ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ದೂರ ಸಂಪರ್ಕ ಇಲಾಖೆಯ ಡಬ್ಲ್ಯುಪಿಸಿ ವಿಭಾಗ ಚೆನ್ನೈ, ನವದೆಹಲಿ, ಹೈದರಾಬಾದ್ ಮತ್ತು ಕೋಲ್ಕತಾ ಕೇಂದ್ರಗಳಲ್ಲಿ 2022 ನೇ ಸಾಲಿನ ಆರ್ ಟಿಆರ್ (ಎ) ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ

Posted On: 09 MAY 2022 12:12PM by PIB Bengaluru

ಭಾರತ ಸರ್ಕಾರದ ಸಂವಹನ ಸಚಿವಾಲಯದ ದೂರಸಂಪರ್ಕ ಇಲಾಖೆಯು ಚೆನ್ನೈ, ನವದೆಹಲಿ, ಹೈದರಾಬಾದ್ ಮತ್ತು ಕೋಲ್ಕತಾ ಕೇಂದ್ರಗಳಲ್ಲಿ 2022ನೇ ಸಾಲಿನ ರೇಡಿಯೋ ಟೆಲಿಫೋನಿ ನಿರ್ಬಂಧಿತ (ಏರೋ) ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ದೂರಸಂಪರ್ಕ ಇಲಾಖೆಯ (https://dot.gov.in/spectrummanagement/release-rtr-exam-schedule-chennai-new-delhi-hyderabad-and-kolkata-centres-year) ವೆಬ್ ಸೈಟ್ ನಲ್ಲಿ ಇದಕ್ಕೆ ಸಂಬಂಧಿಸಿದ ನೋಟಿಸ್ ಅನ್ನು ಅಪ್ ಲೋಡ್ ಮಾಡಲಾಗಿದೆ.

ಸಂವಹನ ಸಚಿವಾಲಯ, ದೂರಸಂಪರ್ಕ ಇಲಾಖೆ, ನಿಸ್ತಂತು ಯೋಜನೆ ಮತ್ತು ಸಮನ್ವಯ ವಿಭಾಗವು ಭಾರತೀಯ ನಿಸ್ತಂತು ಟೆಲಿಗ್ರಾಫಿ (ಕಮರ್ಷಿಯಲ್ ರೇಡಿಯೋ ಆಪರೇಟರ್ಸ್ ಸರ್ಟಿಫಿಕೇಟ್ ಆಫ್ ಪ್ರಾವೀಣ್ಯತೆ ಮತ್ತು ವೈರ್ ಲೆಸ್ ಟೆಲಿಗ್ರಾಫಿಯನ್ನು ನಿರ್ವಹಿಸಲು ಪರವಾನಗಿ) ನಿಯಮಗಳು, 1954 ಮತ್ತು ಅದರ ನಂತರ ಮಾಡಿದ ತಿದ್ದುಪಡಿಗಳ ಅಡಿಯಲ್ಲಿ ರೇಡಿಯೋ ಟೆಲಿಫೋನಿ ನಿರ್ಬಂಧಿತ (ಏರೋ) ಪ್ರಾವೀಣ್ಯತೆ ಮತ್ತು ಏರೋ ಮೊಬೈಲ್ ಸೇವೆಯಲ್ಲಿ ಕಾರ್ಯನಿರ್ವಹಿಸಲು ಪರವಾನಗಿಯ ಪ್ರಮಾಣಪತ್ರವನ್ನು ನೀಡಲು ಪರೀಕ್ಷೆಗಳನ್ನು ನಡೆಸಲಿದೆ. ಪರೀಕ್ಷೆಯ ವೇಳಾಪಟ್ಟಿ ಹೀಗಿದೆ:                               

ಟೇಬಲ್ 1

ಕ್ರಮ ಸಂಖ್ಯೆ

ಕೇಂದ್ರ

ಪರೀಕ್ಷೆ ಪ್ರಾರಂಭದ ದಿನಾಂಕ (ತಾತ್ಕಾಲಿಕ)

