ಹಣಕಾಸು ಸಚಿವಾಲಯ

ಕೌಶಲ್ಯ ಮತ್ತು ಉದ್ಯೋಗದ ಮೇಲೆ ಕೇಂದ್ರೀಕರಣ - ಕ್ರಿಯಾತ್ಮಕ ಕೈಗಾರಿಕಾ ವಲಯದ ಅಗತ್ಯಗಳಿಗೆ ಹೊಂದಿಕೆಯಾಗುವಂತೆ ರಾಷ್ಟ್ರೀಯ ಅರ್ಹತಾ ಕೈಗಾರಿಕಾ [ಎನ್.ಎಸ್.ಕ್ಯೂ.ಎಫ್] ಚೌಕಟ್ಟು  ರೂಪಿಸಲು ಕ್ರಮ


ಕೌಶಲ್ಯ ಮತ್ತು ಜೀವನೋಪಾಯಕ್ಕಾಗಿ ಡಿಜಿಟಲ್ ಪರಿಸರ ವ್ಯವಸ್ಥೆ – ದೇಶ್ -ಸ್ಟಾಕ್ ಇ ಪೋರ್ಟಲ್ ಪ್ರಾರಂಭ: “ಡ್ರೋಣ್ ಶಕ್ತಿ” ಮೂಲಕ ನವೋದ್ಯಮಗಳಿಗೆ ಉತ್ತೇಜನ

ಗುಣಮಟ್ಟದ ಏಕರೂಪ ಶಿಕ್ಷಣಕ್ಕಾಗಿ ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ

“ಒಂದು ಕೊಠಡಿ – ಒಂದು ವಾಹಿನಿ” ಪರಿಕಲ್ಪನೆಯಡಿ ಪಿಎಂ ಇ-ವಿದ್ಯಾ ಕಾರ್ಯಕ್ರಮದ ಮೂಲಕ ವಾಹಿನಿಗಳ  ಸಂಖ್ಯೆ 12 ರಿಂದ 200 ಕ್ಕೆ ಏರಿಕೆ: 1-12 ನೇ ತರಗತಿಗಳಿಗೆ ಪ್ರಾದೇಶಿಕ ಭಾಷೆಗಳ ಮೂಲಕ ಪೂರಕ ಶಿಕ್ಷಣ ಒದಗಿಸಲು ಕ್ರಮ

ಕಲಿಕೆಗಾಗಿ 750 ವರ್ಚುವಲ್ ಪ್ರಯೋಗಾಲಯಗಳು ಮತ್ತು 75 ಕೌಶಲ್ಯ ಕುರಿತ ಇ – ಪ್ರಯೋಗಾಲಯಗಳ ಸ್ಥಾಪನೆ

ಡಿಜಿಟಲ್ ಶಿಕ್ಷಕರ ಮೂಲಕ ಎಲ್ಲಾ ಮಾತನಾಡುವ ಭಾಷೆಗಳಲ್ಲಿ ಉನ್ನತ ಗುಣಮಟ್ಟದ ಇ – ವಿಷಯಗಳನ್ನು ಅಭಿವೃದ್ಧಿಪಡಿಸಲು ಕ್ರಮ

Posted On: 01 FEB 2022 12:57PM by PIB Bengaluru

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು 2022-23 ಕೇಂದ್ರ ಬಜೆಟ್ ನಲ್ಲಿ ನಿರಂತರ ಕೌಶಲಾಭಿವೃದ್ಧಿ, ಸುಸ್ಥಿರತೆ ಮತ್ತು ಉದ್ಯೋಗವನ್ನು ಉತ್ತೇಜಿಸಲು ಮರುದೃಷ್ಟಿಕೋನದ ಮೂಲಕ ಉದ್ಯಮ ವಲಯದ ಪಾಲುದಾರಿಕೆ ಮತ್ತು ಕೌಶಲ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆಕ್ರಿಯಾತ್ಮಕ ಕೈಗಾರಿಕಾ ವಲಯದ ಅಗತ್ಯಗಳಿಗೆ ಹೊಂದಿಕೆಯಾಗುವಂತೆ ರಾಷ್ಟ್ರೀಯ ಅರ್ಹತಾ ಕೈಗಾರಿಕಾ [ಎನ್.ಎಸ್.ಕ್ಯೂ.ಎಫ್] ಚೌಕಟ್ಟು ರೂಪಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

ಕೌಶಲ್ಯ ಮತ್ತು ಜೀವನೋಪಾಯಕ್ಕಾಗಿ ಡಿಜಿಟಲ್ ಪರಿಸರ ವ್ಯವಸ್ಥೆದೇಶ್ -ಸ್ಟಾಕ್ -ಪೋರ್ಟಲ್ ಪ್ರಾರಂಭಿಸಲಾಗುವುದು. ನಾಗರಿಕರನ್ನು ಪೋರ್ಟಲ್ ಮೂಲಕ ಆನ್ ಲೈನ್ ತರಬೇತಿಯಲ್ಲಿ ಮರು ಕೌಶಲ್ಯ ಮತ್ತು ಕೌಶಲ್ಯವನ್ನು ಮೇಲ್ದರ್ಜೆಗೇರಿಸುವ ಮೂಲಕ ಸಬಲೀಕರಣಗೊಳಿಸುವ ಉದ್ದೇಶ ಹೊಂದಲಾಗಿದೆ. ಇದು ಎಪಿಐ ಆಧಾರಿತ ವಿಶ್ವಾಸಾರ್ಹ ಕೌಶಲ್ಯವನ್ನು ನಿರೂಪಿಸುವ, ಪಾವತಿ ಮತ್ತು ಸಂಬಂಧಿತ ಉದ್ಯೋಗಗಳು ಹಾಗೂ ಉದ್ಯಮಶೀಲತಾ ಅವಕಾಶಗಳ ಅನ್ವೇಷಣೆಗೆ ಅವಕಾಶ ಕಲ್ಪಿಸುತ್ತದೆ.

ವಿವಿಧ ಅಪ್ಲಿಕೇಷನ್ ಗಳ ಮೂಲಕ ಮತ್ತು ಡ್ರೋನ್ -ಆಸ್--ಸೇವೆಗಾಗಿ  “ಡ್ರೋನ್ ಶಕ್ತಿಮೂಲಕ ನವೋದ್ಯಮಗಳನ್ನು ಉತ್ತೇಜಿಸಲಾಗುವುದು. ಆಯ್ದ ಐಟಿಐಗಳಲ್ಲಿ, ಎಲ್ಲಾ ರಾಜ್ಯಗಳಲ್ಲಿ ಕೌಶಲ್ಯಕ್ಕಾಗಿ ಅಗತ್ಯವಿರುವ ಕೋರ್ಸ್ ಗಳನ್ನು ಪ್ರಾರಂಭಿಸಲಾಗುವುದು ಎಂದು ಹಣಕಾಸು ಸಚಿವರು ಪ್ರಕಟಿಸಿದರು.

ತಮ್ಮ  ಮನೆ ಬಾಗಿಲಿಗೆ ವೈಯಕ್ತಿಕ ಕಲಿಕೆಯ ಅನುಭವದೊಂದಿಗೆ ವಿಶ್ವದರ್ಜೆಯ ಗುಣಮಟ್ಟದ ಸಾರ್ವತ್ರಿಕ ಶಿಕ್ಷಣಕ್ಕಾಗಿ ದೇಶಾದ್ಯಂತ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಡಿಜಿಟಲ್ ವಿಶ‍್ವವಿದ್ಯಾಲಯವನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು. .ಸಿ.ಟಿ ಮಾದರಿಗಳು ಮತ್ತು ಭಾರತದ ವಿವಿಧ ಭಾಷೆಗಳಲ್ಲಿ ಶಿಕ್ಷಣ ಲಭ್ಯವಿದೆ. ವಿಶ್ವವಿದ್ಯಾಲಯವನ್ನು ಸಂಪರ್ಕಜಾಲ ಕೇಂದ್ರದ ಮೂಲಕ ಮಾತನಾಡುವ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಕಟ್ಟಡ ಅತ್ಯಾಧುನಿಕ ಐಸಿಟಿ ಪರಿಣತಿಯನ್ನು ಹೊಂದಿದ್ದು, ದೇಶದ ಅತ್ಯುತ್ತಮ ಸಾರ್ವಜನಿಕ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ಸಹಯೋಗವನ್ನು ಇವು ಪಡೆಯಲಿವೆ.

