ಹಣಕಾಸು ಸಚಿವಾಲಯ
ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ವಾಷಿಂಗ್ಟನ್ ಡಿಸಿಯಲ್ಲಿ ವಿಶ್ವ ಬ್ಯಾಂಕ್ ಅಧ್ಯಕ್ಷ ಶ್ರೀ ಡೇವಿಡ್ ಮಾಲ್ಪಾಸ್ ಅವರನ್ನು ಭೇಟಿಯಾದರು.
Posted On:
23 APR 2022 8:05AM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ವಿಶ್ವಬ್ಯಾಂಕ್ ಗ್ರೂಪ್‌ನ (ಡಬ್ಲ್ಯೂ ಬಿ ಜಿ ) ಅಧ್ಯಕ್ಷರಾದ ಶ್ರೀ ಡೇವಿಡ್ ಮಾಲ್ಪಾಸ್ ಇಂದು ವಾಷಿಂಗ್ಟನ್ ಡಿ.ಸಿ.ಯಲ್ಲಿ ಭೇಟಿಯಾದರು. ಭೇಟಿಯ ಉದ್ದೇಶವು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಭಾರತವು ನಿರಂತರವಾಗಿ ಚೇತರಿಸಿಕೊಳ್ಳುವುದನ್ನು ಒಳಗೊಂಡಂತೆ , ವಿಶ್ವ ಆರ್ಥಿಕತೆ ಮತ್ತು ಮುಖ್ಯವಾಗಿ ಭಾರತದ ಮೇಲೆ ರಷ್ಯಾ-ಉಕ್ರೇನ್ ಸಂಘರ್ಷದ ಪ್ರಭಾವ; ಆರ್ಥಿಕತೆ ಮತ್ತು ಡಬ್ಲ್ಯೂಬಿಜಿ ಪಾತ್ರ; ಏಕ ಸಾಲಗಾರರ ಮಿತಿಯ ಬಗ್ಗೆ ಚರ್ಚೆ ಮತ್ತು ಇತರ ದೇಶಗಳಿಂದ ಗ್ಯಾರಂಟಿಗಳ ಸಾಧ್ಯತೆಯನ್ನು ಅನ್ವೇಷಿಸಲು, ಭಾರತದ ಜಿ 20 ಅಧ್ಯಕ್ಷ ಸ್ಥಾನ ಮತ್ತು ಸಿಡಿಗಳ ನಂತರ ಭಾರತದಲ್ಲಿ ವಿಶ್ವ ಬ್ಯಾಂಕ್‌ನ ನಾಯಕತ್ವ ಇತ್ಯಾದಿ ವಿವಿಧ ವಿಷಯಗಳನ್ನು ಚರ್ಚಿಸುವುದಾಗಿತ್ತು
ಸಾಂಕ್ರಾಮಿಕ ರೋಗದ ಅಪಾಯದಿಂದ ಜೀವ ಮತ್ತು ಜೀವನೋಪಾಯವನ್ನು ಉಳಿಸುವ ಅವಳಿ ಗುರಿಗಳ ಮೇಲೆ ಭಾರತ ಗಮನಹರಿಸಿದೆ. ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಲಸಿಕೆ ನೀಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಿದೆ, 1.85 ಬಿಲಿಯನ್ ಲಸಿಕೆ ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.
ವಿಶ್ವದ ರಾಜಕೀಯ ಉದ್ವಿಗ್ನತೆಗಳ ನಡುವೆ ಹೆಚ್ಚುತ್ತಿರುವ ಅನಿಶ್ಚಿತತೆಯಿಂದಾಗಿ ಜಾಗತಿಕ ಚೇತರಿಕೆಯ ಅಪಾಯಗಳ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ ಎಂದು ಶ್ರೀಮತಿ ಸೀತಾರಾಮನ್ ಉಲ್ಲೇಖಿಸಿದ್ದಾರೆ.
ವಿಶ್ವವು ಅಸಾಧಾರಣ ಅನಿಶ್ಚಿತತೆಯ ಅವಧಿಯನ್ನು ಹಾದುಹೋಗುತ್ತಿರುವುದರಿಂದ ಬಹುಪಕ್ಷೀಯತೆಯು ಹೆಚ್ಚು ಮಹತ್ವದ್ದಾಗಿದೆ ಎಂದು ಹಣಕಾಸು ಸಚಿವರು ಸಲಹೆ ನೀಡಿದರು. ಸಾಂಕ್ರಾಮಿಕ ಮತ್ತು ಇತ್ತೀಚಿನ ವಿಶ್ವದ ರಾಜಕೀಯ ಬೆಳವಣಿಗೆಗಳಿಂದಾಗಿ, ವಿಶ್ವ ಬ್ಯಾಂಕ್ ಸಾಲದ ಒತ್ತಡವನ್ನು ಎದುರಿಸುತ್ತಿರುವ ದೇಶಗಳ ರಕ್ಷಣೆಗೆ ಬರಬೇಕಾಗಿದೆ. ಅದರಲ್ಲೂ ಹಿಂದೆಂದೂ ಕಾಣದಂಥ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿರುವ ಶ್ರೀಲಂಕಾ ಬಗ್ಗೆ ವಿಶ್ವಬ್ಯಾಂಕ್ ವಿಶೇಷ ಗಮನ ಹರಿಸಬೇಕಿದೆ ಎಂದು ಹಣಕಾಸು ಸಚಿವರು ಸಲಹೆ ನೀಡಿದರು
ಮೂಲಸೌಕರ್ಯ ಅಭಿವೃದ್ಧಿಗಾಗಿ ಭಾರತದ ಮಾರ್ಗಸೂಚಿಯನ್ನು ವಿವರಿಸಿದ ಶ್ರೀಮತಿ ಸೀತಾರಾಮನ್, ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಮತ್ತು ಗತಿ ಶಕ್ತಿ ಕಾರ್ಯಕ್ರಮದಲ್ಲಿ ಬಂಡವಾಳ ಹೂಡಿಕೆಗೆ ವಿಶ್ವಬ್ಯಾಂಕ್‌ನ ನಿರಂತರ ಬೆಂಬಲವನ್ನು ಭಾರತವು ಎದುರು ನೋಡುತ್ತಿದೆ ಎಂದು ಹೇಳಿದರು.
***
(Release ID: 1819342)
Visitor Counter : 259