ಸಂಪುಟ
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯ (ಡಿಎಸ್‌ಐಆರ್ ) ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ತಿನ (ಸಿಎಸ್‌ಐಆರ್) ಜೊತೆಗೆ ಸಿಬ್ಬಂದಿ, ಚರಾಸ್ತಿಗಳು ಮತ್ತು ಹೊಣೆಗಾರಿಕೆಗಳೊಂದಿಗೆ ಸಲಹಾ ಅಭಿವೃದ್ಧಿ ಕೇಂದ್ರ (ಸಿಡಿಸಿ)ದ ವಿಲೀನಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದೆ.
Posted On:
27 APR 2022 4:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟವು ಈ ಕೆಳಗಿನವುಗಳಿಗೆ ಅನುಮೋದನೆ ನೀಡಿದೆ:
ಸಿಡಿಸಿಯಲ್ಲಿರುವ 13 ಉದ್ಯೋಗಿಗಳಿಗೆ ಸಿಎಸ್ಐಆರ್ ನಲ್ಲಿ ಹದಿಮೂರು (13) ಅತಿರಿಕ್ತ ಹುದ್ದೆಗಳನ್ನು ರಚಿಸುವ ಮೂಲಕ ಅವಕಾಶ ಕಲ್ಪಿಸಲಾಗುತ್ತದೆ.
ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಸಿಡಿಸಿ ಸುಪರ್ದಿಗಿದ್ದ ಆವರಣವನ್ನು ಮರು-ಹಂಚಿಕೆಗಾಗಿ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ಗೆ ಒಪ್ಪಿಸಲಾಗುತ್ತದೆ ಮತ್ತು ಮರು-ಹಂಚಿಕೆಯಿಂದ ಬಂದ ಮೊತ್ತವನ್ನು ಭಾರತದ ಕನ್ಸಾಲಿಡೇಟೆಡ್ ಫಂಡ್‌ನಲ್ಲಿ ಠೇವಣಿ ಇಡಲಾಗುತ್ತದೆ.
ವಿಲೀನದ ನಂತರ, ಸಿಡಿಸಿ ಯ ಎಲ್ಲಾ ಚರಾಸ್ತಿಗಳು ಮತ್ತು ಹೊಣೆಗಾರಿಕೆಗಳನ್ನು ಸಿಎಸ್‌ಐಆರ್ ಗೆ ವರ್ಗಾಯಿಸಲಾಗುತ್ತದೆ.
ಪ್ರಮುಖ ಪರಿಣಾಮ:
ಎರಡೂ ಸಂಸ್ಥೆಗಳ ವಿಲೀನವು ಇಲಾಖೆಯಲ್ಲಿ ಸುವ್ಯವಸ್ಥಿತವಾಗಿರುವುದಲ್ಲದೆ ʼಕನಿಷ್ಠ ಸರ್ಕಾರ ಗರಿಷ್ಠ ಆಡಳಿತʼವೆನ್ನುವ ಪ್ರಧಾನಮಂತ್ರಿಯವರ ಮಂತ್ರದ ಪ್ರಕಾರವೂ ಇರುತ್ತದೆ. ಶಿಕ್ಷಣ, ತಂತ್ರಜ್ಞಾನಗಳ ರಫ್ತು ಇತ್ಯಾದಿಗಳಲ್ಲಿ ಸಲಹಾ ಕ್ಷೇತ್ರದಲ್ಲಿ ಸಿಡಿಸಿಯ ಅನುಭವಿ ಸಿಬ್ಬಂದಿಯಿಂದ ಸಿಎಸ್ಐಆರ್ ಪ್ರಯೋಜನ ಪಡೆಯುತ್ತದೆ. ಈ ಸಹಯೋಗವು ಸಿಎಸ್‌ಐಆರ್ ಈ ಅಗತ್ಯಗಳಿಗೆ ಮೌಲ್ಯವನ್ನು ಸೇರಿಸುವ ನಿರೀಕ್ಷೆಯಿದೆ:
ಯೋಜನೆಗಳ ತಾಂತ್ರಿಕ-ವಾಣಿಜ್ಯ ಮೌಲ್ಯಮಾಪನ
ಕ್ಷೇತ್ರದಲ್ಲಿ ನಿಯೋಜಿಸಲಾದ ಸಿಎಸ್‌ಐಆರ್ ತಂತ್ರಜ್ಞಾನಗಳ ಸಾಮಾಜಿಕ-ಆರ್ಥಿಕ ಪ್ರಭಾವದ ವಿಶ್ಲೇಷಣೆ
