ಪ್ರಧಾನ ಮಂತ್ರಿಯವರ ಕಛೇರಿ

ಕಾನ್ಪುರ ಮೆಟ್ರೋ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 28 DEC 2021 5:07PM by PIB Bengaluru

ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಹರ್ದೀಪ್ ಪುರಿ ಜಿ, ಯುಪಿ ಉಪ ಮುಖ್ಯಮಂತ್ರಿ ಶ್ರೀ ಕೇಶವ ಪ್ರಸಾದ್ ಮೌರ್ಯ ಜಿ, ಸಾಧ್ವಿ ನಿರಂಜನ್ ಜ್ಯೋತಿ ಜಿ, ಭಾನುಪ್ರತಾಪ್ ವರ್ಮಾ ಜಿ, ಯುಪಿ ಸರ್ಕಾರದ ಸಚಿವರುಗಳಾದ ಶ್ರೀ ಸತೀಶ್ ಮಹಾನಾ ಜಿ, ನೀಲಿಮಾ ಕಟಿಯಾರ್ ಜಿ, ರಣವೇಂದ್ರ ಪ್ರತಾಪ್ ಜಿ, ಲಖನ್ ಸಿಂಗ್ ಜಿ ಮತ್ತು ಅಜಿತ್ ಪಾಲ್ ಜಿ, ಇಲ್ಲಿ ಉಪಸ್ಥಿತರಿರುವ ಎಲ್ಲ ಗೌರವಾನ್ವಿತ ಸಂಸದರು ಮತ್ತು ಶಾಸಕರು ಮತ್ತು ಜನಪ್ರತಿನಿಧಿಗಳು ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ! ಋಷಿಗಳ ನಾಡು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳ ಸ್ಫೂರ್ತಿಯ ನಾಡು ಮತ್ತು ಸ್ವತಂತ್ರ ಭಾರತದ ಕೈಗಾರಿಕಾ ಸಾಮರ್ಥ್ಯಕ್ಕೆ ಶಕ್ತಿ ನೀಡುವ ಕಾನ್ಪುರಕ್ಕೆ ನಾನು ನಮಸ್ಕರಿಸುತ್ತೇನೆಪಂಡಿತ್ ದೀನದಯಾಳ್ ಉಪಾಧ್ಯಾಯ, ಸುಂದರ್ ಸಿಂಗ್ ಭಂಡಾರಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಂತಹ ದೂರದೃಷ್ಟಿಯ ನಾಯಕತ್ವವನ್ನು ರೂಪಿಸುವಲ್ಲಿ ಕಾನ್ಪುರ ಪ್ರಮುಖ ಪಾತ್ರ ವಹಿಸಿದೆ. ಮತ್ತು ಇಂದು ಕಾನ್ಪುರ ಮಾತ್ರವಲ್ಲದೆ ವರುಣ ದೇವರು ಕೂಡ ಸಂತೋಷದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.

ಸ್ನೇಹಿತರೇ,

ಕಾನ್ಪುರದ ಜನರ ಹಾಸ್ಯ, ಕಾನ್ಪುರಿಯ ಶೈಲಿ ಮತ್ತು ಅವರ ತ್ವರಿತ ಪ್ರತಿಕ್ರಿಯೆಯು ಹೋಲಿಕೆಗೆ ಮೀರಿದೆ. ತಗ್ಗು ಕೆ ಲಡ್ಡು (ಅಂಗಡಿ) ನಲ್ಲಿ ಏನು ಬರೆಯಲಾಗಿದೆ? ಅಂತಹ ಸಂಬಂಧಿ ಯಾರೂ ಇಲ್ಲ .. (ಯಾರಿಗೆ ನಾವು ಮೋಸ ಮಾಡಿಲ್ಲ). ನೀವು ಹೇಳುತ್ತಿರುವುದನ್ನು ನೀವು ಹೇಳುತ್ತಲೇ ಇರುತ್ತೀರಿ, ಆದರೆ ಕಾನ್ಪುರದಲ್ಲಿ ಪ್ರೀತಿಯನ್ನು ಪಡೆಯದವರು ಯಾರೂ ಇಲ್ಲ ಎಂದು ನಾನು ಹೇಳುತ್ತೇನೆ. ಸ್ನೇಹಿತರೇ, ನಾನು ಸಂಘಟನಾ ಕಾರ್ಯಗಳಿಗಾಗಿ ನಿಮ್ಮನ್ನು ಭೇಟಿಯಾಗುತ್ತಿದ್ದಾಗ, ನಾನು  ಒಂದು ಮಾತನ್ನು  ಕೇಳಿಸಿಕೊಳ್ಳುತ್ತಿದ್ದೆ - 'ಜಾಡೆ ರಹೋ ಕಳತ್ತರ್-ಗಂಜ್' !!! ಇಂದಿನ ದಿನಗಳಲ್ಲಿ ನೀವು ಅದನ್ನು ಬಳಸುತ್ತಿದ್ದೀರಾ ಅಥವಾ ಹೊಸ ತಲೆಮಾರು ಮರೆತುಹೋಗಿದೆಯಾ?

ಸ್ನೇಹಿತರೇ,

ಇಂದು ಮಂಗಳವಾರ ಮತ್ತು ಪಂಕಿಯ ಹನುಮಾನ್ ಜಿ ಅವರ ಆಶೀರ್ವಾದದೊಂದಿಗೆ ಇಂದು ಯುಪಿ ಅಭಿವೃದ್ಧಿಯಲ್ಲಿ ಮತ್ತೊಂದು ಸುವರ್ಣ ಅಧ್ಯಾಯವನ್ನು ಸೇರಿಸಲಾಗುತ್ತಿದೆ. ಇಂದು ಕಾನ್ಪುರಕ್ಕೆ ಮೆಟ್ರೋ ಸಂಪರ್ಕ ಸಿಕ್ಕಿದೆ. ಕಾನ್ಪುರ ಈಗ ಬೀನಾ ರಿಫೈನರಿಗೆ ಸಂಪರ್ಕ ಹೊಂದಿದೆ. ಇದು ಪೆಟ್ರೋಲಿಯಂ ಉತ್ಪನ್ನಗಳನ್ನು ಕಾನ್ಪುರದಲ್ಲಿ ಹಾಗೂ ಯುಪಿಯ ಹಲವು ಜಿಲ್ಲೆಗಳಲ್ಲಿ ಸುಲಭವಾಗಿ  ಸಿಗುವಂತೆ ಮಾಡುತ್ತದೆ. ಎರಡು ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಮತ್ತು ಉತ್ತರ ಪ್ರದೇಶಕ್ಕೂ ಅಭಿನಂದನೆಗಳು! ನಾನು ಇಲ್ಲಿಗೆ ಬರುವ ಮೊದಲು ಐಐಟಿ ಕಾನ್ಪುರದಲ್ಲಿ ಕಾರ್ಯಕ್ರಮವಿತ್ತು. ಮೊದಲ ಬಾರಿಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ಕಾನ್ಪುರದ ಜನರ ಉತ್ಸಾಹವನ್ನು ವೀಕ್ಷಿಸಲು ನಾನು ಬಯಸುತ್ತೇನೆ. ಹಾಗಾಗಿ ನಾನು ಮೆಟ್ರೋದಲ್ಲಿ ಪ್ರಯಾಣಿಸಲು ನಿರ್ಧರಿಸಿದೆ ಮತ್ತು ಇದು ನನಗೆ ನಿಜವಾಗಿಯೂ ಸ್ಮರಣೀಯ ಅನುಭವವಾಗಿದೆ.

ಸ್ನೇಹಿತರೇ,

ಹಿಂದೆ ಯುಪಿಯಲ್ಲಿ ಸರ್ಕಾರಗಳನ್ನು ನಡೆಸುತ್ತಿದ್ದ ಜನರು ಸಮಯದ ಮಹತ್ವವನ್ನು ಅರ್ಥಮಾಡಿಕೊಳ್ಳಲಿಲ್ಲ. 21ನೇ ಶತಮಾನದ ಅವಧಿಯಲ್ಲಿ ಯುಪಿ ಕ್ಷಿಪ್ರ ಪ್ರಗತಿಯನ್ನು ಸಾಧಿಸಬೇಕಾಗಿದ್ದಾಗ, ಹಿಂದಿನ ಸರ್ಕಾರಗಳು ಅಮೂಲ್ಯ ಸಮಯ ಮತ್ತು ಪ್ರಮುಖ ಅವಕಾಶಗಳನ್ನು ಕಳೆದುಕೊಂಡವು. ಉತ್ತರಪ್ರದೇಶದ ಅಭಿವೃದ್ಧಿಯು ಅವರ ಆದ್ಯತೆಗಳಲ್ಲಿರಲಿಲ್ಲ ಮತ್ತು ಅವರ ಬದ್ಧತೆಯು ಯುಪಿಯ ಜನರಿಗೆ ಇರಲಿಲ್ಲಇಂದು ಉತ್ತರ ಪ್ರದೇಶದ ಡಬಲ್ ಇಂಜಿನ್ ಸರ್ಕಾರವು ಹಿಂದಿನ ಸಮಯದ ನಷ್ಟವನ್ನು ಸರಿದೂಗಿಸುವಲ್ಲಿ ತೊಡಗಿದೆ. ನಾವು ದುಪ್ಪಟ್ಟು ವೇಗದಲ್ಲಿ ಕೆಲಸ ಮಾಡುತ್ತಿದ್ದೇವೆ. ಇಂದು ದೇಶದ ಅತಿ ದೊಡ್ಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯುಪಿಯಲ್ಲಿ ನಿರ್ಮಾಣವಾಗುತ್ತಿದೆ. ಇಂದು ದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಯುಪಿಯಲ್ಲಿ ನಿರ್ಮಾಣವಾಗುತ್ತಿದೆ. ಇಂದು, ದೇಶದ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಯುಪಿಯಲ್ಲಿ ನಿರ್ಮಿಸಲಾಗುತ್ತಿದೆ. ಯುಪಿ ಕೂಡ ಮೀಸಲಾದ ಸರಕು ಸಾಗಣೆ ಕಾರಿಡಾರ್‌ನ ಕೇಂದ್ರವಾಗಲಿದೆ. ಅಕ್ರಮ ಶಸ್ತ್ರಾಸ್ತ್ರ ಗ್ಯಾಂಗ್‌ಗಳಿಗೆ ಕುಖ್ಯಾತವಾಗಿದ್ದ  ಯುಪಿ, ದೇಶದ ಭದ್ರತೆಗಾಗಿ ರಕ್ಷಣಾ ಕಾರಿಡಾರ್ ಅನ್ನು ನಿರ್ಮಿಸುತ್ತಿದೆ. ಸ್ನೇಹಿತರೇ, ಯುಪಿಯ ಜನರು ಇದನ್ನೇ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸಲು ಕಾರಣಎಂದು ಹೇಳುತ್ತಿರುವುದು! ವ್ಯತ್ಯಾಸವು  ಯೋಜನೆಗಳಲ್ಲಿ ಮಾತ್ರವಲ್ಲ; ಆದರ ಕೆಲಸದ ಶೈಲಿಯಲ್ಲಿದೆ. ಡಬಲ್ ಇಂಜಿನ್ ಸರ್ಕಾರವು ಪ್ರಾರಂಭಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಗಲಿರುಳು ಶ್ರಮಿಸುತ್ತದೆ. ಕಾನ್ಪುರ ಮೆಟ್ರೋ ನಿರ್ಮಾಣವನ್ನು ನಮ್ಮ ಆಡಳಿತದಲ್ಲಿ ಪ್ರಾರಂಭಿಸಲಾಯಿತು ಮತ್ತು ನಮ್ಮ ಸರ್ಕಾರವೇ ಅದನ್ನು ಉದ್ಘಾಟಿಸುತ್ತಿದೆ. ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಗೆ ನಮ್ಮ ಸರ್ಕಾರವೇ ಅಡಿಗಲ್ಲು ಹಾಕಿತು ಮತ್ತು ನಮ್ಮ ಸರ್ಕಾರ ಅದನ್ನು ಪೂರ್ಣಗೊಳಿಸಿತು. ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಗೆ ನಮ್ಮ ಸರ್ಕಾರವೇ ಅಡಿಗಲ್ಲು ಹಾಕಿದೆ ಮತ್ತು ನಾವು ಅದನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅರ್ಪಿಸಿದ್ದೇವೆ. ನಾನು ಅಂತಹ ಅನೇಕ ಯೋಜನೆಗಳನ್ನು ಪರಿಗಣಿಸಬಹುದು. ಅದು ಪೂರ್ವ ಅಥವಾ ಪಶ್ಚಿಮ ಅಥವಾ ಪ್ರದೇಶವೇ ಆಗಿರಲಿ, ನಾವು ಯುಪಿಯಲ್ಲಿ ಪ್ರತಿಯೊಂದು ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಇದು ಅವಶ್ಯಕವಾಗಿದೆ ಏಕೆಂದರೆ ಯಾವುದೇ ಯೋಜನೆಯು ಸಮಯಕ್ಕೆ ಸರಿಯಾಗಿ ಪೂರ್ಣಗೊಂಡಾಗ, ದೇಶದ ಹಣವನ್ನು ಸರಿಯಾಗಿ ಬಳಸಲಾಗುತ್ತದೆ ಮತ್ತು ದೇಶದ ಜನರು ಸಹ ಪ್ರಯೋಜನ ಪಡೆಯುತ್ತಾರೆ. ನೀವು ಹೇಳಿ, ಕಾನ್ಪುರದ ಜನರು ವರ್ಷಗಳಿಂದ ಟ್ರಾಫಿಕ್ ಜಾಮ್ ಬಗ್ಗೆ ದೂರು ನೀಡುತ್ತಿದ್ದರುನೀವು ನಿಮ್ಮ ಅಮೂಲ್ಯ ಸಮಯ ಮತ್ತು ಹಣವನ್ನು ಕಳೆದುಕೊಳ್ಳುತ್ತೀರಿ. ಇದೀಗ ಮೊದಲ ಹಂತದ ಒಂಬತ್ತು ಕಿ.ಮೀ ಮಾರ್ಗ ಆರಂಭಗೊಂಡಿದ್ದು, ದೂರುಗಳ ಪರಿಹಾರಕ್ಕೆ ನಾಂದಿ ಹಾಡಲಾಗಿದೆ. ಕೊರೊನಾ ಸಂಕಷ್ಟದ ನಡುವೆಯೂ ಎರಡು ವರ್ಷಗಳಲ್ಲಿ ವಿಭಾಗ ಕಾರ್ಯಾರಂಭ ಮಾಡಿರುವುದು ಶ್ಲಾಘನೀಯ.

ಸ್ನೇಹಿತರೇ,

ನಮ್ಮ ದೇಶದಲ್ಲಿ ಸ್ವಾತಂತ್ರ್ಯಾನಂತರದ ದಶಕಗಳಿಂದಲೂ ಹೊಸದೊಂದು ಕೆಲಸ ಮಾಡಬೇಕೆಂದರೆ ಮೂರ್ನಾಲ್ಕು ದೊಡ್ಡ ನಗರಗಳಲ್ಲಿ ಮಾತ್ರ ಮಾಡಬೇಕು ಎನ್ನುವ ಗ್ರಹಿಕೆ ಇತ್ತು. ದೇಶದ ಪ್ರಮುಖ ಮೆಟ್ರೊ ನಗರಗಳನ್ನು ಹೊರತುಪಡಿಸಿ ಇತರ ನಗರಗಳನ್ನು ತಮ್ಮ ಪಾಡಿಗೆ ಬಿಡಲಾಗಿತ್ತು. ಹಿಂದೆ ಸರ್ಕಾರಗಳನ್ನು ನಡೆಸುತ್ತಿರುವವರಿಗೆ ನಗರಗಳಲ್ಲಿ ವಾಸಿಸುವ ಜನರ ಸಾಮರ್ಥ್ಯ ಮತ್ತು ಅವರಿಗೆ ಸೌಲಭ್ಯಗಳನ್ನು ಒದಗಿಸುವ ಮಹತ್ವವನ್ನು ಅರ್ಥಮಾಡಿಕೊಳ್ಳಲಾಗಿಲ್ಲ. ಹಿಂದೆ ಸರಕಾರಗಳಲ್ಲಿದ್ದವರು ನಗರಗಳಲ್ಲಿ ವಾಸಿಸುವ ಕೋಟ್ಯಂತರ ಜನರ ಆಶೋತ್ತರಗಳಿಗೆ ಕಿಮ್ಮತ್ತು ನೀಡಲಿಲ್ಲ. ಈಗ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿರುವವರಿಗೆ ಅಭಿವೃದ್ಧಿಯ ಉದ್ದೇಶವೇ ಇರಲಿಲ್ಲ. ಈಗ ನಮ್ಮ ಸರ್ಕಾರವೂ ದೇಶದ ಇಂತಹ ಪ್ರಮುಖ ನಗರಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ ನಗರಗಳಿಗೆ ಉತ್ತಮ ಸಂಪರ್ಕವಿದೆ, ಉನ್ನತ ಶಿಕ್ಷಣದ ಉತ್ತಮ ಸಂಸ್ಥೆಗಳಿವೆ, ವಿದ್ಯುತ್ ಮತ್ತು ನೀರಿನ ಸಮಸ್ಯೆ ಇಲ್ಲ ಮತ್ತು ಆಧುನಿಕ ಒಳಚರಂಡಿ ವ್ಯವಸ್ಥೆ ಇದೆ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಇನ್ನು ಮೆಟ್ರೋ ಬಗ್ಗೆ ಮಾತನಾಡುವುದಾದರೆ ಕಾನ್ಪುರ ಮೆಟ್ರೋ ಮೊದಲ ಹಂತವನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ಆಗ್ರಾ ಮತ್ತು ಮೀರತ್ ಮೆಟ್ರೋ ಕಾಮಗಾರಿ ಭರದಿಂದ ಸಾಗುತ್ತಿದೆ. ಮೆಟ್ರೋ ಸೇವೆಯನ್ನು ಇತರ ಅನೇಕ ನಗರಗಳಲ್ಲಿಯೂ ಪ್ರಸ್ತಾಪಿಸಲಾಗಿದೆ. ಲಕ್ನೋ, ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಮೆಟ್ರೋವನ್ನು ನಿರಂತರವಾಗಿ ವಿಸ್ತರಿಸಲಾಗುತ್ತಿದೆ. ಯುಪಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ವೇಗ ಅಭೂತಪೂರ್ವವಾಗಿದೆ.

ಸ್ನೇಹಿತರೇ,

ಅಂಕಿಅಂಶಗಳನ್ನು ಎಚ್ಚರಿಕೆಯಿಂದ ಆಲಿಸಿರಿ. ಯುಪಿಯಲ್ಲಿ ಮೆಟ್ರೋದ ಒಟ್ಟು ಉದ್ದವು 2014 ಮೊದಲು 9 ಕಿಲೋಮೀಟರ್‌ಗಳಷ್ಟಿತ್ತು. 2014 ಮತ್ತು 2017 ನಡುವೆ, ಮೆಟ್ರೋದ ಉದ್ದವು 18 ಕಿಲೋಮೀಟರ್‌ಗಳಿಗೆ ಏರಿತು. ನಾವು ಕಾನ್ಪುರ ಮೆಟ್ರೋವನ್ನು ಸೇರಿಸಿದರೆ, ಯುಪಿಯಲ್ಲಿ ಮೆಟ್ರೋದ ಉದ್ದವು ಈಗ 90 ಕಿಲೋಮೀಟರ್‌ಗಳಿಗಿಂತ ಹೆಚ್ಚು. ಹಿಂದಿನ ಸರ್ಕಾರಗಳ ಕಾರ್ಯಶೈಲಿ ಮತ್ತು ಯೋಗಿ ಜಿ ಸರ್ಕಾರದ ನಡುವಿನ ವ್ಯತ್ಯಾಸವನ್ನು ನೀವು ನೋಡಬಹುದು. ಆದ್ದರಿಂದ, ವ್ಯತ್ಯಾಸವು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಯುಪಿ ಹೇಳುತ್ತಿದೆ.

ಸ್ನೇಹಿತರೇ,

2014 ಮೊದಲು ದೇಶದಾದ್ಯಂತ ಕೇವಲ ಐದು ನಗರಗಳಲ್ಲಿ ಮಾತ್ರ ಮೆಟ್ರೋ ಸೌಲಭ್ಯವಿತ್ತು. ಅದೇನೆಂದರೆ, ಮೆಟ್ರೋ ಸಿಟಿಗಳೆಂದು ಕರೆಯಲ್ಪಡುವ ನಗರಗಳಲ್ಲಿ ಮಾತ್ರ ಮೆಟ್ರೋ ರೈಲು ಲಭ್ಯವಿತ್ತು. ಇಂದು ಯುಪಿಯ ಐದು ನಗರಗಳಲ್ಲಿ ಮೆಟ್ರೋಗಳು ಓಡುತ್ತಿವೆ. ಇಂದು ದೇಶದ 27 ನಗರಗಳಲ್ಲಿ ಮೆಟ್ರೋ ರೈಲಿನ ಕಾಮಗಾರಿ ನಡೆಯುತ್ತಿದೆ. ಇಂದು ಆಯ್ದ ಮೆಟ್ರೋ ನಗರಗಳಲ್ಲಿ ಲಭ್ಯವಿರುವ ಮೆಟ್ರೋ ರೈಲಿನ ಸೌಲಭ್ಯವನ್ನು ಇಂದು ನಗರಗಳಲ್ಲಿ ವಾಸಿಸುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸಹ ಪಡೆಯುತ್ತಿದ್ದಾರೆ. ನಗರ ಬಡವರ ಜೀವನಮಟ್ಟವನ್ನು ಹೆಚ್ಚಿಸುವ ಪ್ರಯತ್ನಗಳು ಟೈರ್-2 ಮತ್ತು ಟೈರ್-3 ನಗರಗಳಲ್ಲಿ ಯುವಕರ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ. ಡಬಲ್ ಎಂಜಿನ್ ಸರ್ಕಾರ ರಚನೆಯಾದ ನಂತರ ಯುಪಿಯಲ್ಲಿ ಇದು ಸಾಕಷ್ಟು ವೇಗವನ್ನು ಪಡೆದುಕೊಂಡಿದೆ.

ಸ್ನೇಹಿತರೇ,

ಯಾವುದೇ ದೇಶ ಅಥವಾ ರಾಜ್ಯವು ಅಸಮತೋಲಿತ ಅಭಿವೃದ್ಧಿಯೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ. ದಶಕಗಳಿಂದ ನಮ್ಮ ದೇಶದಲ್ಲಿ ಒಂದು ಭಾಗ ಅಭಿವೃದ್ಧಿಗೊಂಡರೆ ಇನ್ನೊಂದು ಭಾಗವನ್ನು ಗಮನಿಸದೆ ಬಿಡುವ ಪರಿಸ್ಥಿತಿ ಇತ್ತು. ರಾಜ್ಯ ಮತ್ತು ಸಮಾಜದ ಮಟ್ಟದಲ್ಲಿ ಅಸಮಾನತೆಯನ್ನು ನಿವಾರಿಸುವುದು ಅಷ್ಟೇ ಮುಖ್ಯ. ಆದ್ದರಿಂದ ನಮ್ಮ ಸರ್ಕಾರಸಬ್ಕಾ ಸಾಥ್, ಸಬ್ಕಾ ವಿಕಾಸ್ಮಂತ್ರದ ಮೇಲೆ ಕೆಲಸ ಮಾಡುತ್ತಿದೆ. ಸಮಾಜದ ಪ್ರತಿಯೊಂದು ವರ್ಗ, ದಲಿತರು, ಶೋಷಿತರು, ಸಂತ್ರಸ್ತರು, ವಂಚಿತರು, ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯಗಳು ನಮ್ಮ ಸರ್ಕಾರದ ಯೋಜನೆಗಳಿಂದ ಸಮಾನ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆಹಿಂದೆಂದೂ ಕಾಳಜಿ ವಹಿಸದ ಜನರ ಬಗ್ಗೆ ನಮ್ಮ ಸರ್ಕಾರ ವಿಶೇಷ ಗಮನ ಹರಿಸುತ್ತಿದೆ.

ಸ್ನೇಹಿತರೇ,

ನಗರಗಳಲ್ಲಿ ವಾಸಿಸುವ ಬಡವರನ್ನೂ ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿವೆ. ಇಂದು ಪ್ರಥಮ ಬಾರಿಗೆ ನಮ್ಮ ಸರಕಾರವು ನಗರ ಪ್ರದೇಶದ ಬಡವರಿಗಾಗಿ ಸಂಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ. ಒಂದು ಉದಾಹರಣೆ ಕೊಡುತ್ತೇನೆ. 2017 ಹಿಂದಿನ 10 ವರ್ಷಗಳಲ್ಲಿ, ಯುಪಿಯಲ್ಲಿ ನಗರ ಬಡವರಿಗೆ ಕೇವಲ 2.5 ಲಕ್ಷ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಯುಪಿ ಸರ್ಕಾರವು ನಗರ ಪ್ರದೇಶದ ಬಡವರಿಗೆ 17 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಿದೆ. ಪೈಕಿ 9.5 ಲಕ್ಷ ಮನೆಗಳು ಈಗಾಗಲೇ ನಿರ್ಮಾಣಗೊಂಡಿದ್ದು, ಉಳಿದವುಗಳ ಕಾಮಗಾರಿ ಭರದಿಂದ ಸಾಗಿದೆ.

ಸಹೋದರ ಸಹೋದರಿಯರೇ,

ನಮ್ಮ ಹಳ್ಳಿಗಳಿಂದ ಅನೇಕ ಜನರು ನಗರಗಳಲ್ಲಿ ಕೆಲಸ ಮಾಡಲು ಬರುತ್ತಾರೆ. ಇವರಲ್ಲಿ ಹಲವರು ಗಾಡಿಗಳಲ್ಲಿ ಸಾಮಾನು ಮಾರಿ ಜೀವನ ಸಾಗಿಸುತ್ತಿದ್ದಾರೆ. ಇಂದು ಮೊಟ್ಟಮೊದಲ ಬಾರಿಗೆ ನಮ್ಮ ಸರ್ಕಾರ ಜನರನ್ನು ಗಮನಿಸಿದೆ. ನಮ್ಮ ಸರ್ಕಾರವು ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಇದರಿಂದ ಅವರು ಬ್ಯಾಂಕುಗಳಿಂದ ಸುಲಭವಾಗಿ ಸಾಲವನ್ನು ಪಡೆಯಬಹುದು ಮತ್ತು ಅವರು ಡಿಜಿಟಲ್ ವಹಿವಾಟುಗಳನ್ನು ಸಹ ಮಾಡುತ್ತಾರೆ. ಕಾನ್ಪುರದಲ್ಲಿ ಪಿಎಂ ಸ್ವನಿಧಿ ಯೋಜನೆಯಿಂದ ಅನೇಕ ಬೀದಿ ವ್ಯಾಪಾರಿಗಳು ಪ್ರಯೋಜನ ಪಡೆದಿದ್ದಾರೆ. ಯುಪಿಯಲ್ಲಿ ಸ್ವನಿಧಿ ಯೋಜನೆ ಅಡಿಯಲ್ಲಿ ಏಳು ಲಕ್ಷಕ್ಕೂ ಹೆಚ್ಚು ಜನರಿಗೆ 700 ಕೋಟಿ ರೂ.ಗಿಂತ ಹೆಚ್ಚು ನೀಡಲಾಗಿದೆ.

ಸಹೋದರ ಸಹೋದರಿಯರೇ,

ಜನರ ಅಗತ್ಯಗಳನ್ನು ಅರಿತು ಅವರ ಸೇವೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯುಪಿ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಡಬಲ್ ಎಂಜಿನ್ ಸರ್ಕಾರವು ಶ್ರಮಿಸುತ್ತಿದೆ. ಹಿಂದೆ ಯುಪಿಯಲ್ಲಿ ಲಕ್ಷಾಂತರ ಮನೆಗಳಿಗೆ ಪೈಪ್‌ಲೈನ್ ನೀರು ಲಭ್ಯವಿರಲಿಲ್ಲ. ಇಂದು ನಾವು ಹರ್ ಘರ್ ಜಲ್ ಮಿಷನ್ ಅಡಿಯಲ್ಲಿ ಯುಪಿಯ ಪ್ರತಿ ಮನೆಗೆ ಶುದ್ಧ ನೀರನ್ನು ಒದಗಿಸುವಲ್ಲಿ ತೊಡಗಿದ್ದೇವೆ. ಕೊರೊನಾದ ಸಂಕಷ್ಟದ ಸಮಯದಲ್ಲಿ, ನಮ್ಮ ಸರ್ಕಾರವು ಯುಪಿಯ 150 ದಶಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ಒದಗಿಸಿದೆ.

ಸ್ನೇಹಿತರೇ,

ಹಿಂದೆ ಸರ್ಕಾರಗಳಲ್ಲಿದ್ದವರು ಐದು ವರ್ಷ ಲಾಟರಿ ಹೊಡೆದಿದೆ ಎಂಬ ಮನಸ್ಥಿತಿಯಲ್ಲಿ ಸರ್ಕಾರವನ್ನು ನಡೆಸುತ್ತಿದ್ದರು ಮತ್ತು ಯುಪಿಯನ್ನು ಸಾಧ್ಯವಾದಷ್ಟು ದೋಚುತ್ತಿದ್ದರು. ಯುಪಿಯಲ್ಲಿ ಹಿಂದಿನ ಸರ್ಕಾರಗಳು ಪ್ರಾರಂಭಿಸಿದ ಯೋಜನೆಗಳಲ್ಲಿ ಸಾವಿರಾರು ಕೋಟಿ ಹಗರಣಗಳು ಹೇಗೆ ನಡೆದಿವೆ ಎನ್ನುವುದನ್ನು ನೀವೇ ನೋಡಿದ್ದೀರಿ. ಜನರು ಯುಪಿಗೆ ದೊಡ್ಡ ಯೋಜನೆಗಳ  ಮೇಲೆ ಎಂದಿಗೂ ಕೆಲಸ ಮಾಡಲಿಲ್ಲ, ದೊಡ್ಡ ದೃಷ್ಟಿಯೊಂದಿಗೆ ಕೆಲಸ ಮಾಡಲಿಲ್ಲ. ಅವರು ಉತ್ತರಪ್ರದೇಶದ ಜನತೆಗೆ ತಮ್ಮನ್ನು ಜವಾಬ್ದಾರರೆಂದು ಪರಿಗಣಿಸಲಿಲ್ಲ. ಇಂದು, ಡಬಲ್ ಇಂಜಿನ್ ಸರ್ಕಾರವು ಯುಪಿಯನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಅತ್ಯಂತ ಪ್ರಾಮಾಣಿಕತೆ ಮತ್ತು ಸಂಪೂರ್ಣ ಹೊಣೆಗಾರಿಕೆಯೊಂದಿಗೆ ಕೆಲಸ ಮಾಡುತ್ತಿದೆ. ದೊಡ್ಡ ಗುರಿಗಳನ್ನು ಹೊಂದಿಸುವುದು ಮತ್ತು ಅವುಗಳನ್ನು ಸಾಧಿಸುವುದು ಹೇಗೆ ಎನ್ನುವುದು ಡಬಲ್ ಎಂಜಿನ್ ಸರ್ಕಾರಕ್ಕೆ ತಿಳಿದಿದೆ. ಯುಪಿಯಲ್ಲಿ ವಿದ್ಯುತ್ ಉತ್ಪಾದನೆಯಿಂದ ಹಿಡಿದು ವಿದ್ಯುತ್‌ ಪ್ರಸರಣದವರೆಗೆ ಎಲ್ಲದರಲ್ಲೂ ಸುಧಾರಣೆಯಾಗಬಹುದೆಂದು ಯಾರು ಭಾವಿಸಿದ್ದರು?

ವಿದ್ಯುತ್ ಕಡಿತವಾದರೆ ಜನರು ಯೋಚನೆ ಮಾಡುತ್ತಿರಲಿಲ್ಲ. ಗಂಟೆಗಟ್ಟಲೆ ವಿದ್ಯುತ್ ಕಡಿತವಾಗುತ್ತದೆ ಎನ್ನುವುದು  ಅವರಿಗೂ ಅಭ್ಯಾವಾಗಿ ಹೋಗಿತ್ತುಪಕ್ಕದ ಮನೆಗೆ  ಕೂಡ ಕರೆಂಟ್ ಇಲ್ಲ ಎಂದು ತಮ್ಮನ್ನೇ ಸಾಂತ್ವನ ಮಾಡಿಕೊಳ್ಳುತ್ತಿದ್ದರು.

ಸ್ನೇಹಿತರೇ,

ಗಂಗಾಜಿಗೆ ಸೇರುವ ಸಿಸಾಮೌನಂತಹ ಬೃಹತ್  ಚರಂಡಿ ನಾಲೆಯನ್ನೂ ಮುಂದೊಂದು ದಿನ ಮುಚ್ಚಬಹುದೆಂದು ಯಾರು ಊಹಿಸಿದ್ದರು. ಆದರೆ ನಮ್ಮ ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡಿದೆ. ಬಿಪಿಸಿಎಲ್‌ನ ಪಾನಕಿ ಕಾನ್‌ಪುರ ಡಿಪೋ ಸಾಮರ್ಥ್ಯವನ್ನು 4 ಪಟ್ಟು ಹೆಚ್ಚು ಹೆಚ್ಚಿಸಿರುವುದು ಕಾನ್ಪುರಕ್ಕೆ ಹೆಚ್ಚಿನ ಪರಿಹಾರ ತಂದಿದೆ.

ಸಹೋದರ ಸಹೋದರಿಯರೇ,

ಸಂಪರ್ಕ ಮತ್ತು ಸಂವಹನ, ಹಾಗೆಯೇ ಅನಿಲ ಮತ್ತು ಪೆಟ್ರೋಲಿಯಂ ಪೈಪ್‌ಲೈನ್ ಮೂಲಸೌಕರ್ಯಗಳ ಮೇಲೆ ಮಾಡಲಾದ ಕೆಲಸವು ಯುಪಿಗೆ ಸಾಕಷ್ಟು ಪ್ರಯೋಜನವನ್ನು ನೀಡಿದೆ. 2014 ರವರೆಗೆ, ದೇಶದಲ್ಲಿ ಕೇವಲ 140 ಮಿಲಿಯನ್ ಎಲ್‌ಪಿಜಿ ಅನಿಲ ಸಂಪರ್ಕಗಳಿದ್ದವು, ಇಂದು 300 ಮಿಲಿಯನ್‌ಗಿಂತಲೂ ಹೆಚ್ಚು ಅನಿಲ ಸಂಪರ್ಕಗಳಿವೆ. ಯುಪಿಯೊಂದರಲ್ಲೇ ಸುಮಾರು 16 ದಶಲಕ್ಷ ಬಡ ಕುಟುಂಬಗಳಿಗೆ ಹೊಸ ಎಲ್‌ಪಿಜಿ ಅನಿಲ  ಸಂಪರ್ಕಗಳನ್ನು ನೀಡಲಾಗಿದೆ. ಅಗ್ಗದ ಪೈಪ್ಡ್ ಗ್ಯಾಸ್ ಸಂಪರ್ಕಗಳು ಏಳು ವರ್ಷಗಳಲ್ಲಿ ಒಂಬತ್ತು ಪಟ್ಟು ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪೆಟ್ರೋಲಿಯಂ ಜಾಲದ ಅಭೂತಪೂರ್ವ ವಿಸ್ತರಣೆಯಿಂದಾಗಿ ಇದು ಸಾಧ್ಯವಾಗಿದೆ. ಬಿನಾ-ಪಂಕಿ ಬಹು ಉತ್ಪನ್ನ ಪೈಪ್‌ಲೈನ್ ಜಾಲವನ್ನು ಮತ್ತಷ್ಟು ಬಲಪಡಿಸುತ್ತದೆ. ಈಗ ಕಾನ್ಪುರ ಸೇರಿದಂತೆ ಯುಪಿಯ ಹಲವು ಜಿಲ್ಲೆಗಳು ಬಿನಾ ರಿಫೈನರಿಯಿಂದ ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಉತ್ಪನ್ನಗಳಿಗೆ ಟ್ರಕ್‌ಗಳನ್ನು ಅವಲಂಬಿಸಬೇಕಾಗಿಲ್ಲ. ಇದರೊಂದಿಗೆ, ಯುಪಿಯಲ್ಲಿ ಅಭಿವೃದ್ಧಿಯ ಎಂಜಿನ್ ತಡೆರಹಿತವಾಗಿ ಇಂಧನವನ್ನು ಪಡೆಯುವುದನ್ನು ಮುಂದುವರಿಸುತ್ತದೆ.

ಸ್ನೇಹಿತರೇ,

ಕೈಗಾರಿಕೆಗಳು ಅಭಿವೃದ್ಧಿ ಹೊಂದಲು ಮತ್ತು ಯಾವುದೇ ರಾಜ್ಯದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಕಾನೂನಿನ ನಿಯಮವು ಅತ್ಯಂತ ಮುಖ್ಯವಾಗಿದೆ. ಯುಪಿಯಲ್ಲಿ ಹಿಂದಿನ ಸರ್ಕಾರಗಳು ಮಾಫಿಯಾದ ಮರವನ್ನು ಎಷ್ಟು ಹರಡಿದವು ಎಂದರೆ ಎಲ್ಲಾ ಕೈಗಾರಿಕೆಗಳು ಮತ್ತು ವ್ಯವಹಾರಗಳು ಅದರ ನೆರಳಿನಲ್ಲಿ ಕುಸಿದವು. ಇದೀಗ ಯೋಗಿ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಮರಳಿ ತಂದಿದೆ. ಇದರಿಂದ ಯುಪಿಯಲ್ಲಿ ಹೂಡಿಕೆಯೂ ಹೆಚ್ಚಾಗುತ್ತಿದ್ದು, ಕ್ರಿಮಿನಲ್ ಗಳು ಜಾಮೀನು ತಾವೇ ರದ್ದುಪಡಿಸಿಕೊಂಡು ಜೈಲು ಪಾಲಾಗುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರವು ಈಗ ಮತ್ತೊಮ್ಮೆ ಯುಪಿಯಲ್ಲಿ ಕೈಗಾರಿಕಾ ಸಂಸ್ಕೃತಿಯನ್ನು ಉತ್ತೇಜಿಸುತ್ತಿದೆ. ಕಾನ್ಪುರದಲ್ಲಿ ಮೆಗಾ ಲೆದರ್ ಕ್ಲಸ್ಟರ್ ಅನ್ನು ಅನುಮೋದಿಸಲಾಗಿದೆ. ಇಲ್ಲಿನ ಯುವಕರ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಫಜಲ್‌ಗಂಜ್‌ನಲ್ಲಿ ತಂತ್ರಜ್ಞಾನ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ. ಅದು ರಕ್ಷಣಾ ಕಾರಿಡಾರ್ ಆಗಿರಲಿ ಅಥವಾ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಾಗಿರಲಿ, ಕಾನ್ಪುರದಲ್ಲಿರುವ ನಮ್ಮ ಉದ್ಯಮಶೀಲ ಸಹೋದ್ಯೋಗಿಗಳು ಬಹಳಷ್ಟು ಪ್ರಯೋಜನ ಪಡೆಯುತ್ತಾರೆ.

ಸ್ನೇಹಿತರೇ,

ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಹೆಚ್ಚಿಸಲು ಕೇಂದ್ರ ಸರ್ಕಾರ ನಿರಂತರ ಕೆಲಸ ಮಾಡುತ್ತಿದೆ. ಹೊಸ ಘಟಕಗಳಿಗೆ ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 15 ಕ್ಕೆ ಕಡಿತಗೊಳಿಸುವುದು, ಜಿಎಸ್‌ಟಿ ದರಗಳನ್ನು ಕಡಿಮೆ ಮಾಡುವುದು, ಅನೇಕ ಕಾನೂನುಗಳ ಜಾಲವನ್ನು ತೆಗೆದುಹಾಕುವುದು, ಮುಖರಹಿತ ಮೌಲ್ಯಮಾಪನದ ಮೂಲಕ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹೊಸ ವಲಯಗಳನ್ನು ಉತ್ತೇಜಿಸಲು, ಸರ್ಕಾರವು ಉತ್ಪಾದನಾ ಸಂಬಂಧಿತ ಪ್ರೋತ್ಸಾಹವನ್ನು ನೀಡಲು ಪ್ರಾರಂಭಿಸಿದೆ. ಸರ್ಕಾರವು ನಮ್ಮ ವ್ಯಾಪಾರ ಸಹವರ್ತಿಗಳ ತೊಂದರೆಗಳನ್ನು ಹೆಚ್ಚಿಸುತ್ತಿದ್ದ ಕಂಪನಿಯ ಕಾನೂನಿನ ಅನೇಕ ನಿಬಂಧನೆಗಳನ್ನು ಅಪರಾಧರಹಿತಗೊಳಿಸಿದೆ.

