ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

2024, 2028ರ ಒಲಿಂಪಿಕ್ಸ್‌ ಸಿದ್ಧತೆಗಾಗಿ 398 ತರಬೇತುದಾರರು, ಸಹಾಯಕ ತರಬೇತುದಾರರನ್ನು ನೇಮಿಸಿದ ಸಾಯ್‌; ನೇಮಕಗೊಂಡವರಲ್ಲಿ ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು, ಅರ್ಜುನ ಪ್ರಶಸ್ತಿ ವಿಜೇತರು ಸೇರಿದ್ದಾರೆ

Posted On: 16 FEB 2022 5:10PM by PIB Bengaluru

ಭಾರತದ ಕೋಚಿಂಗ್‌ ಬೆನ್ನೆಲುಬನ್ನು ಬಲಪಡಿಸುವ ಮಹತ್ವದ ಹೆಜ್ಜೆಯ ಭಾಗವಾಗಿ, ಭಾರತ ಸರ್ಕಾರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾ¿ಯ), 21 ವಿಭಾಗಗಳಲ್ಲಿ ವಿವಿಧ ಹಂತಗಳಲ್ಲಿ 398 ತರಬೇತುದಾರರಿಗೆ ಉದ್ಯೋಗದ ಕೊಡುಗೆಗಳನ್ನು ವಿಸ್ತರಿಸಿದೆ. ಒಟ್ಟು 398 ಮಂದಿಯಲ್ಲಿ ಅನೇಕರು ಮಾಜಿ-ಅಂತಾರಾಷ್ಟ್ರೀಯ ಕ್ರೀಡಾಪಟುಗಳು, ವಿಶ್ವ ಚಾಂಪಿಯನ್‌ಷಿಪ್‌ಗಳು ಮತ್ತು ಒಲಿಂಪಿಕ್ಸ್‌ನಂತಹ ಪ್ರಮುಖ ಕೂಟಗಳಲ್ಲಿ ಸ್ಪರ್ಧಿಸಿರುವ ಅಥವಾ ಪದಕಗಳನ್ನು ಗೆದ್ದಿರುವ ಅರ್ಜುನ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ. ಒಟ್ಟು 398 ಉದ್ಯೋಗಿಗಳ ಪೈಕಿ 101 ತರಬೇತುದಾರರು ಪಿಎಸ್‌ಯುಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳಿಂದ ಪ್ರತಿ ನಿಯೋಜನೆಯಲ್ಲಿ ಸೇರುತ್ತಿದ್ದಾರೆ.

 2024, 2028 ರ ಒಲಿಂಪಿಕ್‌ ಸೇರಿದಂತೆ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸಜ್ಜಾಗುತ್ತಿರುವಾಗ ಕ್ರೀಡಾಪಟುಗಳಿಗೆ 360 ಡಿಗ್ರಿ (ಪೂರ್ಣ ಪ್ರಮಾಣದ) ಬೆಂಬಲವನ್ನು ಒದಗಿಸಲು ಕ್ರೀಡಾ ಯುವ ವ್ಯವಹಾರಗಳ ಸಚಿವಾಲಯದ ಪ್ರಯತ್ನದ ಭಾಗವಾಗಿ ಈ ನೇಮಕಾತಿ ಮಾಡಲಾಗಿದೆ. ಅತ್ಯುನ್ನತ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಪದಕಗಳನ್ನು ಗೆದ್ದ ಕ್ರೀಡಾಪಟುಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಮತ್ತು ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್‌ ಸಿಂಗ್‌ ಠಾಕೂರ್‌ ಹೇಳಿದರು. ಅಲ್ಲದೆ, ಅವರ (ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು) ವ್ಯವಸ್ಥೆಯಲ್ಲಿ ಸೇರ್ಪಡೆಯಾಗುವುದರಿಂದ ಕ್ರೀಡಾಪಟುಗಳಿಗೆ ತರಬೇತಿ ನೀಡುವುದರ ಜೊತೆಗೆ, ವಿಶ್ವ ಹಂತದಲ್ಲಿ ಸ್ಪರ್ಧಿಸುವಾಗ ಯಶಸ್ಸಿಗೆ ಪ್ರಮುಖವಾದ ಮಾನಸಿಕ ಸದೃಢತೆಯ ತರಬೇತಿ ನೀಡಲು ಸಾಧ್ಯವಾಗುತ್ತದೆ,’’ ಎಂದಿದ್ದಾರೆ.

ತರಬೇತುದಾರರು ಮತ್ತು ಸಹಾಯಕ ತರಬೇತುದಾರರ ಹೊಸ ತಂಡವು ಪ್ರಮುಖ ಹೆಸರುಗಳನ್ನು ಒಳಗೊಂಡಿದೆ. ರೋಯಿಂಗ್‌ ಕೋಚ್‌ ಆಗಿ ಸೇರ್ಪಡೆಯಾಗಿರುವ ಏಷ್ಯನ್‌ ಗೇಮ್ಸ್‌ನ ಚಿನ್ನದ ಪದಕ ವಿಜೇತ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಬಜರಂಗ್‌ ಲಾಲ್‌ ಠಾಕರ್‌, ಕುಸ್ತಿ ವಿಭಾಗದಲ್ಲಿ ಸಹಾಯಕ ಕೋಚ್‌ ಆಗಿ ನೇಮಕಗೊಂಡಿರುವ 2011ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಗೆದ್ದಿರುವ ಶಿಲ್ಪಿ ಶೆರಾನ್‌, ಅಥ್ಲೆಟಿಕ್ಸ್‌ ತರಬೇತುದಾರರಾಗಿ ನೇಮಕಗೊಂಡಿರುವ ಒಲಿಂಪಿಯನ್‌ ಜಿನ್ಸಿ ಫಿಲಿಪ್‌, ಬಾಕ್ಸಿಂಗ್‌ ತರಬೇತುದಾರರಾಗಿ ಸೇರುವ ಪ್ರಮುಖ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಹಲವು ಪದಕ ಗೆದ್ದಿರುವ ಪ್ರಣಮಿಕಾ ಬೋರಾ ಹೊಸ ತಂಡದಲ್ಲಿರುವ ಪ್ರಮುಖರೆನಿಸಿದ್ದಾರೆ.

