ಕಾನೂನು ಮತ್ತು ನ್ಯಾಯ ಸಚಿವಾಲಯ
ಪತ್ರಿಕಾ ಸಂವಹನ
प्रविष्टि तिथि:
12 MAY 2022 4:03PM by PIB Bengaluru
ಪ್ರಸ್ತುತ ಅತ್ಯಂತ ಹಿರಿಯ ಚುನಾವಣಾ ಆಯುಕ್ತರಾದ ಶ್ರೀ ರಾಜೀವ್ ಕುಮಾರ್ ಅವರನ್ನು ಭಾರತದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಭಾರತದ ರಾಷ್ಟ್ರಪತಿಗಳು ನೇಮಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಸುಶೀಲ್ ಚಂದ್ರ ಅವರ ಅಧಿಕಾರಾವಧಿಯು ಮೇ 14, 2022 ರಂದು ಅಂತ್ಯವಾಗುತ್ತದೆ. ಶ್ರೀ ರಾಜೀವ್ ಕುಮಾರ್ ಅವರು 15 ಮೇ, 2022 ರಿಂದ ಭಾರತದ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.
ಶಾಸಕಾಂಗ ಇಲಾಖೆ,
ಕಾನೂನು ಮತ್ತು ನ್ಯಾಯ ಸಚಿವಾಲಯ
ಭಾರತ ಸರ್ಕಾರ
***
(रिलीज़ आईडी: 1824761)
आगंतुक पटल : 208