ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ(ಸಿಜಿಎಚ್ಎಸ್) ಅಥವಾ ಸ್ಥಿರ ವೈದ್ಯಕೀಯ ಭತ್ಯೆ ಅಡಿ ಹೊರರೋಗಿಗಳ ವಿಭಾಗ(ಒಪಿಡಿ)ದ ಸೌಲಭ್ಯ ಪಡೆಯಲು ಪಿಂಚಣಿದಾರರು, ಪಿಂಚಣಿದಾರರ ಕುಟುಂಬದ ಆಯ್ಕೆ ಬದಲಾಯಿಸುವ ಕಾರ್ಯ ವಿಧಾನ ಮತ್ತು ಸಮಯ ನಿಗದಿಪಡಿಸಲು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಸೂಚನೆ

Posted On: 24 MAR 2022 11:46AM by PIB Bengaluru

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಲ್ಲಿ ಚಾಲ್ತಿಯಲ್ಲಿರುವ  ಸೂಚನೆಗಳು ಅಥವಾ ಮಾರ್ಗಸೂಚಿಗಳ ಪ್ರಕಾರ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ(ಸಿಜಿಎಚ್ಎಸ್) ವ್ಯಾಪ್ತಿಗೆ ಒಳಪಡದ ಪ್ರದೇಶದಲ್ಲಿ ವಾಸಿಸುವ ಪಿಂಚಣಿದಾರರು, ಪಿಂಚಣಿದಾರರ ಕುಟುಂಬಗಳು  ಸಿಜಿಎಚ್ಎಸ್ ಅಡಿ, ಹೊರರೋಗಿಗಳ ವಿಭಾಗ(ಒಪಿಡಿ)ದ ಸೌಲಭ್ಯಗಳ ಬದಲಾಗಿ ತಿಂಗಳಿಗೆ 1,000 ರೂ. ಸ್ಥಿರ ವೈದ್ಯಕೀಯ ಭತ್ಯೆ(ಎಫ್ಎಂಎ)  ಪಡೆಯುವ ಆಯ್ಕೆ ಹೊಂದಿರುತ್ತಾರೆ. ಪಿಂಚಣಿದಾರರು, ಪಿಂಚಣಿದಾರರ ಕುಟುಂಬಸ್ಥರು ಸಿಜಿಎಚ್ಎಸ್ ಅಡಿ ಎಫ್ಎಂಎಯಿಂದ ಒಪಿಡಿ ಸೌಲಭ್ಯಕ್ಕೆ ಆಯ್ಕೆ ಬದಲಾಯಿಸಬಹುದು ಅಥವಾ ಪ್ರತಿಯಾಗಿ ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಬದಲಾಯಿಸಿಕೊಳ್ಳಬಹುದು. ಭಾರತ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಅಡಿ ಬರುವ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಈಗ ಸಿಜಿಎಚ್ಎಸ್ ಅಥವಾ ಸ್ಥಿರ ವೈದ್ಯಕೀಯ ಭತ್ಯೆ  ಅಡಿ, ಒಪಿಡಿ ಸೌಲಭ್ಯ ಪಡೆಯಲು ಪಿಂಚಣಿದಾರರು ಮತ್ತು ಪಿಂಚಣಿದಾರರ ಕುಟುಂಬದವರ ಆಯ್ಕೆ ಬದಲಾಯಿಸುವ ಕಾರ್ಯವಿಧಾನ ಮತ್ತು ಸಮಯ  ನಿಗದಿಪಡಿಸುವ ಸೂಚನೆ ಅಥವಾ ಮಾರ್ಗಸೂಚಿಗಳನ್ನು ನೀಡಿದೆ.
ಈ ಸೂಚನೆಗಳ ಪ್ರಕಾರ, ಪಿಂಚಣಿದಾರರು,ಕುಟುಂಬ ಪಿಂಚಣಿದಾರರ ಕುಟುಂಬಸ್ಥರು ಎಫ್ಎಂಎ ರಶೀದಿಯಲ್ಲಿ, ಸಿಜಿಎಚ್ಎಸ್ ಅಡಿ ಒಪಿಡಿ  ಸೌಲಭ್ಯ ಪಡೆಯಲು ಉದ್ದೇಶಿಸಿದರೆ, ಅವನು ಅಥವಾ ಅವಳು ಎಫ್ಎಂಎ ಸ್ಥಗಿತಗೊಳಿಸಲು ಸಂಬಂಧಪಟ್ಟ ಪಿಂಚಣಿ ವಿತರಣಾ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಬಹುದು. ಪಿಂಚಣಿ ವಿತರಿಸುವ ಬ್ಯಾಂಕ್ ಎಫ್‌ಎಂಎ ಪಾವತಿಯನ್ನು ನಿಲ್ಲಿಸುತ್ತದೆ ಮತ್ತು ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ಮೂರು ಕೆಲಸದ ದಿನಗಳಲ್ಲಿ ಇದಕ್ಕೆ ಪ್ರತಿಯಾಗಿ ಪ್ರಮಾಣಪತ್ರ ನೀಡುತ್ತದೆ. ಅದರ ನಂತರ, ಪಿಂಚಣಿದಾರರು ಅಗತ್ಯವಿರುವ ಮೊತ್ತವನ್ನು 
