ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಿ ಜನವರಿ 2 ರಂದು ಮೀರತ್‌ಗೆ ಭೇಟಿ ನೀಡಲಿದ್ದಾರೆ
ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಿರುವ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯದ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ನೆರವೇರಿಸಲಿದ್ದಾರೆ
ದೇಶದ ಎಲ್ಲಾ ಭಾಗಗಳಲ್ಲಿ ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯವನ್ನು ಸ್ಥಾಪಿಸುವ ಪ್ರಧಾನಮಂತ್ರಿಯವರ ದೂರ ದೃಷ್ಟಿಗೆ ಇದು ಅನುಗುಣವಾಗಿದೆ
ವಿಶ್ವವಿದ್ಯಾನಿಲಯವು ಆಧುನಿಕ ಮತ್ತು ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದೆ
Posted On:
31 DEC 2021 11:11AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2022ರ ಜನವರಿ 2 ರಂದು ಮೀರತ್‌ಗೆ ಭೇಟಿ ನೀಡಲಿದ್ದಾರೆ ಮತ್ತು ಮಧ್ಯಾಹ್ನ 1 ಗಂಟೆಗೆ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯದ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.
ಮೀರತ್‌ನ ಸರ್ಧಾನ ಪಟ್ಟಣದ ಸಲಾವಾ ಮತ್ತು ಕೈಲಿ ಗ್ರಾಮಗಳಲ್ಲಿ ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ.
ಪ್ರಧಾನಮಂತ್ರಿ ಅವರ ಮಹತ್ವಾಕಾಂಕ್ಷೆಯ ಪ್ರಮುಖ ಕ್ಷೇತ್ರವೆಂದರೆ ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವುದು ಮತ್ತು ದೇಶದ ಎಲ್ಲಾ ಭಾಗಗಳಲ್ಲಿ ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯವನ್ನು ಸ್ಥಾಪಿಸುವುದಾಗಿದೆ.
ಮೀರತ್‌ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾನಿಲಯದ ಸ್ಥಾಪನೆಯು ಅವರ ದೃಷ್ಟಿಕೋನವನ್ನು ಈಡೇರಿಸುವ ಪ್ರಮುಖ ಹೆಜ್ಜೆಯಾಗಿದೆ.
ಕ್ರೀಡಾ ವಿಶ್ವವಿದ್ಯಾನಿಲಯವು ಸಿಂಥೆಟಿಕ್ ಹಾಕಿ ಮೈದಾನ, ಫುಟ್‌ಬಾಲ್ ಮೈದಾನ, ಬಾಸ್ಕೆಟ್‌ಬಾಲ್/ ವಾಲಿಬಾಲ್/ ಹ್ಯಾಂಡ್‌ಬಾಲ್/ ಕಬಡ್ಡಿ ಮೈದಾನ, ಲಾನ್ ಟೆನ್ನಿಸ್ ಅಂಕಣ, ಜಿಮ್ನಾಷಿಯಂ ಹಾಲ್, ಸಿಂಥೆಟಿಕ್ ರನ್ನಿಂಗ್ ಸ್ಟೇಡಿಯಂ, ಈಜುಕೊಳ, ವಿವಿಧೋದ್ದೇಶ ಹಾಲ್ ಸೇರಿದಂತೆ ಆಧುನಿಕ ಮತ್ತು ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯ ಮತ್ತು ಸೈಕ್ಲಿಂಗ್ ವೆಲೋಡ್ರೋಮ್ ಅನ್ನು ಹೊಂದಿದೆ. ವಿಶ್ವವಿದ್ಯಾನಿಲಯವು ಶೂಟಿಂಗ್, ಸ್ಕ್ವಾಷ್, ಜಿಮ್ನಾಸ್ಟಿಕ್ಸ್, ವೇಟ್‌ಲಿಫ್ಟಿಂಗ್, ಬಿಲ್ಲುಗಾರಿಕೆ, ಕ್ಯಾನೋಯಿಂಗ್ ಮತ್ತು ಕಯಾಕಿಂಗ್ ಸೇರಿದಂತೆ ಇತರ ಸೌಲಭ್ಯಗಳನ್ನು ಹೊಂದಿದೆ.
ವಿಶ್ವವಿದ್ಯಾನಿಲಯವು 540 ಮಹಿಳೆಯರು ಮತ್ತು 540 ಪುರುಷ ಕ್ರೀಡಾಪಟುಗಳು ಸೇರಿದಂತೆ 1080 ಕ್ರೀಡಾಪಟುಗಳಿಗೆ ತರಬೇತಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.
***
(Release ID: 1786540)
Visitor Counter : 215
Read this release in:
Odia
,
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam