ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬರ್ಲಿನ್ ನಲ್ಲಿ ದುಂಡು ಮೇಜಿನ ವ್ಯಾಪಾರ ಸಭೆಯ ಸಹ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ

प्रविष्टि तिथि: 02 MAY 2022 10:37PM by PIB Bengaluru

ಗೌರವಾನ್ವಿತ ಚಾನ್ಸಲರ್ ಶ್ರೀ ಒಲಾಫ್ ಸ್ಕೋಲ್ಜ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವ್ಯಾಪಾರ ಕುರಿತ ದುಂಡು ಮೇಜಿನ ಸಭೆಯ ಸಹ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ಅವರು, ಸರ್ಕಾರ ಕೈಗೊಂಡಿರುವ ವಿಸ್ತೃತ ಸುಧಾರಣೆಗಳ ಬಗ್ಗೆ ಒತ್ತಿ ಹೇಳಿದರು ಮತ್ತು ಭಾರತದಲ್ಲಿ ನವೋದ್ಯಮಗಳು ಮತ್ತು ಯೂನಿಕಾರ್ನ್ ಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಭಾರತದ ಯುವ ಸಮೂಹದ ಮೇಲೆ ಹೂಡಿಕೆ ಮಾಡುವಂತೆ ಅವರು ಉದ್ಯಮ ವಲಯದ ನಾಯಕರನ್ನು ಆಹ್ವಾನಿಸಿದರು.

ಸರ್ಕಾರದ ಉನ್ನತ ಪ್ರತಿನಿಧಿಗಳು ಮತ್ತು ಎರಡೂ ಕಡೆಯ ಆಯ್ದ ಸಿಇಒ ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಹವಾಮಾನದಿಂದ ಪೂರೈಕೆ ಸರಪಳಿಗಳು, ಸಂಶೋಧನೆ ವಲಯದಲ್ಲಿನ ಸಹಕಾರದವರೆಗೆ ನಿಯೋಗದ ಸದಸ್ಯರು ಚರ್ಚೆ ನಡೆಸಿದರು.


ವ್ಯಾಪಾರ ದುಂಡು ಮೇಜಿನ ಸಭೆಯಲ್ಲಿ ಈ ಕೆಳಕಂಡ ನಾಯಕರು ಪಾಲ್ಗೊಂಡಿದ್ದರು.

ಭಾರತದ ವ್ಯಾಪಾರ ನಿಯೋಗ :

·         ಸಂಜೀವ್ ಬಜಾಜ್ [ಭಾರತೀಯ ನಿಯೋಗದ ಮುಖ್ಯಸ್ಥರು] ಸಿಐಐ ನ ನಿಯೋಜಿತ ಅಧ್ಯಕ್ಷರು, ಬಜಾಜ್ ಫಿನ್ಸೆರ್ವ್ ನ ವ್ಯವಸ್ಥಾಪಕ ನಿರ್ದೇಶಕರು

·         ಬಾಬಾ ಎನ್ ಕಲ್ಯಾಣಿ, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಭಾರತ್ ಪೋರ್ಜ್

·         ಸಿ.ಕೆ. ಬಿರ್ಲಾ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ, ಸಿ.ಕೆ. ಬಿರ್ಲಾ ಗ್ರೂಪ್

·         ಪುನೀತ್ ಚಾಹತ್ವಾಲ್, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ, ಭಾರತೀಯ ಹೋಟೆಲ್ಸ್ ಕಂಪೆನಿ ಲಿಮಿಟೆಡ್

·         ಸಲೀಲ್ ಸಿಂಘ್ಹಾಲ್, ಅಧ್ಯಕ್ಷರು, ಎಮರಿಟಸ್ ಮತ್ತು ಪಿಐ ಇಂಡಸ್ಟ್ರೀಸ್

·         ಸುಮಂತ್ ಸಿನ್ಹಾ, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ರಿನೀವ್ ಪವರ್ ಮತ್ತು ಅಧ್ಯಕ್ಷರು, ಅಸೋಚಾಮ್

·         ದಿನೇಶ್ ಖರ, ಅಧ್ಯಕ್ಷರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

·         ಸಿ.ಪಿ. ಗುರ್ನಾನಿ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ, ಟೆಕ್ ಮಹೀಂದ್ರ ಲಿಮಿಟೆಡ್

·         ದೀಪಕ್ ಬಾಗ್ಲಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಇನ್ವೆಸ್ಟ್ ಇಂಡಿಯಾ

 

ಜರ್ಮನ್ ವ್ಯಾಪಾರ ನಿಯೋಗ

 

·         ರೊನಾಲ್ಡ್ ಬುಸ್ಚ್, ಜರ್ಮನ್ ನಿಯೋಗದ ಮುಖ್ಯಸ್ಥರು, ಅಧ್ಯಕ್ಷರು ಮತ್ತು ಸಿಇಒ ಸೀಮನ್ಸ್ ಹಾಗೂ ಅಧ್ಯಕ್ಷರು, ಏಷ್ಯಾ ಫೆಸಿಫಿಕ್ ವಲಯದ  ಜರ್ಮನ್ ವ್ಯಾಪಾರ ನಿಯೋಗ

·         ಮಾರ್ಟಿನ್ ಬ್ರುಡೆರ್ಮುಲ್ಲೆರ್, ಅಧ್ಯಕ್ಷರು, ಬಿ.ಎ.ಎಸ್.ಎಫ್ ನ ಕಾರ್ಯಕಾರಿ ನಿರ್ದೇಶಕ ಮಂಡಳಿ

·         ಹೆರ್ಬರ್ಟ್ ಡಿಸೆಸ್, ಆಡಳಿತ ಮಂಡಳಿಯ ಅಧ್ಯಕ್ಷರು, ವೋಕ್ಸ್ ವ್ಯಾಗನ್

·         ಸ್ಟೀಫನ್ ಹರ್ಟುಂಗ್, ಆಡಳಿತ ಮಂಡಳಿಯ ಅಧ್ಯಕ್ಷರು, ಬಾಷ್  

·         ಮರಿಕಾ ಲುಲಯ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರ, ಜಿ.ಎಫ್.ಟಿ ಟೆಕ್ನಾಲಜೀಸ್

·         ಕ್ಲೌನ್ ರೊಸೆನ್ಪೆಲ್ಡ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸ್ಕೀಫ್ಲರ್

·         ಕ್ರಿಶ್ಚಿಯನ್ ಸೆವಿಂಗ್, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಡಾಯ್ಚ ಬ್ಯಾಂಕ್,

·         ರಾಲ್ಪ್ ವಿಂಟರ್ಗೆರೆಸ್ಟ್, ಆಡಳಿತ ಮಂಡಳಿಯ ಅಧ್ಯಕ್ಷರು, ಗೀಸೆಕ್ + ಡೆವ್ರಿಯಂಟ್

·         ಜುರ್ಗೆನ್ ಜಸ್ಕಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಎನರ್ಕಾನ್

***


(रिलीज़ आईडी: 1822355) आगंतुक पटल : 199
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu , Malayalam