ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಗೋಧಿ ರಫ್ತು ಅಧಿಸೂಚನೆಯಲ್ಲಿ ಸರ್ಕಾರ ಕೆಲವು ಸಡಿಲಿಕೆಯನ್ನು ಪ್ರಕಟಿಸಿದೆ; ಆದೇಶದ ಮೊದಲು ಕಸ್ಟಮ್ಸ್ ನಲ್ಲಿ ಈಗಾಗಲೇ ನೋಂದಾಯಿಸಲಾದ ಗೋಧಿ ರವಾನೆಗೆ ಅನುಮತಿ

Posted On: 17 MAY 2022 1:56PM by PIB Bengaluru

 ಗೋಧಿ ರಫ್ತು ನಿರ್ಬಂಧಿಸುವ ಕುರಿತು ಕೇಂದ್ರ ವಾಣಿಜ್ಯ ಇಲಾಖೆ ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿ.ಜಿ.ಎಫ್.ಟಿ.) ಹೊರಡಿಸಿದ ಮೇ 13, 2022 ರಂದು ಹೊರಡಿಸಿದ ಆದೇಶಕ್ಕೆ ಸರ್ಕಾರವು ಕೆಲವು ಸಡಿಲಿಕೆ ಮಾಡಿ ತಿದ್ದುಪಡಿಯನ್ನು ಪ್ರಕಟಿಸಿದೆ.  13.5.2022 ರಂದು ಅಥವಾ ಮೊದಲು ಕಸ್ಟಮ್ಸ್ ಗೆ ಪರೀಕ್ಷೆಗಾಗಿ ಗೋಧಿ ರವಾನೆಗಳನ್ನು ಹಸ್ತಾಂತರಿಸಲಾಗಿದ್ದರೆ, ಮತ್ತು ಅವರ ಪ್ರಕ್ರಿಯೆ ವ್ಯವಸ್ಥೆಗಳಲ್ಲಿ ನೋಂದಾಯಿಸಲಾಗಿದ್ದರೆ, ಅಂತಹ ಸರಕುಗಳನ್ನು ರಫ್ತು ಮಾಡಲು ಅನುಮತಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಇಲಾಖೆ ವಿದೇಶಿ ವ್ಯಾಪಾರ ನಿರ್ದೇಶನಾಲಯ ತಿಳಿಸಿದೆ.

ಕಾಂಡ್ಲಾ ಬಂದರಿನಲ್ಲಿ ಗೋಧಿ ಸರಕನ್ನು ಲೋಡ್ ಮಾಡಲು ಅನುಮತಿ ನೀಡುವಂತೆ ಈಜಿಪ್ಟ್ ಸರ್ಕಾರ ಮಾಡಿದ ವಿನಂತಿಯನ್ನು ಅಂಗೀಕರಿಸಿ, ಈಜಿಪ್ಟ್ ಗೆ ಹೋಗುವ ಕಾಂಡ್ಲಾ ಬಂದರಿನಲ್ಲಿ ಈಗಾಗಲೇ ಲೋಡ್ ಆಗುತ್ತಿರುವ ಗೋಧಿ ರವಾನೆಗೆ ಸರ್ಕಾರವು ಅನುಮತಿ ನೀಡಿದೆ. ಈಜಿಪ್ಟ್ಗೆ ಗೋಧಿ ರಫ್ತು ಮಾಡಲು ತೊಡಗಿರುವ ಮೇರಾ ಇಂಟರ್ನ್ಯಾಶನಲ್ ಇಂಡಿಯಾ ಪ್ರೈ ನಿಯಮಿತ ಸಂಸ್ಥೆಯ 61,500 ಎಂ.ಟಿ. ಗೋಧಿಯನ್ನು ಹಡಗಿಗೆ ತುಂಬುವಿಕೆ (ಲೋಡಿಂಗ್) ಪ್ರಕ್ರಿಯೆ ಪೂರ್ಣಗೊಳಿಸಲು ಪ್ರಾತಿನಿಧ್ಯವನ್ನು ನೀಡಿದೆ.  ಅದರಲ್ಲಿ 44,340 ಎಂ.ಟಿ.  ಗೋಧಿಯನ್ನು ಈಗಾಗಲೇ ತುಂಬಲಾಗಿದೆ (ಲೋಡ್ ಮಾಡಲಾಗಿದೆ) ಮತ್ತು 17,160 ಎಂ.ಟಿ.  ಮಾತ್ರ ಹಡಗಿಗೆ ತುಂಬಲು (ಲೋಡ್ ಮಾಡಲು) ಬಾಕಿ ಉಳಿದಿದೆ.  ಸರ್ಕಾರವು 61,500 ಎಂ.ಟಿ. ಸಂಪೂರ್ಣ ರವಾನೆಗೆ ಅನುಮತಿ ನೀಡಲು ನಿರ್ಧರಿಸಿದೆ ಮತ್ತು ಕಾಂಡ್ಲಾದಿಂದ ಈಜಿಪ್ಟ್ಗೆ ನೌಕಾಯಾನ ಮೂಲಕ ಸಾಗಾಟ ಮಾಡಲು ಅವಕಾಶ ಮಾಡಿಕೊಟ್ಟಿದೆ.