ಸಿಜಿಎಚ್ಎಸ್ ಗೆ   ಪಾವತಿಸಿದ ನಂತರ (ಈಗಾಗಲೇ ಪಾವತಿಸಿರದಿದ್ದರೆ) ಸಿಜಿಎಚ್ಎಸ್  ಕಾರ್ಡ್ ನೀಡುವಂತೆ ಸಂಬಂಧಿಸಿದ ಸಿಜಿಎಚ್ಎಸ್ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ಸಿಜಿಎಚ್ಎಸ್ ಅಧಿಕಾರಿಗಳು ಪಿಂಚಣಿದಾರ, ಪಿಂಚಣಿದಾರರ ಕುಟುಂಬಸ್ಥರಿಂದ ಠೇವಣಿ  ಸೇರಿದಂತೆ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ದಿನಾಂಕದಿಂದ 4 ಕೆಲಸದ ದಿನಗಳಲ್ಲಿ ಪಿಂಚಣಿದಾರರಿಗೆ, ಪಿಂಚಣಿದಾರ ಕುಟುಂಬಸ್ಥರಿಗೆ ತಾತ್ಕಾಲಿಕ ಸಿಜಿಎಚ್ಎಸ್ ಕಾರ್ಡ್ ನೀಡುತ್ತಾರೆ. ನಂತರ ಕಾಯಂ ಸಿಜಿಎಚ್ಎಸ್ ಕಾರ್ಡ್ ಒದಗಿಸುತ್ತಾರೆ. 
ಒಳರೋಗಿಗಳ ವಿಭಾಗ(ಐಪಿಡಿ) ಮತ್ತು ಹೊರರೋಗಿಗಳ ವಿಭಾಗ(ಒಪಿಡಿ)  ಎರಡರಲ್ಲೂ ಸಿಜಿಎಚ್ಎಸ್ ವೈದ್ಯಕೀಯ ಸೌಲಭ್ಯ ಪಡೆಯುತ್ತಿರುವ ಪಿಂಚಣಿದಾರರು, ಪಿಂಚಣಿದಾರರ ಕುಟುಂಬಸ್ಥರು, ಸಿಜಿಎಚ್ಎಸ್ ಸೌಲಭ್ಯ ಇಲ್ಲದ  ಪ್ರದೇಶದಲ್ಲಿ ವಾಸಿಸುತ್ತಿರುವಾಗ ಅಥವಾ ಸಿಜಿಎಚ್ಎಸ್ ಸೌಲಭ್ಯ ದೊರೆಯುತ್ತಿದ್ದ ಪ್ರದೇಶದಿಂದ ಸಿಜಿಎಚ್ಎಸ್ ಸೌಲಭ್ಯ ಇಲ್ಲದ ಪ್ರದೇಶಕ್ಕೆ ನಿವಾಸ  ಬದಲಾಯಿಸಿದಾಗ ಎಫ್ಎಂಎ ಪಡೆಯಲು ಉದ್ದೇಶಿಸಿದರೆ, ಅವರು ಸಿಜಿಎಚ್ಎಸ್ ಅಡಿ, ಒಪಿಡಿ ಸೌಲಭ್ಯ ನಿಲ್ಲಿಸುವಂತೆ ಕೋರಿ ಸಿಜಿಎಚ್ಎಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಬಹುದು. 
ಆಗ ಸಿಜಿಎಚ್ಎಸ್ ಅಧಿಕಾರಿಗಳು ಅದನ್ನು ಅನುಮೋದಿಸಿ, ಅರ್ಜಿ ಸ್ವೀಕರಿಸಿದ ದಿನಾಂಕದಿಂದ 4 ಕೆಲಸದ ದಿನಗಳಲ್ಲಿ ಪಿಂಚಣಿದಾರರು ಮತ್ತು ಅವರ ಕುಟುಂಬಸ್ಥರು ಒಪಿಡಿ ಸೌಲಭ್ಯ ಪಡೆಯುತ್ತಿಲ್ಲ ಎಂದು ಪ್ರಮಾಣಪತ್ರ ನೀಡುತ್ತಾರೆ. ಅದರ ನಂತರ, ಪಿಂಚಣಿದಾರರು,  ಎಫ್‌ಎಂಎ ಪಾವತಿಗಾಗಿ ಪ್ರಮಾಣಪತ್ರದ ಪ್ರತಿಯೊಂದಿಗೆ ಕಚೇರಿಯ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಬಹುದು. ಪಿಂಚಣಿದಾರರು, ಪಿಂಚಣಿದಾರ ಕುಟುಂಬಸ್ಥರು ಅರ್ಜಿ ಸಲ್ಲಿಸಿದ ದಿನಾಂಕದಿಂದ 2 ತಿಂಗಳೊಳಗೆ ಪರಿಷ್ಕೃತ ಪಿಂಚಣಿ ಪಾವತಿ ಸೌಲಭ್ಯ ಆರಂಭವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಸಿಜಿಎಚ್ಎಸ್ ಅಧಿಕಾರಿಗಳು ಪ್ರಮಾಣಪತ್ರ ನೀಡಿದ ದಿನಾಂಕದಿಂದ ಎಫ್ಎಂಎ ಪಾವತಿ ಮಾಡಲಾಗುತ್ತದೆ.

****



(Release ID: 1809251) Visitor Counter : 165