ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಭಾರತದ ಬ್ಯಾಡ್ಮಿಂಟನ್‌ ಡಬಲ್ಸ್‌ ಕೋಚ್‌ ಆಗಿ ಟಾನ್‌ ಕಿಮ್‌ ಹರ್‌ ನೇಮಕವನ್ನು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಅನುಮೋದಿಸಿದೆ

Posted On: 25 FEB 2022 3:54PM by PIB Bengaluru

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಮಲೇಷ್ಯಾದ ಬ್ಯಾಡ್ಮಿಂಟನ್‌ ತರಬೇತುದಾರ ಟಾನ್‌ ಕಿಮ್‌ ಹರ್‌ ಅವರನ್ನು 2026 ಏಷ್ಯನ್‌ ಗೇಮ್ಸವರೆಗೆ ಭಾರತದ ಡಬಲ್ಸ್‌ ಕೋಚ್‌ ಆಗಿ ನೇಮಿಸಲು ಅನುಮೋದಿಸಿದೆ. 50 ವರ್ಷ ವಯಸ್ಸಿನ ಕಿಮ್‌ ಭಾರತಕ್ಕೆ ಮರಳುವುದು ದೇಶದ ಡಬಲ್ಸ್‌ ಸಂಯೋಜನೆಗಳ ಸಂಗ್ರಹವನ್ನು ಹೆಚ್ಚಿಸುತ್ತದೆ.

ಪುರುಷರ ಡಬಲ್ಸ್‌ನಲ್ಲಿಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಅವರೊಂದಿಗೆ ವಿಶ್ವ ನಂ. 8 ರ‍್ಯಾಂಕ್‌ ಹೊಂದಿರುವ 24 ವರ್ಷದ ಚಿರಾಗ್‌ ಶೆಟ್ಟಿ ಘೋಷಣೆಯನ್ನು ಸ್ವಾಗತಿಸಿದ್ದಾರೆ. ಕೋಚ್‌ ಟ್ಯಾನ್‌ ನಮ್ಮೊಂದಿಗೆ ಮರಳಿರುವುದಕ್ಕೆ ಸಾತ್ವಿಕ್‌ ಮತ್ತು ನನಗೆ ಸಂತೋಷವಾಗಿದೆ. ನಮ್ಮ ಆರಂಭಿಕ ಹಿಂಜರಿಕೆಯ ಹೊರತಾಗಿಯೂ ಅವರು ನಮ್ಮನ್ನು ಒಟ್ಟಿಗೆ ಜೋಡಿಸಿದ್ದರಿಂದ ನಾವು ಯಾವಾಗಲೂ ಅವರನ್ನು ಎದುರು ನೋಡುತ್ತೇವೆ. ಏಕೆಂದರೆ ನಾವು ಒಂದೇ ರೀತಿಯಾಗಿದ್ದರೂ, ಮುಂಭಾಗದ ಅಂಕಣದಲ್ಲಿ ಆಡುವ ವಿಶ್ವಾಸ ನಮಗಿರಲಿಲ್ಲ,” ಎಂದು ಅವರು ಹೇಳಿದರು.

ಟಾನ್‌ ತರಬೇತಿಯ ದೃಢತೆ ನಾವು ಮಾಡಿದ ಮಟ್ಟವನ್ನು ತಲುಪಲು ಸಹಾಯ ಮಾಡಿತು. ಅವರು ಭಾರತವನ್ನು ತೊರೆಯುವ ಹೊತ್ತಿಗೆ ಅವರು ನಮ್ಮನ್ನು ಅಗ್ರ 16 ಕ್ಕೆ ತಲುಪಿಸಿದರು. ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯಕ್ಕೆ ನಾವು ಕೃತಜ್ಞರಾಗಿರುತ್ತೇವೆ,” ಎಂದು ಚಿರಾಗ್‌ ಹೇಳಿದರು.

ತರಬೇತುದಾರ ಟಾನ್‌ ಕಿಮ್‌ ಹರ್‌ ಅವರು ಭಾರತೀಯ ಬ್ಯಾಡ್ಮಿಂಟನ್‌ ಪರಿಸರ ವ್ಯವಸ್ಥೆಯ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ ಮತ್ತು ಅವರ ಸೇರ್ಪಡೆ ಡಬಲ್ಸ್‌ ತಂಡವನ್ನು ಇನ್ನಷ್ಟು ಬಲಪಡಿಸುತ್ತದೆ. ಬಿಎಐ ಮತ್ತು ಸಾಯ್‌ ಅವರ ನೇಮಕಾತಿಯನ್ನು ಕಾರ್ಯಗತಗೊಳಿಸಲು ನನಗೆ ಸಂತೋಷವಾಗಿದೆ. ಇದು ನಮ್ಮ ಪ್ರಮುಖ ಡಬಲ್ಸ್‌ ಜೋಡಿಗಳಾದ ಚಿರಾಗ್‌ (ಶೆಟ್ಟಿ) ಮತ್ತು ಸಾತ್ವಿಕ್‌ (ರಾಂಕಿರೆಡ್ಡಿ) ಗೆ ಸಹಾಯ ಮಾಡುವುದಲ್ಲದೆ, ಮುಂದಿನ ಸಾಲಿನ ಡಬಲ್ಸ್‌ ಬೆಂಚ್‌ ಬಲವನ್ನು ಉತ್ತಮಪಡಿಸಲು ಸಹಾಯ ಮಾಡುತ್ತದೆ ಎಂದು ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಜಯ್‌ ಕೆ ಸಿಂಘಾನಿಯಾ ಹೇಳಿದ್ದಾರೆ.