ಸಿಎಸ್‌ಐಆರ್ ತಂತ್ರಜ್ಞಾನಗಳ ಆಧಾರದ ಮೇಲೆ ಮೂಲಮಾದರಿಗಳ ಅಭಿವೃದ್ಧಿಗಾಗಿ ವಿವರವಾದ ವಿನ್ಯಾಸ ಮತ್ತು ಇಂಜಿನಿಯರಿಂಗ್ ಅನ್ನು ಕೈಗೊಳ್ಳಲು ಸೂಕ್ತವಾದ ಸಲಹೆಗಾರರ ಆಯ್ಕೆ ಮತ್ತು ಮಧ್ಯಸ್ಥಗಾರರ ಅವಶ್ಯಕತೆಗಳನ್ನು ಪೂರೈಸಲು ಮತ್ತು/ಅಥವಾ ಮಾರುಕಟ್ಟೆಯ ಸಿದ್ಧತೆಗಾಗಿ ಸಿಎಸ್‌ಐಆರ್ ತಂತ್ರಜ್ಞಾನಗಳ ಬಳಕೆ.
ವ್ಯಾಪಾರ ಅಭಿವೃದ್ಧಿ ಚಟುವಟಿಕೆಗಳು.
ಹಿನ್ನೆಲೆ:
ಸಿಎಸ್‌ಐಆರ್ ಮತ್ತು ಸಿಡಿಸಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ (ಡಿಎಸ್‌ಐಆರ್) ಅಡಿಯಲ್ಲಿ ಎರಡು ಪ್ರತ್ಯೇಕ ಸ್ವಾಯತ್ತ ಸಂಸ್ಥೆಗಳಾಗಿವೆ. ಸಿಎಸ್‌ಐಆರ್ ಅನ್ನು 1942 ರಲ್ಲಿ 1860 ರ ಸಂಘಗಳ ನೋಂದಣಿ ಕಾಯಿದೆ XXI ಅಡಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಮತ್ತು ಮಾನವ ಕಲ್ಯಾಣಕ್ಕಾಗಿ ವೈಜ್ಞಾನಿಕ ಕೈಗಾರಿಕಾ ಸಂಶೋಧನೆಗಾಗಿ ರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನಾಗಿ ಸ್ಥಾಪಿಸಲಾಯಿತು.
ದೇಶದಲ್ಲಿ ಸಲಹಾ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು, ಬಲಪಡಿಸಲು ಮತ್ತು ಉತ್ತೇಜಿಸಲು ಡಿಎಸ್‌ಐಆರ್ ಬೆಂಬಲದೊಂದಿಗೆ 1986 ರಲ್ಲಿ ಸಿಡಿಸಿಯನ್ನು ಒಂದು ಸಂಘಸಂಸ್ಥೆ (ಸೊಸೈಟಿ)ಯನ್ನಾಗಿ ಸ್ಥಾಪಿಸಲಾಯಿತು. ಸಿಡಿಸಿ ಯನ್ನು 13ನೇ ಅಕ್ಟೋಬರ್ 2004 ರಂದು ಕೇಂದ್ರ ಸಚಿವ ಸಂಪುಟವು ಡಿಎಸ್‌ಐಆರ್‌ನ ಸ್ವಾಯತ್ತ ಸಂಸ್ಥೆಯಾಗಿ ಅನುಮೋದಿಸಿತು. ಸಿಡಿಸಿಯನ್ನು ಒಂದು ಸ್ವಾಯತ್ತ ಸಂಸ್ಥೆಯಾಗಿ ಸಂಸ್ಥಾ ನಿವೇದನಾ ಪತ್ರವನ್ನು 16ನೇ ಜನವರಿ, 2008 ರಂದು ನೀಡಲಾಯಿತು. ಸಿಡಿಸಿ 1000 ಚ.ಮೀಟರ್ ಹೊಂದಿರುವ ಇಂಡಿಯಾ ಹ್ಯಾಬಿಟಾಟ್ ಸೆಂಟರ್, ನವದೆಹಲಿಯಲ್ಲಿದೆ. 08.03.1990 ರಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಗುತ್ತಿಗೆಗೆ ಮಂಜೂರು ಮಾಡಿದ ಜಾಗವನ್ನು ನೀಡಿತು. ಸಿಡಿಸಿ ಒಟ್ಟು 13 ಖಾಯಂ ಉದ್ಯೋಗಿಗಳ ಬಲವನ್ನು ಹೊಂದಿದೆ.
