ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಪ್ರಧಾನ ಮಂತ್ರಿ ಮಕ್ಕಳ ಆರೈಕೆ (ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್) ಯೋಜನೆಯನ್ನು 2022ರ ಫೆಬ್ರವರಿ 28ರವರೆಗೆ ವಿಸ್ತರಿಸಲಾಗಿದೆ
Posted On:
22 FEB 2022 2:43PM by PIB Bengaluru
ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರಧಾನ ಮಂತ್ರಿ ಮಕ್ಕಳ ಆರೈಕೆ (ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್) ಯೋಜನೆಯನ್ನು 2022ರ ಫೆಬ್ರವರಿ 28ರವರೆಗೆ ವಿಸ್ತರಿಸಿದೆ. ಈ ಹಿಂದೆ ಈ ಯೋಜನೆಯು ಡಿಸೆಂಬರ್ 31, 2021 ರವರೆಗೆ ಮಾತ್ರ ಮಾನ್ಯವಾಗಿತ್ತು. ಈ ಸಂಬಂಧ ಅಗತ್ಯ ಕ್ರಮಕ್ಕಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗಳಿಗೆ ಪತ್ರ ಬರೆಯಲಾಗಿದ್ದು, ಎಲ್ಲಾ ಜಿಲ್ಲಾ ದಂಡಾಧಿಕಾರಿಗಳು/ಜಿಲ್ಲಾಧಿಕಾರಿಗಳಿಗೆ ಪತ್ರದ ಪ್ರತಿ ರವಾನಿಸಲಾಗಿದೆ. (ಪತ್ರವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ).
ʻಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ʼ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಎಲ್ಲಾ ಅರ್ಹ ಮಕ್ಕಳನ್ನು ಈಗ ಫೆಬ್ರವರಿ 28, 2022ರವರೆಗೆ ನೋಂದಾಯಿಸಬಹುದು. ಈ ಯೋಜನೆಯು: 11.03.2020ರಂದು ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಅನ್ನು ಸಾಂಕ್ರಾಮಿಕ ಎಂದು ಘೋಷಿಸಿದಂದಿನಿಂದ ಪ್ರಾರಂಭಿಸಿ 28.02.2022 ರವರೆಗಿನ ಅವಧಿಯಲ್ಲಿ ಕೋವಿಡ್ ಸಾಂಕ್ರಾಮಿಕದಲ್ಲಿ i) ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳು ಅಥವಾ ii) ಬದುಕುಳಿದ ಒಬ್ಬ ಪೋಷಕರನ್ನು ಕಳೆದುಕೊಂಡ ಮಕ್ಕಳು ಅಥವಾ iii) ಕಾನೂನುಬದ್ಧ ಪೋಷಕರು / ಇಬ್ಬರೂ ದತ್ತು ಪೋಷಕರು / ಬದುಕುಳಿದಿದ್ದ ಒಬ್ಬ ದತ್ತು ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ಒಳಗೊಂಡಿದೆ. ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಮಗುವು ಪೋಷಕರ ಮರಣದ ದಿನಾಂಕದಂದು 18 ವರ್ಷಗಳನ್ನು ಪೂರ್ಣಗೊಳಿಸಬಾರದು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಮೇ 29ರಂದು ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಹೆತ್ತವರಿಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ಸಮಗ್ರ ಬೆಂಬಲ ಘೋಷಿಸಿದ್ದರು. ಕೋವಿಡ್ ಸಾಂಕ್ರಾಮಿಕರೋಗದಿಂದ ತಮ್ಮ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಸಮಗ್ರ ಆರೈಕೆ ಮತ್ತು ರಕ್ಷಣೆಯನ್ನು ನಿರಂತರ ರೀತಿಯಲ್ಲಿ ಖಾತರಿಪಡಿಸಿ, ಆರೋಗ್ಯ ವಿಮೆಯ ಮೂಲಕ ಅವರ ಯೋಗಕ್ಷೇಮವನ್ನು ಸಕ್ರಿಯಗೊಳಿಸುವುದು, ಶಿಕ್ಷಣದ ಮೂಲಕ ಅವರನ್ನು ಸಶಕ್ತಗೊಳಿಸುವುದು ಮತ್ತು 23 ವರ್ಷಗಳನ್ನು ತಲುಪುವಾಗ ಆರ್ಥಿಕ ಬೆಂಬಲದೊಂದಿಗೆ ಸ್ವಾವಲಂಬಿ ಅಸ್ತಿತ್ವಕ್ಕೆ ಅವರನ್ನು ಸಜ್ಜುಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರಧಾನ ಮಂತ್ರಿ ಮಕ್ಕಳ ಆರೈಕೆ ಯೋಜನೆಯು ಸಮಗ್ರ ರೀತಿಯಲ್ಲಿ ಮಕ್ಕಳಿಗೆ ನೆರವು ಒದಗಿಸುತ್ತದೆ. ಶಿಕ್ಷಣ, ಆರೋಗ್ಯ ಅಗತ್ಯಗಳಿಗಾಗಿ 18 ವರ್ಷ ವಯಸ್ಸಿನಿಂದ ಮಾಸಿಕ ಸ್ಟೈಪೆಂಡ್ ಮತ್ತು 23 ವರ್ಷ ವಯಸ್ಸು ತುಂಬಿದ ಬಳಿಕ ಒಟ್ಟು ಮೊತ್ತ 10 ಲಕ್ಷ ರೂ. ನಗದು ಧನ ಸಹಾಯದ ಮೂಲಕ ಬೆಂಬಲವನ್ನು ಒದಗಿಸುತ್ತದೆ.
ಆನ್ ಲೈನ್ ಪೋರ್ಟಲ್ https://pmcaresforchildren.in ಮೂಲಕವೂ ಈ ಯೋಜನೆಯ ಮಾಹಿತಿ ಪಡೆಯಬಹುದು. 2022ರ ಫೆಬ್ರವರಿ 28ರವರೆಗೆ ಅರ್ಹ ಮಕ್ಕಳನ್ನು ಗುರುತಿಸಿ ಪೋರ್ಟಲ್‌ನಲ್ಲಿ ನೋಂದಾಯಿಸುವಂತೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ರಾಜ್ಯಗಳಿಗೆ ಈಗ ಸೂಚಿಸಲಾಗಿದೆ. ಈ ಯೋಜನೆಯಡಿ ಬೆಂಬಲಕ್ಕೆ ಅರ್ಹವಾದ ಮಗುವಿನ ಬಗ್ಗೆ ಯಾವುದೇ ನಾಗರಿಕರು ಪೋರ್ಟಲ್ ಮೂಲಕ ಆಡಳಿತಕ್ಕೆ ತಿಳಿಸಬಹುದು.
(ವಿವರವಾದ ಯೋಜನಾ ಮಾರ್ಗಸೂಚಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ)
***
(Release ID: 1800294)
Visitor Counter : 267
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam