ಪ್ರಧಾನ ಮಂತ್ರಿಯವರ ಕಛೇರಿ
ಅಸಂಘಟಿತ ವಲಯದ ಶ್ರಮಿಕರ ಕಲ್ಯಾಣಕ್ಕೆ ಭಾರತ ಸರ್ಕಾರ ಬದ್ಧ: ಪ್ರಧಾನಿ
ಪ್ರಕಟಣಾ ದಿನಾಂಕ:
16 APR 2022 9:00AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸಂಘಟಿತ ವಲಯದ ಶ್ರಮಿಕರ ಕಲ್ಯಾಣಕ್ಕೆ ಭಾರತ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ನಮ್ಮ ಅಸಂಘಟಿತ ವಲಯದ ಕಾರ್ಮಿಕ ಸಹೋದರ ಮತ್ತು ಸಹೋದರಿಯರು ಪಾಲ್ಗೊಳ್ಳುತ್ತಿರುವುದು ಅತಿ ಮುಖ್ಯವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ.
“ದೇಶದ ಅಭಿವೃದ್ಧಿಯಲ್ಲಿ ನಮ್ಮ ಅಸಂಘಟಿತ ವಲಯದ ಕಾರ್ಮಿಕ ಸಹೋದರ, ಸಹೋದರಿಯರ ಪಾಲ್ಗೊಳ್ಳುವಿಕೆ ಅತಿ ಮುಖ್ಯವಾಗಿದೆ. ನಮ್ಮ ಸರ್ಕಾರವು ಅಂತಹ ಕೋಟ್ಯಂತರ ಕಾರ್ಮಿಕರ ಜೀವನವನ್ನು ಸುಲಭಗೊಳಿಸಲು ಸದಾ ಶ್ರಮಿಸುತ್ತಿದೆ. ಈ ಯೋಜನೆಗಳು ಸಾಂಕ್ರಾಮಿಕ ಸಮಯದಲ್ಲಿ ಅವರ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಿದೆ. ಅವರಿಗೆ ಸಹಾಯ ಮಾಡಲು ಇನ್ನೂ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’’
***
(ಪ್ರಕಟಣೆ ಐ.ಡಿ.: 1817250)
ವಿಸಿಟರ್ ಕೌಂಟರ್ : 220
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam