ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ವಲಯವಾರು ನಿರ್ದಿಷ್ಟ ಹರಾಜಿನ ಬದಲಿಗೆ ಸಾಮಾನ್ಯ ಇ-ಹರಾಜು ಏಕಗವಾಕ್ಷಿ ಮೂಲಕ ಕಲ್ಲಿದ್ದಲನ್ನು ಕಲ್ಲಿದ್ದಲು ಕಂಪನಿಗಳಿಗೆ ನೀಡಲು ಸಂಪುಟ ಅನುಮೋದನೆ

Posted On: 26 FEB 2022 2:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಭೆಯಲ್ಲಿ ಈ ಕೆಳಗಿನ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದೆ.

  1. ಕಲ್ಲಿದ್ದಲು ಕಂಪನಿಗಳಿಗೆ ನಾಲ್ ಲಿಂಕೇಜ್ ಕಲ್ಲಿದ್ದಲನ್ನು ಸಿಐಎಲ್ ಇ-ಹರಾಜು ಏಕಗವಾಕ್ಷಿ (ಸಿಐಎಲ್)/ಸಿಂಗರೇಣಿ ಕೊಲರೀಸ್ ಕಂಪನಿ ನಿಯಮಿತ(ಎಸ್ ಸಿಸಿಎಲ್) ಮೂಲಕ ನೀಡಲಾಗುವುದು. ಇ-ಹರಾಜಿನಿಂದ ಎಲ್ಲ ವಲಯಗಳು ಅಂದರೆ ಇಂಧನ ವಲಯ, ವ್ಯಾಪಾರಿಗಳು ಸೇರಿದಂತೆ ನಿಯಂತ್ರಣರಹಿತ ವಲಯ(ಎನ್ ಆರ್ ಎಸ್) ಮತ್ತು ಕಲ್ಲಿದ್ದಲನ್ನು ಹಾಲಿ ಇರುವ ನಿರ್ದಿಷ್ಟ ವಲಯವಾರು ಹರಾಜಿನ ಬದಲಿಗೆ ಇ-ಹರಾಜಿನ ಮೂಲಕ ನೀಡಲಾಗುವುದು.
  2. ಈ ಮೇಲಿನ ವಿಷಯ ಹಾಲಿ ಇರುವ ಲಿಂಕೇಜಸ್ ಗೆ ಬದಲಾಗಿ ಕಲ್ಲಿದ್ದಲು ಲಿಂಕೇಜ್ ಅಗತ್ಯಗಳನ್ನು ಪೂರೈಸಲು ನಿರ್ಧರಿಸಲಾಗಿದೆ ಮತ್ತು ಹಾಲಿ ಇಂಧನ ಮತ್ತು ಇಂಧನೇತರ ಗ್ರಾಹಕರಿಗೆ ಗುತ್ತಿಗೆ ಬೆಲೆಯಲ್ಲಿ ಲಿಂಕೇಜ್ ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 
  3. ಏಕ ಇ-ಹರಾಜು ಗವಾಕ್ಷಿ ಮೂಲಕ ಕಲ್ಲಿದ್ದಲನ್ನು ರೈಲು ಮಾರ್ಗದ ಮೂಲಕವೇ ಸಾಗಿಸಬೇಕೆಂಬ ವಿಧಾನದಡಿ ಕಲ್ಲಿದ್ದಲು ಒದಗಿಸಲಾಗುವುದು. ಆದರೆ ಕಲ್ಲಿದ್ದಲನ್ನು ಗ್ರಾಹಕರು, ರಸ್ತೆ ಮತ್ತು ಇತರ ವಿಧಾನಗಳು ತಮ್ಮ ಆಯ್ಕೆ ಮತ್ತು ಸುಸ್ಥಿರತೆಯನ್ನು ಆಧರಿಸಿ ಎತ್ತುವಳಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಅಥವಾ ಕಲ್ಲಿದ್ದಲು ಕಂಪನಿಗಳಿಗೆ ವಿನಾಯಿತಿ ಇರುವುದಿಲ್ಲ.
  4. ಸಿಐಎಲ್/ಎಸ್ ಸಿಸಿಎಲ್ ನಿಂದ ದೀರ್ಘಾವಧಿಗೆ ಕಲ್ಲಿದ್ದಲು ಹಂಚಿಕೆ ಮಾಡಲಾಗುವುದು. ಇದರಿಂದ ಹಾಲಿ ಇರುವ ಕಲ್ಲಿದ್ದಲು ಪೂರೈಕೆಗೆ ಯಾವುದೇ ತೊಂದರೆಯಾಗದು. ಕಲ್ಲಿದ್ದಲು ಕಂಪನಿ ನಿರ್ಧರಿಸಿದ ಬೆಲೆಯಲ್ಲಿ ತನ್ನದೇ ಗ್ಯಾಸಿಫಿಕೇಶನ್ ಘಟಕಗಳಿಗೆ ಪೂರೈಸಲಾಗುವುದು. ಆದರೆ ತೆರಿಗೆಗಳು, ಸುಂಕ, ಗೌರವಧನ, ಇತ್ಯಾದಿಗಳನ್ನು ಕಲ್ಲಿದ್ದಲು ಕಂಪನಿಗಳು ಅಧಿಸೂಚಿತ ಬೆಲೆಗೆ ಇಂಧನ ವಲಯಕ್ಕೆ ಪಾವತಿಸಬೇಕಾಗಿದೆ. 

