ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಏಪ್ರಿಲ್ 19 ರಂದು ಆಯುಷ್ಮಾನ್ ಭಾರತ್ ಬ್ಲಾಕ್ ಮಟ್ಟದ ಆರೋಗ್ಯ ಮೇಳಗಳಲ್ಲಿ 3 ಲಕ್ಷ 57 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು; 490 ಬ್ಲಾಕ್‌ಗಳು ದೇಶಾದ್ಯಂತ ಎರಡು ದಿನ ಆರೋಗ್ಯ ಮೇಳಗಳನ್ನು ಆಯೋಜಿಸಿವೆ
60,000 ಕ್ಕೂ ಹೆಚ್ಚು ಎಬಿಎಚ್‌ಎ ಹೆಲ್ತ್ ಐಡಿಗಳನ್ನು ರಚಿಸಲಾಗಿದೆ; 21,000 ಪಿಎಮ್‌ಜೆಎವೈ ಗೋಲ್ಡನ್ ಕಾರ್ಡ್‌ಗಳನ್ನು ನೀಡಲಾಗಿದೆ ಮತ್ತು 25,000 ಟೆಲಿ ಸಮಾಲೋಚನೆಗಳನ್ನು ಮಾಡಲಾಗಿದೆ
Posted On:
20 APR 2022 3:47PM by PIB Bengaluru
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಡಿಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ (ಎಬಿ-ಎಚ್‌ಡಬ್ಲೂಸಿ) 4 ನೇ ವಾರ್ಷಿಕೋತ್ಸವವನ್ನು ಏಪ್ರಿಲ್ 16 ರಿಂದ ಏಪ್ರಿಲ್ 22, 2022 ರವರೆಗೆ ಆಚರಿಸುತ್ತಿದೆ. ದೇಶದಾದ್ಯಂತ ಅತ್ಯಂತ ಸಡಗರ ಮತ್ತು ಉತ್ಸಾಹದಿಂದ ನಡೆಸಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವರು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರು, ಸಂಸದರು, ಶಾಸಕರು, ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ಪ್ರಧಾನ ಆರೋಗ್ಯ ಕಾರ್ಯದರ್ಶಿಗಳು/ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳು, ರಾಜ್ಯ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪ್ರತಿನಿಧಿಗಳು ಮತ್ತು ಸ್ಥಳೀಯ ಗಣ್ಯರು ಸ್ವಾಸ್ಥ್ಯ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಇವು ಮಿತವ್ಯಯದ ಮತ್ತು ಕೈಗೆಟಕುವ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಎಬಿ-ಎಚ್‌ಡಬ್ಲೂಸಿಯ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿವೆ.
2022 ರ ಏಪ್ರಿಲ್ 18 ರಿಂದ 22 ರವರೆಗೆ, ರಾಜ್ಯ/ಕೇಂದ್ರಾಡಳಿತ ಪ್ರದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಬ್ಲಾಕ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಎಬಿ-ಎಚ್‌ಡಬ್ಲೂಸಿ ಗಳಲ್ಲಿ ಬ್ಲಾಕ್ ಮಟ್ಟದ ಆರೋಗ್ಯ ಮೇಳಗಳನ್ನು ದೇಶದಾದ್ಯಂತ ಆಯೋಜಿಸಲಾಗುತ್ತಿದೆ. ಪ್ರತಿ ಬ್ಲಾಕ್ ಮಟ್ಟದ ಆರೋಗ್ಯ ಮೇಳವು ಒಂದು ದಿನದ ಅವಧಿಯಾಗಿರುತ್ತದೆ ಮತ್ತು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪ್ರತಿ ಬ್ಲಾಕ್ ಅನ್ನು ಒಳಗೊಂಡಿರುತ್ತದೆ.
ಆರೋಗ್ಯ ಮೇಳದ ಎರಡನೇ ದಿನ, 3 ಲಕ್ಷ 57 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಮತ್ತು ಸುಮಾರು 490 ಬ್ಲಾಕ್‌ಗಳು ದೇಶಾದ್ಯಂತ ಆರೋಗ್ಯ ಮೇಳಗಳನ್ನು ಆಯೋಜಿಸಿದ್ದವು. ಇದಲ್ಲದೆ, ಅಧಿಕ ರಕ್ತದೊತ್ತಡ, ಮಧುಮೇಹ ಇತ್ಯಾದಿಗಳಿಗೆ ಸಾವಿರಾರು ಸ್ಕ್ರೀನಿಂಗ್‌ಗಳ ಜೊತೆಗೆ 60,000 ಎಬಿಎಚ್‌ಎ ಹೆಲ್ತ್ ಐಡಿಗಳನ್ನು ಮಾಡಲಾಗಿದೆ ಮತ್ತು 21,000 ಪಿಎಮ್‌ಜೆಎವೈ ಗೋಲ್ಡನ್ ಕಾರ್ಡ್‌ಗಳನ್ನು ನೀಡಲಾಗಿದೆ.
16 ಏಪ್ರಿಲ್ 2022 ರಂದು ಆಯುಷ್ಮಾನ್ ಭಾರತ್- ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ (AB-HWCs) ಒಂದು ದಿನದಲ್ಲಿ ಇ-ಸಂಜೀವನಿ ಪ್ಲಾಟ್‌ಫಾರ್ಮ್ ಮೂಲಕ ದಾಖಲೆಯ 3 ಲಕ್ಷ ಟೆಲಿ-ಸಮಾಲೋಚನೆಗಳನ್ನು ನೀಡಲಾಗಿದೆ. ಇದು ಎಬಿ-ಎಚ್‌ಡಬ್ಲೂಸಿಯಲ್ಲಿ ಒಂದು ದಿನದಲ್ಲಿ ನಡೆಸಲಾದ ಅತ್ಯಧಿಕ ಟೆಲಿ ಸಮಾಲೋಚನೆಯಾಗಿದೆ, ಇದು ದಿನಕ್ಕೆ 1.8 ಲಕ್ಷ ಟೆಲಿ ಸಮಾಲೋಚನೆಗಳ ಹಿಂದಿನ ದಾಖಲೆಯನ್ನು ಮೀರಿಸಿದೆ.
18ನೇ ಏಪ್ರಿಲ್ 2022 ರಂದು ಸಂಜೆ 6:30 ರವರೆಗಿನ ರಾಜ್ಯವಾರು ಬ್ಲಾಕ್ ಹೆಲ್ತ್ ಮೇಳದ ವರದಿಯು ಈ ಕೆಳಗಿನಂತಿದೆ:
****
(Release ID: 1818419)
Visitor Counter : 224
Read this release in:
Urdu
,
Hindi
,
Gujarati
,
Bengali
,
English
,
Marathi
,
Manipuri
,
Odia
,
Tamil
,
Telugu
,
Malayalam