ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಬನ್ನಿ, ನಿಮ್ಮ ಚಲನಚಿತ್ರಗಳನ್ನು ಭಾರತದಲ್ಲಿ ಚಿತ್ರೀಕರಿಸಿ: ಕಾನ್ ನಲ್ಲಿ ಕೇಂದ್ರದ ಸಹಾಯಕ ಸಚಿವ ಡಾ.ಎಲ್.ಮುರುಗನ್

Posted On: 23 MAY 2022 6:07PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ಅವರು ಇಂದು ಕಾನ್ ಚಲನಚಿತ್ರೋತ್ಸವದ ಇಂಡಿಯಾ ಪೆವಿಲಿಯನ್ ನಲ್ಲಿ ನಡೆದ ದುಂಡುಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮುರುಗನ್, ಭಾರತವು ಪ್ರತಿ ವರ್ಷ 20 ಕ್ಕೂ ಹೆಚ್ಚು ಭಾಷೆಗಳಲ್ಲಿ ಅತಿ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸುತ್ತಿದೆ ಎಂಬ ಮಾಹಿತಿ ನೀಡಿದರು. ಒಂದು ಶತಕೋಟಿಗಿಂತಲೂ ಹೆಚ್ಚು ಚಲನಚಿತ್ರ ವೀಕ್ಷಕರ ಮಾರುಕಟ್ಟೆಯಾಗಿರುವ ಭಾರತದ ಪ್ರಾಮುಖ್ಯತೆಯನ್ನು ಅವರು ಪ್ರತಿಪಾದಿಸಿದರು. ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ, ಚಲನಚಿತ್ರೋದ್ಯಮದ ಪ್ರಯೋಜನಕ್ಕಾಗಿ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

 ನವೋದ್ಯಮಗಳಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವನ್ನು ವಿಶೇಷವಾಗಿ ಉಲ್ಲೇಖಿಸಿದ ಅವರು, ಚಲನಚಿತ್ರ ನಿರ್ಮಾಣ ಕ್ಷೇತ್ರದಿಂದ ಪ್ರತಿಭಾವಂತ ಭಾರತೀಯ ನವೋದ್ಯಮಗಳನ್ನು ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ತಲುಪಿಸಲು ನೆರವಾಗಲು ಸರ್ಕಾರವು ಕಾನ್ ಗೆ ಕರೆತಂದಿದೆ ಎಂದು ಹೇಳಿದರು.
ವಿದೇಶಿ ಚಲನಚಿತ್ರ ನಿರ್ಮಾಪಕರನ್ನು ಒಳಗೊಂಡು ಚಲನಚಿತ್ರಗಳ ಸಹ-ನಿರ್ಮಾಣಕ್ಕಾಗಿ ಸರ್ಕಾರವು ನೀಡುತ್ತಿರುವ ವಿವಿಧ ಪ್ರೋತ್ಸಾಹಕಗಳ ಬಗ್ಗೆಯೂ ಡಾ.ಮುರುಗನ್ ಮಾತನಾಡಿದರು ಮತ್ತು ಭಾರತದಲ್ಲಿ ವಿದೇಶಿ ಚಲನಚಿತ್ರಗಳ ಚಿತ್ರೀಕರಣಕ್ಕೆ ನೀಡುತ್ತಿರುವ ಪ್ರೋತ್ಸಾಹಕಗಳ ಬಗ್ಗೆಯೂ ಬೆಳಕು ಚೆಲ್ಲಿದರು. ಕಥೆ ಹೇಳುವ ಸಂಪ್ರದಾಯ ಮತ್ತು ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳ ಪರಂಪರೆಯೊಂದಿಗೆ, ಭಾರತವು ಈಗ ಕಥಾವಸ್ತುವಿನ ತಾಣ ಆಗುವ ಗುರಿಯನ್ನು ಹೊಂದಿದೆ. "ಚಲನಚಿತ್ರ ಸೌಲಭ್ಯ ಕಚೇರಿಯಂತಹ ಉಪಕ್ರಮಗಳು ಏಕ ಗವಾಕ್ಷಿಯಡಿಯಲ್ಲಿ ವಿವಿಧ ಅನುಮತಿಗಳನ್ನು ಪಡೆಯಲು ಕಾರ್ಯವಿಧಾನವನ್ನು ತಡೆರಹಿತವಾಗಿ ಶಕ್ತಗೊಳಿಸುತ್ತಿವೆ" ಎಂದು ಅವರು ಹೇಳಿದರು.
ಭಾಷೆ ಒಂದು ತಡೆಗೋಡೆಯಾಗಿ ಉಳಿದಿಲ್ಲ ಎಂದ ಡಾ.ಮುರುಗನ್,  ಭಾರತದ ಪ್ರಾದೇಶಿಕ ಚಲನಚಿತ್ರಗಳು ಈಗ ಜಾಗತಿಕ ಗಮನವನ್ನು ಸೆಳೆಯುತ್ತಿವೆ ಎಂದು ಪ್ರೇಕ್ಷಕರಿಗೆ ಮಾಹಿತಿ ನೀಡಿದರು.
"ಭಾರತದಲ್ಲಿ ಚಿತ್ರೀಕರಣಕ್ಕೆ ಬನ್ನಿ" ಮತ್ತು ಭಾರತದಲ್ಲಿ ವಿವಿಧ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಎಂದು ಸಚಿವರು ಎಲ್ಲಾ ಸ್ಪರ್ಧಿಗಳನ್ನು ಆಹ್ವಾನಿಸಿದರು.
ಡಾ. ಎಲ್. ಮುರುಗನ್ ಅವರೊಂದಿಗೆ ದುಂಡು ಮೇಜಿನ ಸಭೆಯಲ್ಲಿ ಈ ಕೆಳಕಂಡವರು ಭಾಗವಹಿಸಿದ್ದರು: 

