ಸಂಸ್ಕೃತಿ ಸಚಿವಾಲಯ

ಸಂಸ್ಕೃತಿ ಸಚಿವಾಲಯದಿಂದ ಇದೇ ಮೊದಲ ಬಾರಿಗೆ ಫೆಬ್ರವರಿ 15 ರಿಂದ 16ರವರೆಗೆ ‘ಭಾರತದಲ್ಲಿನ ವಸ್ತುಸಂಗ್ರಹಾಲಯಗಳನ್ನು ಮರುರೂಪಿಸುವುದು” ಕುರಿತು ಜಾಗತಿಕ ಶೃಂಗಸಭೆ ಆಯೋಜನೆ


ಕೇಂದ್ರ ಸಂಸ್ಕೃತಿ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರಿಂದ ಶೃಂಗಸಭೆ ಉದ್ಘಾಟನೆ

ಭಾರತದ ವಸ್ತು ಸಂಗ್ರಹಾಲಯಗಳ ಅಭಿವೃದ್ಧಿಗೆ ಅತ್ಯುತ್ತಮ ವಿಧಾನಗಳು ಮತ್ತು ಕಾರ್ಯತಂತ್ರಗಳಿಗೆ ಒತ್ತು ನೀಡುವುದು ಇದರ ಉದ್ದೇಶ

Posted On: 08 FEB 2022 2:45PM by PIB Bengaluru

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ಇದೇ  ಮೊದಲ ಬಾರಿಗೆ 2022 ಫೆಬ್ರವರಿ 15 ಮತ್ತು 16ರಂದುಭಾರತದಲ್ಲಿನ ವಸ್ತುಸಂಗ್ರಹಾಲಯಗಳನ್ನು ಮರುರೂಪಿಸುವುದುಕುರಿತಂತೆ ಎರಡು ದಿನಗಳ ಜಾಗತಿಕ ಶೃಂಗಸಭೆಯನ್ನು ಆಯೋಜಿಸಲಾಗಿದೆ.

ಭಾರತದ ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕೋತ್ಸವದ ಮತ್ತು  ಅದರ ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸದ ಸಂಭ್ರಮಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಆಜಾದಿ ಕಾ ಅಮೃತ ಮಹೋತ್ಸವ ಮಹತ್ವಾಕಾಂಕ್ಷೆ ಕಾರ್ಯಕ್ರಮದಡಿ ಶೃಂಗಸಭೆಯನ್ನು ಆಯೋಜಿಸಿದೆ.

ಜಾಗತಿಕ ಶೃಂಗಸಭೆ ಮ್ಯೂಸಿಯಂಗಳ ಅಭಿವೃದ್ಧಿ ಮತ್ತು ನಿರ್ವಹಣೆ ವಲಯದಲ್ಲಿ  ಭಾರತ ಮತ್ತು ಜಗತ್ತಿನಾದ್ಯಂತ ಇರುವ ಉತ್ತಮ ಪದ್ಧತಿಗಳು ಹಾಗೂ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ತಜ್ಞರು ಹಾಗೂ ಕ್ಷೇತ್ರ ಪರಿಣತರು ಮತ್ತು ವೃತ್ತಿಪರರನ್ನು ಒಗ್ಗೂಡಿಸಲಿದೆ. ಶೃಂಗಸಭೆಯನ್ನು ಬ್ಲೂಮ್ ಬರ್ಗ್ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.

25 ವಸ್ತುಸಂಗ್ರಹಾಲಯ ತಜ್ಞರು ಹಾಗೂ ಮ್ಯೂಸಿಯಂ ವೃತ್ತಿಪರರು ವಸ್ತುಸಂಗ್ರಹಾಲಯದಲ್ಲಿನ ವಿಧಾನಗಳನ್ನು ಮತ್ತು ಆದ್ಯತೆಗಳನ್ನು ಮರು ರೂಪಿಸಲಿದ್ದಾರೆ. ಜ್ಞಾನ ವಿನಿಮಯದ ಫಲಿತಾಂಶದಲ್ಲಿ ಹೊಸ ವಸ್ತುಸಂಗ್ರಹಾಲಯಗಳ ಅಭಿವೃದ್ಧಿಗೆ ನೀಲನಕ್ಷೆಯನ್ನು ರೂಪಿಸುವುದು, ನವೀಕರಣ ನೀತಿಯ ಸ್ವರೂಪ ಮತ್ತು ಭಾರತದಲ್ಲಿ ಹಾಲಿ ಇರುವ ಮ್ಯೂಸಿಯಂಗಳನ್ನು ಮರು ವಿನ್ಯಾಸಗೊಳಿಸುವುದು ಸೇರಿದೆ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತ ಸರ್ಕಾರದ ಸಂಸ್ಕೃತಿ ಸಚಿವ ಶ್ರೀ ಜಿ.ಕಿಶನ್ ರೆಡ್ಡಿ ಅವರು ಶೃಂಗಸಭೆಯಲ್ಲಿ ಉದ್ಘಾಟಿಸಲಿದ್ದಾರೆ. ಶೃಂಗಸಭೆಯ ಕುರಿತು ಮಾತನಾಡಿದ ಅವರು, “ಮಾನವ ನಾಗರಿಕತೆಯ ಉದಯದಿಂದಲೂ  ಭಾರತವು ಶ್ರೀಮಂತ ಸಂಸ್ಕೃತಿ ಪರಂಪರೆಯ ತವರೂರಾಗಿದೆ. ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನಾವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು, ರಕ್ಷಿಸಲು  ಮತ್ತು ಶಾಶ್ವತಗೊಳಿಸಲು  ನಮ್ಮ ಗಮನ ಮತ್ತು ಸಮರ್ಪಣೆಯನ್ನು ನವೀಕರಿಸಲು ಹೆಮ್ಮೆಪಡುತ್ತೇವೆ. ಭಾರತದಲ್ಲಿ ಒಂದು ಸಾವಿರಕ್ಕೂ ಅಧಿಕ ವಸ್ತುಸಂಗ್ರಹಾಲಯಗಳು ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ಮತ್ತು ಸಂರಕ್ಷಿಸಲು ಮಾತ್ರವಲ್ಲದೆ, ಭವಿಷ್ಯದ ಪೀಳಿಗೆಗೆ ಶಿಕ್ಷಣವನ್ನು ನೀಡಲು ಸಹಕಾರಿಯಾಗಿದೆಎಂದು ಹೇಳಿದರು

ಸಂಸ್ಕೃತಿ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಅವರು, ಮಾತನಾಡಿ, “ಭಾರತದಲ್ಲಿನ ವಸ್ತುಸಂಗ್ರಹಾಲಯಗಳನ್ನು ಮರುರೂಪಿಸುವ ಜಾಗತಿಕ ಶೃಂಗಸಭೆಯ ಮೂಲಕ ಸಂಸ್ಕೃತಿ ಸಚಿವಾಲಯವು ಭಾರತದಲ್ಲಿನ ಮೂಸಿಯಂಗಳ ಅಭಿವೃದ್ಧಿಪಡಿಸುವ ಅತ್ಯುತ್ತಮ ವಿಧಾನವನ್ನು ಅರ್ಥೈಸಿಕೊಳ್ಳಲು ಜಾಗತಿಕ ಚಿಂತನಾ ನಾಯಕರನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ. ಭಾರತೀಯ ಮತ್ತು ಜಾಗತಿಕ ಮ್ಯೂಸಿಯಂಗಳ ನಡುವೆ ಕಾರ್ಯತಂತ್ರ ಪಾಲುದಾರಿಕೆಯನ್ನು ರೂಪಿಸುತ್ತದೆ ಮತ್ತು ಭಾರತೀಯ ಮ್ಯೂಸಿಯಂಗಳನ್ನು  ನಿಜವಾಗಿಯೂ ವಿಶ್ವದರ್ಜೆಯನ್ನಾಗಿ ಮಾಡಲು ನವೀಕೃತ ಮಾಸ್ಟರ್ ಪ್ಲಾನ್ ರೂಪಿಸಲು ಸಹಕಾರಿಯಾಗುತ್ತದೆಎಂದರು.

ಆನ್ ಲೈನ್ ಶೃಂಗಸಭೆ 4 ವಿಸ್ತೃತ ವಿಷಯಗಳನ್ನು ಒಳಗೊಂಡಿರುತ್ತದೆ: ವಾಸ್ತುಶಿಲ್ಪ ಮತ್ತು ಕ್ರಿಯಾತ್ಮಕ ಅಗತ್ಯತೆಗಳು; ನಿರ್ವಹಣೆ; ಸಂಗ್ರಹಣೆಗಳು (ಕ್ಯುರೇಷನ್ ಮತ್ತು ಸಂರಕ್ಷಣಾ ಪದ್ಧತಿಗಳು) ಸೇರಿದಂತೆ ಶಿಕ್ಷಣ ಹಾಗೂ ಶ್ರೋತೃಗಳ ಪಾಲ್ಗೊಳ್ಳುವಿಕೆ.

ಎರಡು ದಿನಗಳ ಕಾಲ ಆನ್ ಲೈನ್ ನಲ್ಲಿ ಶೃಂಗಸಭೆ ನಡೆಯಲಿದೆ ಮತ್ತು ಇದರಲ್ಲಿ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದುಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ https://www.reimaginingmuseumsinindia.com/    

ದಯವಿಟ್ಟು ಹೆಚ್ಚಿನ ವಿವರಗಳಿಗೆ ಹ್ಯಾಶ್ ಟ್ಯಾಗ್ hashtag #MuseumsReimagined ಅನ್ನು ಅನುಕರಿಸಿ.

***



(Release ID: 1796527) Visitor Counter : 213