ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಯೋಗೇಶ್ ಕಥುನಿಯಾ ಬಿಹಾರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ “ಮೀಟ್ಸ್ ದಿ ಚಾಂಪಿಯನ್ಸ್ ಅಭಿಯಾನದಲ್ಲಿ ಪಾಲ್ಗೊಂಡರು: ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಪಾಟ್ನಾದ ಎಲ್ಲಾ ಸ್ಥಳೀಯ ಬಾಲಕಿಯರ ಶಾಲೆಗಳಿಗೆ ಭೇಟಿ ನೀಡಿದರು

ಪ್ರಕಟಣಾ ದಿನಾಂಕ: 08 MAR 2022 4:10PM by PIB Bengaluru

ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಯೋಗೇಶ್ ಕಥುನಿಯಾ ಮಾರ್ಚ್ 8ರ ಮಂಗಳವಾರದಂದು ಬಿಹಾರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ “ಮೀಟ್ಸ್ ದಿ ಚಾಂಪಿಯನ್ಸ್ ಅಭಿಯಾನದಲ್ಲಿ ಪಾಲ್ಗೊಂಡು ದೇಶದ ಈಶಾನ್ಯ ಭಾಗದ ವಿದ್ಯಾರ್ಥಿಗಳಲ್ಲಿ ಸಮತೋಲಿತ ಆಹಾರ ಮತ್ತು ದೈಹಿಕ ಸುದೃಢತೆ ಕುರಿತು ಅರಿವು ಮೂಡಿಸಿದರು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪಾಟ್ನಾದ ಎಲ್ಲಾ ಸ್ಥಳೀಯ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿದರು. 2020ರ ಟೋಕಿಯೋ ಒಲಿಂಪಕ್ ಚಾಂಪಿಯನ್ ಗಳು ಈ ಕಾರ್ಯಕ್ರಮದ ಭಾಗವಾಗಿ ದೇಶದ ಎಲ್ಲಾ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ.

ಯೋಗೇಶ್ ಬಾಲ್ಯದಲ್ಲಿ ತಾವು ಚೇತರಿಸಿಕೊಳ್ಳಲು ಅವರ ತಾಯಿ ವಹಿಸಿದ್ದ ದೊಡ್ಡ ಪಾತ್ರದ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಎಲ್ಲರಿಗೂ ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಶುಭ ಕೋರಿದರು. “ಆಕೆ ಯಾವಾಗಲೂ ನನ್ನೊಂದಿಗೆ ಇದ್ದಾರೆ, ಯಾವಾಗಲೂ ನನ್ನನ್ನು ಬೆಂಬಲಿಸುತ್ತಾರೆ. ಹೀಗಾಗಿ ನಾನು ಮಹಿಳಾ ದಿನದ ಈ ವಿಶೇಷವನ್ನು ಅವಳಿಗೆ ಅರ್ಪಿಸುತ್ತೇನೆ.” ಎಂದರು.   

ನಂತರ ಯೋಗೇಶ್ ಪ್ಯಾರಾಲಿಂಪಿಕ್ ಯಾನದ ಬಗ್ಗೆ ಮಾತನಾಡಿದರು. “2017 ರಲ್ಲಿ ತಾವು ಈ ಯಾನ ಪ್ರಾರಂಭಿಸಿದೆ. ಆಗ ತಮಗೆ ತಕ್ಷಣ ಅರಿವಾಯಿತು, ಇದು ನನ್ನ ಕ್ರೀಡೆ ಎಂದು. ಹೀಗಾಗಿ ಇದನ್ನೇ ತಮ್ಮ ವೃತ್ತಿಮಾಡಿಕೊಂಡೆ. ಈವರೆಗೆ ತನ್ನನ್ನು ಇದರಲ್ಲೇ ಸಮರ್ಪಿಸಿಕೊಂಡಿದ್ದೇನೆ” ಎಂದು ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಒಲಿಂಪಿಕ್ ಸ್ವರ್ಣ ಪದಕ ವಿಜೇತ ನೀರಜ್ ಚೋಪ್ರ 2021 ರ ಡಿಸೆಂಬರ್ ನಲ್ಲಿ ಸರ್ಕಾರದ ಆಹ್ವಾನದ ಮೇರೆಗೆ ಮೀಟ್ಸ್ ದಿ ಚಾಂಪಿಯನ್ಸ್ ಗೆ ಚಾಲನೆ ನೀಡಿದ್ದರು.

ಈವರೆಗೆ 9 ಒಲಿಂಪಿಯನ್ ಗಳು ಮತ್ತು ಪ್ಯಾರ ಒಲಿಂಪಿಯನ್ ಗಳು ಕಳೆದ ಕೆಲ ತಿಂಗಳುಗಳಿಂದ ದೇಶದ 600 ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಜೀವನದ ಅನುಭವಗಳು, ಕಲಿತ ಪಾಠಗಳು, ಸೂಕ್ತ ಆಹಾರ ಸೇವನೆ ಕುರಿತು ಸಲಹೆಗಳನ್ನು ನೀಡಿದ್ದು, ಶಾಲಾ ಮಕ್ಕಳಿಗೆ ಕ್ರೀಡಾಸಕ್ತಿ ಮೂಡಿಸಲು ಸ್ಫೂರ್ತಿದಾಯಕರಾಗಿ ಇವರೆಲ್ಲರೂ ಕೆಲಸ ಮಾಡಿದ್ದಾರೆ.

