ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಫೆಬ್ರವರಿ 5 ರಂದು ಹೈದರಾಬಾದ್‌ಗೆ ಭೇಟಿ ನೀಡಲಿದ್ದಾರೆ


11ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಿ

ICRISATನ 50ನೇ ವಾರ್ಷಿಕೋತ್ಸವದ ಆಚರಣೆಗೆ ಚಾಲನೆ ನೀಡಲಿರುವ ಪ್ರಧಾನಿ ಎರಡು ಸಂಶೋಧನಾ ಸೌಲಭ್ಯಗಳಿಗೆ ಚಾಲನೆ ನೀಡುವರು

Posted On: 03 FEB 2022 3:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಫೆಬ್ರವರಿ 5 ರಂದು ಹೈದರಾಬಾದ್‌ಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2:45ರ ಸುಮಾರಿಗೆ ಪ್ರಧಾನಮಂತ್ರಿ ಅವರು ಹೈದರಾಬಾದ್‌ನ ಪಟಂಚೇರುನಲ್ಲಿರುವ ಅರೆ-ಶುಷ್ಕ ಉಷ್ಣವಲಯದ (ICRISAT) ಕ್ಯಾಂಪಸ್‌ -ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಲಿದ್ದಾರೆ ಮತ್ತು ICRISAT-ಇಕ್ರಿಸ್ಯಾಟ್ ನ 50ನೇ ವಾರ್ಷಿಕೋತ್ಸವದ ಆಚರಣೆಗೆ ಚಾಲನೆ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಪ್ರಧಾನಿಯವರು ಹೈದರಾಬಾದ್‌ನಲ್ಲಿ 'ಸಮಾನತೆಯ ಪ್ರತಿಮೆ'ಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

216 ಅಡಿ ಎತ್ತರದ ಸಮಾನತೆಯ ಪ್ರತಿಮೆಯನ್ನು 11ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ ಅನಾವರಣಗೊಳಿಸಲಾಗುವುದು. ರಾಮಾನುಜಾಚಾರ್ಯರು, ನಂಬಿಕೆ, ಜಾತಿ ಮತ್ತು ಪಂಥ ಸೇರಿದಂತೆ ಜೀವನದ ಎಲ್ಲಾ ಅಂಶಗಳಲ್ಲಿ ಸಮಾನತೆಯ ಕಲ್ಪನೆಯನ್ನು ಪ್ರಚಾರ ಮಾಡಿದರು. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವು- ಐದು ಲೋಹಗಳ ಸಂಯೋಜನೆಯ 'ಪಂಚಲೋಹ'ದಿಂದ ಈ ಪುತ್ಥಳಿಯನ್ನು ಮಾಡಲಾಗಿದೆ ಮತ್ತು ಇದು ವಿಶ್ವದ ಅತ್ಯಂತ ಎತ್ತರದ ಲೋಹದ ಪ್ರತಿಮೆಗಳಲ್ಲಿ ಒಂದಾಗಿದೆ. ಇದನ್ನು 54 ಅಡಿ ಎತ್ತರದ ಕಟ್ಟಡದ ಮೇಲೆ ಸ್ಥಾಪಿಸಲಾಗಿದೆ, ಇದನ್ನು 'ಭದ್ರ ವೇದಿಕೆ' ಎಂದು ಹೆಸರಿಸಲಾಗಿದೆ, ಇದು ವೈದಿಕ ಡಿಜಿಟಲ್ ಲೈಬ್ರರಿ ಮತ್ತು ಸಂಶೋಧನಾ ಕೇಂದ್ರ, ಪ್ರಾಚೀನ ಭಾರತೀಯ ಪಠ್ಯಗಳು, ರಂಗಮಂದಿರ, ಶ್ರೀ ರಾಮಾನುಜಾಚಾರ್ಯರ ಕೃತಿಗಳನ್ನು ವಿವರಿಸುವ ಶೈಕ್ಷಣಿಕ ಗ್ಯಾಲರಿಗಾಗಿ ಮೀಸಲಾದ ಮಹಡಿಗಳನ್ನು ಹೊಂದಿದೆ. ಈ ಪ್ರತಿಮೆಯನ್ನು ಶ್ರೀ ರಾಮಾನುಜಾಚಾರ್ಯ ಆಶ್ರಮದ ಶ್ರೀ ಚಿನ್ನಜೀಯರ್ ಸ್ವಾಮಿಗಳು ಪರಿಕಲ್ಪನೆ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಶ್ರೀ ರಾಮಾನುಜಾಚಾರ್ಯರ ಜೀವನ ಗಾಥೆ ಮತ್ತು ಬೋಧನೆ ಕುರಿತು 3ಡಿ ಪ್ರಸ್ತುತಿ ಮ್ಯಾಪಿಂಗ್ ಸಹ ಪ್ರದರ್ಶಿಸಲಾಗುವುದು. ಸಮಾನತೆಯ ಪ್ರತಿಮೆಯನ್ನು ಸುತ್ತುವರಿದಿರುವ 108 ದಿವ್ಯ ದೇಶಗಳ (ಅಲಂಕೃತವಾಗಿ ಕೆತ್ತಿದ ದೇವಾಲಯಗಳು) ಒಂದೇ ರೀತಿಯ ಮನರಂಜನಾ ಸ್ಥಳಗಳಿಗೂ ಪ್ರಧಾನ ಮಂತ್ರಿ ಭೇಟಿ ನೀಡಲಿದ್ದಾರೆ.