Quote Covers_M5.jpg

ಗುಣಮಟ್ಟ ಶಿಕ್ಷಣದ ಸಾರ್ವತ್ರೀಕರಣ:

ಸಾಂಕ್ರಾಮಿಕದ ಕಾರಣದಿಂದಾಗಿ ಶಾಲೆಗಳು ಮುಚ್ಚಿದುದರಿಂದ ನಿರ್ದಿಷ್ಟವಾಗಿ ಗ್ರಾಮೀಣ ಪ್ರದೇಶ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರೆ ದುರ್ಬಲ ವರ್ಗದ ವಿದ್ಯಾರ್ಥಿಗಳು ಎರಡು ವರ್ಷಗಳ ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. “ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರಿದವರು. ಪೂರಕ ಬೋಧನೆ ನೀಡುವ ಮತ್ತು ಶಿಕ್ಷಣವನ್ನು ಒದಗಿಸಲು ಪುನಶ್ಚೇತನದ ಕಾರ್ಯ ವಿಧಾನವನ್ನು ನಿರ್ಮಿಸುವ ಅಗತ್ಯವನ್ನು ನಾವು ಗುರುತಿಸಿದ್ದೇವೆ. ಉದ್ದೇಶಕ್ಕಾಗಿಒಂದು ಕೊಠಡಿಒಂದು ವಾಹಿನಿಪರಿಕಲ್ಪನೆಯಡಿ ಪಿಎಂ -ವಿದ್ಯಾ ಕಾರ್ಯಕ್ರಮದ ಮೂಲಕ 12 ರಿಂದ 200 ಕ್ಕೆ ವಾಹಿನಿಗಳ ಏರಿಕೆ ಮಾಡಲಾಗುವುದು. 1-12 ನೇ ತರಗತಿಗಳಿಗೆ ಪ್ರಾದೇಶಿಕ ಭಾಷೆಗಳ ಮೂಲಕ ಪೂರಕ ಶಿಕ್ಷಣ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

4. Education.jpg

ವೃತ್ತಿ ಶಿಕ್ಷಣ ಕೋರ್ಸ್ ಗಳಲ್ಲಿ ನಿರ್ಣಾಯಕ ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಉತ್ತೇಜಿಸಲು, ಸೃಜನಶೀಲತೆಗೆ ಜಾಗ ನೀಡಲು ವಿಜ್ಞಾನ ಮತ್ತು ಗಣಿತ ವಿಭಾಗದಲ್ಲಿ 750 ವರ್ಚುವಲ್ ಪ್ರಯೋಗಾಲಯಗಳು ಮತ್ತು ಸಿಮ್ಯುಲೇಟೆಡ್ ಕಲಿಕಾ ಪರಿಸರಕ್ಕಾಗಿ 75 ಕೌಶಲ್ಯ ಪ್ರಯೋಗಾಲಯಗಳನ್ನು 2022-23 ಸಾಲಿನಲ್ಲಿ ಸ್ಥಾಪಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.   

ಡಿಜಿಟಲ್ ಶಿಕ್ಷಕರ ಮೂಲಕ ಅಂತರ್ಜಾಲ, ಸಂಚಾರಿ ದೂರವಾಣಿ, ಟಿವಿ ಮತ್ತು ರೇಡಿಯೋ ಮೂಲಕ ತಲುಪಿಸಲು ಎಲ್ಲಾ ಮಾತನಾಡುವ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ -ವಿಷಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶಿಕ್ಷಕರಿಂದ ಗುಣಮಟ್ಟದ -ವಿಷಯವನ್ನು ಅಭಿವೃದ್ಧಿಪಡಿಸಲು ಸ್ಪರ್ಧಾತ್ಮಕ ಕಾರ್ಯವಿಧಾನವನ್ನು ಸಶಕ್ತಗೊಳಿಸಲು ಮತ್ತು ಡಿಜಿಟಲ್ ಬೋಧನಾ ಸಾಧನಗಳನ್ನು ಸಜ್ಜುಗೊಳಿಸಲು ಹಾಗೂ ಉತ್ತಮ ಕಲಿಕೆಯ ಫಲಿತಾಂಶಗಳನ್ನು ಸುಲಭಗೊಳಿಸಲಾಗುತ್ತಿದೆ.

