ರೈಲ್ವೇ ಸಚಿವಾಲಯ

2021ರಲ್ಲಿ ತನ್ನ ಮೂಲಸೌಕರ್ಯ ಮತ್ತು ಜಾಲ ಸಾಮರ್ಥ್ಯ ವಿಸ್ತರಣೆಯಲ್ಲಿ ಅಭೂತ ಪೂರ್ವ ಪ್ರಗತಿ ಕಂಡ ಮೆಟ್ರೋ ರೈಲ್ವೆ


ದಕ್ಷಿಣೇಶ್ವರ ಮತ್ತು ನೌಪಾರ ನಡುವೆ(41.3 ಕಿ.ಮೀ ಉದ್ದದ) ಉತ್ತರ-ದಕ್ಷಿಣ ಮೆಟ್ರೊ ವಿಸ್ತರಿತ ಮಾರ್ಗ ಉದ್ಘಾಟನೆ

ಪೂಲ್ಬಾಗನ್ ನಿಂದ ಸಿಲ್ದಾಹ್ ವರೆಗೆ ಪೂರ್ವ-ಪಶ್ಚಿಮ ಮೆಟ್ರೋದ ಮೊದಲ ಪ್ರಾಯೋಗಿಕ ರೈಲು ಸಂಚಾರ ಪೂರ್ಣ

ಪೂರ್ವ-ಪಶ್ಚಿಮ ಮೆಟ್ರೋದಲ್ಲಿ ಕ್ಯೂಆರ್ ಆಧಾರಿತ ಟಿಕೆಟ್ ವ್ಯವಸ್ಥೆ ಪರಿಚಯಿಸುವ ಮೂಲಕ ಮೆಟ್ರೋ ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿಕೆ

ತಪನ್ ಸಿನ್ಹಾ ಸ್ಮಾರಕ ಆಸ್ಪತ್ರೆಯಲ್ಲಿ ಪ್ರೆಷರ್ ಸ್ವಿಂಗ್ ಅಡ್ಸಾರ್ಪ್ಶನ್ (ಪಿಎಸ್ ಎ) ಆಮ್ಲಜನಕ ಉತ್ಪಾದನಾ ಘಟಕ ಉದ್ಘಾಟನೆ

ಹವಾನಿಯಂತ್ರಣ ರಹಿತ ಬೋಗಿಗಳಿಗೆ ವಿದಾಯ ಹೇಳಿದ ಮೆಟ್ರೋ ರೈಲ್ವೆ

Posted On: 03 JAN 2022 1:48PM by PIB Bengaluru

2021ನೇ ವರ್ಷದಲ್ಲಿ ಕೋಲ್ಕತ್ತಾ ಮೆಟ್ರೋ ತನ್ನ ಜಾಲ ಸಾಮರ್ಥ್ಯ ವಿಸ್ತರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅಭೂತಪೂರ್ವ ಪ್ರಗತಿಗೆ ಸಾಕ್ಷಿಯಾಗಿದೆ. ಕೋವಿಡ್ ಸವಾಲುಗಳ ನಡುವೆಯೂ ಕೋಲ್ಕತ್ತಾ ಮೆಟ್ರೋ ಭವಿಷ್ಯದ ಅಭಿವೃದ್ಧಿ ಮತ್ತು ಪ್ರಯಾಣಿಕರಿಗೆ ಮತ್ತೊಂದು ಹಂತದ ಪ್ರಯಾಣದ ಅನುಭವವನ್ನು ನೀಡಲು ಶಂಕುಸ್ಥಾಪನೆಗಳನ್ನು ಮುಂದುವರಿಸಿದೆ.

