ವಾರ್ತಾ ಮತ್ತು ಪ್ರಸಾರ ಸಚಿವಾಲಯ

"52ನೇ ಇಫ್ಫಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದೆ": ಇಫ್ಫಿ 52ರ ಸಮಾರೋಪ ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್


ಈ ಇಫ್ಫಿಯಲ್ಲಿ ಮೊದಲ ಬಾರಿಗೆ ನಾವು ಒಟಿಟಿ ವೇದಿಕೆಗಳ ಉಪಸ್ಥಿತಿ ಮತ್ತು ಉತ್ಸಾಹಭರಿತ ಪಾಲ್ಗೊಳ್ಳುವಿಕೆಯನ್ನು ಕಂಡಿದ್ದೇವೆ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರು

"ಭವಿಷ್ಯದ 75 ಸೃಜನ ಶೀಲ ಮನಸ್ಸುಗಳಲ್ಲಿ ಕೆಲವು, ಸಿನಿಮಾ ಹೆಗ್ಗುರುತಾಗಿ ಕೆಲವೇ ವರ್ಷಗಳ ನಂತರ ಮರಳುತ್ತಾರೆ ಎಂಬ ವಿಶ್ವಾಸ ನನಗಿದೆ"

ನಾವು ಬುಡಕಟ್ಟು  ಗೌರವ  ಸಪ್ತಾಹವನ್ನು ಆಚರಿಸುತ್ತಿರುವಾಗ ಇಫ್ಪಿ ಅಸ್ಸಾಂನ ಬುಡಕಟ್ಟು ಸಮುದಾಯದ ಚಲನಚಿತ್ರವಾದ ಸೆಂಮ್ಕೋರ್ ಅನ್ನು ಪ್ರದರ್ಶಿಸಿದ್ದು ಅದ್ಭುತವಾಗಿತ್ತು -  ವಾರ್ತಾ ಮತ್ತು ಪ್ರಸಾರ ಸಚಿವರು

Posted On: 28 NOV 2021 7:19PM by PIB Bengaluru

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 52ನೇ ಆವೃತ್ತಿ ಸಮಾರೋಪಗೊಂಡಿದ್ದು, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಪ್ರಬಲ ಮಾಧ್ಯಮ ಸಿನೆಮಾದ ಮೂಲಕ ಅತ್ಯುತ್ತಮ ರೀತಿಯ ಸೃಜನಶೀಲ ಅಭಿವ್ಯಕ್ತಿಯನ್ನು ಉತ್ತೇಜಿಸಲು ಮತ್ತು ಬೆಳೆಸಲು ಭಾರತ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

2021ರ ನವೆಂಬರ್ 28ರಂದು ಗೋವಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಪ್ರತಿ ವರ್ಷ ಕಳೆದಂತೆ ಉತ್ಸವವು ಉತ್ತಮ ರೀತಿಯಲ್ಲಿ ಉತ್ತಮ ಸಿನೆಮಾಗಳಿಗೆ ಗೌರವ ಸಲ್ಲಿಸುತ್ತದ್ದು, ಉತ್ತಮ ಸಿನಿಮಾದ ಮುಕ್ತ ಉತ್ಸಾಹದ ಸೃಷ್ಟಿ ಮತ್ತು ಅನಿಯಂತ್ರಿತ ಆನಂದದ ತಳಹದಿಯ ಬಗ್ಗೆ ತಮ್ಮ ಹೃತ್ಪೂರ್ವಕ ಮೆಚ್ಚುಗೆ ಮತ್ತು ನಿರಂತರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

52ನೇ ಇಫ್ಫಿ ನಮ್ಮನ್ನು ಹೊಸ ಆರಂಭದತ್ತ ಮುನ್ನಡೆಸುತ್ತಿದೆ "ಚಲನಚಿತ್ರ ನಿರ್ಮಾಣದ ನಮ್ಮ ಶ್ರೀಮಂತ ಸಂಪ್ರದಾಯ ಮತ್ತು ಸಿನೆಮಾ ಮೂಲಕ ಕಥೆ ಹೇಳುವ ಕಲೆಯನ್ನು ಆಚರಿಸಲು ನಾವು ಒಗ್ಗೂಡಿದ್ದೇವೆ. ನಾವು ಪ್ರೇಕ್ಷಕರನ್ನು ಆಕರ್ಷಿಸಿದ್ದೇವೆ ಮತ್ತು ಸಿನೆಮಾದ ಐಕಾನ್ ಗಳು ಮತ್ತು ದಂತಕಥೆಯಂತಿರುವವರ ನಡುವೆ ಇರುವ ಯುವ ಪ್ರತಿಭೆಗಳನ್ನು ಗುರುತಿಸಿದ್ದೇವೆ." ಎಂದು ಸಚಿವರು ಚಲನಚಿತ್ರ ಪ್ರೇಮಿಗಳಿಗೆ ತಿಳಿಸಿದರು.

ಭಾರತವನ್ನು ವಿಶ್ವದ ಅತಿದೊಡ್ಡ ಚಲನಚಿತ್ರ ನಿರ್ಮಾಪಕ ಎಂದು ಬಣ್ಣಿಸಿದ ಸಚಿವರು, ನಾವು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ, ಪ್ರಾದೇಶಿಕ ಉತ್ಸವಗಳನ್ನು ಹೆಚ್ಚಿಸುವುದರ ಮೂಲಕ ಭಾರತವನ್ನು ವಸ್ತುವಿಷಯ ಸೃಷ್ಟಿಯ ಶಕ್ತಿ ಕೇಂದ್ರವನ್ನಾಗಿ ಮಾಡಲು ನಾವು ಬಯಸುತ್ತೇವೆ ಎಂದು ಹೇಳಿದರು. "ಯುವ ಜನರ ಅಪಾರ ತಂತ್ರಜ್ಞಾನ ಪ್ರತಿಭೆಯನ್ನು ಬಳಸಿಕೊಳ್ಳುವ ಮೂಲಕ ಭಾರತವನ್ನು ವಿಶ್ವದ ಚಿತ್ರ ನಿರ್ಮಾಣಾ ನಂತರದ ಕೇಂದ್ರವನ್ನಾಗಿ ಮಾಡಲೂ ನಾವು ಬಯಸುತ್ತೇವೆ. ನಾವು ಭಾರತವನ್ನು ಚಲನಚಿತ್ರಗಳು ಮತ್ತು ಉತ್ಸವಗಳ ತಾಣವನ್ನಾಗಿ ಮಾಡಲು ಬಯಸುತ್ತೇವೆ, ಭಾರತವನ್ನು ವಿಶ್ವ ಸಿನೆಮಾದ ಕೇಂದ್ರವನ್ನಾಗಿ ಮಾಡಲು ಮತ್ತು ಕಥೆಗಾರರಿಗೆ ಅತ್ಯಂತ ಅನುಕೂಲಕರ ಸ್ಥಳವನ್ನಾಗಿ ಮಾಡಲು ನಾವು ಬಯಸುತ್ತೇವೆ." ಎಂದರು.

52ನೇ ಇಫ್ಫಿಯನ್ನು ಅನೇಕ ಪ್ರಥಮಗಳ ಹಬ್ಬ ಎಂದು ಬಣ್ಣಿಸಿದ ಸಚಿವರು, ಇಫ್ಫಿ ಬದಲಾವಣೆಯ ಗಾಳಿಯನ್ನು ಮುಂದುವರಿಸುತ್ತಿದೆ "ಈ ಇಫ್ಫಿಯಲ್ಲಿ ಮೊದಲ ಬಾರಿಗೆ, ನಾವು ಒಟಿಟಿ ವೇದಿಕೆಗಳ ಉಪಸ್ಥಿತಿ ಮತ್ತು ಉತ್ಸಾಹ ಭರಿತ ಭಾಗವಹಿಸುವಿಕೆಯನ್ನು ನೋಡಿದ್ದೇವೆ. ಇಫ್ಫಿ ಹೊಸ ತಂತ್ರಜ್ಞಾನಗಳು, ಪ್ರೇಕ್ಷಕರ ವೇದಿಕೆ ಆಯ್ಕೆಗಳನ್ನು ಅಳವಡಿಸಿಕೊಂಡಿದೆ ಮತ್ತು ಬದಲಾಗುತ್ತಿರುವ ಸಮಯದೊಂದಿಗೆ ವೇಗವನ್ನು ಕಾಯ್ದುಕೊಂಡಿದೆ. ನಾವು ಬ್ರಿಕ್ಸ್ ರಾಷ್ಟ್ರಗಳ ಅತ್ಯುತ್ತಮ ಚಲನಚಿತ್ರಗಳನ್ನು ಪ್ರದರ್ಶಿಸಿದ್ದೇವೆ ಮತ್ತು ಈ ಪಾಲುದಾರಿಕೆ ಮತ್ತಷ್ಟು ಅರಳುತ್ತದೆ ಎಂದು ನಾವು ನಂಬಿದ್ದೇವೆ." ಎಂದು ಹೇಳಿದರು.

ಆಜಾದಿ ಕಾ ಅಮೃತ್ ಮಹೋತ್ಸವದ ರಾಷ್ಟ್ರೀಯ ಆಚರಣೆಯ ಭಾಗವಾಗಿ 75 ಉದಯೋನ್ಮುಖ ಕಲಾವಿದರಿಗೆ ಇಫ್ಫಿಯಲ್ಲಿ ಆತಿಥ್ಯ ನೀಡಲಾಗಿದ್ದು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಲು ಅಪರೂಪದ ಅವಕಾಶ ನೀಡಲಾಗಿದೆ ಎಂದ ಸಚಿವರು, ಮೊದಲ ಬಾರಿಗೆ ಕಲ್ಪಿಸಿದ "ಭವಿಷ್ಯದ 75 ಸೃಜನಶೀಲ ಮನಸ್ಸುಗಳು" ಉಪಕ್ರಮವನ್ನು ಸ್ಮರಿಸಿದರು. "ಯುವ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಉದ್ದೇಶದ ವಿಶಿಷ್ಟ ಉಪಕ್ರಮದಲ್ಲಿ, ನಾವು ನಾಳಿನ 75 ಸೃಜನಶೀಲ ಮನಸ್ಸುಗಳನ್ನು ಆಯ್ಕೆ ಮಾಡಿದ್ದೇವೆ. ಅವರಲ್ಲಿ ಕೆಲವರು ಮುಂದಿನ ಕೆಲವು ವರ್ಷಗಳಲ್ಲಿ ಕೇವಲ ಚಲನಚಿತ್ರೋದ್ಯಮದ ಭಾಗವಾಗಿ ಮಾತ್ರವಲ್ಲದೆ ಸಿನೆಮಾದ ಐಕಾನ್ ಗಳಾಗಿಯೂ ಮರಳುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರು ಪಡೆದ ಈ ರೀತಿಯ ಪ್ರೋತ್ಸಾಹ - ಸಿನೆಮಾ ಉದ್ಯಮದ ದಿಗ್ಗಜರ ಮೇರು ತರಗತಿಗಳು, ಅವರು ಈ ಅವಕಾಶವನ್ನು ಪಡೆದ ಅದೃಷ್ಟಶಾಲಿಗಳಲ್ಲಿ ಒಬ್ಬರಾಗಿದ್ದಾರೆ" ಎಂದರು. ನಿರ್ದೇಶನ, ಸಂಕಲನ, ಹಾಡು ಮತ್ತು ಚಿತ್ರಕಥೆ ಸೇರಿದಂತೆ ಚಲನಚಿತ್ರ ನಿರ್ಮಾಣದ ವಿವಿಧ ಕ್ಷೇತ್ರಗಳಲ್ಲಿನ ಅವರ ಸೊಗಸಾದ ಕೌಶಲ್ಯಗಳ ಆಧಾರದ ಮೇಲೆ 7 ಮಹಿಳಾ ಮತ್ತು 68 ಪುರುಷ ಕಲಾವಿದರನ್ನು ಒಳಗೊಂಡ 75 ಯುವಕರನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಕಿರಿಯರೆಂದರೆ 16 ವರ್ಷದ, ಬಿಹಾರದ ಆರ್ಯನ್ ಕುಮಾರ್, ಚಿತ್ರ ನಿರ್ದೇಶನದಲ್ಲಿನ ತಮ್ಮ ಕೌಶಲ್ಯಕ್ಕಾಗಿ ಆಯ್ಕೆಯಾಗಿದ್ದರು ಎಂದರು.

ಖ್ಯಾತ ಗೀತರಚನೆಕಾರ ಮತ್ತು ಸಿಬಿಎಫ್.ಸಿ ಅಧ್ಯಕ್ಷ ಪ್ರಸೂನ್ ಜೋಶಿ ಮತ್ತು 2021ನೇ ಸಾಲಿನ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿ ವಿಜೇತರಿಗೆ ಸಚಿವರು ತಮ್ಮ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಿದರು, "ನಾಳೆಯ 75 ಸೃಜನಶೀಲ ಮನಸ್ಸುಗಳು" ಎಂಬ ವಿಚಾರವನ್ನು ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದಕ್ಕಾಗಿ ಮತ್ತು ಈ ವಿಚಾರವನ್ನು ನನಸು ಮಾಡಲು ಸಚಿವರೊಂದಿಗೆ ಶ್ರಮಿಸಿದ್ದಕ್ಕಾಗಿ ಸಚಿವರು ತಮ್ಮ ವೈಯಕ್ತಿಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ಇಫ್ಫಿ ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತಿದೆ, "ಈ ಇಫ್ಫಿಯಲ್ಲಿ, ಚಲನಚಿತ್ರ ನಿರ್ಮಾಪಕರು, ವಿದ್ಯಾರ್ಥಿಗಳು ಮತ್ತು ಸಿನಿ ಉತ್ಸಾಹಿಗಳು ಸೇರಿದಂತೆ ವಿಶ್ವದಾದ್ಯಂತದ ಸುಮಾರು 10,000 ಪ್ರತಿನಿಧಿಗಳು ಹೈಬ್ರಿಡ್ ಸ್ವರೂಪದಲ್ಲಿ ಭಾಗವಹಿಸಿದ್ದರು. 234 ಪ್ರದರ್ಶನಗಳು ನಡೆದವು, ಅದರಲ್ಲಿ ಸುಮಾರು 450ಗಂಟೆಗಳ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು. ಆನ್ ಲೈನ್ ನಲ್ಲಿ ವೀಕ್ಷಿಸಿದ ಒಟ್ಟು ಸಮಯ 30,000 ಕ್ಕೂ ಹೆಚ್ಚು ಗಂಟೆಗಳಾಗುತ್ತವೆ." ಎಂದು ವಾರ್ತಾ ಮತ್ತು ಪ್ರಸಾರ ಸಚಿವರು ಮಾಹಿತಿ ನೀಡಿದರು.

ಈ ವರ್ಷದ ಇಫ್ಫಿ ಚಲನಚಿತ್ರ ಉತ್ಸಾಹಿಗಳಿಗೆ 73 ದೇಶಗಳಿಂದ ಬಂದ 148ಕ್ಕೂ ಹೆಚ್ಚು ವಿದೇಶಿ ಚಲನಚಿತ್ರಗಳ ವೈವಿಧ್ಯಮಯ ಪ್ರದರ್ಶನ ವಿಶಿಷ್ಟ ಅನುಭವವನ್ನು ಪ್ರಸ್ತುತಪಡಿಸಿತು ಎಂದು ವಾರ್ತಾ ಮತ್ತು ಪ್ರಸಾರ ಸಚಿವರು ಪ್ರತಿಪಾದಿಸಿದರು.  ಈ ಉತ್ಸವವು 12 ವಿಶ್ವ ಪ್ರಥಮ ಪ್ರದರ್ಶನಗಳು, 7 ಅಂತಾರಾಷ್ಟ್ರೀಯ ಪ್ರಥಮ ಪ್ರದರ್ಶನಗಳು, 24 ಏಷ್ಯಾ ಪ್ರಧಾನ ಪ್ರದರ್ಶನಗಳು ಮತ್ತು 74 ಭಾರತ ಪ್ರಥಮ ಪ್ರದರ್ಶನಗಳಿಗೆ ಸಾಕ್ಷಿಯಾಯಿತು ಎಂದರು. 75 ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು, ಅವುಗಳಲ್ಲಿ 17 ಚಲನಚಿತ್ರಗಳನ್ನು ಭಾರತ @75 ವಿಭಾಗದ ಅಡಿಯಲ್ಲಿ ವಿಶೇಷವಾಗಿ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.

ಇಫ್ಫಿಯ ಈ ಆವೃತ್ತಿಯಲ್ಲಿ ಭಾರತೀಯ ಮತ್ತು ವಿಶ್ವ ಸಿನೆಮಾದ ದಂತಕಥೆಗಳು ಮತ್ತು ಶ್ರೇಷ್ಠರನ್ನು ಗೌರವಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. "ನಾವು ಹಂಗೇರಿಯ ಚಲನಚಿತ್ರ ನಿರ್ಮಾಪಕ ಇಸ್ತೆವಾನ್  ಸ್ಜಾಬೊ ಮತ್ತು ಹಾಲಿವುಡ್ ಚಲನಚಿತ್ರ ನಿರ್ಮಾಪಕ ಮಾರ್ಟಿನ್ ಸ್ಕಾರ್ಸೆಸ್ಸೆ ಅವರನ್ನು ಗೌರವಿಸಿದ್ದೇವೆ, ಅಂತಾರಾಷ್ಟ್ರೀಯ ಸಿನೆಮಾದ ದಂತಕಥೆಗಳಾದ ಈ ಇಬ್ಬರೂ, ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಿದರು. ನಾವು ಭಾರತೀಯ ಸಿನೆಮಾದ ದಿಗ್ಗಜರುಗಳಾದ  ಪ್ರಸೂನ್ ಜೋಶಿ ಮತ್ತು ಹೇಮಾ ಮಾಲಿನಿ ಅವರಿಗೆ ಭಾರತೀಯ ಚಲನಚಿತ್ರ ರಂಗದ ವರ್ಷದ ವ್ಯಕ್ತಿ ಪ್ರಶಸ್ತಿಯೊಂದಿಗೆ ಗೌರವಿಸಿದ್ದೇವೆ. ಇಫ್ಫಿ52 ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಿನೆಮಾದ ಹಲವಾರು ಶ್ರೇಷ್ಠರಿಗೆ ಗೌರವ ಸಲ್ಲಿಸಿದೆ. ಒರಿಜಿನಲ್ ಬಾಂಡ್ ಸೀನ್ ಕ್ಯಾನರಿ ಅವರಿಗೆ ವಿಶೇಷ ಗೌರವವನ್ನು ಸಮರ್ಪಿಸಲಾಯಿತು," ಎಂದು ಹೇಳಿದರು.

ಇಫ್ಫಿ ಇತಿಹಾಸದಲ್ಲಿ ಮೊದಲ ಬಾರಿಗೆ, ಎಲ್ಲಾ ಪ್ರಮುಖ ಒಟಿಟಿ ವೇದಿಕೆಗಳು ಅಂದರೆ ನೆಟ್ ಫ್ಲಿಕ್ಸ್, ಅಮೆಜಾನ್, ಸೋನಿ ಮತ್ತು ಇತರರು, ಸಮರ್ಪಿತ ಮಾಸ್ಟರ್ ಕ್ಲಾಸ್ ಗಳು,  ವಸ್ತುವಿಷಯ ಬಿಡುಗಡೆ ಮತ್ತು ಮುನ್ನೋಟಗಳು, ಕ್ಯೂರೇಟೆಡ್ ಚಲನಚಿತ್ರ ಪ್ಯಾಕೇಜ್ ಪ್ರದರ್ಶನಗಳು ಮತ್ತು ವಿವಿಧ ಇತರ ವಾಸ್ತವ ಮತ್ತು ವರ್ಚುವಲ್ ಘಟನೆಗಳ ಮೂಲಕ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡವು. ಒಟಿಟಿ ವೇದಿಕೆಗಳ ಪಾಲ್ಗೊಳ್ಳುವಿಕೆ ಭವಿಷ್ಯದಲ್ಲಿ ನಿಯಮಿತ ಲಕ್ಷಣವಾಗಲಿದೆ ಎಂದರು.

ಒಟಿಟಿ ವೇದಿಕೆಗಳೊಂದಿಗಿನ ಪ್ರಪ್ರಥಮ ಸಹಯೋಗದ ಬಗ್ಗೆ ಮಾತನಾಡಿದ ಸಚಿವರು, ಆನ್ ಲೈನ್ ಕಾರ್ಯಕ್ರಮಗಳು ಮತ್ತು ಉತ್ಸವದಲ್ಲಿ ಭಾಗವಹಿಸುವ ಬಗ್ಗೆ ಕೆಲವು ವಿವರಗಳನ್ನು ನೀಡಿದರು. 'ಒಟಿಟಿ ವೇದಿಕೆಗಳಲ್ಲಿ ಏಕಕಾಲದಲ್ಲಿ 50ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಂಡವು. ಒಟಿಟಿ ವೇದಿಕೆಗಳ ಸಹಯೋಗದೊಂದಿಗೆ 10 ಮಾಸ್ಟರ್ ತರಗತಿಗಳು ಮತ್ತು ಪರಸ್ಪರ ಸಂವಾದದ ಅಧಿವೇಶನಗಳನ್ನು ಆಯೋಜಿಸಲಾಗಿತ್ತು.  ಮನೋಜ್ ಬಾಜಪೇಯಿ, ಹೃತಿಕ್ ರೋಷನ್, ಶೂಜಿತ್  ಸಿರ್ಕಾರ್ ಸೇರಿದಂತೆ ಅನೇಕ ಸಿನೆಮಾ ದಿಗ್ಗಜರು ಉತ್ಸವದಲ್ಲಿ ತಮ್ಮ ಅನುಭವಗಳು ಮತ್ತು ಕಲೆಯನ್ನು ಹಂಚಿಕೊಂಡರು."