ಶ್ರೀ ರಾಮಾನುಜಾಚಾರ್ಯರು ರಾಷ್ಟ್ರೀಯತೆ, ಲಿಂಗ, ಜನಾಂಗ, ಜಾತಿ ಅಥವಾ ಪಂಥವನ್ನು ಲೆಕ್ಕಿಸದೆ ಪ್ರತಿಯೊಬ್ಬ ಮಾನವ ಸಮಾನತೆಯ ಮನೋಭಾವದಿಂದ ಜನರ ಉನ್ನತಿಗಾಗಿ ಅವಿರತವಾಗಿ ಶ್ರಮಿಸಿದರು. ಸಮಾನತೆಯ ಪ್ರತಿಮೆಯ ಅನಾವರಣವು 12 ದಿನಗಳ ಶ್ರೀ ರಾಮಾನುಜ ಸಹಸ್ರಾಬ್ದಿ ಸಮಾರೋಹಮ್, ಶ್ರೀ ರಾಮಾನುಜಾಚಾರ್ಯರ 1000ನೇ ಜನ್ಮ ವಾರ್ಷಿಕೋತ್ಸವದ ಒಂದು ಭಾಗವಾಗಿದೆ.

ಇದಕ್ಕೂ ಮುನ್ನ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ICRISATನ 50ನೇ ವಾರ್ಷಿಕೋತ್ಸವದ ಆಚರಣೆಗೆ ಚಾಲನೆ ನೀಡಲಿದ್ದಾರೆ. ಪ್ರಧಾನಮಂತ್ರಿ ಅವರು ICRISAT ನ ಹವಾಮಾನ ಬದಲಾವಣೆ ಸಂಶೋಧನಾ ಸೌಲಭ್ಯವನ್ನು ಸಸ್ಯ ಸಂರಕ್ಷಣೆ ಮತ್ತು ICRISATನ ರಾಪಿಡ್ ಜನರೇಷನ್ ಅಡ್ವಾನ್ಸ್‌ಮೆಂಟ್ ಫೆಸಿಲಿಟಿಯನ್ನು ಉದ್ಘಾಟಿಸಲಿದ್ದಾರೆ. ಈ ಎರಡು ಸೌಲಭ್ಯಗಳನ್ನು ಏಷ್ಯಾ ಮತ್ತು ಉಪ-ಸಹಾರಾನ್ ಆಫ್ರಿಕಾದ ಸಣ್ಣ ಹಿಡುವಳಿದಾರ ರೈತರಿಗೆ ಸಮರ್ಪಿಸಲಾಗಿದೆ. ಪ್ರಧಾನಮಂತ್ರಿ ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ ICRISAT ಲಾಂಛನವನ್ನು ಅನಾವರಣಗೊಳಿಸಲಿದ್ದಾರೆ ಮತ್ತು ಇದೇ ಕಾರ್ಯಕ್ರಮದಲ್ಲಿ ಇದರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವರು.

ICRISAT ಏಷ್ಯಾ ಮತ್ತು ಉಪ-ಸಹಾರಾನ್ ಆಫ್ರಿಕಾದಲ್ಲಿ ಅಭಿವೃದ್ಧಿಗಾಗಿ ಕೃಷಿ ಸಂಶೋಧನೆ ನಡೆಸುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಇದು ಸುಧಾರಿತ ಬೆಳೆ ಪ್ರಭೇದಗಳು ಮತ್ತು ಮಿಶ್ರತಳಿಗಳನ್ನು ಒದಗಿಸುವ ಮೂಲಕ ರೈತರಿಗೆ ಸಹಕಾರಿಯಾಗಿದೆ ಮತ್ತು ಒಣಭೂಮಿ ಸಣ್ಣ ಹಿಡುವಳಿದಾರ ರೈತರಿಗೆ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ನೆರವಾಗುತ್ತದೆ.

***



(Release ID: 1795931) Visitor Counter : 196