 

ಕೋಲ್ಕತ್ತಾ ಮೆಟ್ರೋ 2021ನೇ ವರ್ಷದಲ್ಲಿ ಮಾಡಿರುವ ಗಮನಾರ್ಹ ಸಾಧನೆಗಳು ಕೆಳಗಿನಂತಿವೆ.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 22.02.2021ರಲ್ಲಿ ನೌಪಾರ ಮತ್ತು ದಕ್ಷಿಣೇಶ್ವರ ನಡುವೆ(4.1 ಕಿ.ಮೀ. ಉದ್ದದ) ಉತ್ತರ ದಕ್ಷಿಣ ಮೆಟ್ರೋ ರೈಲು ವಿಸ್ತರಿತ ಮಾರ್ಗವನ್ನು ಉದ್ಘಾಟಿಸಿದರು ಮತ್ತು ಮಾರ್ಗದಲ್ಲಿ ಮೊದಲ ಮೆಟ್ರೋ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ವಿಸ್ತರಣೆ ಕೋಲ್ಕತ್ತಾದ ಜನರಿಗೆ ಮಾತ್ರ ಅನುಕೂಲಕಾರಿಯಾಗಿಲ್ಲ, ಇದು ಹೂಗ್ಲಿ, ಹೌರಾ ಮತ್ತು ದಕ್ಷಿಣ 24 ಪರಗಣದ ಜನರಿಗೂ ಮೆಟ್ರೋ ಸೇವೆಗಳ ಪ್ರಯೋಜನವಾಗಲಿದೆಎಂದು ಹೇಳಿದರು.

ನೌಪಾರಾದಲ್ಲಿ ನಾನ್ ಇಂಟರ್ ಲಾಕಿಂಗ್(ಎನ್ಐ) ಕಾಮಗಾರಿ ವರ್ಷ ಯಶಸ್ವಿಯಾಗಿ ಪೂರ್ಣಗೊಂಡಿದೆ. ಎನ್ಐ ಕಾಮಗಾರಿಯಲ್ಲಿ ನೌಪಾರಾದಲ್ಲಿ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಯ ಪರಿಷ್ಕರಣೆ ಒಳಗೊಂಡಿದ್ದು, ಇದು ಎಲ್ಲ ಮಾರ್ಗಗಳಿಗೂ, ಕೇಂದ್ರಗಳಿಗೂ ಸಿಗ್ನಲಿಂಗ್ ಮತ್ತು ಮಾರ್ಗಗಳಿಗೆ ಸಂಪರ್ಕ ಕಲ್ಪಿಸಲಿದೆ. ಪರಿಷ್ಕರಣೆಯಿಂದಾಗಿ ನೌಪಾರಾದಿಂದ ಬೋಗಿಗಳ ಸುಗಮ ಸಂಚಾರ ಸುಧಾರಿಸಿರುವುದೇ ಅಲ್ಲದೆ, ಮೆಟ್ರೋ ರೈಲ್ವೆಯ ರೈಲುಗಳ ಚಾಲನೆ, ಮಾನದಂಡಗಳ ಸಾಧನೆಯಲ್ಲೂ ಸಾಕಷ್ಟು ಹೆಚ್ಚಳವಾಗಿದೆ.  

 

ವರ್ಷ ಪೂಲ್ ಬಾಗನ್ ಮತ್ತು ಸೆಲ್ಡಾಹ್ ನಡುವೆ ಪೂರ್ವ-ಪಶ್ಚಿಮ ಮೆಟ್ರೋದ ಮೊದಲ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಕಾರಿಡಾರ್ ನಲ್ಲಿನ ಸಿಲ್ಡಾಹ್ ನಿಲ್ದಾಣ, ಸದ್ಯದಲ್ಲೇ ಕಾರ್ಯಾರಂಭ ಮಾಡಲು ಸಜ್ಜಾಗಿದೆ.

 

1.24 ಮೆಗಾವ್ಯಾಟ್ ಮೇಲ್ಛಾವಣಿ ಸೌರವಿದ್ಯುತ್ ಘಟಕ 27.08.2021ರಂದು ರಾಷ್ಟ್ರಕ್ಕೆ ಸಮರ್ಪಿಸಲಾಯಿತು. ಸೌರ ವಿದ್ಯುತ್ ಘಟಕವನ್ನು ಪೂರ್ವ-ಪಶ್ಚಿಮ ಮೆಟ್ರೋದ ಸೆಂಟ್ರಲ್ ಪಾರ್ಕ್ ಡಿಪೋದ ಎರಡು ಪ್ರಮುಖ ಕಟ್ಟಡಗಳ ಮೇಲೆ ಸುಮಾರು 19173 ಚದರ ಕಿ.ಮೀ. ಪ್ರದೇಶದಲ್ಲಿ ಅಳವಡಿಸಲಾಗಿದೆ. ಇದರ ಪರಿಣಾಮ ಮೆಟ್ರೋ ರೈಲ್ವೆ ವಾರ್ಷಿಕ 45 ಲಕ್ಷ ರೂ(ಅಂದಾಜು) ಉಳಿಸಲಿದೆ.

