ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್ ನ ವಡೋದರಾದಲ್ಲಿರುವ ಶ್ರೀ ಸ್ವಾಮಿನಾರಾಯಣ ದೇವಸ್ಥಾನ ಆಯೋಜಿಸಿದ್ದ ಯುವ ಶಿವಿರ್(ಶಿಬಿರ) ನಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡದ ಅನುವಾದ

Posted On: 19 MAY 2022 2:47PM by PIB Bengaluru

ಜೈ ಸ್ವಾಮಿನಾರಾಯಣ!

ಪೂಜ್ಯ ಗುರೂಜಿ ಶ್ರೀ ಜ್ಞಾನಜೀವನ್ ದಾಸ್ ಜೀ ಸ್ವಾಮಿ, ಭಾರತೀಯ ಜನತಾ ಪಾರ್ಟಿಯ ಗುಜರಾತ್ ರಾಜ್ಯಾಧ್ಯಕ್ಷರು ಮತ್ತು ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಶ್ರೀ ಸಿ.ಆರ್. ಪಾಟೀಲ್, ಗುಜರಾತ್ ಸರ್ಕಾರದ ಸಚಿವರಾದ ಮನೀಶಬೆನ್ ಮತ್ತು ವಿನುಭಾಯಿ, ಸಂಸದ ರಂಜನ್ ಬೆನ್, ವಡೋದರಾದ ಮೇಯರ್ ಕೆಯುರ್ಭಾಯಿ, ಎಲ್ಲಾ ಗಣ್ಯರೇ, ಪೂಜ್ಯ ಸಂತರೇ, ಭಕ್ತರೇ, ಮಹಿಳೆಯರೇ ಮತ್ತು ಮಹನೀಯರೇ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ನನ್ನ ಮುಂದೆ ಕುಳಿತಿರುವ ಯುವ ಪೀಳಿಗೆಗೆ ನನ್ನ ಶುಭಾಶಯಗಳು. ಜೈ ಸ್ವಾಮಿನಾರಾಯಣ್!

ಇಂದು ನನಗೆ ‘ಸಂಸ್ಕಾರ ಅಭ್ಯುದಯ ಶಿವಿರ್’ನ ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲು ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ಇದು ಸ್ವತಃ ತೃಪ್ತಿ ಮತ್ತು ಸಂತೋಷದ ಸಂದರ್ಭವಾಗಿದೆ. ಸಂತರ ಉಪಸ್ಥಿತಿಯು ಈ 'ಶಿವಿರ್' (ಶಿಬಿರ) ನ ನೀಲನಕ್ಷೆ, ಉದ್ದೇಶಗಳು ಮತ್ತು ಪ್ರಭಾವವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ನಮ್ಮ ಸಂತರು ಮತ್ತು ಧರ್ಮಗ್ರಂಥಗಳು ಸಮಾಜದ ಪ್ರತಿಯೊಂದು ತಲೆಮಾರಿನಲ್ಲಿ ನಿರಂತರ ಚಾರಿತ್ರ್ಯ ನಿರ್ಮಾಣದಿಂದ ಯಾವುದೇ ಸಮಾಜವು ರೂಪುಗೊಳ್ಳುತ್ತದೆ ಎಂದು ನಮಗೆ ಕಲಿಸಿವೆ. ಅದರ ನಾಗರಿಕತೆ, ಸಂಪ್ರದಾಯ, ನೈತಿಕತೆ ಮತ್ತು ನಡವಳಿಕೆಯು ನಮ್ಮ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯಿಂದ ಉಂಟಾಗುತ್ತದೆ. ಮತ್ತು ನಮ್ಮ ಸಂಸ್ಕೃತಿಯು ರೂಪುಗೊಂಡುದರ ಹಿಂದಿನ ಮೂಲವು ನಮ್ಮ ನೈತಿಕತೆಯಾಗಿದೆ. ಆದ್ದರಿಂದ, ಈ ‘ಸಂಸ್ಕಾರ ಅಭ್ಯುದಯ ಶಿವಿರ್’ ನಮ್ಮ ಯುವಕರು ಮತ್ತು ಸಮಾಜದ ಏಳಿಗೆಗಾಗಿ ಒಂದು ಸದ್ಗುಣದ ಅಭಿಯಾನವಾಗಿದೆ.

ಇದು ನಮ್ಮ ಅಸ್ಮಿತೆ ಮತ್ತು ಹೆಮ್ಮೆಯ ಉದಯದ ಪ್ರಯತ್ನವಾಗಿದೆ. ಇದು ನಮ್ಮ ರಾಷ್ಟ್ರದ ಏಳಿಗೆಯ ಪ್ರಯತ್ನವಾಗಿದೆ. ನನ್ನ ಯುವ ಕಾಮ್ರೇಡ್ ಗಳು ಶಿಬಿರದಲ್ಲಿ ಭಾಗವಹಿಸಿದ ನಂತರ ಹೊಸ ಶಕ್ತಿ, ಸ್ಪಷ್ಟತೆ ಮತ್ತು ಪ್ರಜ್ಞೆಯನ್ನು ಅನುಭವಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಈ ಹೊಸ ಆರಂಭ ಮತ್ತು ಹೊಸ ಸಂಕಲ್ಪಕ್ಕಾಗಿ ನಾನು ನಿಮಗೆ ಶುಭ ಹಾರೈಸುತ್ತೇನೆ.

