ಪ್ರಧಾನ ಮಂತ್ರಿಯವರ ಕಛೇರಿ

ಜಿತೊ ಕನೆಕ್ಟ್ 2022’ ಉದ್ಘಾಟನಾ ಗೋಷ್ಠಿ ಉದ್ದೇಶಿಸಿ ಪ್ರಧಾನಿ ಭಾಷಣ


“ಭಾರತ ಸಂಭವನೀಯತೆ ಮತ್ತು ಸಾಮರ್ಥ್ಯವನ್ನು ಮೀರಿ ಮುನ್ನಡೆಯುತ್ತಿದೆ ಮತ್ತು ಜಾಗತಿಕ ಕಲ್ಯಾಣದ ದೊಡ್ಡ ಉದ್ದೇಶವನ್ನು ನಿರ್ವಹಿಸುತ್ತಿದೆ’’

“ದೇಶದಲ್ಲಿ ಇಂದು ಪ್ರತಿಭೆ, ವ್ಯಾಪಾರ ಮತ್ತು ತಂತ್ರಜ್ಞಾನಕ್ಕೆ ಉತ್ತೇಜನ ನೀಡಲಾಗುತ್ತಿದೆ”

“ಆತ್ಮನಿರ್ಭರ ಭಾರತ ನಮ್ಮ ಪಥ ಮತ್ತು ಸಂಕಲ್ಪವಾಗಿದೆ”

“ನಾವು ಪರಿಸರ, ಕೃಷಿ, ಮರುಸಂಸ್ಕರಣೆ ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣೆ – EARTH - ಗಾಗಿ ಕಾರ್ಯನಿರ್ವಹಿಸುತ್ತಿದ್ದೇವೆ

Posted On: 06 MAY 2022 12:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜೈನ್ ಅಂತಾರಾಷ್ಟ್ರೀಯ ವ್ಯಾಪಾರ ಸಂಘಟನೆಯ ‘ಜಿತೊ ಕನೆಕ್ಟ್ 2022’ ಉದ್ಘಾಟನಾ ಗೋಷ್ಠಿಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. 
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದಿನ ಕಾರ್ಯಕ್ರಮ ‘ಸಬ್ ಕಾ ಪ್ರಯಾಸ್’ ಉದ್ದೇಶದ ಸ್ಫೂರ್ತಿಯಾಗಿದೆ ಎಂದು ಉಲ್ಲೇಖಿಸಿದರು ಹಾಗೂ ಇಂದು ವಿಶ್ವ, ಭಾರತದ ಅಭಿವೃದ್ಧಿ ನಿರ್ಣಯಗಳನ್ನು ತನ್ನ ಗುರಿಗಳನ್ನು ಸಾಧಿಸುವ ಸಾಧನಗಳಾಗಿ ಪರಿಗಣಿಸುತ್ತಿದೆ ಎಂದರು. ಅದು ಜಾಗತಿಕ ಶಾಂತಿ, ಸಮೃದ್ಧಿ, ಜಾಗತಿಕ ಸವಾಲುಗಳಿಗೆ ಸಂಬಂಧಿಸಿದ ಪರಿಹಾರಗಳು ಅಥವಾ ಜಾಗತಿಕ ಪೂರೈಕೆ ಸರಣಿ ಬಲವರ್ಧನೆಯಾಗಿರಬಹುದು. ಜಗತ್ತು, ಹೆಚ್ಚಿನ ವಿಶ್ವಾಸದಿಂದ ಭಾರತದತ್ತ ನೋಡುತ್ತಿದೆ ಎಂದರು.  “ಹಲವು ಐರೋಪ್ಯ ರಾಷ್ಟ್ರಗಳಲ್ಲಿ ಭಾರತದ ಅಮೃತ ಕಾಲದ ಸಂಕಲ್ಪಗಳ ಬಗ್ಗೆ ತಿಳಿಸಿ, ಈಗಷ್ಟೇ ದೇಶಕ್ಕೆ ವಾಪಸ್ಸಾಗಿದ್ದೇನೆ” ಎಂದು ಅವರು ಹೇಳಿದರು. 
    ಯಾವುದೇ ಪರಿಣತಿ ಪಡೆದ ವಲಯವಾಗಿರಬಹುದು, ಯಾವುದೇ ಕಾಳಜಿಯಾಗಿರಬಹುದು ಮತ್ತು ಜನರ ನಡುವೆ ಯಾವುದೇ ಭಿನ್ನಾಭಿಪ್ರಾಯವಿರಬಹುದು. ಏನೇ ಇದ್ದರೂ ನವಭಾರತ ನಿರ್ಮಾಣಕ್ಕಾಗಿ ಎಲ್ಲ ಜನರು ಒಗ್ಗೂಡಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಪ್ರತಿಯೊಬ್ಬರಿಗೂ ಭಾರತ ಸಂಭವನೀಯತೆ ಮತ್ತು ಸಾಮರ್ಥ್ಯದ ಕಡೆಗೆ ಸಾಗುತ್ತಿದೆ ಎಂಬುದರ ಅನುಭವವಾಗುತ್ತಿದೆ ಹಾಗೂ ಜಾಗತಿಕ ಕಲ್ಯಾಣಕ್ಕಾಗಿ ಬಹುದೊಡ್ಡ ಉದ್ದೇಶವನ್ನು ನಿರ್ವಹಿಸುತ್ತಿದೆ. ಹಿಂದಿನ ಸ್ವಚ್ಛತೆಯ ಉದ್ದೇಶಗಳನ್ನು ಪುನರುಚ್ಚರಿಸಿದ ಅವರು, ಸ್ಪಷ್ಟ ಉದ್ದೇಶ ಮತ್ತು ಪೂರಕ ನೀತಿಗಳಿವೆ ಮತ್ತು ದೇಶದಲ್ಲಿ ಇಂದು ಎಷ್ಟು ಸಾಧ್ಯವೋ ಅಷ್ಟು ಪ್ರತಿಭೆ, ವ್ಯಾಪಾರ ಮತ್ತು ತಂತ್ರಜ್ಞಾನಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದರು. ದೇಶದಲ್ಲಿ ಇಂದು ಪ್ರತಿ ದಿನ ಡಜನ್ ಗಟ್ಟಲೆ ನವೋದ್ಯಮಗಳು ನೋಂದಣಿಯಾಗುತ್ತಿವೆ ಹಾಗೂ ಪ್ರತಿವಾರ ಯೂನಿಕಾರ್ನ್ ಸೃಷ್ಟಿಯಾಗುತ್ತಿವೆ ಎಂದು ಹೇಳಿದರು. 
ಸರ್ಕಾರದ ಇ-ಮಾರುಕಟ್ಟೆ ತಾಣ ಅಂದರೆ ಜಮ್ ಪೋರ್ಟಲ್ ಆರಂಭವಾದ ನಂತರ ಎಲ್ಲ ಖರೀದಿಗಳನ್ನು ಪ್ರತಿಯೊಬ್ಬರ ಮುಂದೆ ಒಂದೇ ವೇದಿಕೆಯಲ್ಲಿ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದೀಗ ಕುಗ್ರಾಮಗಳಲ್ಲಿರುವವರು, ಸಣ್ಣ ಅಂಗಡಿಗಳ ಮಾಲೀಕರು ಮತ್ತು ಸ್ವಸಹಾಯ ಗುಂಪುಗಳು ತಮ್ಮ ಉತ್ಪನ್ನಗಳನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಬಹುದು. ಇಂದು 40 ಲಕ್ಷಕ್ಕೂ ಅಧಿಕ ಮಾರಾಟಗಾರರು ಜಮ್ ಪೋರ್ಟಲ್ ನಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಅಲ್ಲದೆ ಅವರು ಪಾರದರ್ಶಕ, ‘ಮುಖಾಮುಖಿ ರಹಿತ’ ತೆರಿಗೆ ಅಂದಾಜು, ಒಂದು ರಾಷ್ಟ್ರ – ಒಂದು ತೆರಿಗೆ, ಉತ್ಪಾದನೆ ಆಧರಿತ ಪ್ರೋತ್ಸಾಹಕ ಯೋಜನೆಗಳ ಕುರಿತಂತೆ ಅವರು ಮಾತನಾಡಿದರು.  