ಗಾಂಧಿ ಜಯಂತಿಯ ದಿನದಂದು 02.10.2021 ರಂದು ಮಹಾನಾಯಕ್ ಉತ್ತಮ್ ಕುಮಾರ್ ಮೆಟ್ರೋ ನಿಲ್ದಾಣದಲ್ಲಿ ಎರಡು ಎಲಿವೇಟರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಯಿತು. ಎರಡು ಲಿಫ್ಟ್ ಗಳು ಮೆಟ್ರೋ ಪ್ರಯಾಣಿಕರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿವೆ ಮತ್ತು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹೆಚ್ಚುವರಿ ಸೌಕರ್ಯವನ್ನು ಒದಗಿಸಿವೆ.

 

ಗಾಲಿಗಳ ಮೇಲೆ ವಸ್ತು ಪ್ರದರ್ಶನ, ದೇಶದ ಯಾವುದೇ ಮೆಟ್ರೋ ರೈಲು ನಿಲ್ದಾಣಗಳಲ್ಲಿರದ ಮೊದಲ ಪ್ರದರ್ಶನವನ್ನು ಹವಾನಿಯಂತ್ರಣರಹಿತ ಮೆಟ್ರೋ ಬೋಗಿಯೊಳಗೆ(ಕೋಲ್ಕತ್ತಾ ಮೆಟ್ರೋದ ಹವಾನಿಯಂತ್ರಣರಹಿತ ರೇಕ್ ಗಳಾದ  12/14) ಅವುಗಳನ್ನು 24.10.2021ರಂದು ಮೆಟ್ರೋ ರೈಲ್ವೆಯ 37ನೇ ಸಂಸ್ಥಾಪನಾ ದಿನದಂದು ಮಹಾನಾಯಕ್ ಉತ್ತಮ್ ಕುಮಾರ್ ನಿಲ್ದಾಣದಲ್ಲಿ ಪ್ರದರ್ಶಿಸಲಾಯಿತು. ಕೋಲ್ಕತ್ತಾ ಮೆಟ್ರೋದ ವೈಭವದ ಇತಿಹಾಸದ ಪ್ರದರ್ಶನದಲ್ಲಿ ದೇಶದ ಮೊದಲ ಮೆಟ್ರೋ ಮತ್ತು ಸದ್ಯದ ಸ್ಥಿತಿಗತಿ ಮತ್ತು ಅದರ ಭವಿಷ್ಯದ ಯೋಜನೆಗಳನ್ನು ವರ್ಣರಂಜಿತ ಪೋಸ್ಟರ್ ಗಳ ಮೂಲಕ ಪ್ರದರ್ಶಿಸಲಾಯಿತು. ವಸ್ತುಪ್ರದರ್ಶನದ ನಂತರ ಮೆಟ್ರೋ ರೈಲ್ವೆ, ಹವಾನಿಯಂತ್ರಿತ ಬೋಗಿಗಳಿಗೆ ಉತ್ತಮ ವಿದಾಯ ಹೇಳಿತು. ಕೋಲ್ಕತ್ತಾ ಮೆಟ್ರೋದಲ್ಲಿ ಹವಾನಿಯಂತ್ರಣರಹಿತ ಮೆಟ್ರೋ ಬೋಗಿಗಳು ಇತಿಹಾಸ ಸೇರಿದವು. ಮೆಟ್ರೋ ರೈಲ್ವೆ ಪ್ರಯಾಣಿಕರಿಗೆ ಸಂಪೂರ್ಣ ಹವಾನಿಯಂತ್ರಿತ ಸೇವೆಯನ್ನು ಒದಗಿಸುತ್ತಿವೆ.