ಸ್ನೇಹಿತರೇ,

ದೇಶವು ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ‘ಸಂಸ್ಕಾರ ಅಭ್ಯುದಯ ಶಿವೀರ್’ ನಡೆಯುತ್ತಿದೆ. ಇಂದು ನಾವು ಸಾಮೂಹಿಕ ಸಂಕಲ್ಪಗಳನ್ನು ಮಾಡುತ್ತಿದ್ದೇವೆ ಮತ್ತು ನವ ಭಾರತವನ್ನು ನಿರ್ಮಿಸಲು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಹೊಸ ಅಸ್ಮಿತೆ, ಆಧುನಿಕ, ಮುಂದಾಲೋಚನೆ ಮತ್ತು ಅದರ ಸಂಪ್ರದಾಯಗಳು ಪ್ರಾಚೀನ ಕಾಲದ ಬಲವಾದ ಅಡಿಪಾಯದಲ್ಲಿ ಬೇರೂರಿವೆ !  ಹೊಸ ಭಾರತವು ಹೊಸ ದೃಷ್ಟಿಕೋನ ಮತ್ತು ಹಳೆಯ ಸಂಸ್ಕೃತಿ ಎರಡನ್ನೂ ಮುನ್ನಡೆಸುತ್ತದೆ ಮತ್ತು ಇದು ಇಡೀ ಮಾನವ ಜನಾಂಗಕ್ಕೆ ನಿರ್ದೇಶನ ನೀಡುತ್ತದೆ.

ಯಾವುದೇ ಕ್ಷೇತ್ರದಲ್ಲಿ ಎಲ್ಲೆಲ್ಲಿ ಸವಾಲುಗಳಿವೆಯೋ, ಅಲ್ಲಿ ಭಾರತವು ಭರವಸೆಯಿಂದ ಕೂಡಿರುತ್ತದೆ. ಎಲ್ಲೆಲ್ಲಿ ಸಮಸ್ಯೆಗಳಿದ್ದರೂ, ಭಾರತವು ಪರಿಹಾರಗಳೊಂದಿಗೆ ಹೊರಬರುತ್ತದೆ. ಕರೋನಾ ಬಿಕ್ಕಟ್ಟಿನ ನಡುವೆ ವಿಶ್ವಕ್ಕೆ ಲಸಿಕೆಗಳು ಮತ್ತು ಔಷಧಿಗಳನ್ನು ತಲುಪಿಸುವುದರಿಂದ ಹಿಡಿದು ಜಾಗತಿಕ ಅಶಾಂತಿ ಮತ್ತು ಸಂಘರ್ಷಗಳ ನಡುವೆ ಶಾಂತಿಗಾಗಿ ಸಮರ್ಥ ರಾಷ್ಟ್ರದ ಪಾತ್ರಕ್ಕೆ ಅಡ್ಡಿಪಡಿಸಿದ ಪೂರೈಕೆ ಸರಪಳಿಗಳ ನಡುವೆ ಸ್ವಾವಲಂಬಿ ಭಾರತದ ಭರವಸೆಯವರೆಗೆ ಭಾರತವು ಇಂದು ಜಗತ್ತಿಗೆ ಭರವಸೆಯ ಹೊಸ ದಾರಿದೀಪವಾಗಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಭಾರತವುಇಂದಮಾನಗಳಷ್ಟು ಹಳೆಯ ಸುಸ್ಥಿರ ಜೀವನದ ಅನುಭವಗಳೊಂದಿಗೆ ಮುನ್ನಡೆಯುತ್ತಿದೆ. ನಾವು ಯೋಗದ ಮಾರ್ಗವನ್ನು ಇಡೀ ಮನುಕುಲಕ್ಕೆ ತೋರಿಸುತ್ತಿದ್ದೇವೆ ಮತ್ತು ಆಯುರ್ವೇದದ ಶಕ್ತಿಯನ್ನು ಅವರಿಗೆ ಪರಿಚಯಿಸುತ್ತಿದ್ದೇವೆ. ನಾವು ಒಂದು ರಾಷ್ಟ್ರವಾಗಿ ಹೊಸ ಭವಿಷ್ಯಕ್ಕೆ, ಸಾಫ್ಟ್ ವೇರ್ ನಿಂದ ಬಾಹ್ಯಾಕಾಶಕ್ಕೆ ಹೊರಹೊಮ್ಮುತ್ತಿದ್ದೇವೆ.

ಸ್ನೇಹಿತರೇ,

 ಭಾರತದ ಇಂದಿನ ಯಶಸ್ಸು ನಮ್ಮ ಯುವಕರ ಸಾಮರ್ಥ್ಯಕ್ಕೆ ದೊಡ್ಡ ಸಾಕ್ಷಿಯಾಗಿದೆ. ಇಂದು, ದೇಶದಲ್ಲಿ ಸರ್ಕಾರದ ಕಾರ್ಯಶೈಲಿ ಬದಲಾಗಿದೆ, ಸಮಾಜದ ಚಿಂತನೆ ಬದಲಾಗಿದೆ, ಮತ್ತು ಮುಖ್ಯವಾಗಿ, ಸಾರ್ವಜನಿಕ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ. ತನಗೆ ಅಸಾಧ್ಯವೆಂದು ಪರಿಗಣಿಸಲ್ಪಟ್ಟ ಕ್ಷೇತ್ರಗಳಲ್ಲಿ ಭಾರತವು ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಜಗತ್ತು ನೋಡುತ್ತಿದೆ. ನವೋದ್ಯಮ ಜಗತ್ತಿನಲ್ಲಿ ಭಾರತದ ಬೆಳೆಯುತ್ತಿರುವ ವರ್ಚಸ್ಸು ಸಹ ಇದಕ್ಕೆ ಒಂದು ಉದಾಹರಣೆಯಾಗಿದೆ. ಇಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿದೆ ಮತ್ತು ನಮ್ಮ ಯುವಕರು ಅದನ್ನು ಮುನ್ನಡೆಸುತ್ತಿದ್ದಾರೆ.

