ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಪ್ರಾದೇಶಿಕ ಭಾಷೆಯಲ್ಲಿ ನೀಟ್ 3.0 ಮತ್ತು ಎ.ಐ.ಸಿ.ಟಿ.ಇ ಅನುಮೋದಿತ ತಾಂತ್ರಿಕ ಪುಸ್ತಕಗಳನ್ನು ಬಿಡುಗಡೆ ಮಾಡಿದ ಕೇಂದ್ರ ಶಿಕ್ಷಣ ಸಚಿವರು


253.72 ಕೋಟಿ ರೂ. ಮೌಲ್ಯದ 12 ಲಕ್ಷ ನೀಟ್ ಎಡ್-ಟೆಕ್ ಉಚಿತ ಕೋರ್ಸ್ ಕೂಪನ್‌ ಗಳನ್ನು ಸಾಮಾಜಿಕವಾಗಿ ಹಿಂದುಳಿದ ಗುಂಪುಗಳಿಗೆ ವಿತರಿಸಲಾಗಿದೆ

ಡಿಜಿಟಲ್ ವಿಭಜನೆಯನ್ನು ತಗ್ಗಿಸುವಲ್ಲಿ ಮತ್ತು ಪ್ರಪಂಚದ ಜ್ಞಾನ ಆಧಾರಿತ ಅವಶ್ಯಕತೆಗಳನ್ನು ಪೂರೈಸುವಲ್ಲಿ ನೀಟ್  ಒಂದು ಮಹಾನ್ ಶಕ್ತಿಯಾಗಿ ಕಾರ್ಯ ನಿರ್ವಹಿಸಲಿದೆ- ಶ್ರೀ ಧರ್ಮೇಂದ್ರ ಪ್ರಧಾನ್

ಉದ್ಯೋಗಾವಕಾಶಗಳನ್ನು ಉತ್ತೇಜಿಸಲು 21ನೇ ಶತಮಾನದಲ್ಲಿ ಹೊರಹೊಮ್ಮುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳಲು ಕೌಶಲ್ಯ ಭಾರತ (ಸ್ಕಿಲ್ ಇಂಡಿಯಾ)ದೊಂದಿಗೆ ನೀಟ್ ಅನ್ನು ಸಂಯೋಜಿಸಲಾಗುತ್ತಿದೆ- ಶ್ರೀ ಧರ್ಮೇಂದ್ರ ಪ್ರಧಾನ್

ನಮ್ಮ ವೈವಿಧ್ಯಮಯ ಭಾಷೆಗಳು ನಮ್ಮ ಶಕ್ತಿಯಾಗಿದ್ದು, ನಾವೀನ್ಯಪೂರ್ಣ ಸಮಾಜವನ್ನು ನಿರ್ಮಿಸಲು ಅವುಗಳನ್ನು ಬಳಸಿಕೊಳ್ಳುವುದು - ಶ್ರೀ ಧರ್ಮೇಂದ್ರ ಪ್ರಧಾನ್

Posted On: 03 JAN 2022 5:21PM by PIB Bengaluru

ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ದೇಶದ ವಿದ್ಯಾರ್ಥಿಗಳಿಗಾಗಿ ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿರುವ ಎಡ್-ಟೆಕ್ ಪರಿಹಾರಗಳು ಮತ್ತು ಕೋರ್ಸ್‌ ಗಳನ್ನು ಒದಗಿಸಲು ಒಂದೇ ವೇದಿಕೆಯಾಗಿ ನೀಟ್ 3.0ಕ್ಕೆ ಚಾಲನೆ ನೀಡಿದರು. ಸಚಿವರು ಪ್ರಾದೇಶಿಕ ಭಾಷೆಗಳಲ್ಲಿ ಎಐಸಿಟಿಇ ಅನುಮೋದಿತ ತಾಂತ್ರಿಕ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

11c4c756-47a6-4f6a-8ee7-efa1bf06f7ee.jpg

c487de0f-7471-481c-ae1a-8ff5030aeafe.jpg

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಧಾನ್, ಡಿಜಿಟಲ್ ವಿಭಜನೆಯನ್ನು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಕಡಿಮೆ ಮಾಡುವಲ್ಲಿ ಮತ್ತು ಭಾರತ ಮತ್ತು ಪ್ರಪಂಚದ ಜ್ಞಾನ ಆಧಾರಿತ ಅವಶ್ಯಕತೆಗಳನ್ನು ಪೂರೈಸುವಲ್ಲಿ ನೀಟ್ ಒಂದು ಮಹಾನ್ ಶಕ್ತಿಯಾಗಿ ಕಾರ್ಯ ನಿರ್ವಹಿತ್ತದೆ ಎಂದು ಹೇಳಿದರು. 58 ಜಾಗತಿಕ ಮತ್ತು ಭಾರತೀಯ ನವೋದ್ಯಮ ಎಡ್-ಟೆಕ್ ಕಂಪನಿಗಳು ನೀಟ್‌ ನಲ್ಲಿದ್ದು, ಕಲಿಕೆಯ ಫಲಿತಾಂಶಗಳನ್ನು ಉತ್ತಮಗೊಳಿಸಲು, ಉದ್ಯೋಗ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಲಿಕೆಯ ನಷ್ಟವನ್ನು ನಿವಾರಿಸಲು 100 ಕೋರ್ಸ್‌ ಗಳು ಮತ್ತು ಇ-ಸಂಪನ್ಮೂಲಗಳನ್ನು ನೀಡುತ್ತಿವೆ ಎಂದು ಸಚಿವರು ತಿಳಿಸಿದರು. ಇ-ವಸ್ತು ವಿಷಯ ಮತ್ತು ಸಂಪನ್ಮೂಲಗಳು ಮತ್ತು ನೀಟ್ ನಂತಹ ಡಿಜಿಟಲ್ ಚೌಕಟ್ಟುಗಳು ಕಲಿಕೆಯ ನಷ್ಟವನ್ನು ತಗ್ಗಿಸುವಲ್ಲಿ ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಲಿದೆ ಎಂದು ಅವರು ಆಶಿಸಿದರು.

ಉದ್ಯೋಗಾವಕಾಶವನ್ನು ಹೆಚ್ಚಿಸಲು ಮತ್ತು ನಮ್ಮ ಯುವಕರನ್ನು ಭವಿಷ್ಯಕ್ಕಾಗಿ ಅಣಿಗೊಳಿಸಲು ಕೌಶಲ್ಯದ ಉದಯೋನ್ಮುಖ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ಕೌಶಲ್ಯ ಭಾರತದೊಂದಿಗೆ ನೀಟ್‌ ನ ಕೋರ್ಸ್‌ಗಳನ್ನು ಸಂಯೋಜಿಸಲು ಎಐಸಿಟಿಇಗೆ ಸಚಿವರು ಪ್ರೇರೇಪಿಸಿದರು. ಎಐಸಿಟಿಇ ಮತ್ತು ಎಡ್-ಟೆಕ್ ಕಂಪನಿಗಳು ಇ-ಸಂಪನ್ಮೂಲಗಳನ್ನು ಸಾಧ್ಯವಾದಷ್ಟು ಕಡಿಮೆ ವೆಚ್ಚದಲ್ಲಿ ನೀಡಬೇಕೆಂದು ಅವರು ಆಗ್ರಹಿಸಿದರು. ನೀಟ್ 3.0ರ ಭಾಗವಾಗಿರುವ ಜಾಗತಿಕ ಎಡ್-ಟೆಕ್ ಕಂಪನಿಗಳು ಮತ್ತು ಭಾರತೀಯ ನವೋದ್ಯಮಗಳನ್ನು ಶ್ರೀ ಪ್ರಧಾನ್ ಶ್ಲಾಘಿಸಿದರು. ಶಿಕ್ಷಣವನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಲು ಸಹಕಾರಿ ವಿಧಾನದೊಂದಿಗೆ ಕಾರ್ಯ ನಿರ್ವಹಿಸಲು ಎಲ್ಲಾ ಎಡ್-ಟೆಕ್‌ ಗಳಿಗೆ ಸ್ವಾಗತವಿದೆ ಎಂದು ಅವರು ಹೇಳಿದರು. ಆದರೆ, ಏಕಸ್ವಾಮ್ಯ ಮತ್ತು ಶೋಷಣೆಗೆ ಸ್ಥಳವಿಲ್ಲ ಎಂಬುದನ್ನು ಎಡಿ-ಟೆಕ್‌ ಗಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ತಿಳಿಸಿದರು.

ಇಂದು, 12 ಲಕ್ಷಕ್ಕೂ ಹೆಚ್ಚು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ನೀಟ್ 3.0 ಅಡಿಯಲ್ಲಿ 253 ಕೋಟಿ ರೂ. ಮೌಲ್ಯದ ಉಚಿತ ಎಡ್-ಟೆಕ್ ಕೋರ್ಸ್ ಕೂಪನ್‌ ಗಳನ್ನು ಪಡೆದಿದ್ದಾರೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು. 2022ರ ಹೊಸ ವರ್ಷದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಂದ ವಿದ್ಯಾರ್ಥಿ ಸಮುದಾಯಕ್ಕೆ ಇದು ದೊಡ್ಡ ಕೊಡುಗೆಯಾಗಿದೆ ಎಂದು ಅವರು ಹೇಳಿದರು. ಭಾರತವು 21ನೇ ಶತಮಾನದಲ್ಲಿ ಜಾಗತಿಕ ಆರ್ಥಿಕತೆಯನ್ನು ಮುನ್ನಡೆಸಲಿದೆ ಹಾಗೂ ವ್ಯಾಪಾರ ಮತ್ತು ಆರ್ಥಿಕತೆಗೆ ಹೆಚ್ಚು ಆದ್ಯತೆಯ ಮಾರುಕಟ್ಟೆಯಾಗಲಿದೆ ಎಂದು ಅವರು ಹೇಳಿದರು.

