ಹಣಕಾಸು ಸಚಿವಾಲಯ
azadi ka amrit mahotsav

2022-23ರ ಸಾಲಿನಿಂದ ಡಿಜಿಟಲ್ ರುಪಿ ಆರಂಭಿಸಲಿರುವ ಆರ್.ಬಿ.ಐ


ದತ್ತಾಂಶ ಕೇಂದ್ರಗಳು ಮತ್ತು ಶಕ್ತಿ ಸಂಗ್ರಹಣಾ ಕೇಂದ್ರಗಳು, ಮೂಲಭೂತ ಸೌಲಭ್ಯಗಳು ಸುಸಂಗತ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು

ವೆಂಚರ್ ಕ್ಯಾಪಿಟಲ್ ಮತ್ತು ಪ್ರೈವೈಟ್ ಇಕ್ವಿಟಿ ಇನ್ವೆಸ್ಟ್ ಮೆಂಟ್ ಪ್ರಮಾಣ ಅಳೆಯಲು ತಜ್ಞರ ಸಮಿತಿ ರಚನೆ

ಕಳೆದ ವರ್ಷ ವೆಂಚರ್ ಕ್ಯಾಪಿಟಲ್ ಮತ್ತು ಪ್ರೈವೆಟ್ ಇಕ್ವಿಟಿ ವಲಯದಲ್ಲಿ 5.5 ಲಕ್ಷ ಕೋಟಿ ರೂಪಾಯಿ ಹೂಡಿಕೆ

ಉದಯೋನ್ಮುಖ ವಲಯಗಳನ್ನು ಉತ್ತೇಜಿಸಲು ಖಾಸಗಿ ನಿಧಿ ನಿರ್ವಹಣಾಗಾರರಿಂದ ವಿಷಯಾಧಾರಿತವಾಗಿ ಸಂಯೋಜಿತ ಹಣಕಾಸು ವ್ಯವಸ್ಥೆ

ಯೋಜನೆಗಳಿಂದ ಆರ್ಥಿಕ ಸಾಮರ್ಥ್ಯ ವೃದ್ಧಿಸಲು ಬಹು-ಪಕ್ಷೀಯ ಸಂಸ್ಥೆಗಳಿಂದ ತಾಂತ್ರಿಕ ಮತ್ತು ಜ್ಞಾನದ ನೆರವು

Posted On: 01 FEB 2022 1:01PM by PIB Bengaluru

ಬ್ಲಾಕ್ ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್ ರುಪಿಯನ್ನು ಪರಿಚಯಿಸುವುದಾಗಿ ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದನ್ನು 2022-23 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ ಎಂದರು. ಸಂಸತ್ತಿನಲ್ಲಿಂದು 2022-23 ರ ಕೇಂದ್ರ ಬಜೆಟ್ ಮಂಡಿಸಿದ ಅವರು, ಕೇಂದ್ರೀಯ ಡಿಜಿಟಲ್ ಕರೆನ್ಸಿ [ಸಿ.ಬಿ.ಡಿ.ಸಿ] ಯನ್ನು ಪರಿಚಯಿಸುತ್ತಿದ್ದು, ಇದರಿಂದ ಡಿಜಿಟಲ್ ಆರ್ಥಿಕತೆಗೆ ಪುಷ್ಟಿ ದೊರೆಯಲಿದೆ. ಡಿಜಿಟಲ್ ಕರೆನ್ಸಿ ಹೆಚ್ಚು ಸಮರ್ಥವಾಗಿದೆ ಮತ್ತು ಕೆರೆನ್ಸಿ ನಿರ್ವಹಣೆ ಕೂಡ ಸುಲಭವಾಗಿದೆ.ಎಂದು ಹೇಳಿದರು. 

ಅವರು ದೇಶದಲ್ಲಿ ಹೂಡಿಕೆ ಮತ್ತು ಸಾಲ ಲಭ್ಯತೆಯನ್ನು ಹೆಚ್ಚಿಸಲು ಹಲವಾರು ಉಪಕ್ರಮಗಳನ್ನು ಪ್ರಸ್ತಾಪಿಸಿದರು.

12. Financing Of Investment.jpg

ಮೂಲ ಸೌಕರ್ಯ ಸ್ಥಿತಿ

ಚಾರ್ಜಿಂಗ್ ಮೂಲ ಸೌಕರ್ಯ ಮತ್ತು ಗ್ರಿಡ್ ಅಳೆಯುವ ಬ್ಯಾಟರಿ ವ್ಯವಸ್ಥೆಗಳನ್ನು ಒಳಗೊಂಡ ದತ್ತಾಂಶ ಕೇಂದ್ರಗಳು, ಇಂಧನ ಸಂಗ್ರಹಣಾ ವ್ಯವಸ್ಥೆಗಳನ್ನು ಮೂಲ ಸೌಕರ್ಯಗಳ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು. ಇದು ಡಿಜಿಟಲ್ ಮೂಲ ಸೌಕರ್ಯ ಮತ್ತು ಶುದ್ಧ ಇಂಧನ ಸಂಗ್ರಹಣೆಗಾಗಿ ಸಾಲದ ಲಭ್ಯತೆಯನ್ನು ಸುಗಮಗೊಳಿಸುತ್ತದೆ ಎಂದು ಹೇಳಿದರು.  

