ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಶ್ರೀ ಅನುರಾಗ್‌ ಸಿಂಗ್‌ ಠಾಕೂರ್‌ ಮಾರ್ಚ್‌ 26 ರಿಂದ 28 ರವರೆಗೆ ದುಬೈಗೆ ಭೇಟಿ ನೀಡಲಿದ್ದಾರೆ


ಸಿಇಒ ರೌಂಡ್‌ಟೇಬಲ್‌ ಮತ್ತು ದುಬೈ ಎಕ್ಸ್‌ಪೋದ ಇಂಡಿಯಾ ಪೆವಿಲಿಯನ್‌ನಲ್ಲಿ‘‘ ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮವನ್ನು ಜಾಗತಿಕವಾಗಿ ಆಚರಿಸುವುದು ಮತ್ತು ತೆಗೆದುಕೊಳ್ಳುವ,’’ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

प्रविष्टि तिथि: 25 MAR 2022 4:16PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗು ಯುವ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ಸಚಿವ ಶ್ರೀ ಅನುರಾಗ್‌ ಸಿಂಗ್‌ ಠಾಕೂರ್‌ ಅವರು 2022 ರ ಮಾರ್ಚ್‌ 26 ರಿಂದ ಮಾರ್ಚ್‌ 28 ರವರೆಗೆ ದುಬೈಗೆ ಮೂರು ದಿನಗಳ ಅಧಿಕೃತ ಭೇಟಿ ನೀಡಲಿದ್ದಾರೆ. ಭೇಟಿಯ ಸಮಯದಲ್ಲಿ ಸಚಿವರು, ಸಿನಿಮಾ ಪ್ರದರ್ಶನ ಮತ್ತು ದೂರದರ್ಶನ ಪ್ರಪಂಚದ ಪ್ರಮುಖ ವ್ಯಕ್ತಿಗಳ ಸಿಇಒ ರೌಂಡ್‌ 

ಟೇಬಲ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ವಾರವಿಡೀ ಮಾಧ್ಯಮ ಮತ್ತು ಮನರಂಜನಾ ಸಪ್ತಾಹ ನಡೆಯುತ್ತಿರುವ ದುಬೈ ಎಕ್ಸ್‌ಪೋದಲ್ಲಿಅವರು ಇಂಡಿಯಾ ಪೆವಿಲಿಯನ್‌ಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ವೇಳೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರು, ಸಚಿವರು ಮತ್ತು ಉದ್ಯಮದ ಪ್ರಮುಖರನ್ನು ಭೇಟಿ ಮಾಡಲಿದ್ದಾರೆ.
ಶನಿವಾರದ ಸಿಇಒ ರೌಂಡ್‌ಟೇಬಲ್‌ನಲ್ಲಿ ವಿಒಎಕ್ಸ್‌ ಸಿನಿಮಾಸ್‌ನ ಸಿಇಒ ಶ್ರೀ ಇಗ್ನೇಸ್‌ ಲಾಹೌಡ್‌ ಭಾಗವಹಿಲಿದ್ದಾರೆ; ಸ್ಟಾರ್‌ ಸಿನಿಮಾಸ್‌ನ ಸಿಒಒ ಶ್ರೀ ಸತ್ಯಜಿತ್‌ ಪೆಂಧಾರ್ಕರ್‌; ಚಾನೆಲ್‌ 2 ಸಮೂಹದ ಸಂಸ್ಥಾಪಕ ಎಂಡಿ ಶ್ರೀ ಅಜಯ್‌ ಸೇಥಿ; ಎಆರ್‌ಎನ್‌ ಗ್ರೂಪ್‌ನ ಶ್ರೀ ವಿವೇಕ್‌ ಸೇಥಿಯಾ ಮತ್ತು ಶ್ರೀ ಮ್ಯಾಥ್ಯೂ ಜಾನ್ಸನ್‌ ಮತ್ತು ಇಂಟನ್ಯಾಷನಲ್‌ ಬಿಸಿನೆಸ್‌ ಸ್ಟಾರ್‌ ಟಿವಿ ಮುಖ್ಯಸ್ಥ ಶ್ರೀ ಸುಧೀರ್‌ ನಾಗ್ಪಾಲ್‌ ಪಾಲ್ಗೊಳ್ಳಲಿದ್ದಾರೆ.
2022ರ  ಮಾರ್ಚ್‌ 27ನೇ ಭಾನುವಾರದಂದು, ಶ್ರೀ ಠಾಕೂರ್‌ ಅವರು  ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ  ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಈ ಭೇಟಿಯ ವೇಳೆ ಖ್ಯಾತ ಚಲನಚಿತ್ರ ನಟ ಶ್ರೀ ರಣವೀರ್‌ ಸಿಂಗ್‌ ಅವರು ಸಚಿವರೊಂದಿಗೆ ಸೇರುವ ಸಾಧ್ಯತೆ ಇದೆ. ಪೆವಿಲಿಯನ್‌ಗೆ ಭೇಟಿ ನೀಡುವ ಸಂದರ್ಭದಲ್ಲಿ ಸಚಿವರು, ಕ್ಷೇತ್ರದ ಹಲವು ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ. ಶ್ರೀ ಅನುರಾಗ್‌ ಸಿಂಗ್‌ ಠಾಕೂರ್‌ ಅವರು ಮಾರ್ಚ್‌ 28 ರಂದು ಎಕ್ಸ್‌ಪೋದಲ್ಲಿದುಬೈ ಫಿಲ್ಮ… ಮತ್ತು ಟಿವಿ ಕಮಿಷನ್‌, ದುಬೈ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಶ್ರೀ ಜಮಾಲ್‌ ಅಲ್‌ ಷರೀಫ್‌ ಅವರನ್ನು ಭೇಟಿ ಮಾಡಲಿದ್ದಾರೆ.
ಈ ವಲಯದಲ್ಲಿ ಭಾರತದ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಸಚಿವರು ಹಲವಾರು ಜನರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಪ್ರಸ್ತಾವಿತ ಸಭೆಗಳಲ್ಲಿಎಚ್‌.ಎಚ್‌. ಶೇಖ್‌ ಸುರೂರ್‌ ಬಿನ್‌ ಮೊಹಮ್ಮದ್‌ ಬಿನ್‌ ಖಲೀಫಾ ಅಲ್‌ ನಹ್ಯಾನ್‌; ಎಚ್‌.ಇ. ನೂರಾ ಬಿಂತ್‌ ಮೊಹಮ್ಮದ್‌ ಅಲ್‌ ಕಾಬಿ; ಗೌರವಾನ್ವಿತ ಸಂಸ್ಕೃತಿ ಮತ್ತು ಯುವ ಸಚಿವರು, ಘನತೆವೆತ್ತ ರೀಮ್‌ ಇಬ್ರಾಹಿಂ ಅಲ್‌ ಹಾಶಿಮಿ, ಅಂತಾರಾಷ್ಟ್ರೀಯ ಸಹಕಾರ ರಾಜ್ಯ ಸಚಿವರು; ಎಚ್‌.ಇ. ಹೆಲಾಲ್‌ ಸಯೀದ್‌ ಅಲ್ಮರಿ ನಹ್ಯಾನ್‌, ಮಂಡಳಿಯ ಸದಸ್ಯ - ಇಂಟರ್‌ನ್ಯಾಷನಲ್‌ ಹ್ಯುಮಾನಿಟೇರಿಯನ್‌ ಸಿಟಿ (ಐಎಚ್‌ಸಿ) ಮತ್ತು ದುಬೈನ ಪ್ರವಾಸೋದ್ಯಮ ಮತ್ತು ವಾಣಿಜ್ಯ ಮಾರುಕಟ್ಟೆ ಇಲಾಖೆಯ ಮಹಾನಿರ್ದೇಶಕ (ದುಬೈ ಪ್ರವಾಸ); ಎಚ್‌.ಇ. ಡಾ ಖಾಲಿದ್‌ ಒಮರ್‌ ಅಲ್‌ ಮಿದಾಧಿ, ಅಧ್ಯಕ್ಷ ರು - ಶಾರ್ಜಾ ಮೀಡಿಯಾ ಸಿಟಿ (ಶಮ್ಸ…);  ಎಚ್‌.ಇ. ಮೊಹಮ್ಮದ್‌ ಖಲೀಫಾ ಅಲ್‌ ಮುಬಾರಕ್‌, ಅಧ್ಯಕ್ಷ ರು, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಮತ್ತು ಅಧ್ಯಕ್ಷ ರು ಟುಫೋರ್‌54; ಎಚ್‌.ಇ. ಶಿಹಾಬ್‌ ಅಲ್ಹಮ್ಮದಿ, ವ್ಯವಸ್ಥಾಪಕ ನಿರ್ದೇಶಕ - ಶಾರ್ಜಾ ಮೀಡಿಯಾ ಸಿಟಿ (ಶಮ್ಸ…); ಶ್ರೀ ಮಾಲೆಕ್‌ ಅಲ್‌ ಮಾಲೆಕ್‌, ಗ್ರೂಪ್‌ ಸಿಇಒ - ಟೆಕಾಮ್‌ ಗ್ರೂಪ್‌; ಶ್ರೀ ಮಜೆದ್‌ ಅಲ್‌ ಸುವೈದಿ, ವ್ಯವಸ್ಥಾಪಕ ನಿರ್ದೇಶಕರು - ದುಬೈ ಮೀಡಿಯಾ ಸಿಟಿ, ದುಬೈ ಸ್ಟುಡಿಯೋ ಸಿಟಿ ಮತ್ತು ದುಬೈ ಪೊ›ಡಕ್ಷ ನ್‌ ಸಿಟಿ ಟೇಕಾಮ್‌ ಗ್ರೂಪ್‌ ದುಬೈ; ಶ್ರೀ ಸುಹೇಲ್‌ ಗಲದರಿ, ಸಹ ಅಧ್ಯಕ್ಷ ರು - ಗಲದರಿ ಬ್ರದರ್ಸ್‌ ಗ್ರೂಪ್‌; ಶ್ರೀ ಅಬ್ದುಲ್ಲಾ ಬಿನ್‌ ಖಲೀಫಾ ಅಲ್‌-ಅತ್ತಿಯಾ, ಅಧ್ಯಕ್ಷ ರು - ಗಲಧಿ… ನ್ಯೂ; ವಲೀದ್‌ ಬಿನ್‌ ಇಬ್ರಾಹಿಂ ಅಲ್‌-ಇಬ್ರಾಹಿಂ, ಸಂಸ್ಥಾಪಕ ಮತ್ತು ಅಧ್ಯಕ್ಷ  - ಮಧ್ಯಪ್ರಾಚ್ಯ ಪ್ರಸಾರ ಕೇಂದ್ರ(ಎಂಬಿಸಿ) ಮುಂತಾದವರು ಸೇರಿದ್ದಾರೆ
.

***


(रिलीज़ आईडी: 1809875) आगंतुक पटल : 161
इस विज्ञप्ति को इन भाषाओं में पढ़ें: English , Urdu , हिन्दी , Bengali , Punjabi , Gujarati , Tamil