ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕಾನ್ ನ ಕೆಂಪು ಹಾಸಿನಲ್ಲಿ ವಿಜೃಂಭಿಸಿದ ಭಾರತೀಯ ನಿಯೋಗ


ಕಾನ್ ನ ಉದ್ಘಾಟನಾ ಸಮಾರಂಭದ ರಾತ್ರಿಯಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್  ನೇತೃತ್ವದ ಅತಿದೊಡ್ಡ ಅಧಿಕೃತ ಭಾರತೀಯ ನಿಯೋಗ  

ಇತಿಹಾಸ ಬರೆದ ಮಾಮೆ ಖಾನ್, ಕಾನ್ ನಲ್ಲಿ ಕೆಂಪು ಹಾಸಿನ ಸ್ವಾಗತ ಪಡೆದ ಭಾರತದ ಮೊದಲ ಜಾನಪದ ಕಲಾವಿದ

ಕಾನ್ ನಲ್ಲಿ ಗಮನ ಸೆಳೆಯುತ್ತಿರುವ ದಕ್ಷಿಣ ಭಾರತದ ಸಿನೆಮಾ 

ಮಾರ್ಚೆ ಡು ಚಿತ್ರೋತ್ಸವದಲ್ಲಿ ಭಾರತಕ್ಕೆ ಗೌರವದ ರಾಷ್ಟ್ರ  ಸ್ಥಾನಮಾನ

Posted On: 17 MAY 2022 9:53PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಇಂದು ಕಾನ್ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ಕೆಂಪುಹಾಸಿನಲ್ಲಿ ಚಿತ್ರತಾರೆಯರನ್ನೂ ಒಳಗೊಂಡ ಹನ್ನೊಂದು ಗಣ್ಯರ ಅತಿದೊಡ್ಡ ಭಾರತೀಯ ಅಧಿಕೃತ ನಿಯೋಗದ ನೇತೃತ್ವ ವಹಿಸಿದ್ದರು.
ಭಾರತೀಯ ಜಾನಪದ ಕಲೆಯ ಐತಿಹಾಸಿಕ ಕ್ಷಣದಲ್ಲಿ, ಶ್ರೀ ಮಾಮೆ ಖಾನ್ ಅವರು ಕಾನ್ ನಲ್ಲಿ ಕೆಂಪು ಹಾಸಿನ ಸ್ವಾಗತ ಪಡೆದ ಭಾರತೀಯ ತಂಡದ ಮೊದಲ ಜಾನಪದ ಕಲಾವಿದರೆನಿಸಿದರು.


