ಪ್ರಧಾನ ಮಂತ್ರಿಯವರ ಕಛೇರಿ
ನೈಸರ್ಗಿಕ ವಿಪತ್ತು ತಾಳಿಕೊಳ್ಳುವಂತಹ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ 4ನೇ ಆವೃತ್ತಿಯ ಉದ್ಘಾಟನಾ ಗೋಷ್ಠಿಯನ್ನುದ್ದೇಶಿಸಿ ಪ್ರಧಾನಿ ಭಾಷಣ
“ಮುಂದಿನ ತಲೆಮಾರಿನ ಮೂಲಸೌಕರ್ಯ ನಿರ್ಮಿಸುವ ಮೂಲಕ ಬಡವರು ಮತ್ತು ದುರ್ಬಲ ವರ್ಗದವರ ಅಗತ್ಯಗಳ ಆಶೋತ್ತರ ಈಡೇರಿಸಲು ನಾವು ಬದ್ಧವಾಗಿದ್ದೇವೆ’’
“ಯಾವುದೇ ಮೂಲಸೌಕರ್ಯ ಪ್ರಗತಿಗಾಥೆಯ ಕೇಂದ್ರ ಬಿಂದು ಜನರೇ ಆಗಿರಬೇಕು, ಭಾರತದಲ್ಲಿ ನಾವು ಅದನ್ನೇ ಮಾಡುತ್ತಿದ್ದೇವೆ’’
“ನಾವು ತಾಳಿಕೆಯ ಮೂಲಸೌಕರ್ಯ ನಿರ್ಮಿಸಿದರೆ ನಮಗೆ ಮಾತ್ರ ಭವಿಷ್ಯದ ಪೀಳಿಗೆಗಳಿಗೂ ವಿಪತ್ತು ನಿಯಂತ್ರಿಸ ಬಹುದಾಗಿದೆ’’
Posted On:
04 MAY 2022 10:28AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಪತ್ತು ತಾಳಿಕೊಳ್ಳುವಂತಹ ಮೂಲಸೌಕರ್ಯ ಕುರಿತ ಅಂತರಾಷ್ಟ್ರೀಯ ಸಮ್ಮೇಳನದ ನಾಲ್ಕನೇ ಆವೃತ್ತಿಯ ಉದ್ಘಾಟನಾ ಗೋಷ್ಠಿಯನ್ನು ಉದ್ದೇಶಿಸಿ ವಿಡಿಯೋ ಮೂಲಕ ಮಾತನಾಡಿದರು. ಅಧಿವೇಶನವನ್ನು ಉದ್ದೇಶಿಸಿ ಆಸ್ಟ್ರೇಲಿಯಾದ ಪ್ರಧಾನಿ ಗೌರವಾನ್ವಿತ ಸ್ಕಾಟ್ ಮಾರಿಸನ್, ಘಾನಾದ ಅಧ್ಯಕ್ಷ ಗೌರವಾನ್ವಿತ ನಾನಾ ಅಡ್ಡೋ ಡಂಕ್ವಾ ಅಕುಫೋ ಅಡ್ಡೋ, ಜಪಾನ್ ಪ್ರಧಾನಿ ಗೌರವಾನ್ವಿತ ಫ್ಯೂಮಿಯೊ ಕಿಶಿಡಾ ಮತ್ತು ಮಡಗಾಸ್ಕರ್ ಅಧ್ಯಕ್ಷ ಗೌರವಾನ್ವಿತ ಆಂಡ್ರಿ ನಿರಿನಾ ರಾಜೋಲಿನಾ ಮತ್ತಿತರ ಗಣ್ಯರು ಭಾಷಣ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ಆರಂಭದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಗಂಭೀರ ಭರವಸೆಯಿಂದ ಯಾರೊಬ್ಬರೂ ಹಿಂದೆ ಸರಿಯುವಂತಿಲ್ಲ ಎಂದು ಸಭೆಗೆ ನೆನಪಿಸಿದರು. “ಅದಕ್ಕಾಗಿಯೇ, ಮುಂದಿನ ಪೀಳಿಗೆಯ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ಅವರ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ಮೂಲಕ ಬಡವರು ಮತ್ತು ಅತ್ಯಂತ ದುರ್ಬಲರ ಅಗತ್ಯಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ" ಎಂದು ಅವರು ಹೇಳಿದರು. ಮೂಲಸೌಕರ್ಯವು ಜನರಿಗೆ ಸಂಬಂಧಿಸಿದೆ ಮತ್ತು ಅವರಿಗೆ ಉತ್ತಮ ಗುಣಮಟ್ಟದ, ವಿಶ್ವಾಸಾರ್ಹ ಮತ್ತು ಸುಸ್ಥಿರ ಸೇವೆಗಳನ್ನು ಸಮಾನ ರೀತಿಯಲ್ಲಿ ಒದಗಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಯಾವುದೇ ಮೂಲಸೌಕರ್ಯ ಪ್ರಗತಿಗಾಥೆಯಲ್ಲಿ ಜನರೇ ಕೇಂದ್ರಬಿಂದುವಾಗಿರಬೇಕು ಮತ್ತು ಭಾರತದಲ್ಲಿ ನಾವು ಅದನ್ನೇ ಮಾಡುತ್ತಿದ್ದೇವೆ’’ ಎಂದು ಅವರು ಹೇಳಿದರು.
ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೈರ್ಮಲ್ಯ, ವಿದ್ಯುತ್, ಸಾರಿಗೆ ಮತ್ತು ಇನ್ನೂ ಹಲವು ಕ್ಷೇತ್ರಗಳಲ್ಲಿ ಭಾರತದಲ್ಲಿ ಮೂಲಭೂತ ಸೇವೆ ಒದಗಿಸುವ ಸಾಮರ್ಥ್ಯವನ್ನು ಭಾರತವು ಗಮನಾರ್ಹವಾಗಿ ವೃದ್ಧಿಸಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. “ನಾವು ಹವಾಮಾನ ಬದಲಾವಣೆಯನ್ನು ನೇರವಾಗಿ ನಿಭಾಯಿಸುತ್ತಿದ್ದೇವೆ.ಅದಕ್ಕಾಗಿಯೇ, ಸಿಒಪಿ-26 ನಲ್ಲಿ ನಾವು ನಮ್ಮ ಅಭಿವೃದ್ಧಿಯ ಪ್ರಯತ್ನಗಳಿಗೆ ಸಮಾನಾಂತರವಾಗಿ 2070 ರ ವೇಳೆಗೆ 'ಶೂನ್ಯ ಮಾಲಿನ್ಯ'ವನ್ನು ಸಾಧಿಸಲು ಬದ್ಧರಾಗಿದ್ದೇವೆ’’ ಎಂದು ಹೇಳಿದರು.
