ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

2022ರ ಏಪ್ರಿಲ್ 1 ರಂದು ನಡೆಯಲಿರುವ 5ನೇ ಆವೃತ್ತಿಯ ಪರೀಕ್ಷಾ ಪೆ ಚರ್ಚಾದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕರ್ಟನ್ ರೈಸರ್

Posted On: 31 MAR 2022 8:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಏಪ್ರಿಲ್ 1 ರಂದು ನಡೆಯಲಿರುವ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದ 5ನೇ ಆವೃತ್ತಿಯಲ್ಲಿ ಜಗತ್ತಿನಾದ್ಯಂತ ಇರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಕಾರ್ಯಕ್ರಮ ಅಲ್ಲದೆ ಪ್ರಧಾನಮಂತ್ರಿ ಅವರು 9 ರಿಂದ 12ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಹಾಗೂ ಶಿಕ್ಷಕರೊಂದಿಗೆ ನವದೆಹಲಿಯ ತಾಲ್ಕಟೋರ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಂವಾದ ನಡೆಸುವರು. 

 

ದೇಶ ಕೋವಿಡ್-19 ಸಾಂಕ್ರಾಮಿಕದಿಂದ ಹೊರಬರುತ್ತಿರುವ ಮತ್ತು ಪರೀಕ್ಷೆಗಳು ಆಫ್ ಲೈನ್ ಮಾದರಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ 5ನೇ ಆವೃತ್ತಿಯ ಈ ಕಾರ್ಯಕ್ರಮ ವಿಶೇಷ ಮಹತ್ವ ಪಡೆದುಕೊಂಡಿದೆ. ಪ್ರಧಾನಮಂತ್ರಿ ಅವರನ್ನು ಪ್ರಶ್ನೆ ಕೇಳಲು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಹಲವು ವಿಷಯಗಳ ಕುರಿತು ಆನ್ ಲೈನ್ ಸೃಜನಾತ್ಮಕ ಬರವಣಿಗೆ ಸ್ಪರ್ಧೆ ಆಧರಿಸಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಸ್ಪರ್ಧೆಯನ್ನು ಮೈಗೌವ್ ವೇದಿಕೆಯ ಮೂಲಕ 2021ರ ಡಿಸೆಂಬರ್ 28ರಿಂದ 2022ರ ಫೆಬ್ರವರಿ 3ರವರೆಗೆ ಆಯೋಜಿಸಲಾಗಿತ್ತು. 
ಈ ವರ್ಷ ಪರೀಕ್ಷಾ ಪೆ ಚರ್ಚಾ ಸೃಜನಾತ್ಮಕ ಬರವಣಿಗೆ ಸ್ಪರ್ಧೆಯಲ್ಲಿ 15.4 ಲಕ್ಷ ಮಂದಿ ಭಾಗವಹಿಸಿದ್ದರು. ಇವರಲ್ಲಿ 12.1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, 2.7 ಲಕ್ಷ ಶಿಕ್ಷಕರು ಮತ್ತು 90 ಸಾವಿರಕ್ಕೂ ಅಧಿಕ ಪೋಷಕರು ಒಳಗೊಂಡಿದ್ದಾರೆ. 
ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸುತ್ತಿದೆ. ಪಿಪಿಸಿಯ ಮೊದಲ ಮೂರು ಆವೃತ್ತಿಗಳು ನವದೆಹಲಿಯ ಬೃಹತ್ ವೇದಿಕೆಯಲ್ಲಿ ಸಂವಾದಾತ್ಮಕ ವಿಧಾನದಲ್ಲಿ ನಡೆದವು. ಮೊದಲ ಆವೃತ್ತಿಯ ಪ್ರಧಾನಮಂತ್ರಿಗಳ ‘ಪರೀಕ್ಷಾ ಪೆ ಚರ್ಚಾ 1.0’ ಸಂವಾದ ಕಾರ್ಯಕ್ರಮ 2018ರ ಫೆಬ್ರವರಿ 16ರಂದು ನಡೆದಿತ್ತು. ಎರಡನೇ ಆವೃತ್ತಿಯ ‘ಪರೀಕ್ಷಾ ಪೆ ಚರ್ಚಾ 2.0’ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ 2019ರ ಜನವರಿ 29ರಂದು ಮತ್ತು ಮೂರನೇ ಆವೃತ್ತಿ 2020ರ ಜನವರಿ 20ರಂದು ನಡೆದಿತ್ತು. ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ 4ನೇ ಆವೃತ್ತಿ 2021ರ ಏಪ್ರಿಲ್ 7ರಂದು ಆನ್ ಲೈನ್ ವಿಧಾನದಲ್ಲಿ ನಡೆದಿತ್ತು.  
ಈ ಕಾರ್ಯಕ್ರಮದ ನೇರ ಪ್ರಸಾರವನ್ನು ದೂರದರ್ಶನದ (ಡಿಡಿ ನ್ಯಾಷನಲ್, ಡಿಡಿನ್ಯೂಸ್, ಡಿಡಿ ಇಂಡಿಯಾ) ವಾಹಿನಿಗಳಲ್ಲಿ, ರೇಡಿಯೋ ವಾಹಿನಿಗಳಲ್ಲಿ, ಟಿವಿ ಚಾನಲ್ ಗಳು, ಶಿಕ್ಷಣ ಇಲಾಖೆಯ ಯೂಟೂಬ್ ಚಾನೆಲ್ ಸೇರಿದಂತೆ ಡಿಜಿಟಲ್ ಮಾಧ್ಯಮಗಳಾದ ಎಜುಮಿನ್ ಆಫ್ ಇಂಡಿಯಾ, ನರೇಂದ್ರಮೋದಿ, ಪಿಎಂಒ ಇಂಡಿಯಾ,ಪಿಐಬಿ ಇಂಡಿಯಾ, ದೂರದರ್ಶನ ನ್ಯಾಷನಲ್,  ಮೈಗೌಇಂಡಿಯಾ, ಡಿಡಿ ನ್ಯೂಸ್, ರಾಜ್ಯಸಭಾ ಟಿವಿ, ಸ್ವಯಂಪ್ರಭಾ ವಾಹಿನಿಗಳಲ್ಲಿ ವೀಕ್ಷಿಸಬಹುದಾಗಿದೆ. 


******


(Release ID: 1812155) Visitor Counter : 230