ಭಾರತೀಯ ಸಿನೆಮಾದ ವೈವಿಧ್ಯತೆ ಮತ್ತು ಅನನ್ಯತೆಯನ್ನು ಪ್ರದರ್ಶಿಸಿದ ಆಕರ್ಷಕ ಕೆಂಪುಹಾಸಿನಲ್ಲಿ ತಂಡವು ಭಾರತದಾದ್ಯಂತದ ಚಲನಚಿತ್ರರಂಗದ ಖ್ಯಾತನಾಮರನ್ನು ಒಳಗೊಂಡಿತ್ತು. ಹನ್ನೊಂದು ಸದಸ್ಯರ ನಿಯೋಗವು ಪಲೈಸ್ ಡೆಸ್ ಉತ್ಸವದ ದಂತಕತೆ ಎನಿಸಿರುವ ಮೆಟ್ಟಿಲುಗಳ ಕಡೆಗೆ ಹೆಜ್ಜೆಹಾಕಿದರು, ಜಾಗತಿಕ ಸಿನೆಮಾ ತಾಣವಾಗಿ ರೂಪುಗೊಳ್ಳುವ ಭಾರತದ ಮಹತ್ವಾಕಾಂಕ್ಷೆಯ ಎಲ್ಲಾ ಸಾಂಕೇತವನ್ನೂ ಇದು ಹೊತ್ತೊಯ್ದಿತು.
ಸಚಿವರ ಜೊತೆಗಿದ್ದ ಹತ್ತು ಗಣ್ಯರಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಧ್ವಜವನ್ನು ಉತ್ತುಂಗಕ್ಕೇರಿಸಿದ ಮೂವರು ಸಂಗೀತ ಮಾಂತ್ರಿಕರು ಮತ್ತು ವಿವಿಧ ಪ್ರದೇಶ, ಭಾಷೆ, ಮುಖ್ಯವಾಹಿನಿ ಮತ್ತು ಒಟಿಟಿ ನೇತೃತ್ವದ ಸಿನೆಮಾ ಸೇರಿದಂತೆ ವೈವಿಧ್ಯತೆಯ ಸಿನಿಮಾ ಜಗತ್ತನ್ನು ಪ್ರತಿನಿಧಿಸುವ ಭಾರತೀಯ ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ತಯಾರಕರು ಮತ್ತು ನಟರನ್ನೂ ಒಳಗೊಂಡಿತ್ತು. ಕಥೆ ಹೇಳುವವರ ನಾಡು ಭಾರತ, ಕಾನ್ ನಲ್ಲಿ ತನ್ನ ಅತ್ಯಂತ ಬಲವಾದ ಕೆಂಪುಹಾಸಿನ ಉಪಸ್ಥಿತಿಯ ಮೂಲಕ ಜಗತ್ತಿಗೆ ಒಂದು ಸುಂದರವಾದ ನಿರೂಪಣೆಯನ್ನು ಮುಂದಿಟ್ಟಿತು.
ಕಾನ್ ನಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವ ನಟ ನವಾಜುದ್ದೀನ್ ಸಿದ್ದಿಕಿ ಕೂಡ ಈ ತಾರಾಗಣದಲ್ಲಿ ಒಬ್ಬರಾಗಿದ್ದರು. ಅವರ ಹಸಿ, ಶಕ್ತಿಯುತ ನಟನೆ ಮತ್ತು ದಿ ಲಂಚ್ ಬಾಕ್ಸ್ ಅಥವಾ ಗ್ಯಾಂಗ್ಸ್ ಆಫ್ ವಾಸೆಪುರ್ ನಂತಹ ಅವರ ಚಲನಚಿತ್ರಗಳ ವಾಸ್ತವಿಕತೆಯು ಐರೋಪ್ಯ ಪ್ರೇಕ್ಷಕರಲ್ಲಿ ಒಂದು ನಿರ್ದಿಷ್ಟ ಅನುರಣನವನ್ನು ಹೊಂದಿದೆ, ಮತ್ತು ಭಾರತವು ವ್ಯಾಪಕ ಶ್ರೇಣಿಯ ಸಂವೇದನೆಗಳನ್ನು ಪೂರೈಸುವ ಚಲನಚಿತ್ರಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ನಿರೂಪಿಸುತ್ತದೆ.