ಸಂಬಂಧಪಟ್ಟ RLO ನಲ್ಲಿ ಅರ್ಜಿಯ ಹಾರ್ಡ್ ಪ್ರತಿಯನ್ನು ಸ್ವೀಕರಿಸಲು ತಾತ್ಕಾಲಿಕ ದಿನಾಂಕ

ನೋಟಿಸ್ ನಲ್ಲಿ ಉಲ್ಲೇಖಿಸಲಾದ ಕೋಷ್ಟಕ -2 ರ ಪ್ರಕಾರ ಹಾರ್ಡ್ ಪ್ರತಿಯನ್ನು ಪ್ರಾದೇಶಿಕ ಪರವಾನಗಿ ಅಧಿಕಾರಿಗೆ (RLO) ಕಳುಹಿಸಬೇಕು

 

 

 

 

ಪ್ರಾರಂಭ ದಿನಾಂಕ

ಕೊನೆಯ ದಿನಾಂಕ

 

1.

ಚೆನ್ನೈ

27-06-2022

07-05-2022

21-05-2022

ಚೆನ್ನೈ

2.

ನವದೆಹಲಿ

22-08-2022

15-06-2022

30-05-2022

ನವದೆಹಲಿ

3.

ಹೈದರಾಬಾದ್

17-10-2012

15-08-2022

30-08-2022

ಹೈದರಾಬಾದ್

4.

ಕೊಲ್ಕತ್ತಾ

12-12-2022

15-10-2022

30-10-2022

ಕೋಲ್ಕತಾ

"ಮೇಲಿನ ದಿನಾಂಕಗಳು (ಕೋಷ್ಟಕದಲ್ಲಿ ಉಲ್ಲೇಖಿಸಲಾದವು) ತಾತ್ಕಾಲಿಕವಾಗಿವೆ, ಆದ್ದರಿಂದ ಅವುಗಳನ್ನು ಬದಲಾಯಿಸುವ ಸಾಧ್ಯತೆಯಿದೆ" ಎಂದು ನೋಟಿಸ್ ನಲ್ಲಿ  ತಿಳಿಸಲಾಗಿದೆ. ಆದಾಗ್ಯೂ, ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ದೂರಸಂಪರ್ಕ ಇಲಾಖೆ (ಡಿಒಟಿ) ವೆಬ್ ಸೈಟ್  ಮೂಲಕ ಸರಿಯಾದ ದಿನಾಂಕಗಳು ಮತ್ತು ಪರೀಕ್ಷೆಯ ಸ್ಥಳವನ್ನು ಟೆಲಿಕಾಂ ಇಲಾಖೆ (ಡಿಒಟಿ) ವೆಬ್ ಸೈಟ್ ಮೂಲಕ ದೃಢೀಕರಿಸಲಾಗುತ್ತದೆ. ಎಲ್ಲಾ ಅಭ್ಯರ್ಥಿಗಳು, ಪರೀಕ್ಷಕರು, ಸಂಯೋಜಕರು ಮತ್ತು ಪರೀಕ್ಷೆಗೆ ಸಂಬಂಧಿಸಿದ ಇತರ ಸಿಬ್ಬಂದಿಗೆ ಕಾಲಕಾಲಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದ ಕೋವಿಡ್ -19 ಮಾರ್ಗಸೂಚಿಗಳು / ಎಸ್ಒಪಿಗಳನ್ನು ಅನುಸರಿಸಲು ನಿರ್ದೇಶಿಸಲಾಗಿದೆ.

ಮೇಲಿನ ಕೋಷ್ಟಕ -1 ರಲ್ಲಿ ಉಲ್ಲೇಖಿಸಿದಂತೆ ನಿಗದಿತ ಅವಧಿಯೊಳಗೆ ಅರ್ಜಿಯ ಹಾರ್ಡ್ ಕಾಪಿಯನ್ನು ಸಂಬಂಧಪಟ್ಟ (ಪ್ರಾದೇಶಿಕ ಪರವಾನಗಿ ಅಧಿಕಾರಿಗಳು) ಆರ್ ಎಲ್ ಒಗಳಿಗೆ ಸಲ್ಲಿಸಬೇಕು ಎಂದು ಸಹ ಉಲ್ಲೇಖಿಸಲಾಗಿದೆ.

***

 


(Release ID: 1824059) Visitor Counter : 221