ಪ್ರಸಿದ್ಧ ಅಭಿನೇತ್ರಿ ಮತ್ತು ಅತಿಥಿ ಮಾಧುರಿ ದೀಕ್ಷಿತ್ ಬಗ್ಗೆ ಮಾತನಾಡಿದ ಸಚಿವರು, ಮನರಂಜನಾ ಜಗತ್ತಿನಲ್ಲಿ ಅವರು ದೊಡ್ಡ ಹೆಸರು ಮಾಡಿದ್ದಾರೆ ಎಂದು ಹೇಳಿದರು. "ಅವರು ಜನರ ಹೃದಯವನ್ನು ಆಳುತ್ತಾರೆ ಅದನ್ನು ಮುಂದುವರಿಸುತ್ತಾರೆ ಮತ್ತು ಮುಂಬರುವ ಅನೇಕ ವರ್ಷಗಳವರೆಗೆ ಮನರಂಜನಾ ಜಗತ್ತಿಗೆ ಕೊಡುಗೆ ನೀಡುತ್ತಾರೆ ಎಂಬ ಖಾತ್ರಿ ತಮಗಿದೆ" ಎಂದರು.

ಸ್ವರ್ಣ ನವಿಲು (ಗೋಲ್ಡನ್ ಪೀಕಾಕ್) ಮತ್ತು ಇತರ ಉತ್ಸವ ಪ್ರಶಸ್ತಿಗಳ ಪ್ರಕಟಣೆಗೆ ಮೊದಲು,  ವಾರ್ತಾ ಮತ್ತು ಪ್ರಸಾರ  ಸಚಿವರು ಎಲ್ಲಾ ಸ್ಪರ್ಧಿಗಳಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು,  ಉತ್ಸವದಲ್ಲಿ ಗೌರವಿಸಲ್ಪಟ್ಟ ಎಲ್ಲಾ ಚಲನಚಿತ್ರಗಳು ಮತ್ತು ಚಲನಚಿತ್ರ ನಿರ್ಮಾಪಕರನ್ನು ಅಭಿನಂದಿಸಿದರು. "ಅವರ ಕೆಲಸ ಮತ್ತು ಕೊಡುಗೆಯು ಪೀಳಿಗೆಗಳಿಗೆ ಉನ್ನತ ಗುರಿಯನ್ನು ಹೊಂದಲು ಮತ್ತು ಕ್ಷೇತ್ರದಲ್ಲಿ ದಿಗ್ಗಜರಾಗಲು ಪ್ರೇರೇಪಿಸುತ್ತದೆ." ಎಂದರು.

ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯೂ ಇಪ್ಫಿಯಲ್ಲಿ ಪಾಲ್ಗೊಳ್ಳಲು 20 ಅಥವಾ 30 ಗಂಟೆಗಳಿಗೂ ಹೆಚ್ಚು ಕಾಲ ವಿಶ್ವದಾದ್ಯಂತದಿಂದ ಪ್ರಯಾಣ ಮಾಡಿದ ಅಂತಾರಾಷ್ಟ್ರೀಯ ಪ್ರತಿನಿಧಿಗಳಿಗೆ ಸಚಿವರು ಧನ್ಯವಾದ ಅರ್ಪಿಸಿದರು. ಅವರು ಜಾಗತಿಕ ಸಮುದಾಯಕ್ಕೆ ಭಾರತದಲ್ಲಿ ಚಲನಚಿತ್ರಗಳನ್ನು ಚಿತ್ರೀಕರಿಸಲು ಆಹ್ವಾನಿಸಿದರು. "ಬನ್ನಿ ಭಾರತದಲ್ಲಿ ಚಲನಚಿತ್ರಗಳನ್ನು ಚಿತ್ರೀಕರಿಸಿ. ಚಲನಚಿತ್ರ ಸೌಲಭ್ಯ ಕಚೇರಿ ನಿಮಗೆ ಅಗತ್ಯವಿರುವ ಎಲ್ಲಾ ಸಹಾಯ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅನುಕೂಲವನ್ನೂ ಮಾಡಿಕೊಡುತ್ತದೆ." ಉತ್ತರ ಪ್ರದೇಶದಲ್ಲಿ ಮುಂಬರುವ ಚಲನಚಿತ್ರ ನಗರದ ಬಗ್ಗೆ ಮಾತನಾಡಿದ ಸಚಿವರು, ರಾಜ್ಯವು 1೦೦೦ ಎಕರೆ ಚಲನಚಿತ್ರ ನಗರವನ್ನು ರೂಪಿಸುತ್ತಿದೆ ಎಂದು ಹೇಳಿದರು. "ಸೂಕ್ತವಾದ ಜನರು ಬಂದು ಹೂಡಿಕೆ ಮಾಡಲು ನಿರೀಕ್ಷಿಸುತ್ತಿರುವುದಾಗಿ" ತಿಳಿಸಿದರು.

ಇಫ್ಫಿ ಇಂಡಿಯನ್ ಪನೋರಮಾದ ಮೊಟ್ಟಮೊದಲ ದಿಮಾಸಾ  ಭಾಷೆಯ ಚಿತ್ರ ಸೆಂಮ್ಕೋರ್ ನಿರ್ದೇಶಕ ಮತ್ತು ನಟ ಐಮೀ ಬರುವಾ ಅವರನ್ನು ಸಚಿವರು ಶ್ಲಾಘಿಸಿದರು. "ದಿಮಾಸಾ  ಭಾಷೆಯನ್ನು ಕಲಿಯಲು, ಅಸ್ಸಾಂನ ಬುಡಕಟ್ಟು ಸಮುದಾಯ ನೆಲೆಸಿರುವ ಸ್ಥಳದಲ್ಲಿ ಐಮೀ ಬರುವಾ ಒಂದು ವರ್ಷ ಉಳಿಯಬೇಕಾಯಿತು ಎಂದ ಅವರು ಮುಂಜಾನೆಯೇ ಚಿತ್ರೀಕರಣವನ್ನು ಪೂರ್ಣಗೊಳಿಸಬೇಕಾದಂತಹ ವಿವಿಧ ಅಡೆತಡೆಗಳನ್ನು ಧೈರ್ಯದಿಂದ ಎದುರಿಸಿ, ಚಿತ್ರವನ್ನು ನಿರ್ಮಿಸಿದ್ದಾರೆ, ಇದಕ್ಕಾಗಿ ನಾನು ಬರುವಾ ಅವರನ್ನು ಪ್ರಶಂಸಿಸುತ್ತೇನೆ." ಎಂದರು.

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಬುಡಕಟ್ಟು ಗೌರವ ದಿವಸವಾಗಿ ಸರ್ಕಾರ ಆಚರಿಸಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ ಎಂಬುದನ್ನು ಸಚಿವರು ಸ್ಮರಿಸಿದರು. "ಭಾರತ ಸರ್ಕಾರವು 2021ರ ನವೆಂಬರ್ 15 ರಿಂದ ನವೆಂಬರ್ 22ರವರೆಗೆ ಬುಡಕಟ್ಟು ಗೌರವ  ಸಪ್ತಾಹ ಎಂದು ಆಚರಿಸಿದೆ. ಈ ತಿಂಗಳಲ್ಲಿಯೇ ಬುಡಕಟ್ಟು ಸಮುದಾಯದ ಬಗ್ಗೆ ಒಂದು ಚಲನಚಿತ್ರ ವನ್ನು ನಾವು ಪಡೆದಿರುವುದು ಅದ್ಭುತವಾಗಿದೆ." ಇದಕ್ಕಾಗಿ ನಾನು ನಿಮ್ಮನ್ನು ಶ್ಲಾಘಿಸುತ್ತೇನೆ", ಎಂದು ಸಚಿವರು ಐಮೀ ಬರುವಾ ಅವರನ್ನುದ್ದೇಶಿಸಿ ಹೇಳಿದರು.