ಯಾಣಿಕರ ಅನುಕೂಲಕ್ಕಾಗಿ 25.11.2021 ರಂದು ಮೆಟ್ರೋ ರೈಲ್ವೆ ಟೋಕನ್ ನೀಡುವುದನ್ನು ಮತ್ತೆ ಆರಂಭಿಸಿತು. ಮೊದಲು 23.03.2020ರಂದು ಕೊನೆಯದಾಗಿ ಟೋಕನ್ ಗಳನ್ನು ವಿತರಿಸಲಾಗಿತ್ತು. ಟೋಕನ್ ಗಳ ಸ್ಯಾನಿಟೈಸ್ ಗಾಗಿ ಉತ್ತರ-ದಕ್ಷಿಣ ಮತ್ತು ಪೂರ್ವಪಶ್ಚಿಮದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ 40 ಟೋಕನ್ ಸ್ಯಾನಿಟೈಸರ್ ಮಿಷನ್ ಗಳನ್ನು ಅಳವಡಿಸಲಾಗಿದೆ. ಯಂತ್ರಗಳು ಅಲ್ಟ್ರಾ ವೈಲೆಟ್ ಕಿರಣಗಳ ನೆರವಿನಿಂದ 4 ನಿಮಿಷಗಳಲ್ಲಿ ಟೋಕನ್ ಗಳನ್ನು ಸ್ಯಾನಿಟೈಸ್ ಮಾಡುತ್ತದೆ.

ತಪನ್ ಸಿನ್ಹಾ ಸ್ಮಾರಕ ಆಸ್ಪತ್ರೆಯಲ್ಲಿ  01.12.2021ರಂದು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮನೋಜ್ ಜೋಶಿ ಅವರು, ಪ್ರಶರ್‌ ಸ್ವಿಂಗ್ ಅಡ್ಸಾರ್ಪ್ಶನ್(ಪಿಎಸ್ಎ) ಆಮ್ಲಜನಕ ಉತ್ಪಾದಕ ಘಟಕವನ್ನು ಉದ್ಘಾಟಿಸಿದರು. ಘಟಕ ರೋಗಿಗಳ ಅನುಕೂಲಕ್ಕಾಗಿ ಪ್ರತಿ ನಿಮಿಷಕ್ಕೆ 250 ಲೀಟರ್ ಆಕ್ಸಿಜನ್ ಅನ್ನು ಉತ್ಪಾದಿಸಲಿದೆ. ಅಲ್ಲದೆ ಇದು ದೊಡ್ಡ ಆಕ್ಸಿಜನ್ ಸಿಲಿಂಡರ್ ಗಳ ಖರೀದಿ ವೆಚ್ಚವನ್ನು ಶೇ.70ರಷ್ಟು ತಗ್ಗಿಸುತ್ತದೆ.

 

ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ 04.12.2021ರಂದು ಪೂರ್ವ-ಪಶ್ಚಿಮ ಮೆಟ್ರೋ ಮಾರ್ಗದಲ್ಲಿ ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಆರಂಭಿಸಲಾಯಿತು. ಇದು ಮೆಟ್ರೋ ಪ್ರಯಾಣಿಕರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ. ಮೂರನೇ ಪರ್ಯಾಯ ವ್ಯವಸ್ಥೆ ಆರಂಭಿಸುವುದರೊಂದಿಗೆ ಮೆಟ್ರೋ ಟಿಕೆಟ್ ಗಳು ಇದೀಗ ಪ್ರಯಾಣಿಕರ ಅಂಗೈನಲ್ಲೇ ಲಭ್ಯವಿರುತ್ತವೆ. ಮೆಟ್ರೋ ರೈಲ್ವೆ ಇದೀಗ ಕ್ಯೂಆರ್ ಕೋಡ್ ಸ್ಕ್ಯಾನರ್ ಗಳನ್ನು ಪಡೆದ ನಂತರ ಇನ್ನು ಕೆಲವೇ ತಿಂಗಳಲ್ಲಿ ಸೌಕರ್ಯಗಳನ್ನು ಉತ್ತರ-ದಕ್ಷಿಣ ಕಾರಿಡಾರ್ ಗೂ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಮತ್ತು ಉತ್ತರ-ದಕ್ಷಿಣ ಕಾರಿಡಾರ್ ನಿಲ್ದಾಣಗಳ ಹಾಲಿ ಎಎಫ್ ಸಿ ದ್ವಾರಗಳ ಹಾರ್ಡ್ ವೇರ್ ಅನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ.  

 

ಮೆಟ್ರೋ ರೈಲ್ವೆಗೆ ಸೇರಿದ ತಪನ್ ಸಿನ್ಹಾ ಸ್ಮಾರಕ ಆಸ್ಪತ್ರೆ, ಕಳೆದ ಒಂದು ವರ್ಷದಿಂದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. 75 ಹಾಸಿಗೆಗಳ ಸಾಮರ್ಥ್ಯದ ಪ್ರತ್ಯೇಕ ಕೋವಿಡ್ ವಾರ್ಡ್, ಕೋವಿಡ್ ರೋಗಿಗಳ ಚಿಕಿತ್ಸೆಗೆ ಮೀಸಲಾಗಿದೆ.  30.12.2021 ವರಗೆ 604 ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಗೆ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನು ಇಲ್ಲಿಯ ವಾರ್ಡ್ ಒಳಗೊಂಡಿದೆ. 02.02.2021 ರಿಂದ ಮೆಟ್ರೋ ರೈಲ್ವೆಯಲ್ಲಿ ಕೋವಿಡ್ ಲಸಿಕೀಕರಣ ಅಭಿಯಾನ ಆರಂಭವಾಗಿದೆ. 30.12.2021 ವರೆಗೆ ಒಟ್ಟು 21,423 ಡೋಸ್ ಕೋವಿಡ್ ಲಸಿಕೆಗಳನ್ನು( 1 ಮತ್ತು 2ನೇ ಡೋಸ್) ಲಸಿಕೆಗಳನ್ನು ಆರೋಗ್ಯ ರಕ್ಷಣಾ ಕಾರ್ಯಕರ್ತರು, ಮೆಟ್ರೋ ಸಿಬ್ಬಂದಿ, ರೈಲ್ವೆ ಫಲಾನುಭವಿಗಳು, ಗುತ್ತಿಗೆ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ನೀಡಲಾಗಿದೆ.

 

