ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಐಐಟಿ - ಕಾನ್ಪುರದ 54ನೇ ಘಟಿಕೋತ್ಸವ ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

Posted On: 28 DEC 2021 2:48PM by PIB Bengaluru

ಘಟಿಕೋತ್ಸವದಲ್ಲಿ ನೀವೆಲ್ಲಾ ಗಂಭೀರವದನರಾಗಿದ್ದೀರಿ. ಇದು ನಿಜಕ್ಕೂ ಅಗತ್ಯವಿದೆಯೇ? ನಿಮಗೆ ಎಲ್ಲಾ ಮಾಹಿತಿ ಸಿಕ್ಕಿದೆ ಎಂದು ನನಗನಿಸುತ್ತಿದೆಅದಕ್ಕಾಗೇ ನೀವೆಲ್ಲಾ ಮೌನ ತಾಳಿದ್ದೀರಾ ಎಂದನಿಸುತ್ತಿದೆಇಲ್ಲಿರುವ ಪ್ರತಿಯೊಬ್ಬರಿಗೂ ನಮಸ್ಕರಿಸುತ್ತೇನೆ! ಉತ್ತರ ಪ್ರದೇಶದ ಘನತೆವೆತ್ತ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ, ಡಾ. ಕೆ. ರಾಧಾಕೃಷ್ಣನ್ ಜೀ, ಪ್ರೊಫೆಸರ್ ಅಭಯ್ ಕಾರಾಂಡಿಕರ್ ಜೀ, ಐಐಟಿ-ಕಾನ್ಪುರದ ಎಲ್ಲ ಪ್ರಾಧ್ಯಾಪಕರು, ಬೋಧಕರು, ವಿದ್ಯಾರ್ಥಿಗಳು, ಇತರೆ ಗಣ್ಯರು ಮತ್ತು ಪ್ರತಿಷ್ಠಿತ ಮತ್ತು ಐತಿಹಾಸಿಕ ಸಂಸ್ಥೆಯಲ್ಲಿ ಪದವಿ ಗಳಿಸಿದ ಎಲ್ಲರಿಗೂ ನಮಸ್ಕಾರ....ಕಾನ್ಪುರದ ಪಾಲಿಗೆ ಇಂದು ದುಪ್ಪಟ್ಟು ಸಂತಸದ ದಿನ. ಕಾನ್ಪುರ ಇಂದು ಮೆಟ್ರೊ ರೈಲು ಸೌಲಭ್ಯ ಪಡೆಯುತ್ತಿರುವುದು ಒಂದು ಸಂತಸವಾದರೆ, ತಂತ್ರಜ್ಞಾನ ಜಗತ್ತು ಐಐಟಿ-ಕಾನ್ಪುರದಿಂದ ನಿಮ್ಮಂತಹ ಅಮೂಲ್ಯ ಉಡುಗೊರಗಳನ್ನು ಪಡೆಯುತ್ತಿರುವುದು ಮತ್ತೊಂದು ಸಂತಸದ ವಿಷಯವಾಗಿದೆ. ಹಾಗಾಗಿ, ನಾನು ಶುಭ ಸಂದರ್ಭದಲ್ಲಿ ನಮ್ಮ ಯುವಕ ಸ್ನೇಹಿತರಿಗೆ ಶುಭಾಶಯಗಳನ್ನು ತಿಳಿಸುತ್ತೇನೆ. ಒಳಿತಾಗಲಿ ಎಂದು ಹಾರೈಸುತ್ತೇನೆ. ಇಂದು ಘಟಿಕೋತ್ಸವದಲ್ಲಿ ಗೌರವಕ್ಕೆ ಒಳಗಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನೀವಿಂದು ಗಳಿಸಿದ ಮೌಲ್ಯಯುತ ಪದವಿಯ ಹಿಂದೆ ನಿಮ್ಮ ಪೋಷಕರು, ಕುಟುಂಬ ಸದಸ್ಯರು, ಶಿಕ್ಷಕರು, ಪ್ರಾಧ್ಯಾಪಕರು ಮತ್ತು ಅಸಂಖ್ಯಾತ ಜನರು ಕೊಡುಗೆ ನೀಡಿದ್ದಾರೆ. ನಾನು ಅವರೆಲ್ಲರಿಗೂ ವಿಶೇಷವಾಗಿ ನಿಮ್ಮ ಹೆತ್ತವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೆ,

ಐಐಟಿ ಕಾನ್ಪುರಕ್ಕೆ ಪ್ರವೇಶ ಪಡೆದ ಕಾಲದಿಂದ ಹಿಡಿದು ಇಂದು ಪದವಿ ಗಳಿಸಿದ ಕಾಲದ ತನಕ ನೀವು ಸವೆಸಿದ ಹಾದಿಯು ನಿಮ್ಮಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಹೊಸ ಬದಾಲಾವಣೆಯ ಅನುಭವ ನಿಮ್ಮದಾಗಿದೆ. ನೀವು ಇಲ್ಲಿಗೆ ಬರುವ ಮೊದಲು ನಿಮ್ಮಲ್ಲಿ ಅಜ್ಞಾತ ಭಯ, ಅಪರಿಚಿತ ಜಾಗ, ಅನಾಥ ಪ್ರಜ್ಞೆ ಕಾಡಿರಬಹುದು. ಮೊದಲು, ನಿಮ್ಮ ಜ್ಞಾನ ಮತ್ತು ಪ್ರಶ್ನೆಗಳ ವ್ಯಾಪ್ತಿಯು ನಿಮ್ಮ ಶಾಲೆ, ಕಾಲೇಜು, ಸ್ನೇಹಿತರು, ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಸೀಮಿತವಾಗಿತ್ತು. ಐಐಟಿ ಕಾನ್ಪುರ ನಿಮ್ಮನ್ನು ಅದರಿಂದ ಹೊರತಂದು ದೊಡ್ಡ ಕಲಿಕೆಯ ವರ್ಚಸ್ಸು ಮತ್ತು ವ್ಯಕ್ತಿತ್ವ ನೀಡಿದೆ. ಇನ್ನು ಅಜ್ಞಾತ ಭಯವಿಲ್ಲ. ಈಗ ನೀವು ಸಂಪೂರ್ಣ ಜಗತ್ತನ್ನು ಗಟ್ಟಿ ನಂಬಿಕೆ(ದೃಢನಂಬಿಕೆ)ಯೊಂದಿಗೆ ಅನ್ವೇಷಿಸಲು ಮುಂದುವರಿಯಬೇಕು. ಅಪರಿಚಿತರ ಪ್ರಶ್ನೆಯ ಬದಲಿಗೆ, ಈಗ ಉತ್ತಮವಾದ ಅನ್ವೇಷಣೆ ಇದೆ, ಜಗತ್ತನ್ನು ಗೆಲ್ಲುವ ಕನಸಿದೆ.. ನಿಮ್ಮ ತರಗತಿಯಲ್ಲಿ ನಡೆದಷ್ಟು ಕಲಿಕೆಯನ್ನು ನಿಮ್ಮ ತರಗತಿಯ ಹೊರಗೆ, ನಿಮ್ಮ ಗೆಳೆಯರ ನಡುವೆ ನೀವು ಅನುಭವಿಸಿದ್ದೀರಿ. ನಿಮ್ಮ ಆಲೋಚನೆಗಳು ತರಗತಿಗಳಲ್ಲಿ ವಿಸ್ತರಿಸಲ್ಪಟ್ಟವು. ಆದರೆ ನಿಮ್ಮ ವ್ಯಕ್ತಿತ್ವವು ತರಗತಿಯ ಹೊರಗೆ ವಿಸ್ತರಿಸಿತು ಮತ್ತು ವಿಕಸನಗೊಂಡಿತು. ಐಐಟಿ ಕಾನ್ಪುರದಲ್ಲಿ ನೀವು ಗಳಿಸಿರುವುದು ಮತ್ತು ಪುಷ್ಟೀಕರಿಸಿದ ಆಲೋಚನೆಗಳು ಅಂತಹ ಬಲವಾದ ಅಡಿಪಾಯ ಮತ್ತು ಶಕ್ತಿಯಾಗಿದ್ದು, ನೀವು ಎಲ್ಲಿಗೆ ಹೋದರೂ ಹೊಸದಾದ, ಅನನ್ಯವಾದ ಮೌಲ್ಯವನ್ನು ಸೇರಿಸುವಿರಿ. ನಿಮ್ಮ ತರಬೇತಿ, ಕೌಶಲ್ಯ ಮತ್ತು ಜ್ಞಾನವು ಪ್ರಾಯೋಗಿಕ ಜಗತ್ತಿನಲ್ಲಿ ಬಲವಾದ ಸ್ಥಾನವನ್ನು ಪಡೆಯಲು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ. ಇಲ್ಲಿ ನೀವು ಬೆಳೆಸಿಕೊಂಡಿರುವ ವ್ಯಕ್ತಿತ್ವವು ನಿಮಗೆ ಶಕ್ತಿ ನೀಡುತ್ತದೆ, ಅದರೊಂದಿಗೆ ನೀವು ಇಡೀ ಸಮಾಜಕ್ಕೆ ಪ್ರಯೋಜನವನ್ನು ಒದಗಿಸುತ್ತೀರಿ, ನಿಮ್ಮ ಸಮಾಜಕ್ಕೆ ಮತ್ತು ನಿಮ್ಮ ದೇಶಕ್ಕೆ ಹೊಸ ಶಕ್ತಿ ನೀಡುತ್ತೀರಿ.

ಸ್ನೇಹಿತರೇ,

ನೀವು ಇಲ್ಲಿ ಐಐಟಿಯ ಭವ್ಯ ಪರಂಪರೆಯ ಐತಿಹಾಸಿಕ ಅವಧಿಯನ್ನು ಬದುಕಿದ್ದೀರಿ. ನೀವು ವರ್ತಮಾನವನ್ನು ವೈವಿಧ್ಯಮಯ ಭಾರತದ ವೈಭವದೊಂದಿಗೆ ಬದುಕಿದ್ದೀರಿ. ಭವ್ಯ ಪರಂಪರೆ ಮತ್ತು ರೋಮಾಂಚಕ ವರ್ತಮಾನದ 2 ಆಧಾರಸ್ತಂಭಗಳು ಮತ್ತು 2 ಪಥಗಳ ಮೇಲೆ ನೀವು ಉಜ್ವಲ ಭವಿಷ್ಯದತ್ತ ಪ್ರಯಾಣ ಪ್ರಾರಂಭಿಸುತ್ತಿದ್ದೀರಿ. ಪಯಣ ಶುಭದಾಯಕವಾಗಿರಲಿ ಮತ್ತು ದೇಶಕ್ಕೆ ಯಶಸ್ಸು ತುಂಬಲಿ ಎಂದು ನಾನು ನಿಮ್ಮೆಲ್ಲರನ್ನೂ ಹಾರೈಸುತ್ತೇನೆ.

ಸ್ನೇಹಿತರೆ,

ವರ್ಷ ಭಾರತವು ಸ್ವಾತಂತ್ರ್ಯಗಳಿಸಿದ 75ನೇ ವರ್ಷಕ್ಕೆ ಕಾಲಿಟ್ಟಿದೆ. ಇದರ ಅಂಗವಾಗಿ ನಾವು ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ನೀವು ಪದವಿ ಪಡೆದಿರುವ ಕಾನ್ಪುರ ನಗರವು ತನ್ನದೇ ಆದ ಭವ್ಯ ಇತಿಹಾಸ ಹೊಂದಿದೆ. ಇಷ್ಟು ವೈವಿಧ್ಯಮಯವಾಗಿರುವ ಭಾರತದ ಕೆಲವೇ ನಗರಗಳಲ್ಲಿ ಕಾನ್ಪುರವೂ ಒಂದು. ಸತ್ತಿ ಚೌರಾ ಘಾಟ್‌ನಿಂದ ಮದರಿ ಪಾಸಿವರೆಗೆ, ನಾನಾ ಸಾಹೇಬ್ ನಿದ ಬತುಕೇಶ್ವರ ದತ್ತದವರೆಗೆ, ನಗರಕ್ಕೆ ಭೇಟಿ ನೀಡಿದಾಗ, ನಾವು ಭವ್ಯವಾದ ಗತಕಾಲದ ವೈಭವವನ್ನು, ಸ್ವಾತಂತ್ರ್ಯ ಹೋರಾಟದ ತ್ಯಾಗದ ವೈಭವ ನೋಡಲು ಭೇಟಿ ನೀಡುತ್ತಿದ್ದೇವೆ ಎಂದನಿಸುತ್ತದೆ. ಸವಿನೆನಪುಗಳ ನಡುವೆ, ಮುಂದಿನ 25 ವರ್ಷಗಳ ಕಾಲ ದೇಶಕ್ಕೆ ಮಾರ್ಗದರ್ಶನ ನೀಡುವ, ದೇಶಕ್ಕೆ ಗತಿಯನ್ನು ಬದಲಿಸುವ ಗುರುತರ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. 1930ರಲ್ಲಿ ದಂಡಿಯಾತ್ರೆ ಪ್ರಾರಂಭವಾದಾಗ, ಅದು ಕಾಲಘಟ್ಟದಲ್ಲಿ ಇಡೀ ದೇಶವನ್ನು ಕ್ಷೋಭೆಗೊಳಿಸಿತು ಎಂಬದನ್ನು ನೀವೆಲ್ಲರೂ ಊಹಿಸಿ. ಸಮಯದಲ್ಲಿ ದೇಶವು ಎಷ್ಟು ಆವೇಶದಿಂದ ಕೂಡಿತ್ತು ಎಂದರೆ ಅದು ಸ್ವಾತಂತ್ರ್ಯಕ್ಕಾಗಿ ಭಾರತದ ಜನರಲ್ಲಿ ಅಭೂತಪೂರ್ವ ನಂಬಿಕೆಯನ್ನು ಹುಟ್ಟುಹಾಕಿತು. ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ವಿಜಯದ ನಂಬಿಕೆಯನ್ನು ತುಂಬಿತ್ತು. 1947 ವರೆಗಿನ ಪಯಣ, 1947 ಸ್ವಾತಂತ್ರ್ಯ ಸಾಧನೆಗೆ 20-25 ಹರೆಯದ ಯುವಕರ ಬದುಕಿನಲ್ಲಿ 1930 ಅವಧಿ ಸುವರ್ಣ ಘಟ್ಟ. ಒಂದು ರೀತಿಯಲ್ಲಿ ಸುವರ್ಣ ಯುಗಕ್ಕೆ ಕಾಲಿಡುತ್ತಿದ್ದೀರಿ. ಇದು ನಿಮಗೆ ಸುವರ್ಣ ಯುಗ. ಇದು ರಾಷ್ಟ್ರಕ್ಕೆ ಪುಣ್ಯ ಕಾಲವಿದ್ದಂತೆ. ನಿಮ್ಮ ಜೀವನದ ಪುಣ್ಯ ಕಾಲವೂ ಹೌದು. ಅಮೃತ ಮಹೋತ್ಸವದ ಸಮಯದಲ್ಲಿ ನೀವು ಐಐಟಿಯ ಪರಂಪರೆಯೊಂದಿಗೆ ಪದವಿ ಪಡೆಯುತ್ತಿರುವಾಗ, 2047 ಹೊತ್ತಿಗೆ ಭಾರತ ಏನಾಗಲಿದೆ ಎಂಬ ಉದಾತ್ತ ಕನಸುಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ಮುಂದಿನ 25 ವರ್ಷಗಳಲ್ಲಿ, ನೀವು ಭಾರತದ ಅಭಿವೃದ್ಧಿ ಪಯಣದ ನಿಯಂತ್ರಣವನ್ನು ತೆಗೆದುಕೊಳ್ಳಬೇಕು. ನಿಮ್ಮ ಜೀವನದ 50 ವರ್ಷಗಳನ್ನು ನೀವು ಪೂರ್ಣಗೊಳಿಸಿದಾಗ ಭಾರತವು ಹೇಗಿರುತ್ತದೆ ಎಂಬುದಕ್ಕೆ ನೀವು ಈಗಲೇ ಉಪಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ನನಗೆ ಗೊತ್ತು, ಕಾನ್ಪುರ ಐಐಟಿ, ಇಲ್ಲಿನ ವಾತಾವರಣವು ನಿಮಗೆ ಶಕ್ತಿಯನ್ನು ನೀಡಿದೆ. ಈಗ ನಿಮ್ಮ ಕನಸುಗಳನ್ನು ಈಡೇರಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಯುಗ, 21ನೇ ಶತಮಾನವು ಸಂಪೂರ್ಣ ತಂತ್ರಜ್ಞಾನ ಚಾಲಿತವಾಗಿದೆ. ದಶಕದಲ್ಲೂ ತಂತ್ರಜ್ಞಾನವು ವಿವಿಧ ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸಲಿದೆ. ತಂತ್ರಜ್ಞಾನವಿಲ್ಲದ ಜೀವನ ಒಂದು ರೀತಿಯಲ್ಲಿ ಅಪೂರ್ಣ. ಇದು ಜೀವನ ಮತ್ತು ತಂತ್ರಜ್ಞಾನದ ಪೈಪೋಟಿಯ ಯುಗ. ನೀವು ಇದರಲ್ಲಿ ಮುಂದೆ ಇರುತ್ತೀರಿ ಎಂಬ ಖಾತ್ರಿ ನನಗಿದೆ. ತಂತ್ರಜ್ಞಾನದಲ್ಲಿ ಪರಿಣಿತರಾಗಲು ನೀವು ನಿಮ್ಮ ಯೌವನದ ಪ್ರಮುಖ ವರ್ಷಗಳನ್ನು ಇಲ್ಲಿ ಕಳೆದಿದ್ದೀರಿ. ನಿಮಗೆ ಇದಕ್ಕಿಂತ ದೊಡ್ಡ ಅವಕಾಶ ಯಾವುದಿದೆ? ಭಾರತದಲ್ಲಿ ಹಾಗೂ ಇಡೀ ವಿಶ್ವದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೊಡುಗೆ ನೀಡಲು ನಿಮಗೆ ದೊಡ್ಡ ಅವಕಾಶ ಒದಗಿ ಬಂದಿದೆ.

ಸ್ನೇಹಿತರೆ,

ನಮ್ಮ ಐಐಟಿಗಳು ಯಾವಾಗಲೂ ಪ್ರತಿಭೆ ಮತ್ತು ತಂತ್ರಜ್ಞಾನದ ಪೋಷಣಾ ಕೇಂದ್ರಗಳಾಗಿವೆ. ನಿಟ್ಟಿನಲ್ಲಿ ಐಐಟಿ ಕಾನ್ಪುರ ತನ್ನದೇ ಆದ ವಿಶಿಷ್ಟ ಖ್ಯಾತಿ ಹೊಂದಿದೆ. ನಿಮ್ಮ ಸ್ವಂತ ಕಂಪನಿ ಅಕ್ವಾಫ್ರಂಟ್ ಇನ್ಫ್ರಾಸ್ಟ್ರಕ್ಚರ್ ಮೂಲಕ ನೀವು ಅಭಿವೃದ್ಧಿಪಡಿಸಿದ ಬನಾರಸ್‌ನ ಖಿಡ್ಕಿಯಾ ಘಾಟ್‌ನಲ್ಲಿರುವ ವಿಶ್ವದ ಮೊದಲ ತೇಲುವ ಸಾಂದ್ರೀಕೃತ ನೈಸರ್ಗಿಕ ಅನಿಲ(ಸಿಎನ್ ಜಿ) ಫಿಲ್ಲಿಂಗ್ ಸ್ಟೇಷನ್ ಅತ್ಯುತ್ತಮವಾಗಿದೆ. ಅದೇ ರೀತಿ, ನೀವು ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದೀರಿ, ವಿಶ್ವದ ಮೊದಲ ಪೋರ್ಟಬಲ್ ಮಣ್ಣು ಪರೀಕ್ಷಾ ಕಿಟ್ ಅನ್ನು ತಯಾರಿಸಿದ್ದೀರಿ. 5G ತಂತ್ರಜ್ಞಾನದಲ್ಲಿ ಐಐಟಿ ಕಾನ್ಪುರದ ಕೌಶಲ್ಯಗಳು ಜಾಗತಿಕ ಗುಣಮಟ್ಟಕ್ಕೆ ಹೊಂದಿಕೆಯಾಗುತ್ತವೆ. ಇಂತಹ ಹಲವು ಯಶಸ್ಸಿಗಾಗಿ ಸಂಸ್ಥೆ ಅಭಿನಂದನೆಗೆ ಅರ್ಹವಾಗಿದೆ. ಅದರಂತೆ, ನಿಮ್ಮ ಜವಾಬ್ದಾರಿಗಳು ಸಹ ಹೆಚ್ಚಿವೆ. ಇಂದು, ದೇಶದಲ್ಲಿ ಕೃತಕ ಬುದ್ಧಿಮತ್ತೆ, ಶಕ್ತಿ ಮತ್ತು ಹವಾಮಾನ ಪರಿಹಾರಗಳು ಮತ್ತು ಹೈಟೆಕ್ ಮೂಲಸೌಕರ್ಯ ಕ್ಷೇತ್ರದಲ್ಲಿ ಬಹುದೊಡ್ಡ ವ್ಯಾಪ್ತಿ ಹೊಂದಿವೆ. ಆರೋಗ್ಯದಂತಹ ಕ್ಷೇತ್ರಗಳು ಸಹ ಇಂದು ತಂತ್ರಜ್ಞಾನ ಆಧಾರಿತವಾಗುತ್ತಿವೆ. ನಾವು ಡಿಜಿಟಲ್ ರೋಗ ನಿರ್ಣಯದ ಯುಗವನ್ನು ಪ್ರವೇಶಿಸುತ್ತಿದ್ದೇವೆ. ರೋಬೋಟ್ ನೆರವಿನ ಚಿಕಿತ್ಸೆಯ ಯುಗ. ಆರೋಗ್ಯ ಸಾಧನಗಳು ಈಗ ಮನೆ ಮನೆಗೆ ಅತ್ಯಗತ್ಯವಾಗಿವೆ. ತಂತ್ರಜ್ಞಾನದ ಮೂಲಕ ಮಾತ್ರ ನಾವು ವಿಪತ್ತು ನಿರ್ವಹಣೆ ಸವಾಲುಗಳನ್ನು ಎದುರಿಸಬಹುದು. ನಾವು ಅನೇಕ ಸಾಧ್ಯತೆಗಳ ಹೊಸ್ತಿಲಲ್ಲಿದ್ದೇವೆ ಎಂದು ಕಲ್ಪಿಸಿಕೊಳ್ಳಿ. ಸಾಧ್ಯತೆಗಳು ನಿಮಗಾಗಿ, ಅವುಗಳಲ್ಲಿ ನಿಮಗೆ ದೊಡ್ಡ ಪಾತ್ರವಿದೆ. ಇವು ದೇಶದ ಬಗೆಗಿನ ನಿಮ್ಮ ಜವಾಬ್ದಾರಿಗಳನ್ನು ಮಾತ್ರವಲ್ಲ, ಹಲವಾರು ತಲೆಮಾರುಗಳಿಂದ ಬದುಕಿದ ಕನಸುಗಳು. ಕನಸುಗಳನ್ನು ನನಸು ಮಾಡಲು, ಆಧುನಿಕ ಭಾರತವನ್ನು ಮಾಡಲು ನೀವು ಮತ್ತು ನಿಮ್ಮ ಪೀಳಿಗೆಗೆ ಸವಲತ್ತು ಸಿಕ್ಕಿದೆ.

ಸ್ನೇಹಿತರೆ,

ನೀವು ಇಂದು ಇರುವ 21ನೇ ಶತಮಾನದ ಯುಗವು ದೊಡ್ಡ ಗುರಿಗಳನ್ನು ಹೊಂದಿಸುವುದು ಮತ್ತು ಅವುಗಳನ್ನು ಸಾಧಿಸಲು ನಿಮ್ಮ ಎಲ್ಲಾ ಶಕ್ತಿಯನ್ನು ಹಾಕುವುದಾಗಿದೆ. ದೇಶದ ಚಿಂತನೆ ಮತ್ತು ಮನೋಭಾವ ನಿಮ್ಮಂತೆಯೇ ಇದೆ. ಹಿಂದೆ, ಆಲೋಚನೆಯು ಹೇಗಾದರೂ ಕೆಲಸ ಮಾಡುವಂತದ್ದಾಗಿತ್ತು. ಆದರೆ  ಇಂದು ವಿಭಿನ್ನವಾದದ್ದನ್ನು ಮಾಡಲು, ಉತ್ತಮ ಫಲಿತಾಂಶಗಳನ್ನು ಪಡೆಯುವ ಆಲೋಚನೆಗಳಿಗೆ ವೇದಿಕೆ ಸೃಷ್ಟಿಸಿದೆ. ಹಿಂದೆ ಸಮಸ್ಯೆಗಳನ್ನು ತಪ್ಪಿಸಲು ಪ್ರಯತ್ನಿಸಿದರೆ, ಇಂದು ಸಮಸ್ಯೆಗಳ ಪರಿಹಾರಕ್ಕೆ ನಿರ್ಣಯಗಳನ್ನು ಮಾಡಲಾಗುತ್ತಿದೆ. ಅದೂ ಶಾಶ್ವತ ಪರಿಹಾರ! ಆತ್ಮನಿರ್ಭರ್ ಭಾರತ ಕಟ್ಟುವುದು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ.

ಸ್ನೇಹಿತರೆ,

ಯಾರಾದರೂ 20-22ನೇ ವರ್ಷಕ್ಕೆ ಕಾಲಿಟ್ಟಾಗ, ಮನೆಯ ಹಿರಿಯರು ಪದೇಪದೆ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಬುದ್ದಿಮಾತು ಹೇಳುವುದನ್ನ ನಾವೆಲ್ಲಾ ಸಾಮಾನ್ಯವಾಗಿ ನೋಡುತ್ತಿದ್ದೆವ. ಆದರೀಗ, ನೀವು ಇಲ್ಲಿಂದ ಮನೆಗೆ ಹೋದಾಗ, ನಿಮ್ಮ ಹೆತ್ತವರು ಕೇಳುವ, ಹೇಳುವ ಮೊದಲ ವಿಷಯವೆಂದರೆ, ನಿನ್ನ ಕರ್ತವ್ಯ ಮುಗಿದಿದೆ, ಈಗ ನೀವು ನಿಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವ ಸಮಯ ಬಂದಿದೆ ಎನ್ನುತ್ತಾರೆ ಎಂಬುದು ನನಗೆ ಖಾತ್ರಿಯಿದೆ. ಇದರಿಂದ ನೀವು ಸ್ವಾವಲಂಬಿಗಳಾಗುತ್ತೀರಿ, ನಿಮ್ಮ ಸಾಮರ್ಥ್ಯವನ್ನು ನೀವು ಗುರುತಿಸುತ್ತೀರಿ ಮತ್ತು ನಿಮ್ಮ ಕನಸುಗಳನ್ನು ನಿರ್ಣಯಗಳಾಗಿ ಪರಿವರ್ತಿಸುತ್ತೀರಿ ಮತ್ತು ಅವುಗಳನ್ನು ಸಾಧಿಸಲು ಪೂರ್ಣ ಹೃದಯದಿಂದ ಬದ್ಧರಾಗುತ್ತೀರಿ. ನಮ್ಮ ಭಾರತ ಕೂಡ ಸ್ವಾತಂತ್ರ್ಯಾನಂತರ ತನ್ನ ಪಯಣವನ್ನು ಹೊಸದಾಗಿ ಆರಂಭಿಸಿತು. ದೇಶಕ್ಕೆ ಸ್ವಾತಂತ್ರ್ಯ ಬಂದು 25 ವರ್ಷಗಳು ಕಳೆದಿರುವಾಗ ನಾವೂ ನಮ್ಮ ಕಾಲ ಮೇಲೆ ನಿಲ್ಲಲು ಸಾಕಷ್ಟು ಕೆಲಸ ಮಾಡಬೇಕಿತ್ತು. ಈಗ ಕಾಲ ಬದಲಾಗಿದೆದೇಶವು ಸಾಕಷ್ಟು ಸಮಯವನ್ನು ಕಳೆದುಕೊಂಡಿದೆ. ಇದರ ನಡುವೆ 2 ತಲೆಮಾರುಗಳು ಉರುಳಿವೆ. ಆದ್ದರಿಂದ ನಾವು ಈಗ 2 ಕ್ಷಣಗಳನ್ನು ವ್ಯರ್ಥ ಮಾಡಬೇಕಿಲ್ಲ, ತಕ್ಷಣವೇ ಕಾರ್ಯೋನ್ಮುರಾಗಬೇಕಿದೆ.

ಸ್ನೇಹಿತರೆ,

ನನ್ನ ಮಾತಿನಲ್ಲಿ ನಿಮಗೆ ಅಸಹನೆ ಉಂಟಾಗಬಹುದು. ನಿಮಗೆ ಅಸಹನೆ ಉಂಟಾಗುವುದು ಸಹಜ. ಆದರೆ ನಾನು ಕಾನ್ಪುರದ ನೆಲದಲ್ಲಿ ನಿಮ್ಮೆಲ್ಲರ ನಡುವೆ ಇರುವಾಗ, ಸ್ವಾವಲಂಬಿ ಭಾರತ ಕಟ್ಟಲು ನೀವು ತಾಳ್ಮೆಯಿಂದಿರಬೇಕೆಂದು ನಾನು ಬಯಸುತ್ತೇನೆ. ಸ್ವಾವಲಂಬಿ ಭಾರತವು ಸಂಪೂರ್ಣ ಸ್ವಾತಂತ್ರ್ಯದ ಮೂಲತತ್ವವಾಗಿದೆ, ಅಲ್ಲಿ ನಾವು ಯಾರನ್ನೂ ಅವಲಂಬಿಸುವುದಿಲ್ಲ. ಸ್ವಾಮಿ ವಿವೇಕಾನಂದರು ಹೇಳಿದ್ದರು.. ಪ್ರತಿಯೊಂದು ರಾಷ್ಟ್ರಕ್ಕೂ ತಲುಪಿಸಲು ಒಂದು ಸಂದೇಶವಿದೆ, ಪೂರೈಸಲು ಒಂದು ಧ್ಯೇಯವಿದೆ, ತಲುಪಲು ಒಂದು ಹಣೆಬರಹವಿದೆ. ನಾವು ಸ್ವಾವಲಂಬಿಗಳಾಗದಿದ್ದರೆ, ನಮ್ಮ ದೇಶವು ತನ್ನ ಗುರಿಗಳನ್ನು ಸಾಧಿಸುವುದಾದರೂ ಹೇಗೆ ಮತ್ತು ಅದರ ಗಮ್ಯಸ್ಥಾನ ತಲುಪುವುದಾದರೂ ಹೇಗೆ?

ಸ್ನೇಹಿತರೆ,

ನೀವು ಇದನ್ನು ಖಂಡಿತವಾಗಿ ಮಾಡಬಹುದು, ನಾನು ನಿನ್ನನ್ನು ಸಂಪೂರ್ಣ ನಂಬುವೆ. ನಾನು ಇಂದು ಅನೇಕ ವಿಷಯಗಳನ್ನು ಹೇಳುತ್ತಿರುವಾಗ, ಅನೇಕ ಕೆಲಸಗಳನ್ನು ಮಾಡುವಾಗ, ಅವುಗಳಲ್ಲಿ ನಿಮ್ಮ ಮುಖವನ್ನು ನೋಡುತ್ತೇನೆ. ಇಂದು ದೇಶದಲ್ಲಿ ಆಗುತ್ತಿರುವ ಬದಲಾವಣೆಗಳ ಹಿಂದೆ ನಿಮ್ಮ ಮುಖಗಳನ್ನು  ನಾನು ನೋಡುತ್ತೇನೆ. ಇಂದು ದೇಶವು ನಿಗದಿಪಡಿಸುವ ಗುರಿಗಳನ್ನು ಸಾಧಿಸುವ ಶಕ್ತಿಯನ್ನು ದೇಶ ಪಡೆಯುತ್ತಿದೆ. ನೀವು ಅದನ್ನು ಮಾಡುತ್ತೀರಾ ಮತ್ತು ನೀವು ಅದನ್ನು ಮಾಡಲೇಬೇಕು. ಅನಂತ ಸಾಧ್ಯತೆಗಳು ನಿಮಗಾಗಿ ಇವೆ. ನೀವು ಅವುಗಳನ್ನು ಅರಿತುಕೊಳ್ಳಬೇಕು. ದೇಶವು ತನ್ನ ಸ್ವಾತಂತ್ರ್ಯದ 100ನೇ ವರ್ಷಾಚರಣೆ (ಶತಮಾನೋತ್ಸವ) ಆಚರಿಸುವಾಗ, ಯಶಸ್ಸು ನಿಮ್ಮ ಶ್ರಮವನ್ನು ಗುರುತಿಸುತ್ತದೆ. ನಿಮ್ಮ ಕೆಲಸವನ್ನು ಸುಲಭಗೊಳಿಸಲು ಆತ್ಮನಿರ್ಭರ್ ಭಾರತಕ್ಕೆ ಭದ್ರ ಬುನಾದಿ ಹಾಕಲು ದೇಶವು ಹಲವಾರು ವರ್ಷಗಳಿಂದ ಹೇಗೆ ಕೆಲಸ ಮಾಡುತ್ತಿದೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಕಳೆದ 7 ವರ್ಷಗಳಲ್ಲಿ, ಸ್ಟಾರ್ಟ್-ಅಪ್ ಇಂಡಿಯಾ, ಸ್ಟ್ಯಾಂಡ್-ಅಪ್ ಇಂಡಿಯಾದಂತಹ ಕಾರ್ಯಕ್ರಮಗಳನ್ನು ದೇಶದಲ್ಲಿ ಪ್ರಾರಂಭಿಸಲಾಗಿದೆ. ಅಟಲ್ ಇನ್ನೋವೇಶನ್ ಮಿಷನ್ ಮತ್ತು ಪಿಎಂ ರಿಸರ್ಚ್ ಫೆಲೋಶಿಪ್ ಮೂಲಕ ದೇಶವು ಯುವಜನರಿಗೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯೊಂದಿಗೆ, ಭವಿಷ್ಯದ ಮನೋಧರ್ಮದ ಹೊಸ ಪೀಳಿಗೆಯನ್ನು ಸಿದ್ಧಪಡಿಸಲಾಗುತ್ತಿದೆ. ಸರಾಗವಾಗಿ ವ್ಯಾಪಾರ ಮಾಡುವ ವ್ಯವಸ್ಥೆಯನ್ನು  ಸುಧಾರಿಸಲಾಗಿದೆ, ಕಠಿಣ ನೀತಿ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಇವೆಲ್ಲವೂ ಅಲ್ಪಕಾಲದಲ್ಲಿ ನಡೆದ ಪ್ರಯತ್ನಗಳಾಗಿವೆ. ಸ್ವಾತಂತ್ರ್ಯ ಗಳಿಸಿದ  75ನೇ ವರ್ಷದಲ್ಲಿ, ನಾವು 75ಕ್ಕೂ ಹೆಚ್ಚು ಯುನಿಕಾರ್ನ್‌ಗಳನ್ನು ಹೊಂದಿದ್ದೇವೆ, 50,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌(ನವೋದ್ಯಮ)ಗಳನ್ನು ಹೊಂದಿದ್ದೇವೆ. ಇವುಗಳಲ್ಲಿ 10,000 ನವೋದ್ಯಮಗಳು ಕಳೆದ 6 ತಿಂಗಳಲ್ಲಿ ಹೊರಹೊಮ್ಮಿವೆ. ಇಂದು ಭಾರತವು ವಿಶ್ವದ 2ನೇ ಅತಿ ದೊಡ್ಡ ಸ್ಟಾರ್ಟ್-ಅಪ್ ಹಬ್ ಆಗಿ ಹೊರಹೊಮ್ಮಿದೆ. ನಮ್ಮ ಐಐಟಿಯ ಯುವಕರು ಎಷ್ಟೋ ನವೋದ್ಯಮಗಳನ್ನು ಆರಂಭಿಸಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ, ಭಾರತವು ವಿಶ್ವದ 3ನೇ ಅತಿದೊಡ್ಡ ಯುನಿಕಾರ್ನ್ ದೇಶವಾಗಿದೆ, ಇದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳನ್ನು ಹಿಂದಿಕ್ಕಿದೆ.

ಸ್ನೇಹಿತರೆ,

ಇತ್ತೀಚಿನ ದಿನಗಳಲ್ಲಿ ಜಾಗತೀಕರಣ ಮತ್ತು ಅದರ ಸಾಧಕ-ಬಾಧಕಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದರೆ ಒಂದು ವಿಷಯದಲ್ಲಿ ವಿವಾದವಿಲ್ಲ ಎಂದು ನಾನು ಹೇಳಲು ಇಲ್ಲಿ ಬಯಸುತ್ತೇನೆ. ಭಾರತೀಯ ಕಂಪನಿಗಳು ಜಾಗತಿಕವಾಗಬೇಕು, ಭಾರತದ ಉತ್ಪನ್ನಗಳು ಜಾಗತಿಕವಾಗಿರಬೇಕು ಎಂದು ಯಾರು ಬಯಸುವುದಿಲ್ಲ ಹೇಳಿ? ಐಐಟಿ ಬಲ್ಲವರು ಮತ್ತು ಇಲ್ಲಿನ ಪ್ರತಿಭೆಯನ್ನು ಬಲ್ಲವರು, ಇಲ್ಲಿನ ಪ್ರಾಧ್ಯಾಪಕರ ಶ್ರಮವನ್ನು ತಿಳಿದವರು, ಐಐಟಿಯ ಯುವಕರು ಎಲ್ಲವನ್ನೂ ಮಾಡುತ್ತಾರೆ ಎಂದು ಅವರು ನಂಬುತ್ತಾರೆ. ಇಂದು ನಿಮ್ಮಂತಹ ಯುವ ವೃತ್ತಿಪರರಿಗೆ ಸರ್ಕಾರವು ಎಲ್ಲ ರೀತಿಯ ನೆರವು ಮತ್ತು ಸಹಾಯ ಮಾಡಲಿದೆ ಎಂಬ ಭರವಸೆ ನೀಡಲು ನಾನು ಬಯಸುತ್ತೇನೆ.

