ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆಯ (ಪಿಎಂ-ಜಿಕೆಎವೈ) ಹಂತ-5ರ ಅಡಿಯಲ್ಲಿರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿಇದುವರೆಗೆ ಫಲಾನುಭವಿಗಳಿಗೆ 19.76 ಎಲ್‌ಎಂಟಿ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ


ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳ ಹಿನ್ನೆಲೆಯಲ್ಲಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಆಹಾರ ಧಾನ್ಯಗಳ ಎತ್ತುವಿಕೆ ಮತ್ತು ವಿತರಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ

ಮಿಜೋರಾಂ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಪಿಎಂ-ಜಿಕೆಎವೈ ಹಂತ 1 ಮತ್ತು 2ರ ಅಡಿಯಲ್ಲಿಆಹಾರಧಾನ್ಯಗಳ ವಿತರಣೆಗೆ ಸಂಬಂಧಿಸಿದಂತೆ ಉತ್ತಮ ಪ್ರದರ್ಶನ ನೀಡಿದ ರಾಜ್ಯಗಳ ಶ್ರೇಯಾಂಕ ಪಡೆದಿವೆ

ಛತ್ತೀಸ್‌ಢ, ತ್ರಿಪುರಾ, ಮಿಜೋರಾಂ, ದೆಹಲಿ ಮತ್ತು ಪಶ್ಚಿಮ ಬಂಗಾಳವು ಪಿಎಂ-ಜಿಕೆಎವೈಯ ಹಂತ 3 ಮತ್ತು 4ರ ಅಡಿಯಲ್ಲಿಆಹಾರ ಧಾನ್ಯಗಳ ವಿತರಣೆಗೆ ಸಂಬಂಧಿಸಿದಂತೆ ಅತ್ಯುತ್ತಮ ಕಾರ್ಯಕ್ಷ ಮತೆಯ ರಾಜ್ಯಗಳ ಶ್ರೇಯಾಂಕ ಗಳಿಸಿವೆ

12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು-ಆಂಧ್ರ ಪ್ರದೇಶ, ಬಿಹಾರ, ಡಿಎನ್‌ಎಚ್‌ ಡಿ ಮತ್ತು ಡಿ, ದೆಹಲಿ, ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್‌, ರಾಜಸ್ಥಾನ, ತೆಲಂಗಾಣ, ತ್ರಿಪುರಾ ಮತ್ತು ಉತ್ತರ ಪ್ರದೇಶ ಪಿಎಂ-ಜಿಕೆಎವೈ ಹಂತ 3 ಮತ್ತು 4ರ ಅಡಿಯಲ್ಲಿಶೇಕಡ 98ರಿಂದ ಶೇಕಡ 100 ರಷ್ಟು ಆಧಾರ್‌ ಆಧಾರಿತ ಆಹಾರಧಾನ್ಯ ವಿತರಣೆಯನ್ನು ವರದಿ ಮಾಡಿದೆ