  1. ಸೆಲ್ವಗಿಯಾ ವೆಲೊ, ನಿರ್ದೇಶಕರು, ರಿವರ್ ಟು ರಿವರ್ ಫಿಲ್ಮ್ ಫೆಸ್ಟಿವಲ್, ಫ್ಲಾರೆನ್ಸ್, ಇಟಲಿ
  2. ಕಾಲಿನ್ ಬರ್ರೋಸ್, ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ, ಸ್ಪೆಷಲ್ ಟ್ರೀಟ್ಸ್ ಪ್ರೊಡಕ್ಷನ್ಸ್, ಯು.ಕೆ.
  3. ಮೈಕೆಲ್ ಸ್ವೆನ್ಸನ್, ಚಲನಚಿತ್ರ ಆಯುಕ್ತರು, ದಕ್ಷಿಣ ಸ್ವೀಡನ್ ಚಲನಚಿತ್ರ ಆಯೋಗ
  4. ಅಮ್ಮಿ ಜಾನ್ಸನ್, ಪ್ರಾಜೆಕ್ಟ್ ಮ್ಯಾನೇಜರ್, ಥೀಮ್ಯಾಟಿಕ್ ಕಮ್ಯುನಿಕೇಷನ್ ಯುನಿಟ್, ಸ್ವೀಡನ್ ಕಮ್ಯುನಿಕೇಷನ್ ಡಿಪಾರ್ಟ್ ಮೆಂಟ್
  5. ಮೇರಿ ಲಿಜಾ ಡಿನೋ, ಚಲನಚಿತ್ರ ಆಯುಕ್ತರು, ಫಿಲಿಪೈನ್ಸ್
  6. ಶ್ರೀಮತಿ ಜೂಡಿ ಗ್ಲಾಡ್ ಸ್ಟೋನ್, ಕಾರ್ಯನಿರ್ವಾಹಕ ಮತ್ತು ಕಲಾತ್ಮಕ ಸ್ಥಾಪಕರು, ಏಜ್ ಲೆಸ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಯುಎಸ್ಎ
  7. ಸ್ಟೀಫನ್ ಒಟ್ಟೆನ್ ಬ್ರಚ್, ನಿರ್ದೇಶಕ, ಇಂಡೋ ಜರ್ಮನ್ ಚಲನಚಿತ್ರಗಳು
  8. ಕ್ಯಾರಿ ಸಾಹ್ನೆ, ನಿರ್ದೇಶಕರು, ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್

***



(Release ID: 1827847) Visitor Counter : 168