ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

ಅಂತರ ಸೌರ ಯುರೋಪ್ 2022 ನಲ್ಲಿ ಭಾಗವಹಿಸಲು ಮುನಿಚ್ ತಲುಪಿದ ಶ್ರೀ ಭಗವಂತ ಖೂಬಾ


ಅನಿವಾಸಿ ಭಾರತೀಯರ ಭೇಟಿ

ಭಾರತದಲ್ಲಿ ಇವಿ ಉತ್ಪಾದನೆಯಲ್ಲಿ ಹಣ ಹೂಡಿಕೆಗೆ ಭಾರಿ ಅವಕಾಶದ ಕೊಡುಗೆ ನೀಡುತ್ತಿದೆ: ಶ್ರೀ ಖೂಬಾ

ಬಂಡವಾಳ ಹೂಡಿಕೆ ಮತ್ತು ತಂತ್ರಜ್ಞಾನ ವರ್ಗಾವಣೆಗೆ ನವೀಕರಿಸಬಹುದಾದ ಇಂಧನ ವಲಯದ ಜೊತೆ ಸಮಾಲೋಚನೆ ನಡೆಸಿದ ಸಚಿವರು

“ಭಾರತೀಯ ಸೌರ ಇಂಧನ ಮಾರುಕಟ್ಟೆ’’ ಉದ್ದೇಶಿಸಿ ಪ್ರಾಸ್ತಾವಿಕ ಭಾಷಣ ಮಾಡಲಿರುವ ಸಚಿವರು

Posted On: 12 MAY 2022 11:10AM by PIB Bengaluru

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ ಅವರು ಅಂತರ ಸೌರ (ಇಂಟರ್ ಸೋಲಾರ್) ಯುರೋಪ್ 2022 ನಲ್ಲಿ ಭಾಗವಹಿಸಲು ಇಂದು ಜರ್ಮನಿಯ ಮ್ಯೂನಿಚ್‌ಗೆ ತಲುಪಿದರು. ಅವರು ಇಂದು “ಭಾರತದ ಸೌರಶಕ್ತಿ ಮಾರುಕಟ್ಟೆ” ಹೂಡಿಕೆ ಪ್ರಚಾರ ಕಾರ್ಯಕ್ರಮದಲ್ಲಿ ಸಚಿವರು ಪ್ರಾಸ್ತಾವಿಕ ಭಾಷಣವನ್ನು ಮಾಡಲಿದ್ದಾರೆ. 
ಭಾರತ- ಜರ್ಮನ್ ಇಂಧನ ವೇದಿಕೆ (ಐಜಿಇಎಫ್) ನಿರ್ದೇಶಕ ಶ್ರೀ ಟೋಬಿಯಾಸ್ ವಿಂಟರ್ ಮತ್ತು ರಾಷ್ಟ್ರೀಯ ಸೌರಶಕ್ತಿ ಒಕ್ಕೂಟದ (ಎನ್‌ಎಸ್‌ಇಎಫ್‌ಐ) ನ ಸಿಇಒ ಸುಬ್ರಹ್ಮಣ್ಯಂ ಪುಲಿಪಾಕ ಅವರು ಸಚಿವರನ್ನು ಸ್ವಾಗತಿಸಿದರು.  ಸಹಾಯಕ ಸಚಿವರು ಮ್ಯೂನಿಚ್‌ನಲ್ಲಿ ಅನಿವಾಸಿ ಭಾರತೀಯರನ್ನು ಭೇಟಿಯಾದರು. ಸಚಿವರು ಎಲೆಕ್ಟ್ರಿಕ್ ವಾಹನದಲ್ಲಿ ಸವಾರಿ ಮಾಡಿದರು. ಭಾರತದಲ್ಲಿ ಹೂಡಿಕೆ ಮಾಡಲು ವಿದ್ಯುನ್ಮಾನ ವಾಹನಗಳ ತಯಾರಕರಿಗೆ ಭಾರತ ಉತ್ತಮ ಅವಕಾಶವನ್ನು ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ವಿಶ್ವದ ಪ್ರಮುಖ ನವೀಕರಿಸಬಹುದಾದ ಇಂಧನ ಉದ್ಯಮ ಕಂಪನಿಯೊಂದರ ಗುಂಪಿನ ಮುಖ್ಯಸ್ಥರೊಂದಿಗೆ ಮುಖಾಮುಖಿ ಚರ್ಚೆ ನಡೆಸಲಾಯಿತು. ಭಾರತದಲ್ಲಿ ಹೂಡಿಕೆ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದಕರಿಗೆ ಭಾರತ ನೀಡುವ ವಿನಾಯ್ತಿಗಳು ಹಾಗೂ ಆಫರ್ ಗಳ  ಕುರಿತು ಚರ್ಚೆ ನಡೆಸಲಾಯಿತು. 

 

***



(Release ID: 1824755) Visitor Counter : 147