Posted On: 12 JAN 2022 4:37PM by PIB Bengaluru

2020ರ ಮಾರ್ಚ್‌ನಲ್ಲಿ ದೇಶದಲ್ಲಿ ಕೋವಿಡ್‌-19 ಏಕಾಏಕಿ ಉಲ್ಬಣಗೊಂಡ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಬಡವರ ಪರವಾದ ‘ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಪ್ಯಾಕೇಜ್‌ (ಪಿಎಂಜಿಕೆಪಿ)’ ಘೋಷಣೆಯ ಅನುಸಾರವಾಗಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಡಿಇಪಿಡಿ) ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ (ಪಿಎಂ- ಜಿಕೆಎವೈ) ಅಡಿಯಲ್ಲಿದೇಶದ ಸುಮಾರು 80 ಕೋಟಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‌ಎಫ್‌ಎಸ್‌ಎ) ಸಾಂಕ್ರಾಮಿಕ ಅನೀರೀಕ್ಷಿತ ಏರಿಕೆ, ಲಾಕ್‌ಡೌನ್‌ಗಳು ಮತ್ತು ದೇಶದಾದ್ಯಂತ ಉಂಟಾದ ಆರ್ಥಿಕ ಅಡೆತಡೆಗಳಿಂದ ಬಡವರು ಮತ್ತು ನಿರ್ಗತಿಕರು ಎದುರಿಸುತ್ತಿರುವ ಆಹಾರ ಭದ್ರತೆಯ ಸಂಕಷ್ಟಗಳನ್ನು ನಿವಾರಿಸಲು ಫಲಾನುಭವಿಗಳಿಗೆ ‘ಹೆಚ್ಚುವರಿ’ ಮತ್ತು ’ಉಚಿತ-ವೆಚ್ಚದ’ ಆಹಾರ ಧಾನ್ಯಗಳ (ಅಕ್ಕಿ/ಗೋಧಿ) ವಿತರಣೆಯನ್ನು ಪ್ರಾರಂಭಿಸಿದೆ.

ಹೆಚ್ಚುವರಿ ಆಹಾರ ಧಾನ್ಯಗಳನ್ನು ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಪ್ರಮಾಣದಲ್ಲಿ ವಿತರಿಸಲಾಗುತ್ತದೆ. ಅವರ ನಿಯಮಿತ ಮಾಸಿಕ 5 ಕೆ.ಜಿ ಆಹಾರ ಧಾನ್ಯಗಳ ಮೇಲೆ ಮತ್ತು ಅದಕ್ಕಿಂತ ಹೆಚ್ಚಿನದು (ಅಂದರೆ, ಅವರ ಸಂಬಂಧಿತ ಎನ್‌ಎಫ್‌ಎಸ್‌ಎ ಪಡಿತರ ಚೀಟಿಗಳ ಮಾಸಿಕ ಅರ್ಹತೆ) ಸಾಂಕ್ರಾಮಿಕ ಪ್ರಚೋದಿತ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಆಹಾರ ಧಾನ್ಯಗಳ ಲಭ್ಯತೆಯ ಕೊರತೆಯಿಂದಾಗಿ ಯಾವುದೇ ಬಡ, ದುರ್ಬಲ ಅಥವಾ ನಿರ್ಗತಿಕ ಫಲಾನುಭವಿ/ಫಲಾನುಭವಿ ಕುಟುಂಬವು ಬಳಲುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕೋವಿಡ್‌- 19 ಬಿಕ್ಕಟ್ಟಿನ ಸಂದರ್ಭದಲ್ಲಿ ಈ ವಿಶೇಷ ಆಹಾರ ಭದ್ರತಾ ಪ್ರತಿಕ್ರಿಯೆಯ ಮೂಲಕ, ಸರ್ಕಾರವು ಮಾಸಿಕ ಆಹಾರಧಾನ್ಯಗಳ ಪ್ರಮಾಣವನ್ನು ಬಹುತೇಕ ‘ದ್ವಿಗುಣಗೊಳಿಸಿದೆ’, ಸಾಮಾನ್ಯವಾಗಿ ಎನ್‌ಎಸ್‌ಎಫ್‌ಎ ಕುಟುಂಬಗಳಿಗೆ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ ಮನೆದಾರರ (ಪಿಎಚ್‌ಎಚ್‌) ವರ್ಗಗಳ ಕಾಯಿದೆ ಅಡಿಯಲ್ಲಿ ವಿತರಿಸಲಾಗುತ್ತದೆ.

ಆರಂಭದಲ್ಲಿ 2020-21 ರಲ್ಲಿ ಪಿಎಂ -ಜಿಕೆಎವೈ ಯೋಜನೆಯನ್ನು 2020ರ ಏಪ್ರಿಲ್‌, ಮೇ ಮತ್ತು ಜೂನ್‌ (ಹಂತ-1) ಮೂರು ತಿಂಗಳ ಅವಧಿಗೆ ಮಾತ್ರ ಘೋಷಿಸಲಾಯಿತು. ನಂತರ, ಬಡವರು ಮತ್ತು ಅಗತ್ಯವಿರುವ ಫಲಾನುಭವಿಗಳ ಆಹಾರ ಭದ್ರತೆಯನ್ನು ಬೆಂಬಲಿಸುವ ನಿರಂತರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಉಚಿತ ಆಹಾರ ಧಾನ್ಯಗಳ ವಿತರಣೆಯನ್ನು 2020ರ ಜುಲೈನಿಂದ ನವೆಂಬರ್‌ರವರೆಗೆ (ಹಂತ-2) ಐದು ತಿಂಗಳ ಅವಧಿಗೆ ವಿಸ್ತರಿಸಿತು.

ಆದಾಗ್ಯೂ, ಕೋವಿಡ್‌-19 ಬಿಕ್ಕಟ್ಟು 2021-22ರಲ್ಲಿ ಮುಂದುವರಿಯುವುದರೊಂದಿಗೆ, ಸರ್ಕಾರವು 2021ರ ಏಪ್ರಿಲ್‌ನಲ್ಲಿಮತ್ತೆ 2021ರ ಮೇ ಮತ್ತು ಜೂನ್‌ನಲ್ಲಿ(ಹಂತ-3) ಅವಧಿಗೆ ಪಿಎಂ-ಜಿಕೆಎವೈ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನು ಘೋಷಿಸಿತು ಮತ್ತು ಅದನ್ನು ವಿಸ್ತರಿಸಿತು. 2001ರ ಜುಲೈನಿಂದ ನವೆಂಬರ್‌ ರವರೆಗೆ (ಹಂತ-4) ಮತ್ತೆ ಐದು ತಿಂಗಳುಗಳಿಗೆ ವಿಸ್ತರಿಸಿದಲ್ಲದೆ, 2021ರ ನವೆಂಬರ್‌ನಲ್ಲಿ ಕೋವಿಡ್‌-19ನಿಂದ ಉಂಟಾಗುವ ನಿರಂತರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು 2021ರ ಡಿಸೆಂಬರ್‌ರಿಂದ 2022ರ ಮಾರ್ಚ್‌ರವರೆಗೆ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನು ಮುಂದುವರಿಸಲು ನಿರ್ಧರಿಸಿದೆ (ಹಂತ-5).

ಪಿಎಂ-ಜಿಕೆಎವೈ ಯೋಜನೆಯಡಿ (ಹಂತಗಳು 1 ರಿಂದ 5), ಇಲಾಖೆಯು ಇದುವರೆಗೆ ಸುಮಾರು 80 ಕೋಟಿ ಎನ್‌ಎಸ್‌ಎಫ್‌ಎ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 759 ಲಕ್ಷ ಎಂಟಿ (ಮೆಟ್ರಿಕ್‌ ಟನ್‌) ಆಹಾರಧಾನ್ಯಗಳನ್ನು ಹಂಚಿಕೆ ಮಾಡಿದೆ. ಇದು ಆಹಾರ ಸಬ್ಸಿಡಿಯಲ್ಲಿಸುಮಾರು 2.6 ಲಕ್ಷ ಕೋಟಿ ರೂ.ಗೆ ಸಮನಾಗಿದೆ. ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಲಭ್ಯವಿರುವ ಹಂತವಾರು ವಿತರಣಾ ವರದಿಗಳ ಪ್ರಕಾರ, ಇಲ್ಲಿಯವರೆಗೆ ಒಟ್ಟು 580 ಲಕ್ಷ ಮೆಟ್ರಿಕ್‌ ಟನ್‌ ಆಹಾರಧಾನ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ.

ಆಹಾರಧಾನ್ಯಗಳ ಹಂತವಾರು ಹಂಚಿಕೆ ಮತ್ತು ವಿತರಣೆ:

            2020-21ರ ಅವಧಿಯಲ್ಲಿ ಪಿಎಂಜಿಕೆಎವೈ ಅನುಷ್ಠಾನ:

ಎ. ಹಂತ 1 ಮತ್ತು 2 (2020ರ ಏಪ್ರಿಲ್‌ ನಿಂದ ನವೆಂಬರ್‌): ಇಲಾಖೆಯು 8 ತಿಂಗಳ ವಿತರಣಾ ಅವಧಿಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 321 ಎಲ್‌ಎಂಟಿ (ಲಕ್ಷ ಮೆಟ್ರಿಕ್‌ ಟನ್‌) ಆಹಾರಧಾನ್ಯಗಳನ್ನು ಹಂಚಿಕೆ ಮಾಡಿದೆ, ಅದರಲ್ಲಿರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಒಟ್ಟು 298.8 ಎಲ್‌ಎಂಟಿ ( ಸುಮಾರು 93%) ವಿತರಣೆಯನ್ನು ವರದಿ ಮಾಡಿವೆ. ಅದರಲ್ಲಿರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ದೇಶದಾದ್ಯಂತ ತಿಂಗಳಿಗೆ ಸರಾಸರಿ ಸುಮಾರು 94% ಎನ್‌ಎಫ್‌ಎಸ್‌ಎ ಜನಸಂಖ್ಯೆಗೆ (75 ಕೋಟಿ ಫಲಾನುಭವಿಗಳು) 298.8 ಎಲ್‌ಎಂಟಿ (ಸುಮಾರು 93%) ಆಹಾರ ಧಾನ್ಯಗಳ ಒಟ್ಟು ವಿತರಣೆಯನ್ನು ವರದಿ ಮಾಡಿವೆ.

            2021-22ರ ಅವಧಿಯಲ್ಲಿಪಿ ಎಂಜಿಕೆಎವೈ ಅನುಷ್ಠಾನ:

ಬಿ.ಹಂತ-3 (2021ರ ಮೇ ಮತ್ತು ಜೂನ್‌): ಹಂತ-3ರ ಅಡಿಯಲ್ಲಿ, ಇಲಾಖೆಯು 2 ತಿಂಗಳ ವಿತರಣಾ ಅವಧಿಗೆ 79.46 ಎಲ್‌ಎಂಟಿ ಆಹಾರಧಾನ್ಯಗಳನ್ನು ಹಂಚಿಕೆ ಮಾಡಿದೆ. ಅದರಲ್ಲಿರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು 75.2 ಎಲ್‌ಎಂಟಿ (ಸುಮಾರು 94.5%) ಆಹಾರ ಧಾನ್ಯಗಳ ವಿತರಣೆಯನ್ನು ವರದಿ ಮಾಡಿವೆ. ತಿಂಗಳಿಗೆ ಸರಾಸರಿ 95% ಎನ್‌ಎಫ್‌ಎಸ್‌ಎ ಜನಸಂಖ್ಯೆ (75.18 ಕೋಟಿ ಫಲಾನುಭವಿಗಳು).

ಸಿ.ಹಂತ- 4 (2021ರ ಜುಲೈನಿಂದ ನವೆಂಬರ್‌): ಹಂತ-4ರ ಅಡಿಯಲ್ಲಿ5-ತಿಂಗಳ ವಿತರಣಾ ಅವಧಿಗೆ, ಇಲಾಖೆಯು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತೆ 198.78 ಎಲ್‌ಎಂಟಿ ಆಹಾರಧಾನ್ಯಗಳನ್ನು ಹಂಚಿಕೆ ಮಾಡಿದೆ. ಅದರಲ್ಲಿರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು 186.1 ಎಲ್‌ಎಂಟಿ (ಸುಮಾರು 93.6%) ವಿತರಣೆಯನ್ನು ವರದಿ ಮಾಡಿದೆ. ಆಹಾರಧಾನ್ಯಗಳು, ತಿಂಗಳಿಗೆ ಸರಾಸರಿ 93% ಎನ್‌ಎಫ್‌ಎಸ್‌ಎ ಜನಸಂಖ್ಯೆಯನ್ನು (74.4 ಕೋಟಿ ಫಲಾನುಭವಿಗಳು) ಒಳಗೊಳ್ಳುತ್ತದೆ.

ಹಂತ-5 (2021ರ ಡಿಸೆಂಬರ್‌ -2022ರ ಮಾರ್ಚ್‌): ಪಿಎಂಜಿಕೆಎವೈಅನ್ನು 2022ರ ಮಾರ್ಚ್‌ರವರೆಗೆ ಮುಂದುವರಿಸುವ ಘೋಷಣೆಯ ಅನುಸಾರವಾಗಿ, ಇಲಾಖೆಯು 4-ತಿಂಗಳ ವಿತರಣಾ ಅವಧಿಗೆ 163 ಎಲ್‌ಎಂಟಿ ಆಹಾರಧಾನ್ಯಗಳ ಹಂಚಿಕೆ ಆದೇಶವನ್ನು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ. ಅಂದಿನಿಂದ, ಕೇವಲ ಎರಡನೇ ತಿಂಗಳ ವಿತರಣೆ ಪ್ರಾರಂಭವಾಗಿದೆ.ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಲಭ್ಯವಿರುವ ವರದಿಗಳು, ಇದುವರೆಗೆ ಫಲಾನುಭವಿಗಳಿಗೆ ಸುಮಾರು 19.76 ಎಲ್‌ಎಂಟಿ ಆಹಾರಧಾನ್ಯಗಳ ವಿತರಣೆಯನ್ನು ತೋರಿಸುತ್ತದೆ.

ಇದಲ್ಲದೆ, ಹಂತ- 5ರ ಅಡಿಯಲ್ಲಿಉಚಿತ ಆಹಾರ ಧಾನ್ಯಗಳ ವಿತರಣೆಯು ಪ್ರಸ್ತುತ ನಡೆಯುತ್ತಿದೆ, ಪ್ರಸ್ತುತ ಹಂತದ ವಿತರಣಾ ಕಾರ್ಯಕ್ಷ ಮತೆಯು ಹಿಂದಿನ ಹಂತಗಳಲ್ಲಿ ಸಾಧಿಸಿದ ಅದೇ ಉನ್ನತ ಮಟ್ಟದಲ್ಲಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇಲಾಖೆಯು ದಿನನಿತ್ಯದ ಆಧಾರದ ಮೇಲೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಆಹಾರ ಧಾನ್ಯಗಳ ಎತ್ತುವಿಕೆ ಮತ್ತು ವಿತರಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಇಲ್ಲಿಯವರೆಗೆ, ಪಿಎಂಜಿಕೆಎವೈ ಅಡಿಯಲ್ಲಿ ಎನ್‌ಎಫ್‌ಎಸ್‌ಎ ಫಲಾನುಭವಿಗಳಿಗೆ ಹೆಚ್ಚುವರಿ ಉಚಿತ-ವೆಚ್ಚದ ಆಹಾರ ಧಾನ್ಯಗಳ ವಿತರಣೆ ದೇಶವು ತೃಪ್ತಿಕರವಾಗಿದೆ.

ಪಿಎಂಜಿಕೆಎವೈ ಅಡಿಯಲ್ಲಿ ವಿತರಣೆಯಲ್ಲಿ ಕೆಲವು ಉತ್ತಮ ಕಾರ್ಯಕ್ಷ ಮತೆಯ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿವೆ:

2020-21ರ ಅವಧಿಯಲ್ಲಿ(ಹಂತ 1 ಮತ್ತು 2): ಮಿಜೋರಾಂ (100%), ಮೇಘಾಲಯ (100%), ಅರುಣಾಚಲ ಪ್ರದೇಶ (99%), ಸಿಕ್ಕಿಂ (99%) ಕೆಳಗೆ ತೋರಿಸಿರುವಂತೆ:

2020-21ರ ಅವಧಿಯಲ್ಲಿ(ಹಂತ 3 ಮತ್ತು 4): ಛತ್ತೀಸ್‌ಗಢ (98%), ತ್ರಿಪುರಾ (97%), ಮಿಜೋರಾಂ (97%), ದೆಹಲಿ (97%) ಮತ್ತು ಪಶ್ಚಿಮ ಬಂಗಾಳ (97%) ಕೆಳಗೆ ತೋರಿಸಿರುವಂತೆ:

ಪಿಎಂಜಿಕೆಎವೈ ಅಡಿಯಲ್ಲಿ ಪೋರ್ಟಬಲ್‌ ವಹಿವಾಟುಗಳಿಗೆ ಸಂಬಂಧಿಸಿದಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು

ಒಂದು ರಾಷ್ಟ್ರ ಒಂದು ಪಡಿತರ (ಒಎನ್‌ಒಆರ್‌ಸಿ) ಸೌಲಭ್ಯವನ್ನು ಬಳಸಿಕೊಂಡು, ಬಿಹಾರ, ಆಂಧ್ರಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಹರಿಯಾಣ ಮತ್ತು ಮಧ್ಯಪ್ರದೇಶ ರಾಜ್ಯಗಳು ಪಿಎಂಜಿಕೆಎವೈ ವಿತರಣೆಗಾಗಿ 1 ಮತ್ತು 4ನೇ ಹಂತಗಳಲ್ಲಿಗರಿಷ್ಠ ಸಂಖ್ಯೆಯ ಆಂತರಿಕ ಪೋರ್ಟೆಬಿಲಿಟಿ ವಹಿವಾಟುಗಳನ್ನು ದಾಖಲಿಸಿವೆ.

ಅದೇ ರೀತಿ, ಒಎನ್‌ಒಆರ್‌ಸಿ ಸೌಲಭ್ಯದ ಮೂಲಕ, ದೆಹಲಿ, ಹರಿಯಾಣ, ಮಹಾರಾಷ್ಟ್ರ, ಗುಜರಾತ್‌, ಡಿಎನ್‌ಎಚ್‌ ಡಿ ಮತ್ತು ಡಿ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ ಮತ್ತು ಜಾರ್ಖಂಡ್‌ ರಾಜ್ಯಗಳು 1 ರಿಂದ 4 ಹಂತಗಳಲ್ಲಿಪಿಎಂಜಿಕೆಎವೈ ವಿತರಣೆಗಾಗಿ ಗರಿಷ್ಠ ಸಂಖ್ಯೆಯ ಅಂತರ-ರಾಜ್ಯ ಪೋರ್ಟೆಬಿಲಿಟಿ ವಹಿವಾಟುಗಳನ್ನು ದಾಖಲಿಸಿವೆ.

ಪಿಎಂ-ಜಿಕೆಎವೈ ಅವಧಿಯಲ್ಲಿ ಆಧಾರ್‌ ಪ್ರಮಾಣೀಕೃತ ಆಹಾರ ಧಾನ್ಯಗಳ ವಿತರಣೆ:

ಪಿಎಂಜಿಕೆಎವೈ ಹಂತಗಳು 3-4ಅನ್ನು ಒಳಗೊಂಡಿರುವ ಅವಧಿಯಲ್ಲಿರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿಆಧಾರ್‌ ಆಧಾರಿತ ಆಹಾರ ಧಾನ್ಯಗಳ ವಿತರಣೆಯ ಅತ್ಯುತ್ತಮ ಕಾರ್ಯಕ್ಷ ಮತೆ ಕಂಡುಬಂದಿದೆ:

98%-100% ಆಧಾರ್‌ ಆಧಾರಿತ ವಿತರಣೆ - 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು (ಆಂಧ್ರ ಪ್ರದೇಶ, ಬಿಹಾರ, ಡಿಎನ್‌ಎಚ್‌ ಡಿ ಮತ್ತು ಡಿ , ದೆಹಲಿ, ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ, ಪಂಜಾಬ, ರಾಜಸ್ಥಾನ, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ)