ರಾಜ್ಯಗಳಿಗೆ ಬೆಂಬಲ ನೀಡಲು ನಗರ ಯೋಜನೆ:

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನಗರ ಯೋಜನೆ ಮತ್ತು ವಿನ್ಯಾಸದಲ್ಲಿ ಭಾರತದ ನಿರ್ದಿಷ್ಟ ಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ಕ್ಷೇತ್ರದಲ್ಲಿ ಪ್ರಮಾಣೀಕೃತ ತರಬೇತಿ ನೀಡಲು ವಿವಿಧ ಪ್ರದೇಶಗಳಲ್ಲಿ ಅಸ್ಥಿತ್ವದಲ್ಲಿರುವ ಐದು ಶೈಕ್ಷಣಿಕ ಸಂಸ್ಥೆಗಳನ್ನು ಶ್ರೇಷ್ಠತೆಯ ಕೇಂದ್ರಗಳಾಗಿ ಅಭಿವೃದ್ದಿಪಡಿಸಲಾಗುವುದು ಎಂದು ಪ್ರಕಟಿಸಿದರು. ಕೇಂದ್ರಗಳಿಗೆ 250 ಕೋಟಿ ರೂಪಾಯಿ ದತ್ತಿ ನೀಡಲಾಗುವುದು. ಇದರ ಜತೆ ಹೆಚ್ಚುವರಿಯಾಗಿ ಗುಣಮಟ್ಟದ ಮತ್ತು ಕೈಗೆಟುಕುವಂತೆ ನಗರ ಯೋಜನೆಗಳ ಕೋರ್ಸ್ ಗಳು ಲಭ್ಯವಾಗುವಂತೆ ಮಾಡಲು ಎಐಸಿಟಿಇ ನೇತೃತ್ವದಲ್ಲಿ ಪಠ್ಯ ಕ್ರಮವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು

ಗಿಫ್ಟ್-ಐಎಫ್ಎಸ್ ಸಿ:

ಹಣಕಾಸು ನಿರ್ವಹಣೆ, ಫಿನ್ ಟೆಕ್, ವಿಜ್ಞಾನ ತಂತ್ರಜ್ಞಾನ, ತಾಂತ್ರಿಕ ಶಿಕ್ಷಣ, ಗಣಿತ ಮತ್ತಿತರ ವಿಷಯಗಳಲ್ಲಿ ಶಿಕ್ಷಣ ನೀಡಲುಗಿಫ್ಟ್ ಸಿಟಿಗಳಲ್ಲಿ ವಿಶ್ವದರ್ಜೆಯ ವಿಶ್ವವಿದ್ಯಾಯಗಳಿಗೆ ಅವಕಾಶ ನೀಡಲಾಗುತ್ತಿದೆ. ಹಣಕಾಸು ಸೇವೆಗಳು ಮತ್ತು ತಂತ್ರಜ್ಞಾನಕ್ಕಾಗಿ ಉನ್ನತಮಟ್ಟದ ಮಾನವ ಸಂಪನ್ಮೂಲಗಳ ಲಭ‍್ಯತೆಯನ್ನು ಸುಲಭಗೊಳಿಸಲು .ಎಫ್.ಎಸ್.ಸಿ. ಹೊರತುಪಡಿಸಿ ದೇಶೀಯ ನಿಯಂತ್ರಣಗಳಿಂದ ಮುಕ್ತವಾಗಿರಲಿವೆ.

ನೋವೋದ್ಯಮಗಳಿಗೆ ಪ್ರೋತ್ಸಾಹ:

ದೇಶದ ಆರ್ಥಿಕ ಅಭ್ಯುದಯದಲ್ಲಿ ನವೋದ್ಯಮಗಳು ಚಾಲನಾ ಶಕ್ತಿಯಾಗಿ ಹೊರ ಹೊಮ್ಮಿವೆ. ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ನವೋದ್ಯಮಗಳ ಸಂಖ್ಯೆ ಹಲವು ಪಟ್ಟು ಏರಿಕೆಯಾಗಿವೆ. 31.3.2022 ಕ್ಕಿಂತ ಮೊದಲು ಸ್ಥಾಪಿಸಲಾದ ಅರ್ಹ ನವೋದ್ಯಮಗಳಿಗೆ ಸತತ ಮೂರು ವರ್ಷಗಳವರೆಗೆ ತೆರಿಗೆ ಪ್ರೋತ್ಸಾಹ ನೀಡಲಾಗಿದೆಕೋವಿಡ್ ಸಾಂಕ್ರಾಮಿಕವನ್ನು ದೃಷ್ಟಿಯಲ್ಲಿಟ್ಟುಕೊಂಡು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಅರ್ಹ ನವೋದ್ಯಮಗಳಿಗೆ 31.03.2023 ವರೆಗೆ ಇನ್ನೊಂದು ವರ್ಷದ ವರೆಗೆ ತೆರಿಗೆ ಪ್ರೋತ್ಸಾಹವನ್ನು ವಿಸ್ತರಿಸಲಾಗುತ್ತಿದೆ ಎಂದು ಪ್ರಕಟಿಸಿದರು.

ವ್ಯಾಪಾರ ವೆಚ್ಚವಾಗಿ ಆರೋಗ್ಯ ಮತ್ತು ಶಿಕ್ಷಣ ಸೆಸ್ ಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ:

ಆದಾಯ ತೆರಿಗೆ ವ್ಯಾಪಾರದ ಆದಾಯದ ಲೆಕ್ಕಾಚಾರಕ್ಕೆ ಅನುಮತಿ ನೀಡುವ ವೆಚ್ಚವಲ್ಲ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಇದು ತೆರಿಗೆ ಮತ್ತು ಹೆಚ್ಚುವರಿ ಶುಲ್ಕಗಳನ್ನು ಒಳಗೊಂಡಿದೆ. ನಿರ್ದಿಷ್ಟ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಗೆ ಧನಸಹಾಯಕ್ಕಾಗಿ ತೆರಿಗೆದಾರರ ಮೇಲೆ ಹೆಚ್ಚುವರಿ ಶುಲ್ಕವಾಗಿ ಆರೋಗ್ಯ ಮತ್ತು ಶಿಕ್ಷಣ ಸೆಸ್ ಅನ್ನು ವಿಧಿಸಲಾಗುತ್ತದೆ. ಆದಾಗ್ಯೂ ಕೆಲವು ನ್ಯಾಯಾಲಯಗಳು ಆರೋಗ್ಯ ಮತ್ತು ಶಿಕ್ಷಣ ಸೆಸ್ ಅನ್ನು ವ್ಯಾಪಾರ ವೆಚ್ಚಕ್ಕಾಗಿ ಅನುಮತಿಸಿವೆ. ಆದರೆ ಇದು ಶಾಸಕಾಂಗಕ್ಕೆ ವಿರುದ್ಧವಾಗಿವೆಶಾಸಕಾಂಗದ ಉದ್ದೇಶವನ್ನು ಪುನರುಚ್ಚರಿಸಿರುವ ಹಣಕಾಸು ಸಚಿವರು ಆದಾಯ ಮತ್ತು ಲಾಭದ ಮೇಲಿನ ಯಾವುದೇ ಸರ್ ಚಾರ್ಜ್ ಮತ್ತು ಅಥವಾ ಸೆಸ್ ಅನ್ನು ವ್ಯಾಪಾರ ವೆಚ್ಚಕ್ಕಾಗಿ ಜಾರಿಗೊಳಿಸಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

***



(Release ID: 1794282) Visitor Counter : 335