ಸೂಪರ್ ಸ್ಟಾರ್ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರ ಉಪಸ್ಥಿತಿಯು ಚಿತ್ರ ಸಂಗೀತಕ್ಕೆ ಗೌರವ ಸಲ್ಲಿಸುವ ಭಾರತೀಯ ನಿಯೋಗದ ಉದ್ದೇಶವನ್ನು ಪ್ರದರ್ಶಿಸಿತು - ಏಕೆಂದರೆ, ಬಹುಶಃ, ವಿಶ್ವದ ಯಾವುದೇ ಭಾಗಕ್ಕಿಂತ ಹೆಚ್ಚಾಗಿ, ಸಂಗೀತ ಸುರುಳಿಗಳು ಭಾರತೀಯ ಸಿನೆಮಾದ ಸೃಷ್ಟಿಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಕೆಂಪುಹಾಸಿನ ಮೇಲೆ ದೇಶದ ಸಂಗೀತದ ಉತ್ಕೃಷ್ಟತೆಯನ್ನು ಪ್ರದರ್ಶಿಸಿ, ವಿವಿಧ ಪ್ರಕಾರಗಳನ್ನು ಪ್ರತಿನಿಧಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಹೊಸ ಯುಗದ ಸಂಗೀತ ಸಂಯೋಜಕ ಮತ್ತು ಬಹು-ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್, ಭಾರತದ ಹೆಚ್ಚು ಸಮಕಾಲೀನತೆ ಪ್ರತಿನಿಧಿಸಿದರೆ, ರಾಜಸ್ಥಾನದ ಚಲನಚಿತ್ರ ಸಂಯೋಜಕ ಮತ್ತು ಜಾನಪದ ಗಾಯಕ ಮಾಮೆ ಖಾನ್ ಭಾರತೀಯ ಸಿನೆಮಾದ ಮೇಲೆ ಜಾನಪದ ಸಂಸ್ಕೃತಿಯ ಪ್ರಭಾವವನ್ನು ಪ್ರತಿನಿಧಿಸಿದರು. ಅಸಂಖ್ಯಾತ ಹಚ್ಚು ಹಸುರಾಗಿರುವ ಚಲನಚಿತ್ರ ಗೀತೆಗಳನ್ನು ರಚಿಸಿದ ಗೀತರಚನೆಕಾರ ಮತ್ತು ಈಗ  ಕೇಂದ್ರೀಂಯ ಚಲನಚಿತ್ರ ಪ್ರಮಾಣಪತ್ರ ಮಂಡಳಿ (ಸಿಬಿಎಫ್.ಸಿ.) ಅಧ್ಯಕ್ಷ ಪ್ರಸೂನ್ ಜೋಶಿ ಸಹ ಉಪಸ್ಥಿತರಿದ್ದರು.
ವಿವಿಧ ಪ್ರಾದೇಶಿಕ ಸಿನೆಮಾಗಳ ರಾಯಭಾರಿಗಳನ್ನು ನಿಯೋಗದಲ್ಲಿ ಸೇರಿಸಿಕೊಳ್ಳಲಾಗಿತ್ತು, ಇದು 25 ಪ್ರಾದೇಶಿಕ ಚಲನಚಿತ್ರೋದ್ಯಮಗಳನ್ನು ಹೊಂದಿರುವ ಭಾರತಕ್ಕೆ ಚಲನಚಿತ್ರ ನಿರ್ಮಾಣದ ವಿಷಯದಲ್ಲಿ ಅನೇಕ ವಿಭಿನ್ನ ರುಚಿಗಳು ಮತ್ತು ಶೈಲಿಗಳನ್ನು ಹೊಂದಿದೆ ಎಂಬ ಸಂಕೇತವನ್ನು ಜಗತ್ತಿಗೆ ರವಾನಿಸಿತು. ಈ ವರ್ಷ, ದಕ್ಷಿಣದ ಸಿನೆಮಾಗಳು ಗಮನ ಸೆಳೆದವು. ಆರು ವಿಭಿನ್ನ ಭಾಷೆಗಳ (ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್) ಚಲನಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಟ ಮತ್ತು ನಿರ್ಮಾಪಕ ಆರ್. ಮಾಧವನ್ ಅವರು ಭಾರತೀಯ ಚಿತ್ರರಂಗದ  ವೈವಿಧ್ಯತೆಗೆ ಉತ್ತಮ ಉದಾಹರಣೆಯಾಗಿದ್ದಾರೆ. ತೆಲುಗು ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್ ಗಳಾದ ತಮನ್ನಾ ಭಾಟಿಯಾ ಮತ್ತು ಪೂಜಾ ಹೆಗ್ಡೆ ಕೂಡ ನಿಯೋಗದ ಭಾಗವಾಗಿ ಮಿಂಚಿದರು.
“ಮಿಸ್ಟರ್ ಇಂಡಿಯಾ’ದಂತಹ  ಮಹಾನ್ ಚಿತ್ರಗಳ ನಿರ್ದೇಶಕ ಮತ್ತು ಪ್ರಸ್ತುತ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್ ಸಂಸ್ಥೆಯ (ಎಫ್.ಟಿ.ಐಐ) ಅಧ್ಯಕ್ಷರಾಗಿರುವ ಶೇಖರ್ ಕಪೂರ್ ಮತ್ತು ನಟಿ ಹಾಗೂ ಸಿಬಿಎಫ್.ಸಿ.ಯ ಸದಸ್ಯೆ ವಾಣಿ ತ್ರಿಪಾಠಿ ಟಿಕೂ ಕೂಡ ಭಾರತೀಯ ನಿಯೋಗದಲ್ಲಿ ಭಾಗವಹಿಸಿದ್ದರು.
ಕೆಂಪು ಹಾಸಿನ ಮೇಲೆ ಕಾಣಿಸಿಕೊಂಡ ನಿಯೋಗದ ಸದಸ್ಯರು:
1. ಮಾಮೆ ಖಾನ್, ರಾಜಸ್ಥಾನದ ಪ್ರಸಿದ್ಧ ಜಾನಪದ ಗಾಯಕ
2. ಶೇಖರ್ ಕಪೂರ್, ಜಾಗತಿಕವಾಗಿ ಮೆಚ್ಚುಗೆ ಪಡೆದ ನಿರ್ದೇಶಕ
3. ಪೂಜಾ ಹೆಗ್ಡೆ, ನಟಿ
4. ನವಾಜುದ್ದೀನ್ ಸಿದ್ದಿಕಿ, ನಟ
5. ತಮನ್ನಾ ಭಾಟಿಯಾ, ನಟಿ
6. ಅನುರಾಗ್ ಠಾಕೂರ್, ನಿಯೋಗದ ಮುಖ್ಯಸ್ಥ ಮತ್ತು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರು.
7. ಆರ್ ಮಾಧವನ್, ನಟ, ನಿರ್ದೇಶಕ ಮತ್ತು ನಿರ್ಮಾಪಕ
8. ಎ.ಆರ್. ರೆಹಮಾನ್, ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕ
9. ಪ್ರಸೂನ್ ಜೋಶಿ, ಸಿಬಿಎಫ್.ಸಿ. ಅಧ್ಯಕ್ಷ ಮತ್ತು ಖ್ಯಾತ ಗೀತರಚನೆಕಾರರು
10. ವಾಣಿ ತ್ರಿಪಾಠಿ, ನಿರ್ಮಾಪಕಿ, ಸಿಬಿಎಫ್.ಸಿ. ಸದಸ್ಯೆ, ಭಾರತೀಯ ಚಲನಚಿತ್ರ ರಂಗದ ಖ್ಯಾತನಾಮರು. 
11. ರಿಕಿ ಕೇಜ್, ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದ ಸಂಗೀತಗಾರ
ಹಿನ್ನೆಲೆ:
ಜಾಗತಿಕ ಚಲನಚಿತ್ರ ಉದ್ಯಮದ ಯಾರು ಯಾರು ಎಂದು, ಪ್ರತಿ ವರ್ಷ ಒಗ್ಗೂಡುವ ಕಾನ್ ಚಲನಚಿತ್ರೋತ್ಸವವು 2022ರ ಮೇ 17 ರಿಂದ 28 ರವರೆಗೆ ನಡೆಯಲಿದ್ದು, ಭಾರತೀಯ ಪ್ರತಿನಿಧಿಗಳು ವಿವಿಧ ಕಾರ್ಯಕ್ರಮಗಳು ಮತ್ತು ಉನ್ನತ ಮಟ್ಟದ ಸಭೆಗಳಲ್ಲಿ ಭಾಗವಹಿಸುವ ಸಂದರ್ಭವೂ ಇದಾಗಿದೆ.
ಈ ವರ್ಷ ಭಾರತೀಯ ಸಿನೆಮಾದ ಪರಾಕ್ರಮದ ಆಚರಣೆಗಾಗಿ ಈ ಉತ್ಸವವು ವಿಶೇಷವಾಗಿದೆ, ಏಕೆಂದರೆ ಭಾರತವು ಮಾರ್ಚೆ ಡು ಫಿಲ್ಮ್ ನಲ್ಲಿ ಮೊದಲ ಅಧಿಕೃತ ದೇಶವಾಗಿದೆ. ಕಾನ್ ನೆಕ್ಸ್ಟ್ ನಲ್ಲಿ ಭಾರತವು "ಗೌರವದ ರಾಷ್ಟ್ರ" ವಾಗಿದೆ, ಇದರ ಅಡಿಯಲ್ಲಿ 5 ಹೊಸ ನವೋದ್ಯಮಗಳಿಗೆ ದೃಕ್ ಶ್ರವಣ ಉದ್ಯಮಕ್ಕೆ ಅಸ್ತಿತ್ವ ನಿರೂಪಿಸುವ ಅವಕಾಶವನ್ನು ನೀಡಲಾಗಿದೆ. ಅನಿಮೇಷನ್, ಡೇ ನೆಟ್ ವರ್ಕಿಂಗ್ ನಲ್ಲಿ ಹತ್ತು ವೃತ್ತಿಪರರು ಭಾಗವಹಿಸಿದ್ದಾರೆ. ಕಾನ್ ಚಲನಚಿತ್ರೋತ್ಸವದ ಈ ಆವೃತ್ತಿಯಲ್ಲಿ ಭಾರತದ ಪಾಲ್ಗೊಳ್ಳುವಿಕೆಯಲ್ಲಿ, ವರ್ಲ್ಡ್ ಪ್ರೀಮಿಯರ್ ನಲ್ಲಿ ಶ್ರೀ ಆರ್. ಮಾಧವನ್ ನಿರ್ಮಿಸಿರುವ "ರಾಕೆಟ್ರಿ" ಚಲನಚಿತ್ರ ಪ್ರದರ್ಶನ ಪ್ರಮುಖವಾಗಿದ್ದು, 2022ರ ಮೇ 19 ರಂದು ಪಲೈಸ್ ಡೆಸ್ ಉತ್ಸವಗಳಲ್ಲಿ ಇದನ್ನು ಪ್ರದರ್ಶಿಸಲಾಗುವುದು.

***



(Release ID: 1826250) Visitor Counter : 179