ಸ್ನೇಹಿತರೇ,

ಪರಿಶುದ್ಧ ಬುದ್ಧಿಮತ್ತೆ ಮತ್ತು ಮಾನವೀಯ ಮೌಲ್ಯಗಳು ಇತರರ ಮತ್ತು ಆತ್ಮ ಕಲ್ಯಾಣಕ್ಕೆ ಕಾರಣವಾಗುತ್ತವೆ ಎಂಬ ನಂಬಿಕೆ ಭಾರತದಲ್ಲಿದೆ. ಬುದ್ಧಿಯು ಪರಿಶುದ್ಧವಾಗಿದ್ದರೆ, ಯಾವುದೂ ಅಸಾಧ್ಯವಲ್ಲ. ಆದ್ದರಿಂದ, ಸ್ವಾಮಿನಾರಾಯಣ ಪಂಥದ ಸಂತರು ‘ಸಂಸ್ಕಾರ ಅಭ್ಯುದಯ’ ಕಾರ್ಯಕ್ರಮಗಳ ಮೂಲಕ ಸ್ವಯಂ-ಸೃಷ್ಟಿ ಮತ್ತು ಚಾರಿತ್ರ್ಯ ನಿರ್ಮಾಣದಂತಹ ಗಂಭೀರ ಆಚರಣೆಯನ್ನು ಕೈಗೊಂಡಿದ್ದಾರೆ. ‘ಸಂಸ್ಕಾರ’ ಎಂದರೆ ನಮಗೆ ಶಿಕ್ಷಣ, ಸೇವೆ ಮತ್ತು ಸಂವೇದನಾಶೀಲತೆ. ಇದರರ್ಥ ಸಮರ್ಪಣೆ, ದೃಢನಿಶ್ಚಯ ಮತ್ತು ಸಾಮರ್ಥ್ಯ. ನಾವು ಪ್ರಗತಿ ಹೊಂದಬೇಕು, ಆದರೆ ನಮ್ಮ ಪ್ರಗತಿಯು ಇತರರ ಕಲ್ಯಾಣಕ್ಕೆ ಒಂದು ಸಾಧನವಾಗಬೇಕು. ನಾವು ಯಶಸ್ಸಿನ ಉತ್ತುಂಗವನ್ನು ತಲುಪಬೇಕು, ಆದರೆ ನಮ್ಮ ಯಶಸ್ಸು ಎಲ್ಲರಿಗೂ ಸೇವೆಯ ಸಾಧನವಾಗಬೇಕು. ಇದು ಭಗವಾನ್ ಸ್ವಾಮಿನಾರಾಯಣನ ಬೋಧನೆಗಳ ಸಾರವಾಗಿದೆ. ಮತ್ತು ಇದು ಭಾರತದ ಆಂತರಿಕ ಗುಣಲಕ್ಷಣವೂ ಆಗಿದೆ.

ಗುಜರಾತಿನ ಮೂಲೆ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯ ಯುವಕ-ಯುವತಿಯರೊಂದಿಗೆ ಬಂದಿರುವ ನಿಮ್ಮ ನ್ನು ನಾನು ಭೇಟಿಯಾಗಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅನೇಕ ಸಮಸ್ಯೆಗಳು ಮತ್ತು ಸಮಯದ ನಿರ್ಬಂಧಗಳಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ನಮ್ಮ ಜೀತುಭಾಯ್ ನಗುತ್ತಿದ್ದಾರೆ. ಈ ಹಿಂದೆ ವಡೋದರಾದಲ್ಲಿ ಸಾಕಷ್ಟು ಸಮಯವನ್ನು ಕಳೆಯುವ ಅವಕಾಶ ನನಗೆ ದೊರೆತಿದೆ. ಮತ್ತು ವಡೋದರಾ ಮತ್ತು ಕಾಶಿ ಎರಡೂ ನನ್ನನ್ನು ಸಂಸದನನ್ನಾಗಿ ಮಾಡಿದ್ದು ನನಗೆ ಹೆಮ್ಮೆಯ ವಿಷಯವಾಗಿದೆ. ಭಾರತೀಯ ಜನತಾ ಪಾರ್ಟಿಯು ನನಗೆ ಸಂಸದರಾಗಲು ಟಿಕೆಟ್ ನೀಡಿತು. ಆದರೆ ವಡೋದರಾ ಮತ್ತು ಕಾಶಿ ನನಗೆ ಪ್ರಧಾನಿಯಾಗಲು ಅವಕಾಶ ಕಲ್ಪಿಸಿತು. ವಡೋದರಾದೊಂದಿಗಿನ ನನ್ನ ಸಂಬಂಧ ಹೇಗಿತ್ತು ಎಂಬುದನ್ನು ನೀವು ಊಹಿಸಬಹುದು ಮತ್ತು ವಡೋದರಾದ ವಿಷಯಕ್ಕೆ ಬಂದಾಗ, ಕೇಶುಭಾಯಿ ಠಕ್ಕರ್, ಜಮ್ನಾದಾಸ್, ಕೃಷ್ಣಕಾಂತ್ ಭಾಯ್ ಷಾ, ನನ್ನ ಸಂಗಡಿಗರಾದ ನಳಿನ್ ಭಾಯ್ ಭಟ್, ಬಾಬುಭಾಯಿ ಓಜಾ, ರಮೇಶ್ ಭಾಯ್ ಗುಪ್ತಾ ಮುಂತಾದ ಅನೇಕ ದಿಗ್ಗಜರನ್ನು ನಾನು ನೆನಪಿಸಿಕೊಳ್ಳುತ್ತೇನೆ. ನಾನು ನನ್ನ ಮುಂದೆ ಅನೇಕ ಮುಖಗಳನ್ನು ಮತ್ತು ಅವರೊಂದಿಗೆ ಅನೇಕ ವರ್ಷಗಳ ಕಾಲ ಕೆಲಸ ಮಾಡುವ ಅವಕಾಶವನ್ನು ಪಡೆದ ಯುವ ತಂಡವನ್ನು ನೋಡಬಹುದು. ಅವರು ಇಂದು ಉನ್ನತ ಸ್ಥಾನಗಳಲ್ಲಿದ್ದಾರೆ ಮತ್ತು ಗುಜರಾತ್ ಗೆ  ಸಲ್ಲಿಸುತ್ತಿದ್ದಾರೆ. ವಡೋದರಾವನ್ನು ಯಾವಾಗಲೂ ‘ಸಂಸ್ಕಾರ ನಗರಿ’ ಎಂದು ಕರೆಯಲಾಗುತ್ತದೆ. ವಡೋದರಾದ ಅಸ್ಮಿತೆಯೇ ಅದರ ಸಂಸ್ಕೃತಿ. ಮತ್ತು ಈ ‘ಸಂಸ್ಕಾರ ನಗರಿ’ಯಲ್ಲಿ ‘ಸಂಸ್ಕಾರ ಉತ್ಸವ’ ಇದ್ದರೆ ಅದು ಸ್ವಾಭಾವಿಕ.

 ಹಲವಾರು ವರ್ಷಗಳ ಹಿಂದೆ ನಾನು ವಡೋದರಾದಲ್ಲಿ ಭಾಷಣ ಮಾಡಿದ್ದನ್ನು ನೀವು ನೆನಪಿಸಿಕೊಳ್ಳುತ್ತೀರಿ. ಆ ಸಾರ್ವಜನಿಕ ಸಭೆಯಲ್ಲಿ ನಾನು ಏಕತಾ ಪ್ರತಿಮೆಯನ್ನು ಪ್ರಸ್ತಾಪಿಸಿದೆ. ಆ ಸಮಯದಲ್ಲಿ, ಏಕತೆಯ ಪ್ರತಿಮೆಯು ಪೂರ್ವಸಿದ್ಧತಾ ಹಂತದಲ್ಲಿತ್ತು. ಆ ಸಮಯದಲ್ಲಿ ನಾನು ಈ ಏಕತಾ ಪ್ರತಿಮೆಯು ಪ್ರಪಂಚದ ಆಕರ್ಷಣೆಯ ಕೇಂದ್ರವಾಗುತ್ತದೆ ಮತ್ತು ವಡೋದರಾ ಅದರ ಅಡಿಪಾಯವಾಗುತ್ತದೆ ಎಂದು ಹೇಳಿದ್ದೆ. ವಡೋದರಾವು ಏಕತಾ ಪ್ರತಿಮೆಯ ನೆಲೆಯಾಗಲಿದೆ ಎಂದು ನಾನು ಅನೇಕ ವರ್ಷಗಳ ಹಿಂದೆ ಹೇಳಿದ್ದೆ. ಇಂದು, ವಡೋದರಾ ಮಧ್ಯ ಗುಜರಾತಿನ ಪ್ರವಾಸೋದ್ಯಮದ ಇಡೀ ಪರಿಸರ ವ್ಯವಸ್ಥೆಯ ಕೇಂದ್ರಬಿಂದುವಾಗುತ್ತಿದೆ. ಮಹಾಕಾಳಿಯ ಆಶೀರ್ವಾದದಿಂದ ಪಾವಗಡದ ಪುನರ್ನಿರ್ಮಾಣವು ನಡೆಯುತ್ತಿರುವ ರೀತಿಯಲ್ಲಿ, ಮುಂದಿನ ದಿನಗಳಲ್ಲಿ ನಾನು ಖಂಡಿತವಾಗಿಯೂ ಮಹಾಕಾಳಿಯ ಪಾದಗಳಿಗೆ ತಲೆಬಾಗಿ ನಮಸ್ಕರಿಸಲು ಬರಬೇಕು ಎಂದು ನಾನು ಬಯಸುತ್ತೇನೆ. ಅದು ಪಾವಗಡವಾಗಿರಲಿ ಅಥವಾ ಏಕತಾ ಪ್ರತಿಮೆಯಾಗಿರಲಿ, ಇವು ಸಾಂಸ್ಕೃತಿಕ ನಗರಿ ವಡೋದರಾದ ಹೊಸ ವಿಸ್ತರಣೆಯ ಭಾಗವಾಗಿದೆ.  ವಡೋದರಾದ ಕೈಗಾರಿಕಾ ಖ್ಯಾತಿಯನ್ನು ನೋಡಿ; ವಡೋದರಾದಲ್ಲಿ ತಯಾರಿಸಲಾದ ಮೆಟ್ರೋ ಬೋಗಿಗಳು ಪ್ರಪಂಚದಾದ್ಯಂತ ಚಲಿಸುತ್ತಿವೆ. ಇದು ಭಾರತದ ಶಕ್ತಿಯಾದ ವಡೋದರಾದ ಶಕ್ತಿಯಾಗಿದೆ. ಇದೆಲ್ಲವೂ ಈ ದಶಕದಲ್ಲಿಯೇ ನಡೆದಿದೆ. ನಾವು ಹೊಸ ಕ್ಷೇತ್ರಗಳಲ್ಲಿ ವೇಗವಾಗಿ ಮುಂದುವರಿಯುತ್ತಿದ್ದೇವೆ. ಇಂದು, ಪೂಜ್ಯ ಸ್ವಾಮಿಗಳು ಬಹಳ ಮುಖ್ಯವಾದ ವಿಷಯವೊಂದನ್ನು ಹೇಳಿದ್ದಾರೆ. ಭೇಟಿಯಾಗಲು ಸಾಧ್ಯವಾಗದಿದ್ದರೆ, ಅದು ಒಳ್ಳೆಯದು, ಆದರೆ ದೇಶಕ್ಕೆ ಸಂಬಂಧಿಸಿದ ಕೆಲಸಗಳನ್ನು ಎಂದಿಗೂ ಬದಿಗಿಡುವುದಿಲ್ಲ ಎಂದು ಅವರು ಹೇಳಿದರು. ಇದು ಸಂತ, ಸ್ನೇಹಿತರಿಂದ ಬರುವ ಸಣ್ಣ ವಿಷಯವಲ್ಲ. ಯಾರದರೊಬ್ಬರು ಮರೆಯಬೇಡ ಎಂದು ಹೇಳಿದಾಗ, ಭೇಟಿಯಾಗುವುದನ್ನು ನಿಲ್ಲಿಸುವಂತೆ ಅವರು ನಮ್ಮನ್ನು ಕೇಳಿಕೊಂಡಿದ್ದಾರೆಂದು ಅರ್ಥವಲ್ಲ. ವಾಸ್ತವವಾಗಿ, ದೇಶಕ್ಕಾಗಿ ಕೆಲಸ ಮಾಡುವಂತೆ ಅವರು ನಮಗೆ ಹೇಳಿದ್ದಾರೆ. ಈಗ ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದರಿಂದ, ದೇಶಕ್ಕಾಗಿ ಸಾಯಲು ನಾವು ಅದೃಷ್ಟವಂತರಲ್ಲ ಎಂದು ನಮಗೆ ತಿಳಿದಿದೆ. ಆದರೆ ದೇಶಕ್ಕಾಗಿ ಬದುಕುವ ಸೌಭಾಗ್ಯವನ್ನು ನಾವು ಪಡೆದಿದ್ದೇವೆ. ಆದ್ದರಿಂದ ದೇಶಕ್ಕಾಗಿ ಬದುಕಬೇಕು ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡಬೇಕು.

ದೇಶಕ್ಕಾಗಿ ಏನನ್ನಾದರೂ ಮಾಡುವಾಗ ನೀವು ಇನ್ನೂ ಸಣ್ಣ ಕೆಲಸಗಳನ್ನು ಮಾಡಬಹುದು. ನಾನು ನಿಮ್ಮೆಲ್ಲರಲ್ಲಿ ಒಂದು ಕೆಲಸವನ್ನು ಮಾಡುವಂತೆ ವಿನಂತಿಸುತ್ತೇನೆ ಮತ್ತು ಎಲ್ಲಾ ಸಂತರು ಪ್ರತಿ ವಾರ ಗುಜರಾತ್ ಮತ್ತು ದೇಶದ ಎಲ್ಲಾ ಜನರನ್ನು ವಿಚಾರಿಸಬೇಕು ಮತ್ತು ನೆನಪಿಸಬೇಕು ಎಂದು ಭಾವಿಸೋಣ. ಈ ‘ಸಂಸ್ಕಾರ ಅಭ್ಯುದಯ’ಕ್ಕಾಗಿ ಬಂದವರು ಮತ್ತು ಅವರ ಕುಟುಂಬದವರು ಮತ್ತು ಸ್ನೇಹಿತರು 2023 ರ ಆಗಸ್ಟ್ 15 ರೊಳಗೆ ಈ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ ಹಣವನ್ನು ಬಳಸದಿರಲು ನಿರ್ಧರಿಸಬೇಕು. ಅವರು ಡಿಜಿಟಲ್ ಪಾವತಿಗಳನ್ನು ಮಾಡುತ್ತಾರೆ ಮತ್ತು ಡಿಜಿಟಲ್ ಕರೆನ್ಸಿಯನ್ನು ಮಾತ್ರ ಬಳಸುತ್ತಾರೆ. ಅವರು ತಮ್ಮ ಮೊಬೈಲ್ ಫೋನ್ ಗಳ ಮೂಲಕ ಮಾತ್ರ ಸ್ವೀಕರಿಸುತ್ತಾರೆ ಮತ್ತು ಪಾವತಿಗಳನ್ನು ಮಾಡುತ್ತಾರೆ. ನೀವು ಅಂತಹ ದೊಡ್ಡ ಕ್ರಾಂತಿಯನ್ನು ತರಬಹುದು ಎಂದು ನೀವು ಊಹಿಸಬಲ್ಲಿರಾ? ನೀವು ತರಕಾರಿ ಮಾರಾಟಗಾರನಿಗೆ ನೀವು ಡಿಜಿಟಲ್ ಪಾವತಿಯನ್ನು ಮಾತ್ರ ಮಾಡುತ್ತೀರಿ ಎಂದು ಹೇಳಿದಾಗ ಮಾತ್ರ ಅವರು ಡಿಜಿಟಲ್ ವಹಿವಾಟುಗಳನ್ನು ಹೇಗೆ ಮಾಡಬೇಕೆಂದು ಸಹ ಕಲಿಯುತ್ತಾರೆ. ಅವರು ಬ್ಯಾಂಕ್ ಖಾತೆಯನ್ನು ತೆರೆಯುತ್ತಾರೆ ಮತ್ತು ಅವರು ಒಳ್ಳೆಯ ಉದ್ದೇಶಕ್ಕಾಗಿ ಹಣವನ್ನು ಖರ್ಚು ಮಾಡಲು ಪ್ರಾರಂಭಿಸುತ್ತಾರೆ. ಒಂದು ಸಣ್ಣ ಪ್ರಯತ್ನವು ಅನೇಕ ಜನರ ಜೀವನದಲ್ಲಿ ಮೂಲಭೂತ ಬದಲಾವಣೆಯನ್ನು ತರಬಲ್ಲದು. ಸ್ನೇಹಿತರೇ ನೀವು ಅದನ್ನು ಮಾಡುವಿರಾ? ನಾನು ಅದನ್ನು ನೋಡುವಂತೆ ನಿಮ್ಮ ಕೈಗಳನ್ನು ಮೇಲಕ್ಕೆತ್ತಿ.

ಇನ್ನೊಂದು ಕೆಲಸವಿದೆ. ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದಲ್ಲಿ, ಒಬ್ಬರು ವರ್ಷಕ್ಕೆ 75 ಗಂಟೆಗಳ ಕಾಲ ಮೀಸಲಿಡಬೇಕು ಮತ್ತು ನಾನು ಹೆಚ್ಚಿನದನ್ನು ಕೇಳುತ್ತಿಲ್ಲ, ಮಾತೃಭೂಮಿಯ ಸೇವೆಗಾಗಿ ಮತ್ತು ಸ್ವಚ್ಛತೆಗಾಗಿ ಅಭಿಯಾನವನ್ನು ನಡೆಸುವುದು ಅಥವಾ ಅಪೌಷ್ಟಿಕತೆಯಿಂದ ಮಕ್ಕಳನ್ನು ತಡೆಯುವುದು ಅಥವಾ ಪ್ಲಾಸ್ಟಿಕ್ ತ್ಯಾಜ್ಯವನ್ನು ತೊಡೆದುಹಾಕುವುದು ಅಥವಾ ಏಕ-ಬಳಕೆಯ ಪ್ಲಾಸ್ಟಿಕ್ ಗಳ ವಿರುದ್ಧ. ನೀವು ಯಾವುದೇ ಅಭಿಯಾನವನ್ನು ಕೈಗೊಳ್ಳಬಹುದೇ ಮತ್ತು 75 ಗಂಟೆಗಳನ್ನು ಮೀಸಲಿಡಬಹುದೇ? ನಾನು ವಡೋದರದಲ್ಲಿ ಸ್ವಚ್ಛತೆಯ ಬಗ್ಗೆ ಮಾತನಾಡುವಾಗ, ವಡೋದರಾ ಮತ್ತು ಕಾಶಿಯೊಂದಿಗೆ ನನಗೆ ಇದೇ ರೀತಿಯ ಸಂಬಂಧವಿರುವುದರಿಂದ ಕಾಶಿಯ ಬಗ್ಗೆ ಸಹಜವಾಗಿಯೇ ಪ್ರಸ್ತಾಪವಾಗುತ್ತದೆ. ನಾನು ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿದ್ದಾಗ, ನಾಗಾಲ್ಯಾಂಡ್ ನ ತೆಮ್ಸುತುಲಾ ಇಮ್ಸಾಂಗ್ ಎಂಬ ಹುಡುಗಿ ಕಾಶಿಯ ಘಟ್ಟಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದಳು ಮತ್ತು ಚಿತ್ರಲೇಖಾರವರು ಅವರ ಬಗ್ಗೆ ಬಹಳ ಸುಂದರವಾದ ಲೇಖನವನ್ನು ಬರೆದಿದ್ದಾರೆ. ಈ ಹುಡುಗಿ ಕಾಶಿಯಲ್ಲಿ ಓದಲು ಬಂದಿದ್ದರು. ಅವರು ಕಾಶಿಯಲ್ಲಿ ತನ್ನ ವಾಸ್ತವ್ಯವನ್ನು ಆನಂದಿಸಲು ಪ್ರಾರಂಭಿಸಿದರು ಮತ್ತು ಅವರು ಅಲ್ಲಿ ದೀರ್ಘಕಾಲದವರೆಗೆ ವಾಸಿಸುತ್ತಿದ್ದರು. ಅವರು ನಾಗಾಲ್ಯಾಂಡ್ ನ ಕ್ರಿಶ್ಚಿಯನ್ ಪಂಥಕ್ಕೆ ಸೇರಿದವರು. ಆದರೆ ಸ್ವಚ್ಛತಾ ಅಭಿಯಾನದ ವಿಷಯಕ್ಕೆ ಬಂದಾಗ, ಅವರು ಕಾಶಿಯ ಘಟ್ಟಗಳನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸಲು ಪ್ರಾರಂಭಿಸಿದರು. ನಿಧಾನವಾಗಿ, ಅನೇಕ ಯುವಕರು ಅವರೊಂದಿಗೆ ಸೇರಲು ಪ್ರಾರಂಭಿಸಿದರು. ವಿದ್ಯಾವಂತ ಪುತ್ರರು ಮತ್ತು ಹೆಣ್ಣುಮಕ್ಕಳು ಜೀನ್ಸ್ ಧರಿಸಿ ತುಂಬಾ ಕಷ್ಟಪಟ್ಟು ಕೆಲಸ ಮಾಡುವುದನ್ನು ಜನರು ನೋಡಿದಾಗ, ಇಡೀ ಕಾಶಿ ಅವರೊಂದಿಗೆ ಸೇರಿಕೊಂಡಿತು. ನಾಗಾಲ್ಯಾಂಡ್ ನ ಹುಡುಗಿಯೊಬ್ಬಳು ಕಾಶಿಯ ಘಟ್ಟಗಳನ್ನು ಶುಚಿಗೊಳಿಸಿದಾಗ ಆಂತರಿಕ ಮನಸ್ಸಿನ ಮೇಲೆ ಒಂದು ದೊಡ್ಡ ಪರಿಣಾಮವನ್ನು ಊಹಿಸಿಕೊಳ್ಳಿ.

