ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಅದಿತಿ ಅಶೋಕ್ ಸೇರಿ ಐದು ಗಾಲ್ಫ್ ಆಟಗಾರರು ಸೇರಿ 10 ಅಥ್ಲೀಟ್ ಗಳು ಟಾಪ್ಸ್ (TOPS) ಗೆ ಸೇರ್ಪಡೆ

Posted On: 10 JAN 2022 4:45PM by PIB Bengaluru

ಖ್ಯಾತ ರೈಡರ್ ಫೌದ್ ಮಿರ್ಜಾ, ಗಾಲ್ಫ್ ಆಟಗಾರರಾದ ಅನಿರ್ಬನ್ ಲಾಹಿರಿ, ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಹಾಗೂ ಆಲ್ಪೈನ್ ಸ್ಕೀಯರ್ ಮೊಹಮ್ಮದ್ ಆರಿಫ್ ಖಾನ್ ಸೇರಿದಂತೆ 10 ಅಥ್ಲೀಟ್‌ ಗಳನ್ನು ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವಾಲಯ ಒಲಿಂಪಿಕ್ ಕೋಶದ ಅಭಿಯಾನ (ಎಂಒಸಿ) ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಾಪ್ಸ್)  ಬೆಂಬಲ ಒದಗಿಸುವ ಕ್ರೀಡಾಪಟುಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. 

ಈ ಐವರು ಅಥ್ಲೀಟ್‌ ಗಳನ್ನು ಪ್ರಮುಖ ಗುಂಪಿನಲ್ಲಿ ಸೇರಿಸಿದ್ದರೆ, ಗಾಲ್ಫ್ ಆಟಗಾರರಾದ ಶುಭಂಕರ್ ಶರ್ಮಾ ಮತ್ತು ತ್ವೇಸಾ ಮಲಿಕ್ ಮತ್ತು ಜುಡೋಕಾಸ್ ಯಶ್ ಘಂಗಾಸ್, ಉನ್ನತಿ ಶರ್ಮಾ ಮತ್ತು ಲಿಂಥೋಯ್ ಚನಂಬಮ್ ಅವರನ್ನು ಅಭಿವೃದ್ಧಿ ಗುಂಪಿಗೆ ಸೇರಿಸಲಾಗಿದೆ. ಈ ಸೇರ್ಪಡೆಗಳು ಪ್ರಮುಖ ಗುಂಪಿನಲ್ಲಿ 107 ಸೇರಿದಂತೆ ಟಾಪ್ಸ್ ಅಡಿಯಲ್ಲಿ ಕ್ರೀಡಾಪಟುಗಳ ಸಂಖ್ಯೆಯನ್ನು 301 ಕ್ಕೆ ಹೆಚ್ಚಿಸಿದೆ.
ಸಚಿವಾಲಯವು ಪ್ರಾಥಮಿಕವಾಗಿ ಪ್ರತಿ ರಾಷ್ಟ್ರೀಯ ಕ್ರೀಡಾ ಒಕ್ಕೂಟದ ತರಬೇತಿ ಮತ್ತು ಸ್ಪರ್ಧೆಯ ವಾರ್ಷಿಕ ಕ್ಯಾಲೆಂಡರ್ (ಎ.ಸಿ.ಟಿ.ಸಿ.) ಅಡಿಯಲ್ಲಿ ಗಣ್ಯ ಕ್ರೀಡಾಪಟುಗಳನ್ನು ಬೆಂಬಲಿಸುತ್ತದೆ. ಟಾಪ್ಸ್  ಎ.ಸಿ.ಟಿ.ಸಿ. ಅಡಿಯಲ್ಲಿ ಬಾರದ ಕ್ಷೇತ್ರಗಳಲ್ಲಿನ ಕ್ರೀಡಾಪಟುಗಳಿಗೆ ವಿಶಿಷ್ಟ ಬೆಂಬಲವನ್ನು ಒದಗಿಸುತ್ತದೆ ಮತ್ತು ಅವರು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಲು ತಯಾರಿ ನಡೆಸಲು ಕ್ರೀಡಾಪಟುಗಳ ನಿರೀಕ್ಷಿತ ಅಗತ್ಯಗಳನ್ನು ಪೂರೈಸುತ್ತದೆ.

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಮೂಲದ ಮೊಹಮ್ಮದ್ ಆರಿಫ್ ಖಾನ್  ಮುಂದಿನ ತಿಂಗಳು ಬೀಜಿಂಗ್‌ ನಲ್ಲಿ ನಡೆಯಲಿರುವ 2022ರ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಆಲ್ಪೈನ್ ಸ್ಕೀಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯುರೋಪ್‌ ನಲ್ಲಿ ಐದು ವಾರಗಳ ತರಬೇತಿ ಮತ್ತು ಉಪಕರಣಗಳ ಖರೀದಿಯ ವೆಚ್ಚಕ್ಕಾಗಿ ಎಂ.ಓ.ಸಿ. 17.46 ಲಕ್ಷ ರೂ.ಗಳಿಗೆ ಅನುಮೋದನೆ ನೀಡಿದೆ. 
ರೈಡಿಂಗ್ ಸೀಗ್ನಿಯರ್ ಮೆಡಿಕಾಟ್, ಫೌವಾದ್ ಮಿರ್ಜಾ ಅವರು ಜಕಾರ್ತಾದಲ್ಲಿ ನಡೆದ 2018ರ ಏಷ್ಯನ್ ಗೇಮ್ಸ್‌ ನಲ್ಲಿ ಸ್ಪರ್ಧೆಯಲ್ಲಿ-ವೈಯಕ್ತಿಕ ಬೆಳ್ಳಿ ಪದಕವನ್ನು ಗೆದ್ದಿದ್ದರು ಮತ್ತು ಕಳೆದ ವರ್ಷ ಟೋಕಿಯೊದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ 23ನೇ ಸ್ಥಾನ ಪಡೆದಿದ್ದರು. ಜರ್ಮನಿ ನೆಲೆಸಿರುವ ಅವರು ಪ್ರಸ್ತುತ ವಿಶ್ವ ಶ್ರೇಯಾಂಕದಲ್ಲಿ 87ನೇ ಸ್ಥಾನದಲ್ಲಿದ್ದಾರೆ. 29 ವರ್ಷ ವಯಸ್ಸಿನ ಆಸ್ಟ್ರೈಡ್ ಮೊಕಟೂ ಅವರು ಸೆಪ್ಟೆಂಬರ್‌ ನಲ್ಲಿ ಸೊಪೊಟ್‌ ನಲ್ಲಿ ಮತ್ತು ನವೆಂಬರ್‌ ನಲ್ಲಿ ಪ್ರಟೋನಿ ಡೆಲ್ ವಿವಾರೊದಲ್ಲಿ ಮೊದಲ-10 ಸ್ಥಾನಗಳಲ್ಲಿ ಎರಡನೆಯವರಾಗಿದ್ದರು. 
ಬೆಂಗಳೂರಿನವರಾದ 23 ವರ್ಷದ ಅದಿತಿ ಅಶೋಕ್ ಟೋಕಿಯೋ 2020ರ ಸ್ಪರ್ಧೆಯ ಉದ್ದಕ್ಕೂ ಪದಕದ ಗೆಲ್ಲುವ ನಿರೀಕ್ಷೆ ಹುಟ್ಟಿಸಿ, ದೇಶದ ಗಮನ ಸೆಳೆದರು. ಹರಿಯಾಣದ ಜಜ್ಜರ್‌ ನವರಾದ ಮತ್ತು 2017ರ ಬೇಸಿಗೆ ಡೆಫ್ಲಿಂಪಿಕ್ಸ್‌ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ 21 ವರ್ಷದ ಎಡಗೈ ಆಟಗಾರ್ತಿ ದೀಕ್ಷಾ ದಾಗರ್ ಕಳೆದ ವರ್ಷ ಒಲಿಂಪಿಕ್ ಕ್ರೀಡಾಕೂಟದಲ್ಲಿ 50ನೇ ಸ್ಥಾನ ಗಳಿಸಿದ್ದರು.
ಕಳೆದ ತಿಂಗಳು ಬೈರುತ್‌ ನ ಲೆಬನಾನ್‌ ನಲ್ಲಿ ನಡೆದ ಏಷ್ಯಾ-ಓಷಿಯಾನಿಯಾ ಜೂನಿಯರ್ ಚಾಂಪಿಯನ್‌ ಶಿಪ್‌ನಲ್ಲಿ ಹದಿಹರೆಯದ ಜುಡೋಕಾಸ್ ಯಶ್ ಘಂಗಾಸ್ (+100 ಕೆಜಿ ಪ್ರವರ್ಗ), ಲಿಂಥೋಯ್ ಚನಂಬಮ್ (57 ಕೆಜಿ) ಮತ್ತು ಉನ್ನತಿ ಶರ್ಮಾ (63 ಕೆಜಿ) ತಲಾ ಬೆಳ್ಳಿ ಪದಕ ಗೆದ್ದಿದ್ದರು. ಹರಿಯಾಣದ ಪಾಣಿಪತ್‌ ನ ಯಶ್ ಘಂಗಸ್, ಮಣಿಪುರದ ಲಿಂಟೋ ಚನಂಬಮ್ ಮತ್ತು ಉತ್ತರಾಖಂಡದ ಉನ್ನತಿ ಅಂಕಣದಲ್ಲಿ  ಸಾಮರ್ಥ್ಯ ಮೆರೆದಿದ್ದರೆ.

***



(Release ID: 1788966) Visitor Counter : 187