ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ತಾತ್ಕಾಲಿಕ ಬೃಹತ್ ವಿದ್ಯುತ್ ಯೋಜನೆಗಳಿಗಾಗಿ ಬೃಹತ್ ವಿದ್ಯುತ್ ನೀತಿ 2009ಕ್ಕೆ ತಿದ್ದುಪಡಿ ಮಾಡಲು ಸಂಪುಟದ ಅನುಮೋದನೆ.

Posted On: 30 MAR 2022 2:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ, ತೆರಿಗೆ ಪ್ರಾಧಿಕಾರಗಳಿಗೆ ಅಂತಿಮ ಬೃಹತ್ ಪ್ರಮಾಣಪತ್ರಗಳನ್ನು ಸಲ್ಲಿಸಲು ಗುರುತಿಸಲಾದ 10 ತಾತ್ಕಾಲಿಕ ಬೃಹತ್ ಪ್ರಮಾಣೀಕೃತ ಯೋಜನೆಗಳಿಗೆ ಕಾಲಾವಕಾಶ (36 ತಿಂಗಳುಗಳು) ವಿಸ್ತರಣೆಗೆ ತನ್ನ ಅನುಮೋದನೆ ನೀಡಿದೆ.
ಅಂತಿಮ ಬೃಹತ್ ಪ್ರಮಾಣಪತ್ರವನ್ನು ಒದಗಿಸಲು ಸಮಯದ ಅವಧಿಯನ್ನು ವಿಸ್ತರಿಸುವುದು ಅಭಿವೃದ್ಧಿದಾರರುಗಳು ಭವಿಷ್ಯದ ಪಿಪಿಎಗಳಿಗಾಗಿ ಸ್ಪರ್ಧಾತ್ಮಕವಾಗಿ ಬಿಡ್ ಮಾಡಲು ಮತ್ತು ನೀತಿ ನಿಯಮಗಳ ಪ್ರಕಾರ ತೆರಿಗೆ ವಿನಾಯಿತಿಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಹೆಚ್ಚಿದ ನಗದು ಹರಿವು ದೇಶದ ಒಟ್ಟಾರೆ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ವಿವಿಧ ಒತ್ತಡದ ವಿದ್ಯುತ್ (ಪವರ್) ಸ್ವತ್ತುಗಳ ಪುನಶ್ಚೇತನವನ್ನು ಖಾತ್ರಿಪಡಿಸುತ್ತದೆ.
ಅಂತಿಮ ಬೃಹತ್ ಪ್ರಮಾಣಪತ್ರಗಳನ್ನು ತೆರಿಗೆ ಅಧಿಕಾರಿಗಳಿಗೆ ಸಲ್ಲಿಸಲು ಸ್ಥಾಪಿಸಲಾದ / ಭಾಗಶಃ ಸ್ಥಾಪಿಸಲಾದ 10 ತಾತ್ಕಾಲಿಕ ಬೃಹತ್ ಯೋಜನೆಗಳ ಅವಧಿಯನ್ನು ಆಮದು ದಿನಾಂಕದಿಂದ 120 ತಿಂಗಳುಗಳ ಬದಲಿಗೆ 156 ತಿಂಗಳಿಗೆ ವಿಸ್ತರಿಸಲಾಗಿದೆ. ಈ ವಿಸ್ತರಿತ ಅವಧಿಯಲ್ಲಿ, ಸ್ಥಿರ ವಿದ್ಯುತ್ (ಫರ್ಮ್ ಪವರ್) (ಮಧ್ಯಂತರ ನವೀಕರಿಸಬಹುದಾದ ಇಂಧನ, ಸಂಗ್ರಹಣೆ ಮತ್ತು ಸಾಂಪ್ರದಾಯಿಕ ವಿದ್ಯುತ್ ಸಂಯೋಜನೆ) ಗಾಗಿ ಬಿಡ್ ಗಳನ್ನು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್.ಆರ್.ಇ) ಮತ್ತು ಭಾರತೀಯ ಸೌರಶಕ್ತಿ ನಿಗಮ ನಿಯಮಿತ (ಎಸ್ಇಸಿಐ) ಸಹಯೋಗದೊಂದಿಗೆ ಆಹ್ವಾನಿಸಲಾಗುವುದು ಮತ್ತು ಈ ಬೃಹತ್ ಯೋಜನೆಗಳು ಪಿಪಿಎಗಳನ್ನು ಭದ್ರಪಡಿಸಲು ಅಂತಹ ಬಿಡ್ ಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇಂಧನ ಸಚಿವಾಲಯವು ಈ ಅವಧಿಯಲ್ಲಿ ಪ್ರಸ್ತುತ ವಿದ್ಯುತ್ ಮಾರುಕಟ್ಟೆಗಳ ಆಧಾರದ ಮೇಲೆ ಪರ್ಯಾಯವನ್ನು ಸಹ ಅಭಿವೃದ್ಧಿಪಡಿಸುತ್ತದೆ, ಅದೇ ವೇಳೆ ಪ್ರಯೋಜನಗಳನ್ನು ಸ್ಪರ್ಧಾತ್ಮಕ ರೀತಿಯಲ್ಲಿ ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.

**



(Release ID: 1811811) Visitor Counter : 171