ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕ್ರಿಮಿನಲ್ ವಿಷಯಗಳಲ್ಲಿ ಪರಸ್ಪರ ಕಾನೂನು ನೆರವು ಕುರಿತು ಭಾರತ - ಪೋಲೆಂಡ್ ನಡುವಿನ ಒಪ್ಪಂದಕ್ಕೆ ಸಚಿವ ಸಂಪುಟ ಅನುಮೋದನೆ

Posted On: 15 DEC 2021 4:07PM by PIB Bengaluru

ಭಾರತ ಗಣರಾಜ್ಯ ಮತ್ತು ಪೊಲೆಂಡ್ ಗಣರಾಜ್ಯಗಳ ನಡುವೆ ಕ್ರಿಮಿನಲ್ ವಿಷಯಗಳಲ್ಲಿ ತನಿಖೆ, ಕಾನೂನು ಕ್ರಮಗಳಲ್ಲಿ ಎರಡೂ ದೇಶಗಳ ನಡುವೆ ಪರಿಣಾಮಕಾರಿತ್ವ ಮತ್ತು ಸಾಮರ್ಥ್ಯ ವರ್ಧಿಸುವ, ಪರಸ್ಪರ ಕಾನೂನು ನೆರವು ಪಡೆದುಕೊಳ್ಳುವ ಕುರಿತಾದ ಒಪ್ಪಂದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ. ಭಯೋತ್ಪಾದನೆ ಸೇರಿದಂತೆ ಅಪರಾಧ ಪ್ರಕರಣಗಳನ್ನು ನಿಗ್ರಹಿಸಲು ಪರಸ್ಪರ ಕಾನೂನು ನೆರವು ಪಡೆದುಕೊಳ್ಳಲು ಮೂಲಕ ಸಮ್ಮತಿಸಲಾಗಿದೆ.

ಲಾಭಗಳು:  

ಕ್ರಿಮಿನಲ್ ವಿಷಯಗಳಲ್ಲಿ ಸಹಕಾರ ಮತ್ತು ಪರಸ್ಪರ ಕಾನೂನು ಸಹಾಯದ ಮೂಲಕ ತನಿಖೆ, ಅಪರಾಧದ ವಿಚಾರಣೆಯಲ್ಲಿ ಎರಡೂ ದೇಶಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಗುರಿಯನ್ನು ಒಪ್ಪಂದ ಹೊಂದಿದೆ. ಅಂತರರಾಷ್ಟ್ರೀಯ ಅಪರಾಧ ಮತ್ತು ಭಯೋತ್ಪಾದನೆಯೊಂದಿಗಿನ ಅದರ ಸಂಬಂಧಗಳ ಸಂದರ್ಭದಲ್ಲಿ, ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ಒದಗಿಸುವ ವಿಷಯಗಳಲ್ಲಿ ಪ್ರಸ್ತಾವಿತ ಒಪ್ಪಂದ ನೆರವಾಗಲಿದೆ. ಪೊಲೆಂಡ್ ದ್ವಿಪಕ್ಷೀಯ ಸಹಕಾರ, ತನಿಖೆ, ಅಪರಾಧದ ವಿಚಾರಣೆ, ಆದಾಯ ಮತ್ತು ಅಪರಾಧದ ಸಾಧನಗಳನ್ನು ಪತ್ತೆ ಮಾಡಲು, ನಿಗ್ರಹ ಮತ್ತು ಮುಟ್ಟುಗೋಲು ಹಾಕಿಕೊಳ್ಳಲು ಇದು ವಿಶಾಲವಾದ ಕಾನೂನು ಚೌಕಟ್ಟು ಒದಗಿಸುತ್ತದೆ

ಒಪ್ಪಂದಕ್ಕೆ ಸಹಿ ಹಾಕಿ ಅನುಮೋದಿಸಿದ ನಂತರ ಸಿ.ಆರ್.ಪಿ.ಸಿ 1973 ಸೂಕ್ತ ನಿಬಂಧನೆಗಳಡಿ ಭಾರತದಲ್ಲಿ ಗಜೆಟ್ ಅಧಿಸೂಚನೆ ಹೊರಡಿಸಲಾಗುವುದು. ಗಜೆಟ್ ಅಧಿಸೂಚನೆ ಭಾರತದ ಹೊರಗಿನ ಸಾಮಾನ್ಯ ಜನರಿಗೂ ಸಹ ದೊರೆಯುವಂತೆ ಮಾಡಲಾಗುವುದು ಮತ್ತು ಕ್ರಿಮಿನಲ್ ವಿಷಯಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಪೊಲೆಂಡ್ ನಡುವೆ ಪರಸ್ಪರ ಕಾನೂನು ನೆರವು, ಪಾರದರ್ಶಕತೆ ಜತೆಗೆ ಜಾಗೃತಿಯನ್ನು ಹೆಚ್ಚಿಸಲಾಗುವುದು

ಪೊಲೆಂಡ್ ಒಳಗೊಂಡ ಅಪರಾಧ ಚಟುವಟಿಕೆಗಳನ್ನು ನಿಭಾಯಿಸುವಲ್ಲಿ ಭಾರತದ ಪರಿಣಾಮಕಾರಿತ್ವವನ್ನು ವೃದ್ಧಿಸುತ್ತದೆ. ಭಯೋತ್ಪಾದನೆ, ಸಂಘಟಿತ ಅಪರಾಧಗಳ ಕಾರ್ಯಾಚರಣೆ ವಿಧಾನದಲ್ಲಿ ಉತ್ತಮ ಸಹಕಾರ ಮತ್ತು ಒಳನೋಟ ಪಡೆಯುವಲ್ಲಿ ಒಪ್ಪಂದ ಸಹಕಾರಿಯಾಗಲಿದೆ. ಆಂತರಿಕ ಭದ್ರತೆ ಕ್ಷೇತ್ರಗಳಲ್ಲಿ ನೀತಿ ನಿರ್ಧಾರಗಳನ್ನು ಉತ್ತಮಗೊಳಿಸಲು ಇದನ್ನು ಬಳಕೆ ಮಾಡಬಹುದಾಗಿದೆ

***(Release ID: 1781820) Visitor Counter : 59