ಪಾಟ್ನಾದಲ್ಲಿ ಯೋಗೇಶ್ ಅವರ ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯ ಶಿಕ್ಷಣ ಮಂಡಳಿ ವಿವಿಧ ಶಾಲೆಗಳ ದಿವ್ಯಾಂಗ ವಿದ್ಯಾರ್ಥಿಗಳನ್ನು ಸಹ ಸಂವಾದಕ್ಕೆ ಆಹ್ವಾನಿಸಿತ್ತು. ಯೋಗೇಶ್ ಅವರೊಂದಿಗಿನ ಮಾತುಕತೆಯಿಂದ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಇದು ಪ್ರೇರೇಪಿಸಬಹುದು ಎನ್ನುವ ಆಶಯವನ್ನು ಇಲಾಖೆ ಹೊಂದಿದೆ. ಸಮತೋಲಿತ ಆಹಾರ ಪ್ರತಿಯೊಬ್ಬರಿಗೂ ಅತ್ಯಂತ ಮಹತ್ವದ್ದಾಗಿದೆ. “ನಮಗೆ ಎಲ್ಲಾ ರೀತಿಯ ಆಹಾರ ವಸ್ತುಗಳು ಬೇಕು. ಸಕ್ಕರೆಯೂ ಅಗತ್ಯ, ಆದರೆ ಸೂಕ್ತ ಪ್ರಮಾಣ ಮತ್ತು ಸೂಕ್ತ ಸಮಯದಲ್ಲಿ ಆಹಾರ ಸೇವಿಸಬೇಕು. ಜಂಕ್ ಫುಡ್ ಗಳಿಂದ ಪ್ರೋಟಿನ್ ಮತ್ತು ಕಾರ್ಬೋಹೈಡ್ರೇಟ್ ಪಡೆಯಬಹುದು. ಆದರೆ ಇದು ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶ ಹೊಂದಿರುತ್ತದೆ. ಹೀಗಾಗಿ ಇದನ್ನು ನೀವು ತ್ಯಜಿಸಬೇಕು. ಆದ್ದರಿಂದ ನಿಮಗೆ ಅಗತ್ಯವಾಗಿ ಹೊಂದಿಕೊಳ್ಳುವ ಪ್ರೋಟಿನ್ ಮತ್ತು ಕಾರ್ಬೋಹೈಡ್ರೇಟ್ ಗಳ ಮೂಲಕ್ಕೆ ಸರಿಯಾದ ಆಹಾರ ಪದಾರ್ಥಗಳನ್ನು ಕಂಡುಕೊಳ್ಳುವುದು ಮುಖ್ಯ” ಎಂದು ಹೇಳಿದರು. 

ಸ್ಥಳೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಂತರ ಅಲ್ಲಿದ್ದ ವಿದ್ಯಾರ್ಥಿಗಳೊಂದಿಗೆ ವಾಲಿಬಾಲ್ ಆಡಿದರು ಮತ್ತು ಮುಂದಿನ ಪೀಳಿಗೆಯ ಅಥ್ಲೀಟ್ ಗಳಿಗೆ ಎಲ್ಲಾ ಮಾದರಿಯ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಕುರಿತು ಸ್ಫೂರ್ತಿಯಾದರು.

ಶಾಲೆಗಳಿಗೆ ಭೇಟಿ ನೀಡುವ ಅಭಿಯಾನವನ್ನು  ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ಶಿಕ್ಷಣ ಸಚಿವಾಲಯ ಆಯೋಜಿಸಿತ್ತು. ಟೋಕಿಯೋ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ನಲ್ಲಿ ಅತಿ ದೊಡ್ಡ ಯಶಸ್ಸು ದೊರೆತ ನಂತರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಥ್ಲೀಟ್ ಗಳೊಂದಿಗೆ ಸಂವಾದ ನಡೆಸಿ. ಪ್ರತಿಯೊಬ್ಬರೂ 75 ಶಾಲೆಗಳಿಗೆ ಭೇಟಿ ನೀಡಬೇಕು ಹಾಗೂ ಸೂಕ್ತ ಆಹಾರ ಹಾಗೂ ಸದೃಢತೆ ಬಗ್ಗೆ ಶಾಲೆಗಳಲ್ಲಿ ಮಾತನಾಡಿ ಅರಿವು ಮೂಡಿಸುವಂತೆ aಮನವಿ ಮಾಡಿದ್ದರು.

***


(ಪ್ರಕಟಣೆ ಐ.ಡಿ.: 1804142) ವಿಸಿಟರ್ ಕೌಂಟರ್ : 208
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Punjabi , Tamil