ಪೂಜ್ಯ ಜ್ಞಾನಜೀವನ ಸ್ವಾಮಿಗಳು ನಾವು ಸ್ವಚ್ಛತೆಗೆ ಮುಂದಾಳತ್ವ ವಹಿಸಬೇಕು ಮತ್ತು ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಇವೆಲ್ಲವೂ ದೇಶಕ್ಕಾಗಿ ಮಾಡಿದ ಕೆಲಸಗಳು. ನಾನು ನೀರನ್ನು ಉಳಿಸಿದರೆ, ಅದರಲ್ಲಿಯೂ ದೇಶಭಕ್ತಿ ಇದೆ. ನಾನು ವಿದ್ಯುಚ್ಛಕ್ತಿಯನ್ನು ಉಳಿಸಿದರೆ, ಅದರಲ್ಲಿಯೂ ದೇಶಭಕ್ತಿ ಇದೆ. ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದಲ್ಲಿ, ಭಕ್ತರು ಎಲ್ಇಡಿ ಬಲ್ಬ್ ಗಳನ್ನು ಬಳಸದ ಒಂದೇ ಒಂದು ಮನೆ ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ನೀವು ಎಲ್ಇಡಿ ಬಲ್ಬ್ ಗಳನ್ನು ಬಳಸಿದರೆ, ನೀವು ಸರಿಯಾದ ಬೆಳಕನ್ನು ಪಡೆಯುತ್ತೀರಿ ಮತ್ತು ಅದು ಕಡಿಮೆ ವೆಚ್ಚವಾಗುತ್ತದೆ ಮತ್ತು ವಿದ್ಯುತ್ತನ್ನೂ ಉಳಿಸುತ್ತದೆ. ಗುಜರಾತಿನ ಅನೇಕ ಸ್ಥಳಗಳಲ್ಲಿ ಜನೌಷಧಿ ಕೇಂದ್ರಗಳಿವೆ ಎಂದು ನೀವು ನೋಡಿರಬಹುದು. ಯಾವುದೇ ಮಧುಮೇಹ ರೋಗಿಯ ಕುಟುಂಬವು ಪ್ರತಿ ತಿಂಗಳು 1000-1500 ರೂಪಾಯಿಗಳನ್ನು ಔಷಧಿಗಳಿಗಾಗಿ ಖರ್ಚು ಮಾಡುತ್ತದೆ. ಪ್ರತಿ ತಿಂಗಳು ಇಷ್ಟು ಮೊತ್ತವನ್ನು ಖರ್ಚು ಮಾಡಲು ಅದು ಹೇಗೆ ಸಾಧ್ಯ? ಜನೌಷಧಿ ಕೇಂದ್ರಗಳಲ್ಲಿ ಇದೇ ಔಷಧಿಗಳು 100-150 ರೂಪಾಯಿಗಳಿಗೆ ಲಭ್ಯವಿವೆ. ನನ್ನ ಯುವ ಸ್ನೇಹಿತರೇ. ನರೇಂದ್ರ ಮೋದಿ ಇದನ್ನು ಮಾಡಿದ್ದಾರೆ, ಸರ್ಕಾರ ಇದನ್ನು ಮಾಡಿದೆ, ಆದರೆ ಅನೇಕ ಮಧ್ಯಮ ಮತ್ತು ಬಡ ವರ್ಗದ ಜನರಿಗೆ ಈ ಜನೌಷಧಿ ಕೇಂದ್ರಗಳ ಬಗ್ಗೆ ತಿಳಿದಿಲ್ಲ. ಈ ಜನೌಷಧಿ ಕೇಂದ್ರಗಳ ಬಗ್ಗೆ ಅವರಿಗೆ ತಿಳಿಸಿ ಮತ್ತು ಕೈಗೆಟುಕುವ ಔಷಧಿಗಳನ್ನು ಖಚಿತಪಡಿಸಿಕೊಳ್ಳಿ. ಅವರು ನಿಮ್ಮನ್ನು ಆಶೀರ್ವದಿಸುತ್ತಾರೆ. ಇದಕ್ಕಿಂತ ದೊಡ್ಡ ಆಚರಣೆ ಬೇರೊಂದಿದೆ? ಇವು ನಾವು ಸುಲಭವಾಗಿ ಮಾಡಬಹುದಾದ ಕೆಲವು ಕೆಲಸಗಳು. ಸಮಾಜ, ದೇಶ ಮತ್ತು ನೆರೆಹೊರೆಯ ಕಲ್ಯಾಣವು ನಮ್ಮ ಸಾಮಾನ್ಯ ಜೀವನದ ಭಾಗವಾಗಿರಬೇಕು. ನಮ್ಮ ಬಡ ಮಕ್ಕಳು ಅಪೌಷ್ಟಿಕತೆಯಿಂದ ಮುಕ್ತರಾದರೆ, ಅವರು ಆರೋಗ್ಯವಂತರಾಗುತ್ತಾರೆ ಮತ್ತು ಅದರ ಪರಿಣಾಮವಾಗಿ ನಮ್ಮ ರಾಜ್ಯ, ನಮ್ಮ ದೇಶವು ಆರೋಗ್ಯಕರವಾಗಿರುತ್ತದೆ ಎಂದು ಊಹಿಸಿಕೊಳ್ಳಿ. ನಾವು ಆ ಮಾರ್ಗಗಳ ಬಗ್ಗೆ ಯೋಚಿಸಬೇಕು. ಗುಜರಾತ್ ನಲ್ಲಿ ನೈಸರ್ಗಿಕ ಕೃಷಿಗಾಗಿ ಅಭಿಯಾನ ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ. ನಾವು ಭಾರತ ಮಾತೆಯನ್ನು ಹೊಗಳಿದಾಗ, ಆಗ ಭಾರತ ಮಾತೆ ನಮ್ಮ ಭೂಮಿ ತಾಯಿ. ನಾವು ಅದರ ಬಗ್ಗೆ ಚಿಂತಿಸುತ್ತೇವೆಯೇ? ನಾವು ರಾಸಾಯನಿಕಗಳು, ರಸಗೊಬ್ಬರಗಳು ಮತ್ತು ಯೂರಿಯಾವನ್ನು ಸುರಿಯುವ ಮೂಲಕ ಭೂಮಿ ತಾಯಿಗೆ ಹಾನಿ ಮಾಡುತ್ತಿದ್ದೇವೆ. ನಾವು ಭೂಮಿ ತಾಯಿಗೆ ಅನೇಕ ರಾಸಾಯನಿಕಗಳಿಂದ ಆಹಾರವನ್ನು ನೀಡುತ್ತಿದ್ದೇವೆ. ಇದಕ್ಕೆ ಪರಿಹಾರ ನೈಸರ್ಗಿಕ ಕೃಷಿ. ಗುಜರಾತ್ ನಲ್ಲಿ ನೈಸರ್ಗಿಕ ಕೃಷಿಗಾಗಿ ಅಭಿಯಾನವಿದೆ. ಆದ್ದರಿಂದ, ಹಳ್ಳಿಗಳಲ್ಲಿ ಕೃಷಿಗೆ ಸಂಬಂಧಿಸಿದ ಎಲ್ಲಾ ಯುವಕರು ಸ್ವಾಮಿನಾರಾಯಣನ ಅನುಯಾಯಿಗಳಾಗಿರುವುದರಿಂದ ಅವರು ತಮ್ಮ ಹೊಲಗಳಲ್ಲಿ ಯಾವುದೇ ರಾಸಾಯನಿಕವನ್ನು ಬಳಸುವುದಿಲ್ಲ ಮತ್ತು ನೈಸರ್ಗಿಕ ಕೃಷಿಯನ್ನು ಮಾತ್ರ ಮಾಡುತ್ತಾರೆ ಎಂದು ಸಂಕಲ್ಪ ಮಾಡಬೇಕು. ಇದು ಭೂಮಿತಾಯಿಯೆಡೆಗಿನ ಸೇವೆಯೂ ಆಗಿದೆ. ವಾಸ್ತವವಾಗಿ ಇದು ಭಾರತ ಮಾತೆಯೆಡೆಗಿನ ಸೇವೆಯಾಗಿದೆ.