    ನಮ್ಮ ಭವಿಷ್ಯದ ಪಥ ಮತ್ತು ಗುರಿ ಎರಡೂ ಅತ್ಯಂತ ಸ್ಪಷ್ಟವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಆತ್ಮನಿರ್ಭರ ಭಾರತ ನಮ್ಮ ಪಥ ಮತ್ತು ನಮ್ಮ ಸಂಕಲ್ಪವೂ ಆಗಿದೆ. ಅದಕ್ಕಾಗಿ ನಾವು ಸೂಕ್ತ ವಾತಾವರಣವನ್ನು ಸೃಷ್ಟಿಸಲು ಹಲವು ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ” ಎಂದು ಅವರು ಹೇಳಿದರು. 
    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರಿಗೆ ಪ್ರಧಾನಮಂತ್ರಿ ಅವರು ಅರ್ಥ(ಇಎಆರ್ ಟಿಎಚ್) ನಿಟ್ಟಿನಲ್ಲಿ ಕೆಲಸ ಮಾಡುವಂತೆ ಕರೆ ನೀಡಿದರು. ಆ ಪದವನ್ನು ವಿಸ್ತರಿಸುತ್ತಾ ಅವರು ‘ಇ ಎಂದರೆ ಪರಿಸರ ಸಮೃದ್ಧಿ ಎಂದರು. ಮುಂದಿನ ವರ್ಷ ಆಗಸ್ಟ್ 15ರ ವೇಳೆಗೆ ಪ್ರತಿಯೊಂದು ಜಿಲ್ಲೆಗಳಲ್ಲೂ ಕನಿಷ್ಠ 75 ಅಮೃತ ಸರೋವರಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ತಾವು ಹೇಗೆ ಬೆಂಬಲ ನೀಡಬೇಕೆಂಬ ಕುರಿತು ಚರ್ಚೆ ನಡೆಸುವಂತೆ ಅವರು ಕರೆ ನೀಡಿದರು. ‘ಎ’ ಅಂದರೆ ಅಗ್ರಿಕಲ್ಚರ್ (ಕೃಷಿ) ಇದು ಹೆಚ್ಚು ಲಾಭದಾಯಕವಾಗಬೇಕು ಮತ್ತು ಹೆಚ್ಚಿನ ಹೂಡಿಕೆಯಾಗಬೇಕು, ನೈಸರ್ಗಿಕ ಕೃಷಿ ತಂತ್ರಜ್ಞಾನ ಮತ್ತು ಆಹಾರ ಸಂಸ್ಕರಣಾ ವಲಯಕ್ಕೆ ಒತ್ತು ನೀಡಬೇಕು. ‘ಆರ್’ ಅಂದರೆ ಮರು ಸಂಸ್ಕರಣೆ ಮತ್ತು ಚಲಾವಣೆ ಆರ್ಥಿಕತೆಗೆ ಒತ್ತು ನೀಡುವುದು ಹಾಗೂ ಮರುಬಳಕೆ,  ತಗ್ಗಿಸುವುದು ಮತ್ತು ಮರು ಸಂಸ್ಕರಣೆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದು. ‘ಟಿ’ ಎಂದರೆ ತಂತ್ರಜ್ಞಾನ ಸಾಧ್ಯವಾದಷ್ಟು ಜನರಿಗೆ ತಂತ್ರಜ್ಞಾನವನ್ನು ಒದಗಿಸುವುದು. ಡ್ರೋಣ್ ತಂತ್ರಜ್ಞಾನದಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಇನ್ನು ಹೇಗೆ ಹೆಚ್ಚು ಲಭ್ಯವಾಗುವಂತೆ ಮಾಡುವ ಬಗ್ಗೆ ಪರಿಶೀಲಿಸುವಂತೆ ಸಬಿಕರಿಗೆ ಕರೆ ನೀಡಿದರು. ‘ಎಚ್’ ಅಂದರೆ ಆರೋಗ್ಯ ರಕ್ಷಣೆ ಇಂದು ಆರೋಗ್ಯ ಆರೈಕೆ ಮತ್ತು ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದರು. ತಮ್ಮ ಸಂಸ್ಥೆ ಇದಕ್ಕೆ ಹೇಗೆ ಬೆಂಬಲ ನೀಡಬಹುದು ಎಂಬ ಬಗ್ಗೆ ಆಲೋಚಿಸುವಂತೆ ಅವರು ಸಭಿಕರಿಗೆ ಕರೆ ನೀಡಿದರು. 


***



(Release ID: 1823530) Visitor Counter : 155