ಗೃಹ ವ್ಯವಹಾರಗಳ ಸಚಿವಾಲಯ

2022-23 ರಿಂದ 2025-26ರ ಅವಧಿಯಲ್ಲಿ ಅಂತರ-ಕಾರ್ಯಸಾಧ್ಯ ಕ್ರಿಮಿನಲ್ ನ್ಯಾಯ ವ್ಯವಸ್ಥೆ (ಐಸಿಜೆಎಸ್) ಯೋಜನೆಯ ಅನುಷ್ಠಾನಕ್ಕೆ ಅನುಮೋದನೆ ನೀಡಿದ ಮೋದಿ ಸರಕಾರ


ಕೇಂದ್ರ ಗೃಹ ವ್ಯವಹಾರಗಳ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ʻಐಸಿಜೆಎಸ್ʼ ಯೋಜನೆಯ ಎರಡನೇ ಹಂತದ ಅನುಷ್ಠಾನವು ಪರಿಣಾಮಕಾರಿ ಮತ್ತು ಆಧುನಿಕ ಪೊಲೀಸಿಂಗ್ ವ್ಯವಸ್ಥೆ ಖಾತರಿಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ

ಕೇಂದ್ರ ವಲಯದ ಯೋಜನೆಯಾಗಿ ಒಟ್ಟು 3,375 ಕೋಟಿ ರೂ.ಗಳ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು

Posted On: 18 FEB 2022 1:06PM by PIB Bengaluru

2022-23ರಿಂದ 2025-26 ವರೆಗಿನ ಅವಧಿಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯದಿಂದ ಒಟ್ಟು 3,375 ಕೋಟಿ ರೂ.ಗಳ ವೆಚ್ಚದಲ್ಲಿ ಅಂತರ-ಕಾರ್ಯಾಸಾಧ್ಯ ಕ್ರಿಮಿನಲ್ ನ್ಯಾಯ ವ್ಯವಸ್ಥೆ (ಐಸಿಜೆಎಸ್) ಯೋಜನೆಯನ್ನು ಜಾರಿಗೆ ತರಲು ಮೋದಿ ಸರಕಾರ ಅನುಮೋದನೆ ನೀಡಿದೆಕೇಂದ್ರ ಗೃಹ ವ್ಯವಹಾರಗಳ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಐಸಿಜೆಎಸ್ ಯೋಜನೆಯ ಎರಡನೇ ಹಂತದ ಜಾರಿಯು ಪರಿಣಾಮಕಾರಿ ಮತ್ತು ಆಧುನಿಕ ಪೊಲೀಸಿಂಗ್ ಅನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ. ಯೋಜನೆಯನ್ನು ಕೇಂದ್ರ ವಲಯದ ಯೋಜನೆಯಾಗಿ ಜಾರಿಗೆ ತರಲಾಗುವುದು.

ಅತಿ ವೇಗದ ಸಂಪರ್ಕ ಹೊಂದಿರುವ ವಿಶೇಷ ಮತ್ತು ಸುರಕ್ಷಿತ ಕ್ಲೌಡ್ ಆಧಾರಿತ ಮೂಲಸೌಕರ್ಯದ ಮೂಲಕ ʻಐಸಿಜೆಎಸ್ʼ ವ್ಯವಸ್ಥೆಯನ್ನು ಲಭ್ಯವಾಗುವಂತೆ ಮಾಡಲಾಗುವುದು. ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಸಹಯೋಗದೊಂದಿಗೆ ಯೋಜನೆಯ ಅನುಷ್ಠಾನಕ್ಕೆ ʻರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋʼ (ಎನ್‌ಸಿಆರ್‌ಬಿ) ಹೊಣೆಯಾಗಿರುತ್ತದೆರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಯೋಜನೆಯನ್ನು ಜಾರಿಗೆ ತರಲಾಗುವುದು.

ಹಿನ್ನೆಲೆ

ʻಅಂತರ್-ಕಾರ್ಯಸಾಧ್ಯ ಕ್ರಿಮಿನಲ್ ನ್ಯಾಯ ವ್ಯವಸ್ಥೆʼಯು (ಐಸಿಜೆಎಸ್) ದೇಶದಲ್ಲಿ ಐದು ಸ್ತಂಭಗಳ ಮೂಲಕ ಕ್ರಿಮಿನಲ್ ನ್ಯಾಯವನ್ನು ತಲುಪಿಸಲು ಬಳಸಲಾಗುವ ಪ್ರಮುಖ ಐಟಿ ವ್ಯವಸ್ಥೆಯನ್ನು ಸಂಯೋಜಿಸಲು ಅನುವು ಮಾಡಿಕೊಡುವ ಒಂದು ರಾಷ್ಟ್ರೀಯ ವೇದಿಕೆಯಾಗಿದೆ. ಅಂತಹ ಐದು ಸ್ತಂಭಗಳೆಂದರೆ,

  1. ಪೊಲೀಸ್ (ಅಪರಾಧ ಮತ್ತು ಕ್ರಿಮಿನಲ್ ನಿಗಾ ಮತ್ತು ಸಂಪರ್ಕಜಾಲ ವ್ಯವಸ್ಥೆ),
  2. ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ -ಫೋರೆನ್ಸಿಕ್,
  3. ನ್ಯಾಯಾಲಯಗಳಿಗೆ -ನ್ಯಾಯಾಲಯಗಳು,
  4. ಸರ್ಕಾರಿ ಅಭಿಯೋಜಕರಿಗೆ -ಪ್ರಾಸಿಕ್ಯೂಷನ್
  5. ಕಾರಾಗೃಹಗಳಿಗೆ -ಕಾರಾಗೃಹಗಳು.

ʻಐಸಿಜೆಎಸ್ʼ ಯೋಜನೆಯ ಮೊದಲ ಹಂತದಲ್ಲಿ, ವೈಯಕ್ತಿಕ ಐಟಿ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ ಮತ್ತು ಸ್ಥಿರಗೊಳಿಸಲಾಗಿದೆ; ವ್ಯವಸ್ಥೆಗಳಲ್ಲಿ ದಾಖಲೆಗಳ ಹುಡುಕಾಟವನ್ನು ಸಹ ಸಕ್ರಿಯಗೊಳಿಸಲಾಗಿದೆ.

ಎರಡನೇ ಹಂತದ ಅಡಿಯಲ್ಲಿ, ವ್ಯವಸ್ಥೆಯನ್ನು 'ಒಂದು ಡೇಟಾ ಒಂದು ಪ್ರವೇಶ' ತತ್ವದ ಮೇಲೆ ನಿರ್ಮಿಸಲಾಗುತ್ತಿದೆ, ಮೂಲಕ ದತ್ತಾಂಶವನ್ನು ಒಂದು ಸ್ತಂಭದಲ್ಲಿ ಒಮ್ಮೆ ಮಾತ್ರ ನಮೂದಿಸಲಾಗುತ್ತದೆ ಮತ್ತು ಪ್ರತಿ ಸ್ತಂಭದಲ್ಲಿ ಡೇಟಾವನ್ನು ಮರು ನಮೂದಿಸುವ ಅಗತ್ಯವಿಲ್ಲದೆ ಇತರ ಎಲ್ಲಾ ಸ್ತಂಭಗಳಲ್ಲಿ ಅದು ಲಭ್ಯವಾಗಲಿದೆ.

***



(Release ID: 1799285) Visitor Counter : 184