ಸಂಪುಟ

ಭಾರತದ ಸೆಕ್ಯುರಿಟೀಸ್ ಮತ್ತು ವಿನಿಮಯ ಮಂಡಳಿ (ಸೆಬಿ) ಮತ್ತು ಮಂಗೋಲಿಯಾದ ಹಣಕಾಸು ನಿಯಂತ್ರಣ ಆಯೋಗದ ನಡುವಿನ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದ (ಎಂಒಯು) ಕ್ಕೆ ಸಹಿ ಹಾಕಲು ಸಂಪುಟದ ಅನುಮೋದನೆ

Posted On: 08 APR 2022 3:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತದ ಸೆಕ್ಯುರಿಟೀಸ್ ಮತ್ತು ವಿನಿಮಯ ಮಂಡಳಿ (ಸೆಬಿ) ಸೆಕ್ಯುರಿಟೀಸ್ ಮತ್ತು ಮಂಗೋಲಿಯಾದ ಹಣಕಾಸು ನಿಯಂತ್ರಣ ಆಯೋಗ (ಎಫ್‌ಆರ್‌ಸಿ) ದ ನಡುವಿನ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದ (ಎಂಒಯು) ಕ್ಕೆ ಸಹಿ ಹಾಕುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

ಮುಖ್ಯ ಪರಿಣಾಮ:

ಸೆಬಿಯಂತೆಯೇ ಎಫ್‌ಆರ್‌ಸಿ ಸಹ, ಇಂಟರ್ನ್ಯಾಷನಲ್ ಆರ್ಗನೈಸೇಶನ್ ಆಫ್ ಸೆಕ್ಯುರಿಟೀಸ್ ಕಮಿಷನ್ ನ ಮಲ್ಟಿಲ್ಯಾಟರಲ್ ಎಂಒಯು (ಐಒಎಸ್ಒಸಿಒ ಎಂಎಂಒಯು) ಗೆ ಸಹ ಸಹಿದಾರ ಸಂಸ್ಥೆಯಾಗಿದೆ. ಆದಾಗ್ಯೂ, ಐಒಎಸ್ಒಸಿಒ ಎಂಎಂಒಯು ತನ್ನ ವ್ಯಾಪ್ತಿಯಲ್ಲಿ ತಾಂತ್ರಿಕ ಸಹಾಯದ ಅವಕಾಶವನ್ನು ಹೊಂದಿಲ್ಲ. ಪ್ರಸ್ತಾವಿತ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದವು, ಸೆಕ್ಯುರಿಟೀಸ್ ಕಾನೂನುಗಳ ಪರಿಣಾಮಕಾರಿ ಜಾರಿಗಾಗಿ ಮಾಹಿತಿ ಹಂಚಿಕೆ ಚೌಕಟ್ಟನ್ನು ಬಲಪಡಿಸಲು ಕೊಡುಗೆ ನೀಡುವುದರ ಜೊತೆಗೆ, ತಾಂತ್ರಿಕ ನೆರವು ಕಾರ್ಯಕ್ರಮವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ತಾಂತ್ರಿಕ ನೆರವು ಕಾರ್ಯಕ್ರಮವು ಬಂಡವಾಳ ಮಾರುಕಟ್ಟೆಗಳು, ಸಾಮರ್ಥ್ಯ ವರ್ಧನೆಯ ಚಟುವಟಿಕೆಗಳು ಮತ್ತು ಸಿಬ್ಬಂದಿ ತರಬೇತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಮಾಲೋಚನೆಗಳ ಮೂಲಕ ಅಧಿಕಾರಿಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಹಿನ್ನೆಲೆ:

ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ವನ್ನು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಆಕ್ಟ್, 1992 ರ ಅಡಿಯಲ್ಲಿ ಭಾರತದಲ್ಲಿ ಸೆಕ್ಯುರಿಟೀಸ್ ಮಾರುಕಟ್ಟೆಗಳನ್ನು ನಿಯಂತ್ರಿಸಲು ಸ್ಥಾಪಿಸಲಾಗಿದೆ. ಹೂಡಿಕೆದಾರರ ಹಿತಾಸಕ್ತಿ ರಕ್ಷಿಸುವುದು ಮತ್ತು ಭಾರತದಲ್ಲಿ ಸೆಕ್ಯುರಿಟೀಸ್ ಮಾರುಕಟ್ಟೆಗಳ ಅಭಿವೃದ್ಧಿಯನ್ನು ನಿಯಂತ್ರಿಸುವುದು ಮತ್ತು ಉತ್ತೇಜಿಸುವುದು ಸೆಬಿಯ ಉದ್ದೇಶಗಳಾಗಿವೆ. ಸೆಬಿ ಕಾಯಿದೆ, 2002 ರ ಸೆಕ್ಷನ್ 11 ರ ಉಪ-ವಿಭಾಗ (2) ಅಡಿಯಲ್ಲಿ ಷರತ್ತು (ಐಬಿ) ಬೋರ್ಡ್‌ನ ಕಾರ್ಯಗಳನ್ನು ಹೋಲುವ ಕೆಲಸಗಳನ್ನು ಹೊಂದಿರುವ ಭಾರತದಲ್ಲಿ ಅಥವಾ ಭಾರತದ ಹೊರಗಿನ ಇತರ ಪ್ರಾಧಿಕಾರಿಗಳಿಂದ ಇತರ ಕಾನೂನುಗಳ ನಿಬಂಧನೆಗಳಿಗೆ ಒಳಪಟ್ಟು ಭದ್ರತಾ ಕಾನೂನುಗಳಿಗೆ ಸಂಬಂಧಿಸಿದಂತೆ ಉಲ್ಲಂಘನೆಗಳ ತಡೆಗಟ್ಟುವಿಕೆ ಅಥವಾ ಪತ್ತೆಗೆ ಸಂಬಂಧಿಸಿದ ವಿಷಯಗಳಲ್ಲಿ ಮಾಹಿತಿಗಾಗಿ ಕರೆ ಮಾಡಲು ಅಥವಾ ಮಾಹಿತಿಯನ್ನು ಒದಗಿಸಲು ಸೆಬಿಗೆ ಅಧಿಕಾರ ನೀಡುತ್ತದೆ. ಭಾರತದ ಹೊರಗಿನ ಯಾವುದೇ ಪ್ರಾಧಿಕಾರಕ್ಕೆ ಯಾವುದೇ ಮಾಹಿತಿಯನ್ನು ಒದಗಿಸುವುದಕ್ಕಾಗಿ, ಸೆಬಿ ಕೇಂದ್ರ ಸರ್ಕಾರದ ಪೂರ್ವಾನುಮತಿಯೊಂದಿಗೆ ಅಂತಹ ಪ್ರಾಧಿಕಾರದೊಂದಿಗೆ ಒಂದು ವ್ಯವಸ್ಥೆ ಅಥವಾ ಒಪ್ಪಂದ ಅಥವಾ ತಿಳಿವಳಿಕೆ ಒಪ್ಪಂದವನ್ನು ಮಾಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಪರಸ್ಪರ ಸಹಕಾರ ಮತ್ತು ತಾಂತ್ರಿಕ ನೆರವಿಗಾಗಿ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಮಾಡಲು ಎಫ್‌ಆರ್‌ಸಿ ಸೆಬಿಗೆ ಮನವಿ ಮಾಡಿದೆ. ಇಲ್ಲಿಯವರೆಗೆ, ಸೆಬಿ ಇತರ ದೇಶಗಳ ಬಂಡವಾಳ ಮಾರುಕಟ್ಟೆ ನಿಯಂತ್ರಕಗಳೊಂದಿಗೆ 27 ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದೆ.

2006 ರಲ್ಲಿ ಸ್ಥಾಪಿಸಲಾಗಿರುವ ಹಣಕಾಸು ನಿಯಂತ್ರಣ ಆಯೋಗವು (ಎಫ್‌ಆರ್‌ಸಿ) ವಿಮೆ ಮತ್ತು ಸೆಕ್ಯುರಿಟೀಸ್ ಮಾರುಕಟ್ಟೆಗಳು ಮತ್ತು ಕಿರು ಹಣಕಾಸು ವಲಯ ಸೇರಿದಂತೆ ಬ್ಯಾಂಕೇತರ ವಲಯವನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಯಂತ್ರಿಸುವ ಪ್ರಾಧಿಕಾರವಾಗಿದೆ. ಎಫ್‌ಆರ್‌ಸಿ ಸ್ಥಿರ ಮತ್ತು ಉತ್ತಮ ಹಣಕಾಸು ಮಾರುಕಟ್ಟೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. ಆಯೋಗವು ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ವಿಮಾ ಕಂಪನಿಗಳು ಮತ್ತು ಮಧ್ಯವರ್ತಿಗಳು, ಸೆಕ್ಯುರಿಟೀಸ್ ಸಂಸ್ಥೆಗಳು ಮತ್ತು ಉಳಿತಾಯ ಮತ್ತು ಸಾಲ ಸಹಕಾರ ಸಂಸ್ಥೆಗಳ ಮೇಲೆ ಅಧಿಕಾರವನ್ನು ಚಲಾಯಿಸುತ್ತದೆ. ಅದೇ ಸಮಯದಲ್ಲಿ, ಇದು ವೈಯಕ್ತಿಕ ಹಣಕಾಸು ಮಾರುಕಟ್ಟೆ ಗ್ರಾಹಕರ (ಸೆಕ್ಯುರಿಟೀಸ್ ಹೊಂದಿರುವವರು, ದೇಶೀಯ ಮತ್ತು ವಿದೇಶಿ ಹೂಡಿಕೆದಾರರು ಮತ್ತು ವಿಮಾ ಪಾಲಿಸಿದಾರರು) ಹಕ್ಕುಗಳನ್ನು ಖಾತ್ರಿಗೊಳಿಸುತ್ತದೆ ಮತ್ತು ಹಣಕಾಸಿನ ದುರ್ವ್ಯವಹಾರಗಳಿಂದ ರಕ್ಷಿಸುತ್ತದೆ.

***



(Release ID: 1814954) Visitor Counter : 174