14 ನೇ ಹಣಕಾಸು ಆಯೋಗದ ಶಿಫಾರಸುಗಳ ಆಧಾರದ ಮೇಲೆ, ನೀತಿ ಆಯೋಗವು ವಿವಿಧ ಸರ್ಕಾರಿ ಇಲಾಖೆಗಳ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಗಳ ಪರಿಶೀಲನೆಯನ್ನು ನಡೆಸಿತು. ನೀತಿ ಆಯೋಗದ ಪರಿಶೀಲನಾ ಸಮಿತಿಯ 10ನೇ, 13ನೇ ಮತ್ತು 18ನೇ ಸಭೆಗಳಲ್ಲಿ ಡಿಎಸ್‌ಐಆರ್ ಅಡಿಯಲ್ಲಿ ಎರಡು ಸಂಸ್ಥೆಗಳು ಅಂದರೆ ಸಿಎಸ್‌ಐಆರ್ ಮತ್ತು ಸಿಡಿಸಿ ಗಳ ಪರಿಶೀಲನೆ ನಡೆಯಿತು. ಪರಿಶೀಲನಾ ಸಮಿತಿಯು "ಸಿಡಿಸಿ ಸಿಎಸ್‌ಐಆರ್ ನೊಂದಿಗೆ ವಿಲೀನಗೊಳ್ಳಬಹುದು ಮತ್ತು ಅದು ವಾಸ್ತವವಾಗಿ ಸಾಮರ್ಥ್ಯವನ್ನು ಹೊಂದಿರುವುದರಿಂದ ಮುಂದುವರೆಯಬಹುದು" ಎಂದು ಶಿಫಾರಸು ಮಾಡಿದೆ. ಸಮಿತಿಯು ತನ್ನ ವರದಿಯಲ್ಲಿ ಇದು ಡಿಎಸ್‌ಐಆರ್ ಗೆ ಸಂಘಸಂಸ್ಥೆಗಳ ನೋಂದಣಿ ಕಾಯಿದೆ 1860 (ಎಸ್‌ಆರ್‌ಎ) ಅಡಿಯಲ್ಲಿ ಕೇವಲ ಒಂದು ಸ್ವಾಯುತ್ತ ಸಂಸ್ಥೆಯನ್ನು ಹೊಂದಿರುತ್ತದೆ ಎಂದು ಹೇಳಿದೆ. ವಿಲೀನದ ವಿಧಾನಗಳನ್ನು ಶಿಫಾರಸು ಮಾಡಲು ರಚಿಸಲಾದ ಸಲಹಾ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಸೆಕ್ಷನ್ 12 ಸಂಘಸಂಸ್ಥೆಗಳ ನೋಂದಣಿ ಕಾಯಿದೆ 1860 ರ ಅಡಿಯಲ್ಲಿ ಅಗತ್ಯ ಕಾರ್ಯವಿಧಾನ, ಸಿಡಿಸಿ ಯ ಆಡಳಿತ ಮಂಡಳಿ ಮತ್ತು ಸಿಎಸ್‌ಐಆರ್ ನ ಆಡಳಿತ ಮಂಡಳಿ ಎರಡೂ, ಎಸ್‌ಐಆರ್ ನೊಂದಿಗೆ ಸಿಡಿಸಿ ಯನ್ನು ವಿಲೀನಗೊಳಿಸುವ ಪ್ರಸ್ತಾಪವನ್ನು ಅನುಮೋದಿಸಿವೆ.
***
(Release ID: 1820724)
Visitor Counter : 197
Read this release in:
Telugu
,
Marathi
,
English
,
Urdu
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Malayalam