ಮಾನವನ ಸಾಮರ್ಥ್ಯವನ್ನು ಅನಾವರಣಗೊಳಿಸುವಲ್ಲಿ ಮೂಲಸೌಕರ್ಯದ ಮಹತ್ವದ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಮೂಲಸೌಕರ್ಯಕ್ಕೆ ಆಗುವ ಹಾನಿಯು ತಲೆಮಾರುಗಳವರೆಗೆ ಶಾಶ್ವತ ಹಾನಿಗೆ ಕಾರಣವಾಗುತ್ತದೆ ಎಂದು ಹೇಳಿದರು. ಆ ಹಿನ್ನೆಲೆಯಲ್ಲಿ "ನಾವು ಆಧುನಿಕ ತಂತ್ರಜ್ಞಾನ ಮತ್ತು ಜ್ಞಾನದೊಂದಿಗೆ ಸಜ್ಜಾಗಬೇಕು, ದೀರ್ಘಕಾಲ ಬಾಳಿಕೆ ಬರುವಂತಹ ಮೂಲಸೌಕರ್ಯವನ್ನು ನಾವು ರಚಿಸಬಹುದೇ?". ಈ ಸವಾಲನ್ನು ಗುರುತಿಸುವುದು ಸಿಡಿಆರ್‌ಐ ರಚನೆಗೆ ಆಧಾರವಾಗಿದೆ ಎಂದು ಅವರು ಹೇಳಿದರು. ಮೈತ್ರಿ ವಿಸ್ತರಣೆಗೊಂಡಿದೆ ಮತ್ತು ಅಮೂಲ್ಯ ಕೊಡುಗೆಗಳನ್ನು ನೀಡಿದೆ ಎಂದು ಅವರು ಉಲ್ಲೇಖಿಸಿದರು. ಸಿಒಪಿ-26 ನಲ್ಲಿ ಪ್ರಾರಂಭಿಸಲಾದ 'ಸ್ಥಿತಿಸ್ಥಾಪಕ ದ್ವೀಪ ರಾಜ್ಯಗಳಿಗೆ ಮೂಲಸೌಕರ್ಯ' ಮತ್ತು ಜಗತ್ತಿನಾದ್ಯಂತ 150 ಉತ್ಕೃಷ್ಟ ಗುಣಮಟ್ಟದ ವಿಮಾನ ನಿಲ್ದಾಣಗಳನ್ನು ಅಧ್ಯಯನ ಮಾಡುವ ವಿಮಾನ ನಿಲ್ದಾಣಗಳ ಕುರಿತು ಸಿಡಿಆರ್ ಐ ನ ಕಾರ್ಯವನ್ನು ಅವರು ಉಲ್ಲೇಖಿಸಿದರು. ಸಿಡಿಆರ್ ಐನ ನೇತೃತ್ವದ 'ಮೂಲಸೌಕರ್ಯ ವ್ಯವಸ್ಥೆಗಳ ವಿಪತ್ತು ತಾಳಿಕೊಳ್ಳುವಂತಹ ಜಾಗತಿಕ ಮೌಲ್ಯಮಾಪನ' ಜಾಗತಿಕ ಜ್ಞಾನವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ, ಅದು ಅಪಾರ ಮೌಲ್ಯವನ್ನು ಒಳಗೊಂಡಿದೆ ಎಂದು ಶ್ರೀ ನರೇಂದ್ರ ಮೋದಿ ಮಾಹಿತಿ ನೀಡಿದರು.
ನಮ್ಮ ಭವಿಷ್ಯವನ್ನು ಸುದೃಢ ಮತ್ತು ಸುಸ್ಥಿರಗೊಳಿಸಲು ನಾವು 'ಸ್ಥಿತಿಸ್ಥಾಪಕತ್ವ ಮೂಲಸೌಕರ್ಯ ಪರಿವರ್ತನೆ'ಗೆ ಕೆಲಸ ಮಾಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಉತ್ಕೃಷ್ಟ ಮೂಲಸೌಕರ್ಯವು ನಮ್ಮ ವ್ಯಾಪಕವಾದ ಹೊಂದಾಣಿಕೆಯ ಪ್ರಯತ್ನಗಳ ಕೇಂದ್ರಬಿಂದುವಾಗಿದೆ. "ನಾವು ಮೂಲಸೌಕರ್ಯ ಸ್ಥಿತಿಸ್ಥಾಪಕತ್ವ ಸೃಷ್ಟಿಸಿದರೆ, ನಮಗಾಗಿ ಮಾತ್ರವಲ್ಲದೆ ಭವಿಷ್ಯದ ಅನೇಕ ಪೀಳಿಗೆಗಳಿಗೂ ವಿಪತ್ತುಗಳನ್ನು ನಿಯಂತ್ರಿಸಬಹುದಾಗಿದೆ’’ ಎಂದು ಅವರು ಹೇಳಿದರು.
***
(Release ID: 1822587)
Visitor Counter : 311
Read this release in:
Assamese
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam