ನೀತಿ ಆಯೋಗ

ಅಟಲ್ ನಾವೀನ್ಯ ಅಭಿಯಾನ, ನೀತಿ ಆಯೋಗದಿಂದ ‘ನಿಮಗಾಗಿ ನಾವೀನ್ಯತೆ’ ಮತ್ತು ‘ಚತುರ ಟಿಂಕರರುಗಳು’ ಬಿಡುಗಡೆ

Posted On: 29 DEC 2021 4:24PM by PIB Bengaluru

ಅಟಲ್ ನಾವೀನ್ಯತೆ ಅಭಿಯಾನ (ಎಐಎಂ) ನೀತಿ ಆಯೋಗವು ಇಂದು - 'ನಿಮಗಾಗಿ ನಾವೀನ್ಯತೆ'- ಎಐಎಂನ ಅಟಲ್ ಇನ್ ಕ್ಯುಬೇಶನ್  ಸೆಂಟರ್ ಗಳು (ಎಐಸಿಗಳು) ಬೆಂಬಲಿಸುವ 70  ನವೋದ್ಯಮಗಳನ್ನು ಒಳಗೊಂಡ ಕೃಷಿಯ ಮೇಲೆ ಕೇಂದ್ರೀಕರಿಸಿದ ಆವಿಷ್ಕಾರಗಳ ಸಂಗ್ರಹ ಮತ್ತು ಭಾರತದ ಅಟಲ್ ಟಿಂಕರಿಂಗ್ ಲ್ಯಾಬ್ (ಎಟಿಎಲ್) ನಿಂದ 41  ನಾವೀನ್ಯತೆಗಳನ್ನು ಒಳಗೊಂಡ ತಂತ್ರಜ್ಞಾನದ ನಾವೀನ್ಯಗಳ ಕುರಿತ ಸಂಕಲನದ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಿವೆ.

ಆಜಾದಿ ಕಾ ಅಮೃತ ಮಹೋತ್ಸವ - 75ನೇ ಸ್ವಾತಂತ್ರ್ಯ ವರ್ಷವನ್ನು ರಾಷ್ಟ್ರವು ಸಂಭ್ರಮಿಸುತ್ತಿರುವಾಗ, ಎರಡೂ ಪುಸ್ತಕಗಳು ಭಾರತದ ಯುವ ನವೋದ್ಯಮಿಗಳ ಯಶೋಗಾಥೆಗಳ ಆಚರಣೆಯಾಗಿದೆ. 'ನಿಮಗಾಗಿ ನಾವೀನ್ಯತೆಗಳು'    ಭವಿಷ್ಯದ ಪ್ರಸ್ತುತ ಸಮಸ್ಯೆಗಳನ್ನು ಪರಿಹರಿಸುವ ಭಾರತದ ಉದ್ಯಮಶೀಲ ಮನಸ್ಸುಗಳ ಯಶಸ್ವಿ ನಾವೀನ್ಯತೆಗಳ ಸಂಕಲನವಾಗಿದೆ, ಆದರೆ 'ದಿ ಚತುರ ಟಿಂಕರರುಗಳ' ಎಟಿಎಲ್ ಮ್ಯಾರಥಾನ್ ನಲ್ಲಿ ಭಾಗವಹಿಸಿದ ಯುವ ವಿದ್ಯಾರ್ಥಿ ನವೋದ್ಯಮಿಗಳು ರಚಿಸಿದ ಉನ್ನತ ನಾವೀನ್ಯತೆಗಳ ಸಂಕಲನವಾಗಿದೆ - ಇದು ಶಾಲಾ ವಿದ್ಯಾರ್ಥಿಗಳನ್ನು ಅವರು ದಿನಂಪ್ರತಿ ಆಧಾರದಲ್ಲಿ ನೋಡುವ ಅಥವಾ ಎದುರಿಸುವ ಸಮಸ್ಯೆಯನ್ನು ಪರಿಹರಿಸಲು ಆಹ್ವಾನಿಸುತ್ತದೆ.

 

'ಚತುರ ಟಿಂಕರರುಗಳು ಎಟಿಎಲ್ ಗಳಲ್ಲಿ ಲಭ್ಯವಿರುವ ಮುಂಬರುವ ತಂತ್ರಜ್ಞಾನಗಳನ್ನು ಪರಿಹಾರವನ್ನು ರೂಪಿಸಲು ಬಳಸಿಕೊಂಡರು. ಈ ಯುವ ಟಿಂಕರರುಗಳು ತಮ್ಮ ಸಮುದಾಯದ ಸದಸ್ಯರೊಂದಿಗೆ ಸಂವಹನ ನಡೆಸುವ ಮೂಲಕ ಮತ್ತು ಅವರ ಅಗತ್ಯಗಳು ಮತ್ತು ಬೇಡಿಕೆಗಳಿಗೆ ಅನುಗುಣವಾಗುವ ರೀತಿಯಲ್ಲಿ ಮೂಲ ಮಾದರಿಯನ್ನು ವಿನ್ಯಾಸಗೊಳಿಸುವ ಮೂಲಕ ತಮ್ಮ ಸಮಸ್ಯೆಯ ಹೇಳಿಕೆಗಳನ್ನು ಗುರುತಿಸಲು ತಮ್ಮನ್ನು ತಾವು ತೊಡಗಿಸಿಕೊಂಡರು. ತಮ್ಮ ಸಮುದಾಯದಲ್ಲಿ ಬದಲಾವಣೆಯನ್ನು ತರುವ ಅವರ ದೃಢ ನಿರ್ಧಾರವು  ಎಟಿಎಲ್ ಮ್ಯಾರಥಾನ್  2019 ಕ್ಕಾಗಿ ಭಾರತದ ಅಗ್ರ 41 ನಾವೀನ್ಯಗಳನ್ನು ತಲುಪಲು ಅವರ ನಾವಿನ್ಯತೆಗೆ ಒಂದು ದಾರಿ ಮಾಡಿಕೊಟ್ಟಿದೆ.

ಏತನ್ಮಧ್ಯೆ, 'ನೀಮಗಾಗಿ ನಾವೀನ್ಯತೆ' ತನ್ನ ಎರಡನೇ ಆವೃತ್ತಿಯಲ್ಲಿ, ಕೃಷಿ ಮತ್ತು ಸಂಬಂಧಿತ ಸೇವೆಗಳ ಕ್ಷೇತ್ರದಲ್ಲಿನ ನವೋದ್ಯಮಗಳು ಮತ್ತು ನಾವೀನ್ಯತೆಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಪುಸ್ತಕವು  70  ಎಜಿ-ಟೆಕ್  ನವೋದ್ಯಮಗಳ ಸಂಕಲನವಾಗಿದ್ದು, ದೇಶಾದ್ಯಂತ ಹರಡಿರುವ ಅಟಲ್ ಇನ್ ಕ್ಯುಬೇಷನ್ ಕೇಂದ್ರಗಳಲ್ಲಿ ಆವಿಷ್ಕಾರಗಳನ್ನು ಮಾಡುತ್ತದೆ. ಈ ನವೋದ್ಯಮಗಳು ಆಧುನಿಕ ಕೃಷಿಯ ಸಮಸ್ಯೆಗಳಿಗೆ ಸಾಮಾಜಿಕ ಸಂಬಂಧಿತ ಪರಿಹಾರಗಳನ್ನು ಒದಗಿಸಲು ಎಐ, ಐಒಟಿ, ಐಸಿಟಿ ಮತ್ತು ಇತರ ಗಡಿತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿವೆ. ಈ ಪುಸ್ತಕದ ಮೊದಲ ಆವೃತ್ತಿಯು ಈ ವರ್ಷದ ಅಕ್ಟೋಬರ್ ನಲ್ಲಿ ಪ್ರಾರಂಭವಾದ ಆರೋಗ್ಯ ಆರೈಕೆಯ ನಾವೀನ್ಯತೆಗಳ ಮೇಲೆ ಕೇಂದ್ರೀಕೃತವಾಗಿತ್ತು.

ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್, ನೀತಿ ಆಯೋಗದ ಕೃಷಿ ಸದಸ್ಯ ಪ್ರೊ. ರಮೇಶ್ ಚಂದ್, ಮೈಗೌನ ಸಿಇಒ ಶ್ರೀ ಅಭಿಷೇಕ್ ಸಿಂಗ್ ಮತ್ತು ನೀತಿ ಆಯೋಗದ ಅಟಲ್ ನಾವೀನ್ಯತೆ ಅಭಿಯಾನದ ನಿರ್ದೇಶಕ ಡಾ. ಚಿಂತನ್ ವೈಷ್ಣವ್ ಅವರ ಉಪಸ್ಥಿತಿಯಲ್ಲಿ ಡಿಜಿ-ಪುಸ್ತಕಗಳನ್ನು ಇಂದು ವರ್ಚುವಲ್ ಮೂಲಕ ಅನಾವರಣಗೊಳಿಸಲಾಯಿತು.

