ್ಪರ ಪ್ರಯೋಜನಕಾರಿಯಾಗಿರುವ ಉನ್ನತ ಶಿಕ್ಷಣ ಪಾಲುದಾರಿಕೆಗಳನ್ನು ಬಲವರ್ಧನೆಗೊಳಿಸಬೇಕೆಂದು ಪ್ರಧಾನಮಂತ್ರಿ ಕರೆ ನೀಡಿದರು.
ಉಭಯ ನಾಯಕರು ದಕ್ಷಿಣ ಏಷ್ಯಾ ಮತ್ತು ಇಂಡೋ-ಪೆಸಿಫಿಕ್ ಪ್ರದೇಶ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ವಿಷಯಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡರು, ಮತ್ತು ಉಚಿತ, ಮುಕ್ತ ಮತ್ತು ಎಲ್ಲರನ್ನೂ ಒಳಗೊಂಡ ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ತಮ್ಮ ಹಂಚಿಕೆಯ ದೂರದೃಷ್ಟಿಯನ್ನು ಪುನರುಚ್ಚರಿಸಿದರು.
ಸಂಮೃದ್ಧಿಗಾಗಿ ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟು (ಐಪಿಇಎಫ್) ಆರಂಭಿಸಿರುವುದನ್ನು ಪ್ರಧಾನಮಂತ್ರಿ ಸ್ವಾಗತಿಸಿದರು ಮತ್ತು ಆಯಾ ರಾಷ್ಟ್ರದ ಪರಿಸ್ಥಿತಿಗಳನ್ನು ಆಧರಿಸಿ ಹೊಂದಿಕೊಳ್ಳುವ ಮತ್ತು ಅಂತರ್ಗತವಾದ ಐಪಿಇಎಫ್ ಅನ್ನು ರೂಪಿಸಲು ಎಲ್ಲಾ ಪಾಲುದಾರ ದೇಶಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ಭಾರತ ಸಿದ್ಧವಾಗಿದೆ ಎಂದು ಹೇಳಿದರು.
ಇಬ್ಬರೂ ನಾಯಕರು ತಮ್ಮ ಉಪಯುಕ್ತ ಸಂವಾದವನ್ನು ಮುಂದುವರಿಸಲು ಮತ್ತು ಭಾರತ-ಅಮೆರಿಕಾ ಪಾಲುದಾರಿಕೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಅವರ ಹಂಚಿಕೆಯ ದೂರದೃಷ್ಟಿಯನ್ನು ಮುಂದುವರಿಸಲು ಒಪ್ಪಿದರು.
***
(Release ID: 1827993)
Visitor Counter : 288
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam