ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರಗತಿಗೆ ವೇಗ ನೀಡಲು ಮಿಷನ್ ಒಲಿಂಪಿಕ್ಸ್ ಸೆಲ್‌ನಲ್ಲಿ (ಎಂಒಸಿ) ಮಾಜಿ ಅಂತಾರಾಷ್ಟ್ರೀಯ ಕ್ರಿಡಾಪಟುಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದ ಕ್ರೀಡಾ ಸಚಿವಾಲಯ


ಮಾಜಿ ಅಥ್ಲೀಟ್‌ಗಳಿಂದ ಭಾರತದ ಒಲಿಂಪಿಕ್ಸ್ ಸಿದ್ಧತೆಯ ಉಸ್ತುವಾರಿ - ಮಿಷನ್ ಒಲಿಂಪಿಕ್ಸ್ ಸೆಲ್ ಪರಿಷ್ಕರಣೆ

Posted On: 02 DEC 2021 4:13PM by PIB Bengaluru

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಪರಿಷ್ಕೃತ ಮಿಷನ್ ಒಲಂಪಿಕ್ ಸೆಲ್ (ಎಂಒಸಿ) ಪ್ರಮುಖ ಸದಸ್ಯರಾಗಿ ಮಾಜಿ ಕ್ರೀಡಾಪಟುಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ, ಇದುವರೆಗಿನ ಹೆಚ್ಚು ಅಥ್ಲೀಟ್ ಕೇಂದ್ರಿತ ಉಪಕ್ರಮ ಇದಾಗಿದೆ. ಎಂಒಸಿಯು ಸಚಿವಾಲಯದ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ (ಟಿಒಪಿಎಸ್) ಉಪಕ್ರಮದ ಮೂಲಕ ಭಾರತದ ಒಲಿಂಪಿಕ್ಸ್ ಸಿದ್ಧತೆಯನ್ನು ನೋಡಿಕೊಳ್ಳುತ್ತದೆ. ಜಾಗತಿಕ ಕ್ರೀಡಾ ವೇದಿಕೆಯಲ್ಲಿ ಭಾರತದ ಪ್ರಗತಿಯನ್ನು ವೇಗಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಕಳೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಗಳಿಸಿದ ಅನುಭವದಿಂದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಹೇಳಿದರು. "2020 ಟೋಕಿಯೊ ಒಲಿಂಪಿಕ್ಸ್ ನಲ್ಲಿ 7 ಪದಕಗಳು ಮತ್ತು ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ 19 ಪದಕಗಳನ್ನು ಗೆದ್ದ ಕ್ರೀಡಾಪಟುಗಳ ತರಬೇತಿ ಮತ್ತು ಸ್ಪರ್ಧೆಯನ್ನು ಬೆಂಬಲಿಸುವಲ್ಲಿ ಪ್ರಸ್ತುತ ಎಂಒಸಿಯಲ್ಲಿನ ಮಾಜಿ ಕ್ರೀಡಾಪಟುಗಳ ಅನುಭವವು ಮಹತ್ವದ ಪಾತ್ರವನ್ನು ವಹಿಸಿದೆ" ಎಂದು ಅವರು ಹೇಳಿದರು.

ಹೊಸ ಎಂಒಸಿಯಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಲಾಂಗ್ ಜಂಪ್ ಪದಕ ವಿಜೇತೆ ಅಂಜು ಬಾಬಿ ಜಾರ್ಜ್, ಭಾರತದ ಮಾಜಿ ಫುಟ್ಬಾಲ್ ನಾಯಕ ಭೈಚುಂಗ್ ಭುಟಿಯಾ, ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ ಸಿಂಗ್, ರೈಫಲ್ ಶೂಟಿಂಗ್ ಪಟು ಅಂಜಲಿ ಭಾಗವತ್, ಹಾಕಿ ತಂಡದ ಮಾಜಿ ನಾಯಕ ಮತ್ತು ಒಲಂಪಿಕ್ ಗೋಲ್ಡ್ ಕ್ವೆಸ್ಟ್ ಸಿಇಒ ವೀರೆನ್ ರಸ್ಕ್ವಿನ್ಹಾ, ಟೇಬಲ್ ಟೆನಿಸ್ ತಾರೆ ಮೊನಾಲಿಸಾ ಮೆಹ್ತಾ ಮತ್ತು ಬ್ಯಾಡ್ಮಿಂಟನ್ ಪಟು ತೃಪ್ತಿ ಮುರ್ಗುಂಡೆ ಇದ್ದಾರೆ.