ಮೆಟ್ರೋ ರೈಲ್ವೆ 7 ಮೆಟ್ರೋ ನಿಲ್ದಾಣಗಳ ಬ್ರಾಂಡಿಂಗ್ ಹಕ್ಕುಗಳನ್ನು ಕಾರ್ಪೊರೇಟ್ ಕಚೇರಿಗಳು ಸೇರಿದಂತೆ ಖಾಸಗಿ ವಿಶ್ವವಿದ್ಯಾಲಯಗಳು, ಬ್ಯಾಂಕ್ ಗಳು, ಆರೋಗ್ಯ  ರಕ್ಷಣಾ ಸಂಸ್ಥೆಗಳು, ವಿಮಾ ಕಂಪನಿಗಳು ಇತ್ಯಾದಿಗಳಿಗೆ ನೀಡಿದೆ. ಉತ್ತರ-ದಕ್ಷಿಣ ಮೆಟ್ರೋದ ಐದು ನಿಲ್ದಾಣಗಳಾದ ದುಮ್ ದುಮ್, ನೌಪಾರ, ಬೆಲ್ಗಾಚಿಯಾ, ಎಸ್ಪಲನೇಡ್ ಮತ್ತು ಪಾರ್ಕ್ ಸ್ಟ್ರೀಟ್ ಹಾಗೂ ಪೂರ್ವ-ಪಶ್ಚಿಮ ಮೆಟ್ರೋದ ಎರಡು ನಿಲ್ದಾಣಗಳಾದ ಬೆಂಗಾಲ್ ಕೆಮಿಕಲ್ ಮತ್ತು ಸೆಲ್ಡಾಹ್(ಇವುಗಳು ಸದ್ಯದಲ್ಲೇ ಕಾರ್ಯಾರಂಭ ಮಾಡಲಿವೆ) ನಿಲ್ದಾಣಗಳ ಬ್ರಾಂಡಿಂಗ್ ಹಕ್ಕುಗಳನ್ನು ನೀಡಲು ಟೆಂಡರ್ ಆಹ್ವಾನಿಸಲಾಗಿದೆ. ಮೆಟ್ರೋ, ನಿಲ್ದಾಣಗಳಲ್ಲಿ ನಿಲ್ದಾಣ ಬ್ರಾಂಡಿಂಗ್ ಹಕ್ಕುಗಳನ್ನು ನೀಡುವ ಮೂಲಕ ಮೊದಲ ವರ್ಷ 3.65 ಕೋಟಿ ರೂ. ಆದಾಯಗಳಿಸಿದೆ. ಮೆಟ್ರೋ ಸ್ಮಾರ್ಟ್ ಕಾರ್ಡ್ ಗಳನ್ನು ಎರಡು ಖಾಸಗಿ ಸಂಸ್ಥೆಗಳಿಗೆ ಬ್ರಾಂಡಿಂಗ್ ಗೆ ನೀಡಲಾಗಿದೆ. ಇದರಿಂದಾಗಿ ಮೆಟ್ರೋ ಈವರೆಗೆ 20.65 ಲಕ್ಷ ರೂ. ಆದಾಯಗಳಿಸಿದೆ.  ಈವರೆಗೆ 11 ಮೆಟ್ರೋ ನಿಲ್ದಾಣಗಳ ಕೋ-ಬ್ರಾಂಡಿಂಗ್ ಗೆ ಅವಕಾಶ ನೀಡಲಾಗಿದೆ.

 

ಉತ್ತರ-ದಕ್ಷಿಣ ಕಾರಿಡಾರ್ ಎಎಫ್ ಸಿ-ಪಿಸಿ ದ್ವಾರಗಳ ಬ್ರಾಂಡಿಂಗ್ ಅನ್ನು ಎರಡು ವರ್ಷಗಳ ಅವಧಿಗೆ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ನಿಲ್ದಾಣದ 350 ಗೇಟ್ ಗಳ ಬ್ರಾಂಡಿಂಗ್ ಹಕ್ಕುಗಳನ್ನು ನೀಡುವ ಮೂಲಕ ಒಟ್ಟು 73.50 ಲಕ್ಷ ರೂ. ಆದಾಯಗಳಿಸಲಾಗಿದೆ.  

 

ಇದಲ್ಲದೆ ಉತ್ತರ-ದಕ್ಷಿಣ ಮೆಟ್ರೋ ಮಾರ್ಗದ ಎಲ್ಲ 26 ನಿಲ್ದಾಣಗಳಲ್ಲಿ 52 ಕಾರ್ಡ್ ಬ್ಯಾಲೆನ್ಸ್ ಚೆಕ್ಕಿಂಗ್ ಟರ್ಮಿನಲ್(ಸಿಬಿಸಿಟಿ)ಗಳನ್ನು ಬ್ರಾಂಡಿಂಗ್ ಗೆ ನೀಡುವ ಮೂಲಕ ಮೆಟ್ರೋ 12.48 ಲಕ್ಷ ರೂ. ಆದಾಯ ಗಳಿಸಿದೆ.

 

ಖಾಸಗಿ ಕಂಪನಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ನೌಪಾರಾದಿಂದ ಕವಿ ಸುಭಾಷ್ ವರೆಗಿನ 24 ಮೆಟ್ರೋ ನಿಲ್ದಾಣಗಳಲ್ಲಿ ಪವರ್ ಬ್ಯಾಂಕ್ ರೆಂಟಲ್ ಟವರ್ ಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಮೆಟ್ರೋ ಒಂದು ವರ್ಷಕ್ಕೆ ಸುಮಾರು 12 ಲಕ್ಷ ರೂ. ಆದಾಯಗಳಿಸುತ್ತದೆ.

***(Release ID: 1787153) Visitor Counter : 221