ಹೊಸ ನಿಯೋಜನೆಯಲ್ಲಿ ಏನನ್ನು ಎದುರು ನೋಡಲಾಗುತ್ತಿದೆ ಎಂಬುದರ ಕುರಿತು ಪ್ರತಿಕ್ರಿಯಿಸಿರುವ ಅರ್ಜುನ ಪ್ರಶಸ್ತಿ ಪುರಸ್ಕೃತ ಬಜರಂಗ್‌ ಲಾಲ್‌ ಠಾಕರ್‌ ಅವರು, ‘‘ದೇಶದಲ್ಲಿ ಜಲ ಕ್ರೀಡೆಗಳು ನಡೆಯುತ್ತಿರುವ ಈ ಸಮಯದಲ್ಲಿ ಕೋಚ್‌ ಆಗಿ ಕ್ರೀಡೆಗೆ ಮರಳಲು ನನಗೆ ಅವಕಾಶ ನೀಡಿದ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಆಭಾರಿಯಾಗಿದ್ದೇನೆ. ಭಾರತಕ್ಕೆ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರಭಾವ ಬೀರಲು ಉತ್ತಮ ಅವಕಾಶವಿದೆ. ನಾನು ಏಷ್ಯನ್‌ ಗೇಮ್ಸ್‌ಗಾಗಿ ತಂಡಕ್ಕೆ ತರಬೇತಿ ನೀಡುತ್ತಿದ್ದೇನೆ ಮತ್ತು ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲಿ ಗರಿಷ್ಠ ಸಂಖ್ಯೆಯ ವಿಭಾಗಗಳಲ್ಲಿ ಕ್ರೀಡಾಪಟುಗಳನ್ನು ಕಣಕ್ಕಿಳಿಸುವ ಮೂಲಕ ನಾವು ದೇಶಗಳ ಪದಕ ಪಟ್ಟಿಗೆ ಸೇರಿಸಲು ಸಾಧ್ಯವಾಗುತ್ತದೆ ಎಂದು ನನಗೆ ವಿಶ್ವಾಸವಿದೆ,’’ ಎಂದರು. ಜತೆಗೆ ಆಟಗಳು. ಜಲ ಕ್ರೀಡೆಗಳ ತರಬೇತಿಗಾಗಿ ವಿಶ್ವ ದರ್ಜೆಯ ಮೂಲಸೌಕರ್ಯ ಹೊಂದಿರುವ ಜಗತ್ಪುರ ಮತ್ತು ಅಲೆಪ್ಪಿಯಲ್ಲಿರುವ ಸಾಯ್‌ಯ ರಾಷ್ಟ್ರೀಯ ಶ್ರೇಷ್ಠತೆಯ ಕೇಂದ್ರಗಳೊಂದಿಗೆ ಭಾರತದಲ್ಲಿ ಜಲ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ಲಭಿಸಿದೆ ಎಂದು ಥಾಕರ್‌ ಹೇಳಿದರು.

ಹುದ್ದೆಗಳಿಗೆ ಆಯ್ಕೆಯಾದವರಲ್ಲಿ ನಾಲ್ವರು ಅರ್ಜುನ ಪ್ರಶಸ್ತಿ ಪುರಸ್ಕೃತರು, ಒಬ್ಬರು ಧ್ಯಾನಚಂದ್‌ ಪ್ರಶಸ್ತಿ ಪುರಸ್ಕೃತರು ಮತ್ತು ಮತ್ತೊಬ್ಬರು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರು ಇದ್ದಾರೆ. ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳಲ್ಲದೆ, ಎನ್‌ಎಸ್‌ಎನ್‌ಐಎಸ್‌ ಪಟಿಯಾಲಾ ಅಥವಾ ಮಾನ್ಯತೆ ಪಡೆದ ಭಾರತೀಯ ಅಥವಾ ವಿದೇಶಿ ವಿಶ್ವವಿದ್ಯಾನಿಲಯದಿಂದ ಕ್ರೀಡಾ ತರಬೇತಿಯಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದವರನ್ನು ಸಹ ಸೇರ್ಪಡೆಗೊಳಿಸಲಾಗಿದೆ. ಈ ಹಿಂದೆ ಒಪ್ಪಂದದಲ್ಲಿದ್ದ ಹಾಗೂ ಈಗ ಒಪ್ಪಂದ ಕೊನೆಗೊಂಡಿರುವ ಹಲವಾರು ಸಾಯ್‌ ತರಬೇತುದಾರರನ್ನು ಅರ್ಹತೆಗೆ ಅನುಗುಣವಾಗಿ ಸೇವೆಗೆ ಮರಳಿ ನೇಮಕ ಮಾಡಿಕೊಳ್ಳಲಾಗಿದೆ.

***


(Release ID: 1798879) Visitor Counter : 224