ಭಾರತದಲ್ಲಿ ಒಟ್ಟಾರೆ ಆಹಾರ ಭದ್ರತೆ ಪರಿಸ್ಥಿತಿಯನ್ನು ನಿರ್ವಹಿಸಲು ಹಾಗೂ ಗೋಧಿಯ ಜಾಗತಿಕ ಮಾರುಕಟ್ಟೆಯಲ್ಲಿನ ಹಠಾತ್ ಬದಲಾವಣೆಗಳಿಂದ ಪ್ರತಿಕೂಲ ಪರಿಣಾಮ ಬೀರುವ ನೆರೆಯ ಮತ್ತು ದುರ್ಬಲ ರಾಷ್ಟ್ರಗಳ ಅಗತ್ಯಗಳನ್ನು ಬೆಂಬಲಿಸಲು ಸಾಕಷ್ಟು ಗೋಧಿ ಸರಬರಾಜು ಸಾಧ್ಯವಾಗುತ್ತಿಲ್ಲ ಹಾಗಾಗಿ, ಭಾರತ ಸರ್ಕಾರವು ಈ ಹಿಂದೆ ಗೋಧಿ ರಫ್ತುಗಳನ್ನು ನಿರ್ಬಂಧಿಸಿತ್ತು.

ಈ ಆದೇಶದ ಪ್ರಕಾರ, ಖಾಸಗಿ ಸಂಸ್ಥೆಗಳಿಂದ ಸಾಲದ ಪತ್ರ (ಲೆಟರ್ ಆಫ್ ಕ್ರೆಡಿಟ್) ಮೂಲಕ ಪೂರ್ವ ಷರತ್ತು ಒಳಗೊಂಡ ಒಪ್ಪಂದಗಳ ವ್ಯವಹಾರಗಳ ಸಂದರ್ಭಗಳಲ್ಲಿ ಈ ನಿರ್ಬಂಧವು ಅನ್ವಯಿಸುವುದಿಲ್ಲ. ಹಾಗೆಯೇ ಇತರ ದೇಶಗಳಿಗೆ ತಮ್ಮ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು ಭಾರತ ಸರ್ಕಾರವು ಅನುಮತಿ ನೀಡುವ ಸಂದರ್ಭಗಳಲ್ಲಿ ಮತ್ತು ಆ ವಿದೇಶಿ ಸರ್ಕಾರಗಳ ಕೋರಿಕೆಯ ಮೇರೆಗೆ ಮಾಡುವ ರಫ್ತು ವ್ಯವಹಾರಗಳಿಗೆ ಅನ್ವಯಿಸುವುದಿಲ್ಲ.

ಆದೇಶವು ಮೂರು ಮುಖ್ಯ ಉದ್ದೇಶಗಳನ್ನು ಪೂರೈಸಿದೆ: ಭಾರತದ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಿಕೆ ಮತ್ತು ಹಣದುಬ್ಬರವನ್ನು ಪರಿಶೀಲನೆ, ಇದು ಆಹಾರದ ಕೊರತೆಯನ್ನು ಎದುರಿಸುತ್ತಿರುವ ಇತರ ದೇಶಗಳಿಗೆ ಸಹಾಯ ಮಾಡುತ್ತದೆ, ಮತ್ತು ಇದು ಪೂರೈಕೆದಾರರಾಗಿ ಭಾರತದ ವಿಶ್ವಾಸಾರ್ಹತೆಯನ್ನು ಜಾಗತಿಕಮಟ್ಟದಲ್ಲಿ ಕಾಪಾಡುತ್ತದೆ. ಗೋಧಿ ಸರಬರಾಜು ಸಂಗ್ರಹಣೆಯನ್ನು ತಡೆಗಟ್ಟಲು ಗೋಧಿ ಮಾರುಕಟ್ಟೆಗೆ ಸ್ಪಷ್ಟ ನಿರ್ದೇಶನವನ್ನು ಒದಗಿಸುವ ಗುರಿಯನ್ನು ಈ ಆದೇಶವು ಹೊಂದಿದೆ.

***



(Release ID: 1826073) Visitor Counter : 218