ಸಚಿವರು ಎನ್.ಎಫ್.ಡಿಸಿಯನ್ನು ಬಲಪಡಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು. "ಈ ಮೂಲಕ, ಆರ್ಥಿಕ ಆದಾಯವನ್ನು ನೀಡುವ ಅನುಮಾನವಿರುವಂತಹ ಚಲನಚಿತ್ರಗಳನ್ನು ಸಹ ಮಾಡಲು ನಿಮಗೆ ಅವಕಾಶ ನೀಡುತ್ತದೆ, ನಾವು ವಿಶ್ವದಾದ್ಯಂತ ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರದರ್ಶಿಸಲು ಒಟ್ಟಾಗಿ ಶ್ರಮಿಸುತ್ತೇವೆ." ಎಂದರು.

ಭಾರತದ ಸಿನೆಮಾ ಮತ್ತು ಹಿಂದಿ ಭಾಷೆಯನ್ನು ವಿಶ್ವದ ವಿವಿಧ ಮೂಲೆಗಳಿಗೆ ತೆಗೆದುಕೊಂಡು ಹೋಗಿರುವ ಚಲನಚಿತ್ರ ಭ್ರಾತೃತ್ವವನ್ನು ಸಚಿವರು ಶ್ಲಾಘಿಸಿದರು ಮತ್ತು ಇದರಲ್ಲಿ ಸರ್ಕಾರ ಉದ್ಯಮವನ್ನು ಬೆಂಬಲಿಸುತ್ತದೆ ಎಂದು ಹೇಳಿದರು.

2021ರ ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ ಪ್ರಶಸ್ತಿಗೆ ಭಾಜನರಾದ ಪ್ರಸೂನ್ ಜೋಶಿ ಅವರನ್ನು ಸಚಿವರು ಶ್ಲಾಘಿಸಿದರು. ಪ್ರಸೂನ್  ಜೋಶಿ ಒಬ್ಬ ಪ್ರತಿಭೆಯಲ್ಲ, ವೈವಿಧ್ಯಮಯ ಪ್ರತಿಭೆಗಳ ಮಹಾಪೂರ. ಭಾರತದ 75ನೇ ಸ್ವಾತಂತ್ರ್ಯ ವರ್ಷದ ಸಂದರ್ಭದಲ್ಲಿ ಶ್ರೀ ಜೋಶಿ ಅವರೊಂದಿಗೆ ಅಭಿನೇತ್ರಿ ಹೇಮಾ ಮಾಲಿನಿ ಅವರಿಗೂ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದಕ್ಕೆ ತಮಗೆ ಸಂತೋಷವಾಗಿದೆ ಎಂದರು.

ಮುಂದಿನ ವರ್ಷವೂ ಇಫ್ಫಿ ಈ ಆವೃತ್ತಿ ನಡೆದ ಸ್ಥಳದಲ್ಲಿ ಮತ್ತು ಇದೇ ಸಮಯದಲ್ಲಿ ಅಂದರೆ 2022 ರ ನವೆಂಬರ್ 20 - 28, ನಡುವೆ ಗೋವಾದಲ್ಲಿ ನಡೆಯಲಿದೆ ಎಂದು ಸಚಿವರು ಎಲ್ಲರಿಗೂ ಭರವಸೆ ನೀಡಿದರು.

ಎಲ್ಲಾ ಹಾಲಿ ಮತ್ತು ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸುತ್ತಾ ಸಚಿವರು ತಮ್ಮ ಮಾತು ಮುಕ್ತಾಯಗೊಳಿಸಿದರು ಮತ್ತು ಉತ್ಕೃಷ್ಟತೆಯ ಹೊಸ ಉತ್ತುಂಗ ತಲುಪಲು, ಉದ್ಯಮವನ್ನು ಸುಗಮಗೊಳಿಸುವ ಸಲುವಾಗಿ, ಇಡೀ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯವಿರುವ ಎಲ್ಲವನ್ನೂ ಮಾಡುವುದಾಗಿ ಮತ್ತು ನೀತಿ ವಿನ್ಯಾಸ, ವಿಕಸನ ಮತ್ತು ಅನುಷ್ಠಾನದ ಮಟ್ಟದಲ್ಲಿ ಸರ್ಕಾರದ ಸಂಪೂರ್ಣ ಬೆಂಬಲವನ್ನು ಖಾತ್ರಿಪಡಿಸಿದರು.

***



(Release ID: 1775948) Visitor Counter : 229