ಟಿಂಕರರುಗಳು ಮತ್ತು ಉದ್ಯಮಿಗಳು ಇಬ್ಬರನ್ನೂ ನೀತಿ ಆಯೋಗದ ಉಪಾಧ್ಯಕ್ಷರು ಶ್ಲಾಘಿಸಿದರು- "ಹಿಂದೆಂದಿಗಿಂತಲೂ ಹೆಚ್ಚಾಗಿ, ಇಂದು ನಮಗೆ ಹೆಚ್ಚು ಟಿಂಕರರುಗಳು ಮತ್ತು ನವೋದ್ಯಮಿಗಳು ಬೇಕಾಗಿದ್ದು, ಅವರು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಭಾರತೀಯ ಸಮಾಜಕ್ಕೆ ಸೂಕ್ತವಾದ ಪರಿಹಾರವನ್ನು ನೀಡಬಹುದು" ಎಂದರು.

ಉಪಾಧ್ಯಕ್ಷರ ಮಾತಿಗೆ ಪೂರಕವಾಗಿ, ಆಯೋಗದ ಕೃಷಿ ಸದಸ್ಯ ಪ್ರೊ. ರಮೇಶ್ ಚಂದ್ ಅವರು ಎಐಎಂ ತಂಡವನ್ನು ಅಭಿನಂದಿಸಿದರು ಮತ್ತು ಪುಸ್ತಕಗಳ ಸಂಕಲನದಲ್ಲಿ ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು. "ಅಗ್ರಿ-ಟೆಕ್ ಡೊಮೈನ್ ನಲ್ಲಿ ಹಲವಾರು ನವೋದ್ಯಮಗಳು ಹೊರಹೊಮ್ಮುತ್ತಿರುವ ಮಾರುಕಟ್ಟೆಗಳನ್ನು ಪ್ರವೇಶಿಸಲು ಮತ್ತು ಸಾಂಸ್ಥಿಕ ಹೂಡಿಕೆಗಳು ಮತ್ತು ಇತರ ಮಧ್ಯಸ್ಥಗಾರರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಮತ್ತು ಸಮಾಜವನ್ನು ಬೆಂಬಲಿಸುವ ದೃಷ್ಟಿಕೋನವನ್ನು ನೋಡಲು ತುಂಬಾ ಸಂತೋಷವಾಗಿದೆ" ಎಂದು ಅವರು ಹೇಳಿದರು.

ಅಟಲ್ ನಾವಿನ್ಯತೆ ಅಭಿಯಾನದ ನಿರ್ದೇಶಕ ಡಾ.  ಚಿಂತನ್ ವೈಷ್ಣವ್ ಅವರು ಎರಡೂ ಪುಸ್ತಕಗಳಲ್ಲಿ ಕಾಣಿಸಿಕೊಂಡಿರುವ ಉದ್ಯಮಿಗಳು ಮತ್ತು ಯುವ ಟಿಂಕರರುಗಳನ್ನು ಅಭಿನಂದಿಸಿದರು ಮತ್ತು  "ಪ್ರತಿಯೊಂದು ನಾವೀನ್ಯತೆಯ ಹಿಂದಿನ ಗಾಥೆಗಳು ಮತ್ತು ಆಲೋಚನೆಗಳು ದೇಶಾದ್ಯಂತ ಲಕ್ಷಾಂತರ ಇತರ ನವೋದ್ಯಮಗಳು, ನವೋದ್ಯಮಿಗಳು ಮತ್ತು ಯುವ ಟಿಂಕರ್ ಗಳಿಗೆ ನಮ್ಮ ದೇಶಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ಮಾತ್ರವಲ್ಲದೆ ಸಾಮಾಜಿಕ-ಆರ್ಥಿಕ ಪರಿಣಾಮದೊಂದಿಗೆ ಹೊಸ, ಭರವಸೆಯ ಮತ್ತು ಸುಸ್ಥಿರ ಪರಿಹಾರಗಳನ್ನು ರಚಿಸಲು ಪ್ರೇರೇಪಿಸುತ್ತವೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.

ಇದಕ್ಕೆ ಪೂರಕವಾಗಿ ಮೈಗೌನ ಸಿಇಒ ಅಭಿಷೇಕ್ ಸಿಂಗ್ ಅವರು, "ಬೇರುಮಟ್ಟದ ನಾವೀನ್ಯತೆಗಳು ಸಂಕಲನದಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ ಮತ್ತು ಇದು ನಮ್ಮ ಯುವ ನವೋದ್ಯಮಿಗಳು ಯೋಚಿಸುವ ವಿಧಾನದ ಸ್ನ್ಯಾಪ್ ಶಾಟ್ ಆಗಿದೆ. ಅಂತಹ ಅದ್ಭುತ ಆಲೋಚನೆಗಳನ್ನು ಕಲ್ಪಿಸಿಕೊಂಡಿದ್ದಕ್ಕಾಗಿ ಮತ್ತು ಸೃಜನಶೀಲತೆ ಮತ್ತು ಉದ್ಯಮದೊಂದಿಗೆ ನಾವೀನ್ಯತೆಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ನಾನು ಎಲ್ಲಾ ಸ್ಪರ್ಧಿಗಳನ್ನು ಅಭಿನಂದಿಸುತ್ತೇನೆ.  ಈ ವಿಚಾರಗಳು ಈಗಾಗಲೇ ಭಾರತ ಮತ್ತು ವಿಶ್ವದ ವಿಕಸನಗೊಳ್ಳುತ್ತಿರುವ ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆಯನ್ನು ಉಂಟುಮಾಡಲಿವೆ ಎಂಬ ಖಾತ್ರಿ ನನಗಿದೆ. ವೈಶಿಷ್ಟ್ಯಪೂರ್ಣ ನಾವೀನ್ಯತೆದಾರರು ಭಾರತದ ಎಲ್ಲಾ ಉದಯೋನ್ಮುಖ ನವೋದ್ಯಮಿಗಳಿಗೆ ಮಾದರಿಯಾಗಿದ್ದಾರೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಭಾರತಕ್ಕೆ ಪ್ರೇರಣೆ ನೀಡಲು ತಮ್ಮ ಕಲ್ಪನೆಗಳನ್ನು ಅಭಿವೃದ್ಧಿಪಡಿಸಲು ಅವರನ್ನು ಪ್ರೇರೇಪಿಸುತ್ತಾರೆ." ಎಂದು ತಿಳಿಸಿದರು.

ಅಟಲ್ ನಾವೀನ್ಯತೆ ಅಭಿಯಾನದ ಡಿಜಿ-ಪುಸ್ತಕ ಸರಣಿ – ನಿಮಗಾಗಿ ನಾವೀನ್ಯತೆ ಅಟಲ್ ನಾವೀನ್ಯತೆ ಕೇಂದ್ರ ಬೆಂಬಲಿತ ನವೋದ್ಯಮಗಳಿಂದ ಅತ್ಯುತ್ತಮ ನಾವೀನ್ಯತೆಗಳು ಮತ್ತು ಉದ್ಯಮಿಗಳನ್ನು ನಿಮ್ಮ ಬಳಿಗೆ ತರುತ್ತವೆ. ಸರಣಿಯ ನಂತರದ ಆವೃತ್ತಿಗಳು  ಎಡುಟೆಕ್, ಮೊಬಿಲಿಟಿ, ಇ.ವಿ. ಮುಂತಾದ ಇತರ ಹೊರಹೊಮ್ಮುವ ವಲಯಗಳ ಮೇಲೆ ಕೇಂದ್ರೀಕರಿಸುತ್ತವೆ. 'ದಿ ಚತುರ ಟಿಂಕರರರುಗಳು' ಸರಣಿಯು ಯುವ ನವೋದ್ಯಮಿಗಳ ಬೆಳವಣಿಗೆ ಮತ್ತು ಮನಸ್ಥಿತಿಯನ್ನು ಪ್ರದರ್ಶಿಸುವ ಗಾಥೆಗಳನ್ನು ಸೆರೆಹಿಡಿಯುತ್ತದೆ ಮತ್ತು ಅಟಲ್ ಟಿಂಕರಿಂಗ್ ಲ್ಯಾಬ್ ನ ಎಟಿಎಲ್ ಮ್ಯಾರಥಾನ್ ಎಂಬ ರಾಷ್ಟ್ರವ್ಯಾಪಿ ನಾವೀನ್ಯತೆಯ ಸವಾಲಿನಲ್ಲಿ ಅವರಿಗೆ ಹಾಕಲಾದ ಸಮಸ್ಯೆಗಳಿಗೆ ಅನುಕರಣೀಯ ಪರಿಹಾರಗಳನ್ನು ಸೃಷ್ಟಿಸಿದ ವಿದ್ಯಾರ್ಥಿಗಳ ಕಲ್ಪನೆ ಆಚರಿಸುವ ಮತ್ತು ಉತ್ತೇಜಿಸುವ ಪ್ರಯತ್ನವಾಗಿದೆ.

                                                   

ಚತುರ ಟಿಂಕರರುಗಳಿಗಾಗಿ ಕ್ಯು.ಆರ್. ಕೋಡ್                  ನಿಮಗಾಗಿ ನಾವೀನ್ಯತೆ ಕ್ಯೂ.ಆರ್. ಕೋಡ್.

 

 ‘ನಿಮಗಾಗಿ ನಾವೀನ್ಯತೆ ’ ನೋಡಲು ಲಿಂಕ್ ಬಳಸಿ : https://aim.gov.in/pdf/Agriculture-and-Allied-Sectors.pdf

 ‘ಚತುರ ಟಿಂಕರರುಗಳು’ ನೋಡಲು ಲಿಂಕ್ ಬಳಸಿ: https://aim.gov.in/pdf/ingenious-tinkerers.pdf

****



(Release ID: 1786261) Visitor Counter : 216