ಸ್ನೇಹಿತರೇ,

ಈ ಮನೋಭಾವವು ನಮ್ಮ ದೈನಂದಿನ ಜೀವನದೊಂದಿಗೆ ಸಂಬಂಧ ಹೊಂದಿರಬೇಕು ಎಂದು ನಾನು ನಿರೀಕ್ಷಿಸುತ್ತೇನೆ. ಇದು ನಮ್ಮ ಭಾಷಣದಲ್ಲಿ ಸಾಕಾಗುವುದಿಲ್ಲ. ಈ ಮನೋಭಾವವು ನಮ್ಮ ಸಂಕಲ್ಪವಾಗಬೇಕು. ಆತ್ಮವು ಸಾಧನೆಯ ಮಾಧ್ಯಮವಾಗಬೇಕು. ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ನೀವು ಭಾರತ ಮಾತೆಯ ಶುಭ ಹಾರೈಕೆಗಳೊಂದಿಗೆ ಇಂದಿನ ಶಿಬಿರದಿಂದ ಅನೇಕ ಅದ್ಭುತ ಆಲೋಚನೆಗಳನ್ನು ಕೋಟ್ಯಂತರ ದೇಶವಾಸಿಗಳಿಗೆ ಕೊಂಡೊಯ್ಯುತ್ತೀರಿ ಎಂದು ನನಗೆ ಖಾತ್ರಿಯಿದೆ.

ನಿಮ್ಮೆಲ್ಲರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿತು. ನಿಮಗೆಲ್ಲರಿಗೂ ಶುಭಾಶಯಗಳು!

ಪೂಜ್ಯ ಸಂತರಿಗೆ ನನ್ನ ಶುಭಾಶಯಗಳು, ಜೈ ಸ್ವಾಮಿನಾರಾಯಣ್!

ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಯಿತು.

***


(Release ID: 1827441) Visitor Counter : 201