ಒಲಿಂಪಿಯನ್ ಸೇಲರ್ ಮತ್ತು ಕ್ರೀಡಾ ವಿಜ್ಞಾನ ತಜ್ಞ ಡಾ. ಮಾಲವ್ ಶ್ರಾಫ್ ಎಂಒಸಿಯಲ್ಲಿ ಮುಂದುವರಿಯಲಿದ್ದಾರೆ. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಶ್ರೀ ಆದಿಲೆ ಸುಮೇರಿವಾಲಾ, ಮತ್ತು TOPS ಸಿಇಒ ಪುಷ್ಪೇಂದ್ರ ಗಾರ್ಗ್ ಎಂಒಸಿಯಲ್ಲಿರುವ ಇತರ ಮಾಜಿ ಆಟಗಾರರಾಗಿದ್ದಾರೆ. ಕೇಂದ್ರ ಸಚಿವ ಶ್ರೀ ಅರ್ಜುನ್ ಮುಂಡಾ, ಶ್ರೀ ಅಜಯ್ ಸಿಂಗ್ ಮತ್ತು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಕ್ರಮವಾಗಿ ಭಾರತ ಆರ್ಚರಿ ಸಂಘಟನೆ, ಭಾರತ ಬಾಕ್ಸಿಂಗ್ ಫೆಡರೇಶನ್ ಮತ್ತು ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಎಂಒಸಿಯ ಭಾಗವಾಗಲಿದ್ದಾರೆ.

ಮಿಷನ್ ಒಲಿಂಪಿಕ್ ಸೆಲ್: ಬೈಚುಂಗ್ ಭುಟಿಯಾ, ಅಂಜು ಬಾಬಿ ಜಾರ್ಜ್, ಅಂಜಲಿ ಭಾಗವತ್, ತೃಪ್ತಿ ಮುರ್ಗುಂಡೆ, ಸರ್ದಾರಾ ಸಿಂಗ್, ವೀರೇನ್ ರಸ್ಕ್ವಿನ್ಹಾ, ಮಾಲವ್ ಶ್ರಾಫ್, ಮೊನಾಲಿಸಾ ಮೆಹ್ತಾ, ಭಾರತೀಯ ಒಲಿಂಪಿಕ್ ಸಂಘಟನೆ, ಭಾರತ ಕುಸ್ತಿ ಒಕ್ಕೂಟ, ಭಾರತ ಆರ್ಚರಿ ಸಂಘಟನೆ ಮತ್ತು ಭಾರತ ಬಾಕ್ಸಿಂಗ್ ಫೆಡರೇಶನ್, ಕಾರ್ಯನಿರ್ವಾಹಕ ನಿರ್ದೇಶಕ (ಟಿಇಎಎಂಎಸ್), ಭಾರತ ಕ್ರೀಡಾ ಪ್ರಾಧಿಕಾರ; ನಿರ್ದೇಶಕ (ಕ್ರೀಡೆ), ಎಂವೈಎಎಸ್; ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸಿಇಒ (ಕನ್ವೀನರ್) ಮತ್ತು ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಜಂಟಿ ಸಿಇಒ (ಸಹ ಸಂಚಾಲಕ).

ಭಾರತ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕರು ಎಂಒಸಿಯ ಅಧ್ಯಕ್ಷರಾಗಿರುತ್ತಾರೆ.

***



(Release ID: 1777332) Visitor Counter : 204