ಪ್ರಾದೇಶಿಕ ಭಾಷೆಗಳ ತಾಂತ್ರಿಕ ಪುಸ್ತಕಗಳ ಬಗ್ಗೆ ಮಾತನಾಡಿದ ಶ್ರೀ ಪ್ರಧಾನ್, ನಮ್ಮ ವೈವಿಧ್ಯಮಯ ಭಾಷೆಗಳು ನಮ್ಮ ಶಕ್ತಿ ಮತ್ತು ಅವುಗಳನ್ನು ನಾವೀನ್ಯಪೂರ್ಣ ಸಮಾಜ ನಿರ್ಮಿಸಲು ಪ್ರಮುಖವಾಗಿ ಬಳಸಿಕೊಳ್ಳಬೇಕಿದೆ ಎಂದು ಹೇಳಿದರು. ಪ್ರಾದೇಶಿಕ ಭಾಷೆಗಳಲ್ಲಿ ಕಲಿಯುವುದರಿಂದ ವಿಮರ್ಶಾತ್ಮಕ ಆಲೋಚನಾ ಸಾಮರ್ಥ್ಯ ಮತ್ತಷ್ಟು ಬೆಳೆಯುತ್ತದೆ ಮತ್ತು ನಮ್ಮ ಯುವಕರು ಜಾಗತಿಕ ನಾಗರಿಕರಾಗಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ನೀಟ್:

ನ್ಯಾಷನಲ್ ಎಜುಕೇಷನಲ್ ಅಲೈಯನ್ಸ್ ಫಾರ್ ಟೆಕ್ನಾಲಜಿ (ನೀಟ್) ಎಂಬುದು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿದ ತಾಂತ್ರಿಕ ಪರಿಹಾರಗಳ ಬಳಕೆಯನ್ನು ಕಲಿಯುವವರ ಅನುಕೂಲಕ್ಕಾಗಿ, ಯುವಜನರ ಉದ್ಯೋಗಾವಕಾಶವನ್ನು ಹೆಚ್ಚಿಸಲು ಒಂದೇ ವೇದಿಕೆಯಲ್ಲಿ ಒದಗಿಸುವ ಉಪಕ್ರಮವಾಗಿದೆ. ಈ ಪರಿಹಾರಗಳು ಉತ್ತಮ ಕಲಿಕೆಯ ಫಲಿತಾಂಶಗಳು ಮತ್ತು ಪ್ರಮುಖ ಪ್ರದೇಶಗಳಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ವೈಯಕ್ತೀಕರಿಸಿದ ಮತ್ತು ಅಗತ್ಯಕ್ಕೆ ಅನುಗುಣವಾದ ಕಲಿಕೆಯ ಅನುಭವಕ್ಕಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತವೆ. ಶಿಕ್ಷಣ ಸಚಿವಾಲಯದ ಎಐಸಿಟಿಇ, ಈ ಪ್ರಕ್ರಿಯೆಯಲ್ಲಿ ಆಯೋಜಕನಂತೆ ಕಾರ್ಯನಿರ್ವಹಿಸುತ್ತಿದೆ ಮತ್ತು ಪರಿಹಾರಗಳು ಹೆಚ್ಚಿನ ಸಂಖ್ಯೆಯ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಲಭಿಸುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತದೆ.  ನೀಟ್ 58 ಶಿಕ್ಷಣ ತಂತ್ರಜ್ಞಾನ ಕಂಪನಿಗಳನ್ನು ಹೊಂದಿದ್ದು, 100 ಉತ್ಪನ್ನಗಳನ್ನು ಹೊಂದಿದೆ, ಇದು ಉದ್ಯೋಗ ಯೋಗ್ಯ ಕೌಶಲ್ಯಗಳು, ಸಾಮರ್ಥ್ಯ ವರ್ಧನೆ ಮತ್ತು ಬ್ರಿಜ್ ಕಲಿಕೆಯ ಅಂತರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

ಉನ್ನತ ಶಿಕ್ಷಣ ಕಾರ್ಯದರ್ಶಿ ಶ್ರೀ ಸಂಜಯ್ ಮೂರ್ತಿ; ಎಐಸಿಟಿಇ ಅಧ್ಯಕ್ಷರಾದ ಪ್ರೊ. ಅನಿಲ್ ಸಹಸ್ರಬುದ್ಧೆ; ಎಐಸಿಟಿಇ ಉಪಾಧ್ಯಕ್ಷ ಪ್ರೊ.ಎಂ ಪಿ ಪೂನಿಯಾ, ಎಐಸಿಟಿಇ ಸದಸ್ಯ ಕಾರ್ಯದರ್ಶಿ ಪ್ರೊ. ರಾಜೀವ್ ಕುಮಾರ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

***

MJPS/AK



(Release ID: 1787277) Visitor Counter : 213