ವಿಶೇಷ ಸೇವೆ ಮತ್ತು ನುಡಿಚಿತ್ರ
azadi ka amrit mahotsav g20-india-2023

ಆಡಳಿತ ಮತ್ತು ಅಭಿವೃದ್ಧಿಗಾಗಿ ತಂತ್ರಜ್ಞಾನವನ್ನು ಬಳಸುವಲ್ಲಿ ಭಾರತವು ಅಗ್ರಗಣ್ಯ ರಾಷ್ಟ್ರವಾಗಿದೆ: ಎಂ.ಇ.ಐ.ಟಿ.ವೈ ರಾಜ್ಯ ಸಚಿವ, ಶ್ರೀ ರಾಜೀವ್ ಚಂದ್ರಶೇಖರ್

Posted On: 25 FEB 2022 12:52PM by PIB Bengaluru

ಆಡಳಿತ ಮತ್ತು ಅಭಿವೃದ್ಧಿಗಾಗಿ ತಂತ್ರಜ್ಞಾನವನ್ನು ಬಳಸುವುದರಲ್ಲಿ ಭಾರತವು ಅಗ್ರಗಣ್ಯ ರಾಷ್ಟ್ರವಾಗಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂ...ಟಿ.ವೈ) ಖಾತೆ  ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್, ರಾಷ್ಟ್ರೀಯ ದತ್ತಾಂಶ ಕೇಂದ್ರ ಮತ್ತು ಕ್ಲೌಡ್ ನೀತಿಯ ಕರಡು ಕುರಿತು ಕೈಗಾರಿಕಾ ಸಮಾಲೋಚನೆಯ ಸಂದರ್ಭದಲ್ಲಿ ಹೇಳಿದ್ದಾರೆ.

ದತ್ತಾಂಶ ಕೇಂದ್ರ ಮತ್ತು ಕ್ಲೌಡ್ ಕಾರ್ಯಾಚರಣೆಗಳಲ್ಲಿ ದೇಶೀಯ ವೇದಿಕೆಗಳು/ಪರಿಹಾರಗಳ ಬಳಕೆಯನ್ನು ಉತ್ತೇಜಿಸುವುದು ನೀತಿಯ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು. ಇಂಧನ ದಕ್ಷ, ಸುಸ್ಥಿರ ಮತ್ತು ಹಸಿರು ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸಲು ನೀತಿಯು ಉದ್ದೇಶಿಸಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ದತ್ತಾಂಶ ಕೇಂದ್ರದ ಅಗತ್ಯದ ಹೊರತಾಗಿ, ನಮಗೆ ಭಾರತ ಕೇಂದ್ರಿತ ಕ್ಲೌಡ್ ಪ್ರದೇಶದ ಅಗತ್ಯವಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಕೈಗಾರಿಕೆಗಳ ಕಲ್ಪನೆಗಳಿಗೆ ಮುಕ್ತವಾಗಿದೆ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ಬದಲಾವಣೆಗಳನ್ನು ಮಾಡಲು ಸಿದ್ಧವಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ದತ್ತಾಂಶ ಕೇಂದ್ರದ ಕರಡು ನೀತಿಯು 2027 ವೇಳೆಗೆ ಹೆಚ್ಚುವರಿಯಾಗಿ 2000 ಮೆ.ವ್ಯಾ ಸಾಮರ್ಥ್ಯದ ಸೇರ್ಪಡೆಯೊಂದಿಗೆ ದೇಶದಲ್ಲಿ ಯೋಜಿತ ದತ್ತಾಂಶ ಕೇಂದ್ರದ ಸಾಮರ್ಥ್ಯದ ಬೆಳವಣಿಗೆಯನ್ನು ವೇಗಗೊಳಿಸಲು ಉದ್ದೇಶಿಸಿದೆ ಎಂದು ಎಂ...ಟಿ.ವೈನ ಜಂಟಿ ಕಾರ್ಯದರ್ಶಿ ಶ್ರೀ ಅಮಿತೇಶ್ ಕುಮಾರ್ ಸಿನ್ಹಾ ಹೇಳಿದರು.

ಪ್ರಸ್ತುತ, ಭಾರತವು ದತ್ತಾಂಶ ಕೇಂದ್ರಗಳಿಗಾಗಿ ಸುಮಾರು 499 ಮೆ.ವ್ಯಾ ಸ್ಥಾಪಿತ ವಿದ್ಯುತ್ ಸಾಮರ್ಥ್ಯವನ್ನು ಹೊಂದಿದೆ ಮತ್ತು 2023 ವೇಳೆಗೆ 1007 ಮೆ.ವ್ಯಾ.ಗೆ ವೃದ್ಧಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

5 ಮೆ.ವ್ಯಾ ದತ್ತಾಂಶ ಕೇಂದ್ರ (ಐಟಿ ಮತ್ತು ಐಟಿಯೇತರ) ಸ್ಥಾಪನೆಗೆ ಘಟಕವಾರು ವೆಚ್ಚದ ವಿಂಗಡಣೆ ನಿರ್ಮಾಣಪೂರ್ವ, ನಿರ್ಮಾಣ ಮತ್ತು ನಿರ್ಮಾಣೋತ್ತರ ಹಂತಗಳಲ್ಲಿ ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯವಿರುವ ಯೋಜನೆಯ ಹಂತಗಳ ಜೊತೆಗೆ ಸಾಮಾನ್ಯ ಅನುಮೋದನೆಗಳ ಪಟ್ಟಿಗಳ ಬಗ್ಗೆಯೂ ಚರ್ಚಿಸಲಾಗಿದೆ.

ಸ್ಥಳೀಯ ಮೌಲ್ಯವರ್ಧನೆಗೆ ಪ್ರೋತ್ಸಾಹ ನೀಡುವುದೂ ಸೇರಿದಂತೆ ವಿವಿಧ ಸಲಹೆಗಳ ಬಗ್ಗೆ ಚರ್ಚಿಸಲಾಗಿದೆ. ಸುಮಾರು 300 ಉದ್ಯಮ ಪ್ರತಿನಿಧಿಗಳು ಭೌತಿಕ ಮತ್ತು ವರ್ಚುವಲ್ ವಿಧಾನಗಳಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದರು.

***



(Release ID: 1801104) Visitor Counter : 195