ಭಾರತದಲ್ಲಿ ಡಬಲ್ಸ್‌ ತರಬೇತುದಾರರಾಗಿ ಮೊದಲ ಹಂತದಲ್ಲಿ(2015-2019) ಟಾನ್‌ ಅವರು ಸಾತ್ವಿಕ್‌ ಸಾಯಿರಾಜ್‌ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರನ್ನು  ವಿಶ್ವ ಬ್ಯಾಡ್ಮಿಂಟನ್‌ ಒಕ್ಕೂಟದ ಪುರುಷರ ಡಬಲ್ಸ್‌ ಶ್ರೇಯಾಂಕದಲ್ಲಿಅಗ್ರ 10 ಕ್ಕೆ ತರಬೇತುಗೊಳಿಸಿದರು ಮತ್ತು ಮಹಿಳಾ ಡಬಲ್ಸ್‌ ಶ್ರೇಯಾಂಕದಲ್ಲಿ ಅಶ್ವಿನಿ ಪೊನಪ್ಪ ಮತ್ತು ಸಿಕ್ಕಿ ರೆಡ್ಡಿ ಅವರು ಅಗ್ರ 20ರಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ, ಆರು ಜೋಡಿಗಳು ಇತರ ವಿವಿಧ ಜೋಡಿಗಳಲ್ಲಿಅಗ್ರ 50 ರಲ್ಲಿ ಸ್ಥಾನ ಪಡೆದಿವೆ.

2021 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿಗೆದ್ದ ಜಪಾನಿನ ಪುರುಷರ ಡಬಲ್ಸ್‌ ತಂಡ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಮಿಶ್ರ ಡಬಲ್ಸ್‌ ತಂಡವನ್ನು ಹಾಗೂ ಟೋಕಿಯೊ ಒಲಿಂಪಿಕ್‌ ಕ್ರೀಡಾಕೂಟದಲ್ಲಿಕಂಚಿನ ಪದಕ ಗೆದ್ದ ತಂಡಗಳಿಗೆ ತರಬೇತಿ ನೀಡಿರುವ ಟಾನ್‌, ತರಬೇತುದಾರ ಶಿಕ್ಷ ಣವನ್ನು ಮೇಲ್ವಿಚಾರಣೆ ಮಾಡುವುದರ ಜೊತೆಗೆ ಒಟ್ಟಾರೆ ಕೋಚಿಂಗ್‌ ವ್ಯವಸ್ಥೆ ಮತ್ತು ಯೋಜನೆಯನ್ನು ಜಾರಿಗೆ ತರಲು ಸಹ ಜವಾಬ್ದಾರರಾಗಿರುತ್ತಾರೆ.

ಇತರ ವಿಷಯಗಳ ಜೊತೆಗೆ, ಅವರು ಭಾರತೀಯ ತರಬೇತುದಾರರನ್ನು ಸಂಭಾವ್ಯವಾಗಿ ಗುರುತಿಸುತ್ತಾರೆ ಮತ್ತು ಪ್ರತಿ ವರ್ಷ ನಾಲ್ಕು ಕಾರ್ಯಾಗಾರಗಳನ್ನು ನಡೆಸುವ ಮೂಲಕ ಅವರ ಕೌಶಲ್ಯ ಅಭಿವೃದ್ಧಿಗೆ ಸಹಾಯ ಮಾಡಲಿದ್ದಾರೆ. ಭವಿಷ್ಯದಲ್ಲಿಭಾರತೀಯ ತಂಡಗಳನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಕೌಶಲ್ಯದ ಸೆಟ್‌ಗಳೊಂದಿಗೆ ರಾಷ್ಟ್ರವು ಹಲವಾರು ಡಬಲ್ಸ್‌ ತರಬೇತುದಾರರನ್ನು ಹೊಂದಿರುತ್ತದೆ ಎಂದು ಇದು ಖಚಿತಪಡಿಸುತ್ತದೆ.

***(Release ID: 1801124) Visitor Counter : 173