ಸಂಭವನೀಯ ಉದ್ಯೋಗ ಸೃಷ್ಟಿ ಸೇರಿದಂತೆ ಪ್ರಮುಖ ಪರಿಣಾಮ

ಮಾರುಕಟ್ಟೆ ಅಡೆತಡೆಗಳು ನಿವಾರಣೆಯಾಗಲಿವೆ ಮತ್ತು ಇ-ಹರಾಜು ಮಾರುಕಟ್ಟೆಯಲ್ಲಿ ಎಲ್ಲ ಗ್ರಾಹಕರಿಗೆ ಒಂದೇ ದರ ನಿರ್ಧಾರವಾಗಲಿದೆ. ಇದರಿಂದ ಕಾರ್ಯಾಚರಣೆ ದಕ್ಷತೆ ಹೆಚ್ಚುವುದಲ್ಲದೆ, ದೇಶೀಯ ಕಲ್ಲಿದ್ದಲು ಮಾರುಕಟ್ಟೆಯಲ್ಲಿ ದೇಶೀಯ ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚಾಗಲಿದೆ. ಜತೆಗೆ ಸದ್ಯ ಕಲ್ಲಿದ್ದಲನ್ನು ಬೇರೆ ಬೇರೆ ವಲಯದವರಿಗೆ ಮಾಡುವ ಹಂಚಿಕೆ ಅಧಿಕಾರವನ್ನು ಕಲ್ಲಿದ್ದಲು ಕಂಪನಿಗಳಿಂದ ತೆಗೆದು ಹಾಕಲಾಗುವುದು. ಕಲ್ಲಿದ್ದಲು ಕಂಪನಿಗಳು ತಮ್ಮದೇ ಗಣಿಗಳಲ್ಲಿ ಲಭ್ಯವಿರುವ ಕಲ್ಲಿದ್ದಲು ಬಳಸಿ, ಕಲ್ಲಿದ್ದಲು ಗ್ಯಾಸಿಫಿಕೇಶನ್ ಘಟಕಗಳನ್ನು ಸ್ಥಾಪನೆ ಮಾಡಬೇಕಾಗಿದೆ. ಇದರಿಂದ ದೇಶದಲ್ಲಿ ಶುದ್ಧ ಕಲ್ಲಿದ್ದಲು ತಂತ್ರಜ್ಞಾನ ಅಭಿವೃದ್ಧಿಗೆ ಸಹಾಯಕವಾಗಲಿದೆ. 