ಸಹೋದರ ಸಹೋದರಿಯರೇ,

ಭ್ರಷ್ಟಾಚಾರವನ್ನು ಆಧರಿಸಿದ ಆರ್ಥಿಕ ನೀತಿ, ಮಾಫಿಯಾಗಳನ್ನು ಗೌರವಿಸುವ ನೀತಿ ಹೊಂದಿರುವ ಪಕ್ಷಗಳು ಉತ್ತರ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ, ಸಮಾಜವನ್ನು ಬಲಪಡಿಸುವ ಮತ್ತು ಸಬಲಗೊಳಿಸುವ ಪ್ರತಿಯೊಂದು ಹೆಜ್ಜೆಯಲ್ಲೂ ಅವರಿಗೆ ಸಮಸ್ಯೆ ಇದೆ. ಆದ್ದರಿಂದ, ಅವರು ಮಹಿಳಾ ಸಬಲೀಕರಣಕ್ಕಾಗಿ ತೆಗೆದುಕೊಂಡ ಕ್ರಮಗಳನ್ನು ಸಹ ವಿರೋಧಿಸುತ್ತಾರೆ. ತ್ರಿವಳಿ ತಲಾಖ್ ವಿರುದ್ಧ ಕಠಿಣ ಕಾನೂನು ಅಥವಾ ಹುಡುಗ ಮತ್ತು ಹುಡುಗಿಯರ ಮದುವೆಯ ವಯಸ್ಸನ್ನು ಸಮಾನಗೊಳಿಸುವ ವಿಷಯವೇ ಎಂದು ಅವರು ಪ್ರತಿಭಟಿಸುತ್ತಾರೆ. ಆದರೆ ಯೋಗಿ ಜೀ ಅವರ ಸರ್ಕಾರದ ಕೆಲಸಗಳನ್ನು ನೋಡಿದರೆ ಇದೆಲ್ಲವನ್ನೂ ಅವರೇ ಮಾಡಿದ್ದಾರೆ ಎಂದು ಜನರು ಹೇಳಿಕೊಳ್ಳುತ್ತಾರೆ. ಇತ್ತೀಚಿಗೆ ಸಿಕ್ಕಿರುವ ನೋಟು ತುಂಬಿದ ಬಾಕ್ಸ್ ಗಳನ್ನೇ ಇವರ ಸಾಧನೆ ಎಂದು ಹೇಳಿಕೊಳ್ಳುತ್ತಾರಾ ಎಂದು ಯೋಚಿಸುತ್ತಿದ್ದೆ.

ಸ್ನೇಹಿತರೇ,

ಕಾನ್ಪುರದ ಜನರು ವ್ಯವಹಾರ ಮತ್ತು ವ್ಯಾಪಾರದಲ್ಲಿ ನಿಪುಣರಾಗಿದ್ದಾರೆ2017 ಮೊದಲು ಯುಪಿಯಾದ್ಯಂತ  ಹರಡಿದ್ದ ಭ್ರಷ್ಟಾಚಾರದ 'ಇತರ್' (ಸುಗಂಧ) ಎಲ್ಲರಿಗೂ ಕಾಣುವಂತೆ ಹೊರಹೊಮ್ಮಿದೆ. ಈಗ ಅವರ ಬಾಯಿಗೆ ಬೀಗ ಹಾಕಿಕೊಂಡಿದ್ದು, ಅದರ ಗೌರವ ಪಡೆಯಲು ಮುಂದಾಗುತ್ತಿಲ್ಲ. ಇಡೀ ದೇಶವೇ ಕರೆನ್ಸಿ ನೋಟುಗಳ ಮಹಾಮಳೆ ಕಂಡಿದ್ದು ಅವರ ಸಾಧನೆ. ಇದು ಅವರ ವಾಸ್ತವ. ಉತ್ತರ ಪ್ರದೇಶದ ಜನರು ಎಲ್ಲವನ್ನೂ ನೋಡುತ್ತಿದ್ದಾರೆ ಮತ್ತು ಅರ್ಥಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ, ಅವರು ಯುಪಿಯನ್ನು ಅಭಿವೃದ್ಧಿಪಡಿಸುತ್ತಿರುವವರು ಮತ್ತು ಯುಪಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವವರ ಜೊತೆಯಲ್ಲಿದ್ದಾರೆ. ಸಹೋದರ ಸಹೋದರಿಯರೇ, ಇಂದಿನ ಮಹತ್ವದ ಸಂದರ್ಭಕ್ಕಾಗಿ ಮತ್ತು ಅಂತಹ ಉತ್ತಮ ಕೊಡುಗೆಗಾಗಿ ಮತ್ತು ಸಂತೋಷದಿಂದ ತುಂಬಿರುವ ವಾತಾವರಣಕ್ಕಾಗಿ ನಿಮ್ಮೆಲ್ಲರಿಗೂ ಶುಭಾಶಯಗಳು !!  ಬಹಳ ಧನ್ಯವಾದಗಳು. ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ತುಂಬ ಧನ್ಯವಾದಗಳು.

ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

***



(Release ID: 1787618) Visitor Counter : 196