90% - 98% ವಿತರಣೆ - 4 ರಾಜ್ಯಗಳಾದ ಗೋವಾ, ಮಧ್ಯಪ್ರದೇಶ, ಕೇರಳ ಮತ್ತು ಗುಜರಾತ್‌

70% - 90% ವಿತರಣೆ - 7 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು (ಒಡಿಶಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಅಂಡಮಾನ್‌ ಮತ್ತು ನಿಕೋಬರ್‌, ಜಾರ್ಖಂಡ್‌, ಮಿಜೋರಾಂ ಮತ್ತು ತಮಿಳುನಾಡು)

ಇಲಾಖೆಯು ಪಿಎಂ-ಜಿಕೆಎವೈ ಅಡಿಯಲ್ಲಿ ಐಇಸಿ ಚಟುವಟಿಕೆಗಳನ್ನು ಕೈಗೊಂಡಿದೆ

ಇಲಾಖೆಯು ಕಾಲಕಾಲಕ್ಕೆ ( 2020ರ ಜೂನ್‌ ಮತ್ತು 2021ರ ಡಿಸೆಂಬರ್‌) ಎಲ್ಲರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಲ್ಲ ಎಫ್‌ಪಿಎಸ್‌ಗಳು, ಗೋಡೌನ್‌ಗಳು ಮತ್ತು ಪಿಡಿಎಸ್‌ ಕಾರ್ಯಾಚರಣೆಯ ಇತರ ಸ್ಥಳಗಳಲ್ಲಿಪ್ರದರ್ಶನಕ್ಕಾಗಿ ಬ್ಯಾನರ್‌/ಹೋರ್ಡಿಂಗ್‌ ಸೃಜನಾತ್ಮಕಗಳನ್ನು ಹಿಂದಿ ಮತ್ತು 10 ಪ್ರಾದೇಶಿಕ ಭಾಷೆಗಳಲ್ಲಿಹಂಚಿಕೊಂಡಿದೆ. ಅವುಗಳೆಂದರೆ - ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮರಾಠಿ, ಮಲಯಾಳಂ, ಒಡಿಯಾ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಾಗಿವೆ.

ಹೆಚ್ಚುವರಿಯಾಗಿ, ಇಲಾಖೆಯು ಪೆಟ್ರೋಲಿಯಂ ಪಂಪ್‌ಗಳು/ ಸಿಎನ್‌ಜಿ ನಿಲ್ದಾಣಗಳು, ಅಂಚೆ ಕಚೇರಿಗಳು, ರೈಲ್ವೆ ನಿಲ್ದಾಣಗಳು ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿಪ್ರದರ್ಶನಕ್ಕಾಗಿ ಕೆಲವು ಕೇಂದ್ರ ಸಚಿವಾಲಯಗಳು/ಇಲಾಖೆಗಳಾದ ಭಾರತೀಯ ರೈಲ್ವೆ, ಡಿಫಾರ್ಮೆಂಟ್‌ ಪೋಸ್ಟ್‌ಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮುಂತಾದವುಗಳ ಸಹಕಾರವನ್ನು ಕೋರಿದೆ.

ನಿಯಮಿತ ಪತ್ರಿಕಾ ಪ್ರಕಟಣೆಗಳ ಮೂಲಕ ಮತ್ತು ಅದರ ಸಾಮಾಜಿಕ ಮಾಧ್ಯಮ ನಿರ್ವಹಣೆಯ(ಟ್ವಿಟರ್‌ ಮತ್ತು ಯೂಟ್ಯೂಬ…) ನವೀಕರಣಗಳ ಮೂಲಕ ಇಲಾಖೆಯು ಪಿಎಂಜಿಕೆಎವೈ ಕುರಿತು ವ್ಯಾಪಕ ಪ್ರಚಾರವನ್ನು ನೀಡುತ್ತದೆ.

***

 



(Release ID: 1789448) Visitor Counter : 269