ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪೋರ್ಚುಗಲ್ ಪ್ರಧಾನ ಮಂತ್ರಿ ಎಚ್.ಇ. ಆಂಟೊನಿಯೊ ಕೋಸ್ಟಾ ಮರು ಆಯ್ಕೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ

प्रविष्टि तिथि: 31 JAN 2022 8:02PM by PIB Bengaluru

ಪೋರ್ಚುಗಲ್ ಪ್ರಧಾನ ಮಂತ್ರಿಯಾಗಿ ಮರುಆಯ್ಕೆ ಆಗಿರುವ ಎಚ್.ಇ. ಆಂಟೊನಿಯೊ ಕೋಸ್ಟಾ ಅವರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಪೋರ್ಚುಗಲ್ ಸಂಸತ್ತಿಗೆ  ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಕೋಸ್ಟಾ ಅವರ ಜತೆ ಭಾರತದ ಸಂಬಂಧವನ್ನು ಮತ್ತಷ್ಟು ಗಾಢವಾಗಿಸಲು ಇಚ್ಛೆ ಹೊಂದಿದ್ದೇನೆ ಎಂದು ಮೋದಿ ಅವರು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;

“ನನ್ನ ಆತ್ಮೀಯ, ಸ್ನೇಹಿತ ಪೋರ್ಚುಗಲ್ ಪ್ರಧಾನಿ ಆಂಟೊನಿಯೊ ಕೋಸ್ಟಾ ಅವರನ್ನು ಅಭಿನಂದಿಸುತ್ತೇನೆ. ಪೋರ್ಚುಗಲ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿಸಿ, ಮರುಆಯ್ಕೆ ಆಗಿರುವುದಕ್ಕೆ ಅಭಿನಂದನೆಗಳು. ಪೋರ್ಚುಗಲ್ ಜತೆ ಭಾರತ ಹೊಂದಿರುವ ಗಾಢ ಸ್ನೇಹ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲು ಎದುರು ನೋಡುತ್ತಿದ್ದೇನೆ.” ಎಂದಿದ್ದಾರೆ.

***


(रिलीज़ आईडी: 1794010) आगंतुक पटल : 214
इस विज्ञप्ति को इन भाषाओं में पढ़ें: English , Urdu , हिन्दी , Bengali , Manipuri , Punjabi , Gujarati , Odia , Tamil , Telugu , Malayalam