ಸ್ನೇಹಿತರೆ,

ನೀವು ಇನ್ನೊಂದು ಪ್ರಮುಖ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇಂದಿನಿಂದ ಪ್ರಾರಂಭವಾಗಲಿರುವ ಅಭಿವೃದ್ಧಿ(ದೇಶ ಕಟ್ಟುವ) ಪಯಣದಲ್ಲಿ ಅನೇಕ ಜನರು ಅನುಕೂಲಕ್ಕಾಗಿ ಸಮೀಪ ಮಾರ್ಗ(ಶಾರ್ಟ್‌ಕಟ್‌-ಅಡ್ಡಮಾರ್ಗ)ಗಳನ್ನು ಸೂಚಿಸುತ್ತಾರೆ. ಆದರೆ ನನ್ನ ಸಲಹೆ ಏನೆಂದರೆ, ನೀವು ಆರಾಮ ಮತ್ತು ಸವಾಲು ಇವೆರಡರಲ್ಲಿ ಆಯ್ಕೆ ಮಾಡಬೇಕಾದರೆ, ಸವಾಲನ್ನು ಆರಿಸಿಕೊಳ್ಳಿ, ಆರಾಮವಲ್ಲ, ಏಕೆಂದರೆ, ನೀವು ಇಷ್ಟಪಡುತ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ಜೀವನವು ಸವಾಲುಗಳಿಂದ ತುಂಬಿದೆ. ನೀವು ಸವಾಲುಗಳನ್ನು ಹುಡುಕುತ್ತಿದ್ದರೆ, ನೀವು ಬೇಟೆಗಾರರಾಗಿ ಸವಾಲುಗಳನ್ನು  ಬೇಟೆಯಾಡುತ್ತೀರಿ. ಆದ್ದರಿಂದ, ನೀವು ಸಮಸ್ಯೆಗಳನ್ನು ಹುಡುಕುವ ಮನುಷ್ಯನಾಗಿರಬೇಕು; ನಿಮ್ಮ ಸ್ವಂತ ಆಯ್ಕೆಯ ಪ್ರಕಾರ ಪರಿಹಾರಗಳನ್ನು ಕಂಡುಕೊಳ್ಳಬೇಕು. ಸ್ನೇಹಿತರೇ, ನೀವೆಲ್ಲರೂ ಐಐಟಿಯ ಅತ್ಯುತ್ತಮ ಟೆಕ್ ಮೈಂಡ್‌ಗಳಾಗಿದ್ದೀರಿ(ತಂತ್ರಜ್ಞಾನ ಮನಸ್ಥಿತಿಗಳು). ನೀವೆಲ್ಲರೂ ತಿನ್ನುವುದು, ಕುಡಿಯುವುದು ಮತ್ತು ಉಸಿರಾಡುವುದು ತಂತ್ರಜ್ಞಾನವನ್ನೇ. ನೀವು ನಿರಂತರವಾಗಿ ನಾವೀನ್ಯತೆ(ಆವಿಷ್ಕಾರ)ಗಳಲ್ಲಿ ತೊಡಗಿಸಿಕೊಂಡಿದ್ದೀರಿ. ಆದರೂ ಇದೆಲ್ಲದರ ನಡುವೆ ನನ್ನದೊಂದು ವಿನಂತಿ. ತಂತ್ರಜ್ಞಾನವು ತನ್ನದೇ ಆದ ಶಕ್ತಿ, ತಾಕತ್ತು ಹೊಂದಿದೆ. ಅದರಲ್ಲಿ ಯಾವುದೇ ಹಾನಿ ಇಲ್ಲ, ಇದು ನಿಮ್ಮ ಉತ್ಸಾಹವೇ ಆಗಿದೆ. ಆದರೆ ತಂತ್ರಜ್ಞಾನ ಜಗತ್ತಿನಲ್ಲಿ ಜೀವಿಸುತ್ತಿರುವಾಗ, ನೀವು ಜೀವನದ ಮಾನವ ಅಂಶವನ್ನು(ಮಾನವೀಯತೆ) ಎಂದಿಗೂ ಮರೆಯಬಾರದು. ನಿಮ್ಮ ಭಾವನೆಗಳು, ನಿಮ್ಮ ಕಲ್ಪನೆಗಳು, ನಿಮ್ಮ ಸೃಜನಶೀಲತೆ ಮತ್ತು ನಿಮ್ಮ ಕುತೂಹಲವನ್ನು ನೀವು ಜೀವಂತವಾಗಿರಿಸಿಕೊಳ್ಳಬೇಕು. ನಿಮ್ಮ ಜೀವನದಲ್ಲಿ ವಿಷಯಗಳಿಗೆ ಹಚ್ಚಿನ ಪ್ರಾಮುಖ್ಯತೆ ನೀಡಬೇಕು, ಅದನ್ನು ನಾವು ತಂತ್ರಜ್ಞಾನದ ಸಹಾಯದಿಂದ ಮಾತ್ರ ಪಡೆಯಲಾಗದು. ನೀವು ಖಂಡಿತವಾಗಿಯೂ ಅಂತರ್ಜಾಲ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ನೀವು ಖಂಡಿತವಾಗಿಯೂ ಕೃತಕ ಬುದ್ಧಿಮತ್ತೆಯ ಬಗ್ಗೆ ಯೋಚಿಸಬೇಕು. ಆದರೆ ಮಾನವ ಬುದ್ಧಿಮತ್ತೆಯನ್ನು ನೆನಪಿಟ್ಟುಕೊಳ್ಳಬೇಕು. ನೀವು ಕೋಡಿಂಗ್ ಮುಂದುವರಿಸಬೇಕು, ಆದರೆ ಜನರೊಂದಿಗೆ ನಿಮ್ಮ ಸಂಪರ್ಕವನ್ನು ಕಾಪಾಡಿಕೊಳ್ಳಬೇಕು. ವಿಭಿನ್ನ ಜನರೊಂದಿಗೆ, ವಿಭಿನ್ನ ಸಂಸ್ಕೃತಿಯ ಜನರೊಂದಿಗೆ ನೀವು ಹೊಂದುವ ಒಡನಾಟವು ನಿಮ್ಮ ವ್ಯಕ್ತಿತ್ವವನ್ನು ಮಾತ್ರ ಸುಧಾರಿಸುತ್ತದೆ. ತೆರೆದ ಹೃದಯದಿಂದ ಜೀವನವನ್ನು ಆನಂದಿಸಿ. ಅಂದಹಾಗೆ, ನಾನು ಸಂತೋಷ ಹಂಚಿಕೊಳ್ಳುವಿಕೆಯನ್ನು ಪ್ರಸ್ತಾಪಿಸಿದಾಗ, ಪದಗಳು ನಿಮಗೆ ಅನೇಕ ವಿಷಯಗಳನ್ನು ನೆನಪಿಸುತ್ತಿರಬೇಕೆಂದು ನನಗೆ ತಿಳಿದಿದೆ. ನೀವು ಸಾಗರ್ ಡಾಬಾ ಮತ್ತು ಕೇರಳ ಕೆಫೆಯಲ್ಲಿ, ಕ್ಯಾಂಪಸ್ ರೆಸ್ಟೋರೆಂಟ್‌ನ ರುಚಿ, ಸಿಸಿಡಿ ಕಾಫಿ, ಒಎಟಿಯಲ್ಲಿ ಕಥಿ ರೋಲ್ಸ್, ಎಂ.ಟಿಯಲ್ಲಿ ಚಹಾ ಮತ್ತು ಜಿಲೇಬಿ, ಟೆಕ್-ಕೃತಿ ಮತ್ತು ಅಂತರಾಗ್ನಿಯಲ್ಲಿ ನೀವು ಗಾಸಿಪ್ ಗಳನ್ನು ಮಿಸ್ ಮಾಡಿಕೊಳ್ಳಬಹುದುಇದು ಈಗಿನ ಜೀವನದ ಮತ್ತೊಂದು ಮುಖ.   ಜನರು ಭೇಟಿಯಾಗುತ್ತಾರೆ ಮತ್ತು ಹೋಗುತ್ತಾರೆ, ಆದರೆ ಜೀವನ ಮಾತ್ರ ಮುಂದುವರಿಯುತ್ತದೆ. ಇದನ್ನೇಚರೈವೇತಿ, ಚರೈವೇತಿ, ಚರೈವೇತಿ’ (ಮುಂದುವರಿಯಿರಿ) ಎನ್ನುತ್ತಾರೆ. ಕೊರೊನಾ ಬಿಗಿ ಮಾರ್ಗಸೂಚಿಗಳಿಂದಾಗಿ ಅನೇಕ ವಿದ್ಯಾರ್ಥಿಗಳು ಇತರ ಉಪನ್ಯಾಸ ಸಭಾಂಗಣಗಳಿಂದ ನನ್ನ ಮಾತುಗಳನ್ನು ಕೇಳುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಪ್ರೋಟೋಕಾಲ್‌ನ ಯಾವುದೇ ಸಮಸ್ಯೆ ಇರದಿದ್ದರೆ ನಿಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತಿದೆ. ನಿಮ್ಮ ವೃತ್ತಿಯಲ್ಲಿ ಯಶಸ್ವಿಯಾಗಲಿ, ನಿಮ್ಮ ಯಶಸ್ಸು ದೇಶದ ಯಶಸ್ಸಾಗಲಿ! ಹಾರೈಕೆಯೊಂದಿಗೆ ನನ್ನ ಮಾತು ಮುಗಿಸುತ್ತೇನೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು. ತುಂಬು ಧನ್ಯವಾದಗಳು!

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದ ಇದಾಗಿದೆ. ಮೂಲ ಭಾಷಣ ಹಿಂದಿ ಭಾಷೆಯಲ್ಲಿದೆ.

***


(Release ID: 1787578) Visitor Counter : 204