ಇ-ಹರಾಜು ಏಕಗವಾಕ್ಷಿ ಮಾದರಿ ಅಡಿ ಎಲ್ಲ ಗ್ರಾಹಕರಿಗೆ ಒಂದೇ ದರದಲ್ಲಿ ಕಲ್ಲಿದ್ದಲು ಲಭ್ಯವಾಗುವುದರಿಂದ ದೇಶೀಯ ಕಲ್ಲಿದ್ದಲಿಗೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವುದಲ್ಲದೆ, ಮಾರುಕಟ್ಟೆ ಅಡೆತಡೆಗಳು ನಿವಾರಣೆಯಾಗಲಿವೆ. ಇದರಿಂದಾಗಿ ದೇಶೀಯ ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚಾಗುತ್ತದೆಂದು ನಿರೀಕ್ಷಿಸಲಾಗುತ್ತಿದೆ. ಸಿಐಎಲ್ 2023-24ರ ವೇಳೆಗೆ ಒಂದು ಬಿಟಿ(ಬಿಲಿಯನ್ ಟನ್) ಕಲ್ಲಿದ್ದಲು ಉತ್ಪಾದಿಸುವ ಭವಿಷ್ಯದ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಆದ್ದರಿಂದ ದೇಶೀಯ ಕಲ್ಲಿದ್ದಲು ಲಭ್ಯತೆ ಉತ್ತಮವಾಗಿದ್ದು, ಉತ್ತಮ ಬೆಲೆ ಸ್ಥಿರೀಕರಣವಾಗಲಿದೆ ಮತ್ತು ಇದರಿಂದ ಕಲ್ಲಿದ್ದಲು ಆಮದು ಗಣನೀಯವಾಗಿ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಜತೆಗೆ ಇದರಿಂದ ಕಲ್ಲಿದ್ದಲು ಆಮದಿನ ಮೇಲಿನ ಅವಲಂಬನೆ ತಗ್ಗುವ ಜತೆಗೆ ಆತ್ಮನಿರ್ಭರ ಭಾರತ ಸಾಧನೆಗೆ ಸಹಕಾರಿಯಾಗಲಿದೆ. 

ಈ ಕ್ರಮದಿಂದಾಗಿ ಕಲ್ಲಿದ್ದಲು ಗ್ಯಾಸಿಫಿಕೇಶನ್ ತಂತ್ರಜ್ಞಾನದಲ್ಲಿ ಸುಸ್ಥಿರತೆ ಮತ್ತು ಅಭಿವೃದ್ಧಿ ಖಾತ್ರಿಯಾಗಲಿದೆ. ಶುದ್ಧ ಕಲ್ಲಿದ್ದಲು ತಂತ್ರಜ್ಞಾನ ಬಳಕೆಯಿಂದ ಕಲ್ಲಿದ್ದಲು ಗ್ಯಾಸಿಫಿಕೇಶನ್ ನಲ್ಲಿ ಕಲ್ಲಿದ್ದಲು ಬಳಕೆಯಿಂದ ಪರಿಸರದ ಮೇಲಾಗುವ ಅಡ್ಡ ಪರಿಣಾಮಗಳನ್ನು ತಗ್ಗಿಸಬಹುದಾಗಿದೆ. 

ಹಣಕಾಸು ಪರಿಣಾಮಗಳು:

ಇ-ಹರಾಜು ಏಕಗವಾಕ್ಷಿಯನ್ನು ಸೇರ್ಪಡೆ ಮಾಡುವುದರಿಂದ ಕಲ್ಲಿದ್ದಲು ಕಂಪನಿಗಳಿಗೆ ಯಾವುದೇ ಹೆಚ್ಚುವರಿ ದರ ತಗುಲುವುದಿಲ್ಲ.

ಹಿನ್ನೆಲೆ:

ಕಲ್ಲಿದ್ದಲು ಮಾರುಕಟ್ಟೆ ವಿಂಗಡಿಸಲಾಗುವುದು ಮತ್ತು ನಿಯಂತ್ರಿಸಲಾಗುತ್ತದೆ ಮತ್ತು ಪ್ರತಿಯೊಂದು ವಿಭಾಗದ ಮಾರುಕಟ್ಟೆಯಲ್ಲೂ ಒಂದೇ ದರ್ಜೆಯ ಕಲ್ಲಿದ್ದಲಿಗೆ ಬೇರೆ ಬೇರೆ ಮಾರುಕಟ್ಟೆಗಳು ಸೃಷ್ಟಿಯಾಗುತ್ತಿವೆ. ದರ ವ್ಯತ್ಯಾಸದಿಂದ ವಿಭಜಿಸುತ್ತಿರುವುದು ಕಲ್ಲಿದ್ದಲು ಮಾರುಕಟ್ಟೆಯನ್ನು ಹಾಳು ಮಾಡುತ್ತಿದೆ. ಈ ಸುಧಾರಣೆಗಳಿಂದಾಗಿ ಕಲ್ಲಿದ್ದಲು ಮಾರುಕಟ್ಟೆಯಲ್ಲಿ ಯಾವುದೇ ದರ್ಜೆಯ ಕಲ್ಲಿದ್ದಲಾದರೂ ಮಾರುಕಟ್ಟೆಯಲ್ಲಿ ಒಂದೇ ದರಕ್ಕೆ(ಒಂದು ದರ್ಜೆ, ಒಂದು ದರ) ಮಾರಾಟವಾಗಲಿದೆ. ಜತೆಗೆ ಪಾರದರ್ಶಕ ಮತ್ತು ವಸ್ತುನಿಷ್ಟ ಇ-ಹರಾಜು ಕಾರ್ಯ ವಿಧಾನದಿಂದಾಗಿ ಅದರ ಸಾಗಾಣೆ ರೈಲ್ವೆಗೆ ಒಳಪಡುತ್ತದೆ. ಈ ಏಕಗವಾಕ್ಷಿ ಇ-ಹರಾಜು ಪದ್ಧತಿ ಮಾರುಕಟ್ಟೆಯಲ್ಲಿ ನಿಗದಿಪಡಿಸಲಾದ ಬೆಲೆ ಕಾರ್ಯ ವಿಧಾನದಡಿ ಎಲ್ಲರಿಗೂ ಒಂದೇ ದರದಲ್ಲಿ ಮಾರಾಟ ಮಾಡಬಹುದಾಗಿದೆ.  

ಕಲ್ಲಿದ್ದಲು ಕಂಪನಿಗಳು ಕಲ್ಲಿದ್ದಲು ಗ್ಯಾಸಿಫಿಕೇಶನ್ (ಅನಿಲೀಕರಣ) ಮಾರ್ಗದ ಮೂಲಕ ವ್ಯಾಪಾರವನ್ನು ಭಿನ್ನವಾಗಿಸಲು ಯೋಜನೆಗಳನ್ನು ರೂಪಿಸಿವೆ. ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಕಾರ್ಯ ವಿಧಾನದಲ್ಲಿ ಆದಾಯ ಹಂಚಿಕೆಯಲ್ಲಿ ವಿನಾಯಿತಿ ಸೇರಿ ಹಲವು ರಿಯಾಯಿತಿಗಳ ಮೂಲಕ ಕಲ್ಲಿದ್ದಲು ಗ್ಯಾಸಿಫಿಕೇಶನ್ ಅನ್ನು ಉತ್ತೇಜಿಸಲಾಗುತ್ತಿದೆ. ಕಲ್ಲಿದ್ದಲು ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳ ಹೊಸ ಬಳಕೆಯಲ್ಲಿ  ಆರಂಭಿಕ ಸ್ಥಾಪನೆಗೆ ಈ ವಿನಾಯಿತಿಗಳು ಸಹಕಾರಿಯಾಗಲಿವೆ. ಕಲ್ಲಿದ್ದಲು ಕಂಪನಿಗಳು ತಮ್ಮ ಕಲ್ಲಿದ್ದಲು ಗ್ಯಾಸಿಫಿಕೇಶನ್ ಯೋಜನೆಗಳಿಗೆ ಕಲ್ಲಿದ್ದಲು ಪೂರೈಕೆ ಸರಳ ಮತ್ತು ಸುಗಮವಾಗಲಿದೆ.

***


(Release ID: 1801378) Visitor Counter : 206