ವೆಂಚರ್ ಕ್ಯಾಪಿಟಲ್ ಮತ್ತು ಪ್ರೈವೈಟ್ ಇಕ್ವಿಟ್ ಇನ್ವೆಸ್ಟ್ ಮೆಂಟ್

ವೆಂಚರ್ ಕ್ಯಾಪಿಟಲ್ ಮತ್ತು ಪ್ರೈವೇಟ್ ಇಕ್ವಿಟಿ ಹೂಡಿಕೆಯನ್ನು ಹೆಚ್ಚಿಸಲು ಸೂಕ್ತ ಕ್ರಮಗಳನ್ನು ಪರಿಶೀಲಿಸಲು ಮತ್ತು ಸೂಚಿಸಲು ತಜ್ಞರ ಸಮಿತಿ ರಚಿಸುವುದಾಗಿ ಹಣಕಾಸು ಸಚಿವರು ಹೇಳಿದರು. ಕಳೆದ ವರ್ಷ ವೆಂಚರ್ ಕ್ಯಾಪಿಟಲ್ ಮತ್ತು ಪ್ರೈವೆಟ್ ಇಕ್ವಿಟಿ ವಲಯದಲ್ಲಿ 5.5 ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗಿದ್ದು, ಇದರಿಂದ ಅತಿದೊಡ್ಡ ನವೋದ್ಯಮಗಳು ಮತ್ತು ಪರಿಸರ ವ್ಯವಸ್ಥೆಗೆ ಅನುಕೂಲವಾಗಿದೆ. ಹೂಡಿಕೆಯನ್ನು ಹೆಚ್ಚಿಸಲು ನಿಯಂತ್ರಣ ಮತ್ತು ಸಮಗ್ರ ಪರಿಶೀಲನೆ ಅಗತ್ಯವಿದೆ ಎಂದು ಹೇಳಿದರು.

ಸಂಯೋಜಿತ ಹಣಕಾಸು

ಸರ್ಕಾರದ ಬೆಂಬಲಿತ ನಿಧಿಗಳಾದ ಎನ್.ಐ.ಐ.ಎಫ್ ಮತ್ತು ಎಸ್.ಐ.ಡಿ.ಬಿ.ಐ ನಿಧಿಗಳ ಪರಿಣಾಮವನ್ನು ಸೃಷ್ಟಿಸುವ ಮತ್ತು ಅಗತ್ಯ ಪ್ರಮಾಣದ ಬಂಡವಾಳವನ್ನು ಇವುಗಳ ಮೂಲಕ ಒದಗಿಸಲಾಗಿದೆ. ಹವಾಮಾನ ಬದಲಾವಣೆ, ಡಿಜಿಟಲ್ ಆರ್ಥಿಕತೆ, ಔಷಧ ವಲಯ, ಕೃಷಿ ತಂತ್ರಜ್ಞಾನದಂತಹ ಉದಯೋನ್ಮುಖ ವಲಯಗಳನ್ನು ಉತ್ತೇಜಿಸಲು ಸರ್ಕಾರ ಸಂಯೋಜಿತ ಹಣಕಾಸು ವಲಯದಲ್ಲಿ ವಿಷಯಾಧಾರಿತ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಇದರಲ್ಲಿ ಸರ್ಕಾರದ ಪಾಲು ಶೇ 20ಕ್ಕೆ ಸೀಮಿತವಾಗಿದೆ ಮತ್ತು ನಿಧಿಗಳನ್ನು ನಿರ್ವಹಿಸಲಾಗುತ್ತದೆ ಎಂದು ಹೇಳಿದರು.

ಮೂಲಸೌಕರ್ಯ ಯೋಜನೆಗಳ ಆರ್ಥಿಕ ಸಾಧ್ಯತೆ

ಮೂಲ ಸೌಕರ್ಯ ಅಗತ್ಯಗಳಿಗೆ ಹಣ ಒದಗಿಸಲು ಬಹುಪಕ್ಷೀಯ ಸಂಸ್ಥೆಗಳಿಂದ ತಾಂತ್ರಿಕ ಜ್ಞಾನವನ್ನು ಪಿಪಿಪಿ ಸಹಯೋಗದಲ್ಲಿ ಒದಗಿಸಲಿದ್ದು, ಇದರಿಂದ ಆರ್ಥಿಕ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಜಾಗತಿಕ ಉತ್ತಮ ಅಭ್ಯಾಸಗಳು, ಹೊಸ ಹಣಕಾಸು ವಿಧಾನಗಳು ಮತ್ತು ಸಮತೋಲಿತ ಅಪಾಯದ ಹಂಚಿಕೆಯನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಕಾರ್ಯಸಾಧ್ಯತೆಯನ್ನು ಹೆಚ್ಚಿಸಬಹುದು ಎಂದು ಹೇಳಿದರು. ಸಾರ್ವಜನಿಕ ಹೂಡಿಕೆಯನ್ನು ಹಂತವಾಗಿ ಹೆಚ್ಚಿಸುವ ಜತೆಗೆ  ಖಾಸಗಿ ಬಂಡವಾಳವನ್ನು ಗಮನಾರ್ಹ ಪ್ರಮಾಣದಲ್ಲಿ ಆಕರ್ಷಿಸಬೇಕಾಗಿದೆ ಎಂದು ಹೇಳಿದರು.

***(Release ID: 1794549) Visitor Counter : 161