ಪ್ರಧಾನ ಮಂತ್ರಿಯವರ ಕಛೇರಿ
ಏಪ್ರಿಲ್ 12 ರಂದು ಗುಜರಾತ್ ನ ಅದಾಲಜ್ ನಲ್ಲಿ ಅನ್ನಪೂರ್ಣಧಾಮ ಟ್ರಸ್ಟ್ ನ ವಸತಿ ನಿಲಯ ಮತ್ತು ಶಿಕ್ಷಣ ಸಂಕೀರ್ಣ ಉದ್ಘಾಟಿಸಲಿರುವ ಪ್ರಧಾನಮಂತ್ರಿ
ಜನ್ ಸಹಾಯಕ್ ಟ್ರಸ್ಟ್ ನ ಹಿರಾಮಣಿ ಆರೋಗ್ಯಧಾಮ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿರುವ ಪ್ರಧಾನಮಂತ್ರಿ
Posted On:
11 APR 2022 6:13PM by PIB Bengaluru
ಗುಜರಾತ್ ನ ಅದಾಲಜ್ ನಲ್ಲಿ ಅನ್ನಪೂರ್ಣಧಾಮ ಟ್ರಸ್ಟ್ ನ ವಸತಿ ನಿಲಯ ಮತ್ತು ಶಿಕ್ಷಣ ಸಂಕೀರ್ಣವನ್ನು ಏಪ್ರಿಲ್ 12 ರ ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಜನ್ ಸಹಾಯಕ್ ಟ್ರಸ್ಟ್ ನ ಹಿರಾಮಣಿ ಆರೋಗ್ಯಧಾಮದ ನಿರ್ಮಾಣಕ್ಕೆ ಪ್ರಧಾನಮಂತ್ರಿ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಈ ವಸತಿ ಮತ್ತು ಶಿಕ್ಷಣ ಸಂಕೀರ್ಣ 600 ವಿದ್ಯಾರ್ಥಿಗಳಿಗೆ 150 ಕೊಠಡಿಗಳ ವಸತಿ ಮತ್ತು ಭೋಜನ ವ್ಯವಸ್ಥೆಯ ಸೌಲಭ್ಯ ಹೊಂದಿದೆ. ಜಿ.ಪಿ.ಎಸ್.ಸಿ - ಯು.ಪಿ.ಎಸ್.ಸಿ ಪರೀಕ್ಷೆಗಳಿಗೆ ತರಬೇತಿ, ಇ ಗ್ರಂಥಾಲಯ, ಸಮ್ಮೇಳನ ಕೊಠಡಿ, ಕ್ರೀಡಾ ಕೊಠಡಿ, ಟಿ.ವಿ. ಕೊಠಡಿ ಮತ್ತು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಆರೋಗ್ಯ ಸೌಲಭ್ಯವನ್ನು ಇದು ಒಳಗೊಂಡಿದೆ.
ಹಿರಾಮಣಿ ಆರೋಗ್ಯ ಧಾಮವನ್ನು ಜನ್ ಸೇವಕ್ ಟ್ರಸ್ಟ್ ಅಭಿವೃದ್ಧಿಪಡಿಸುತ್ತಿದೆ. ಈ ಕೇಂದ್ರ ಆಧುನಿಕ ವೈದ್ಯಕೀಯ ಸೌಲಭ‍್ಯಗಳನ್ನು ಒಳಗೊಂಡಿದ್ದು, 14 ಮಂದಿಗೆ ಏಕ ಕಾಲದಲ್ಲಿ ಡಯಾಲಿಸಸ್ ಮಾಡುವ ಸೌಕರ್ಯ, 24 ಗಂಟೆಗಳ ಕಾಲ ರಕ್ತ ಪೂರೈಸುವ ರಕ್ತ ನಿಧಿ, ದಿನಪೂರ್ತಿ ಕಾರ್ಯನಿರ್ವಹಿಸುವ ಔಷಧ ಅಂಗಡಿ, ಆಧುನಿಕ ರೋಗಶಾಸ್ತ್ರ ಪ್ರಯೋಗಾಲಯ ಮತ್ತು ಆರೋಗ್ಯ ತಪಾಸಣೆಗೆ ಉನ್ನತ ದರ್ಜೆಯ ವೈದ್ಯಕೀಯ ಪರಿಕರಗಳನ್ನು ಇದು ಹೊಂದಲಿದೆ. ಇದು ಮಕ್ಕಳ ಆರೈಕೆ ಕೇಂದ್ರದ ಜತೆಗೆ ಆಯುರ್ವೇದ, ಹೋಮಿಯೋಪತಿ, ಆಕ್ಯುಪಂಚರ್, ಯೋಗ ಥೆರಪಿ ಮತ್ತಿತರ ಸೌಕರ್ಯವನ್ನು ಇದು ಹೊಂದಿದೆ. ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿ, ತಂತ್ರಜ್ಙರು ಮತ್ತು ವೈದ್ಯರಿಗೆ ತರಬೇತಿ ನೀಡುವ ವ್ಯವಸ್ಥೆಯನ್ನೂ ಸಹ ಹೊಂದಿದೆ.
****
(Release ID: 1815806)
Visitor Counter : 169
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam