ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನ ಮಂತ್ರಿ ಅಧ್ಯಕ್ಷತೆಯಲ್ಲಿ ಗೋಧಿ ಪೂರೈಕೆ, ದಾಸ್ತಾನು ಮತ್ತು ರಫ್ತು ಪರಿಸ್ಥಿತಿ ಕುರಿತ ಪರಾಮರ್ಶನ ಸಭೆ
Posted On:
05 MAY 2022 8:43PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೋಧಿ ಪೂರೈಕೆ, ದಾಸ್ತಾನು ಮತ್ತು ರಫ್ತು ಸಹಿತ ವಿವಿಧ ವಿಷಯಗಳ ಕುರಿತಂತೆ ತಮ್ಮ ಅಧ್ಯಕ್ಷತೆಯಲ್ಲಿ ಪರಾಮರ್ಶನಾ ಸಭೆ ನಡೆಸಿದರು.
ಈ ವಿಷಯಕ್ಕೆ ಸಂಬಂಧಿಸಿ ಪ್ರಧಾನ ಮಂತ್ರಿ ಅವರಿಗೆ ವಿವರವಾದ ಮಾಹಿತಿಯನ್ನು ಒದಗಿಸಲಾಯಿತು. 2022 ರ ಮಾರ್ಚ್ –ಏಪ್ರಿಲ್ ತಿಂಗಳಲ್ಲಿ ಬೆಳೆ ಉತ್ಪಾದನೆಯ ಮೇಲೆ ಹೆಚ್ಚಿನ ಉಷ್ಣಾಂಶದಿಂದಾಗುವ ಪರಿಣಾಮಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು. ಗೋಧಿ ಖರೀದಿ ಮತ್ತು ರಫ್ತಿಗೆ ಸಂಬಂಧಿಸಿದಂತೆ ಹಾಲಿ ಇರುವ ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಲಾಯಿತು.
ಭಾರತದಲ್ಲಿ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತವು ಆಹಾರ ಧಾನ್ಯಗಳ ಮತ್ತು ಇತರ ಕೃಷಿ ಉತ್ಪನ್ನಗಳ ಭರವಸೆಯುಕ್ತ ಮೂಲವಾಗಿ ರೂಪುಗೊಳ್ಳುವಲ್ಲಿ ಗುಣಮಟ್ಟ ಮಾನಕಗಳನ್ನು ಖಾತ್ರಿಪಡಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನ ಮಂತ್ರಿ ಅವರು ನಿರ್ದೇಶನವಿತ್ತರು. ರೈತರಿಗೆ ಗರಿಷ್ಠ ಸಹಾಯ ಲಭ್ಯವಾಗುವುದನ್ನು ಖಾತ್ರಿಪಡಿಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಧಾನ ಮಂತ್ರಿ ಅವರಿಗೆ ಈಗಿನ ಮಾರುಕಟ್ಟೆ ದರಗಳು ರೈತರಿಗೆ ಲಾಭದಾಯಕವಾಗಿರುವ ಬಗ್ಗೆಯೂ ಮಾಹಿತಿ ಒದಗಿಸಲಾಯಿತು.
ಸಭೆಯಲ್ಲಿ ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ, ಸಲಹೆಗಾರರು, ಸಂಪುಟ ಕಾರ್ಯದರ್ಶಿ, ಆಹಾರ ಮತ್ತು ಪಿ.ಡಿ.ಎಸ್. ಹಾಗು ಕೃಷಿ ಇಲಾಖೆ ಕಾರ್ಯದರ್ಶಿಗಳು ಭಾಗವಹಿಸಿದ್ದರು. .
***
(Release ID: 1823154)
Visitor Counter : 203
Read this release in:
English
,
Urdu
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam