ಪ್ರಧಾನ ಮಂತ್ರಿಯವರ ಕಛೇರಿ

“ಮೊದಲ ಲೆಕ್ಕಪತ್ರ ದಿನ” ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


“ಸರ್ಕಾರ ಹಾಗೂ ಸಿಎಜಿ ನಡುವಿನ ಮನಸ್ಥಿತಿ ಬದಲಾಗಿದೆ. ಇಂದು ಲೆಕ್ಕಪರಿಶೋಧನೆ ಅತ್ಯಂತ ಪ್ರಮುಖ ಮೌಲ್ಯ ಸೇರ್ಪಡೆಯಾಗಿ ಪರಿಗಣಿಸಲಾಗಿದೆ”

“ನಾವು ಹಿಂದಿನ ಸರ್ಕಾರಗಳ ಸತ್ಯವನ್ನು ಪೂರ್ಣಪ್ರಮಾಣದ ಪ್ರಾಮಾಣಿಕತೆಯಿಂದ ದೇಶದ ಮುಂದಿಟ್ಟಿದ್ದೇವೆ. ನಾವು ಸಮಸ್ಯೆಗಳನ್ನು ಗುರುತಿಸಿದಾಗ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ” ಮೊದಲ ಲೆಕ್ಕಪತ್ರ ದಿನ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ

“ಸಂಪರ್ಕ ರಹಿತ ವಿಧಾನ, ಸ್ವಯಂ ಚಾಲಿತ ನವೀಕರಣ, ಮುಖರಹಿತ ಮೌಲ್ಯಮಾಪನ, ಸೇವೆ ಒದಗಿಸಲು ಆನ್ ಲೈನ್ ಅಪ್ಲಿಕೇಷನ್ ಗಳು, ಈ ಎಲ್ಲಾ ಸುಧಾರಣೆಗಳು ಸರ್ಕಾರದ ಅನಗತ್ಯ ಹಸ್ತಕ್ಷೇಪವನ್ನು ಕೊನೆಗೊಳಿಸಿದೆ”

ಆಧುನಿಕ ಕಾರ್ಯ ವಿಧಾನಗಳನ್ನು ಅಳವಡಿಸಿಕೊಂಡು ಸಿಎಜಿ ತ್ವರಿತವಾಗಿ ಬದಲಾವಣೆ ಕಂಡಿದೆ. ಇಂದು ನೀವು ಸುಧಾರಿತ ವಿಶ್ಲೇಷಣಾ ಸಾಧನಗಳು, ಭೂ ಪ್ರಾದೇಶಿಕ ದತ್ತಾಂಶ ಮತ್ತು ಉಪಗ್ರಹ ಚಿತ್ರಗಳನ್ನು ಬಳಸುತ್ತಿದ್ದೀರಿ”

“21ನೇ ಶತಮಾನದಲ್ಲಿ ದತ್ತಾಂಶ ಮಾಹಿತಿಯಾಗಿದೆ ಮತ್ತು ಬರುವ ದಿನಗಳಲ್ಲಿ ಇತಿಹಾಸ ಇದನ್ನು ನೋಡಲಿದೆ ಹಾಗೂ ದತ್ತಾಂಶದ ಮೂಲಕ ಇದು ಅರ್ಥವಾಗಲಿದ್ದು, ಭವಿಷ್ಯದಲ್ಲಿ ದತ್ತಾಂಶ ಇತಿಹಾಸವನ್ನು ನಿರ್ದೇಶಿಸಲಿದೆ”

Posted On: 16 NOV 2021 11:32AM by PIB Bengaluru

ಮೊದಲ ಲೆಕ್ಕಪರಿಶೋಧನಾ ದಿನ ಕುರಿತ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಭಾರತದ ಲೆಕ್ಕ ಪರಿಶೋಧಕರು ಮತ್ತು ನಿಯಂತ್ರಕರಾದ ಶ‍್ರೀ ಗಿರೀಶ‍್ ಚಂದ್ರ ಮುರ್ಮು ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಸಿಎಜಿಯು ದೇಶದ ಖಾತೆಗಳ ಮೇಲೆ ನಿಗಾ ಇಡುವುದಲ್ಲದೇ ಉತ್ಪಾದಕತೆ ಮತ್ತು ಮೌಲ್ಯ ವರ್ಧನೆ ಸಹ ಮಾಡುತ್ತದೆ. ಹೀಗಾಗಿ ಲೆಕ್ಕಪರಿಶೋಧನಾ ದಿನ ಕಾರ್ಯಕ್ರಮದಲ್ಲಿ ನಡೆಯುವ ಚರ್ಚೆಗಳು ಮತ್ತು ಸಂಬಂಧಿತ ವಿಷಯಗಳು ನಮ್ಮ ಅಭಿವೃದ‍್ಧಿ ಮತ್ತು ಸುಧಾರಣೆಯ ಭಾಗವಾಗಿವೆ. ಸಿಎಜಿ ಸಂಸ್ಥೆಯು ಪ್ರಾಮುಖ್ಯತೆಯನ್ನು ಬೆಳೆಸಿಕೊಂಡಿದೆ ಮತ್ತು ಕಾಲಾನಂತರದಲ್ಲಿ ಪರಂಪರೆಯನ್ನು ಸೃಷ್ಟಿಸಿದೆ ಎಂದರು.

ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಮಹಾತ್ಮಾಗಾಂಧಿ, ಸರ್ದಾರ್ ಪಟೇಲ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು  ಈ ಮಹಾನ್ ನಾಯಕರು ದೊಡ್ಡ ಗುರಿಗಳನ್ನು ನಿಗದಿಪಡಿಸುವುದು ಮತ್ತು ಅವುಗಳನ್ನು ಸಾಧಿಸುವುದು ಹೇಗೆ ಎಂದು ನಮಗೆ ಕಲಿಸಿದ್ದಾರೆ ಎಂದರು.

ದೇಶದಲ್ಲಿ ಲೆಕ್ಕಪರಿಶೋಧನೆಯನ್ನು ಆತಂಕ ಮತ್ತು ಭಯದಿಂದ ನೋಡುತ್ತಿದ್ದ ಕಾಲವಿತ್ತು. ಸಿಎಜಿ ಮತ್ತು ಸರ್ಕಾರ ನಮ್ಮ ವ್ಯವಸ್ಥೆಯ ಸಾಮಾನ್ಯ ಚಿಂತನಾ ವಲಯವಾಗಿ ಪರಿವರ್ತನೆಯಾಗಿದೆ. ಆದರೆ ಇಂದು ಈ ಮನಸ್ಥಿತಿಯಲ್ಲಿ ಬದಲಾವಣೆಯಾಗಿದೆ. ಇಂದು ಲೆಕ್ಕಪರಿಶೋಧನೆ ಅತ್ಯಂತ ಪ್ರಮುಖ ಮೌಲ್ಯ ಸೇರ್ಪಡೆಯಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.

ಈ ಹಿಂದೆ ಬ್ಯಾಂಕಿಂಗ್ ವಲಯದಲ್ಲಿ ಪಾರದರ್ಶಕತೆಯ ಕೊರತೆಯಿತ್ತು. ಹಲವಾರು ತಪ್ಪು ಕ್ರಮಗಳನ್ನು ಅನುಸರಿಸಲಾಗುತ್ತಿತ್ತು. ಇದರ ಪರಿಣಾಮ ಬ್ಯಾಂಕ್  ಗಳ ಎನ್.ಪಿ.ಎ ಹೆಚ್ಚುತ್ತಲೇ ಇತ್ತು. “ಈ ಹಿಂದೆ ಎನ್.ಪಿ.ಎ ಗಳನ್ನು ಕಂಬಳಿಗಳಡಿ ಹೇಗೆ ಗುಡಿಸಲಾಗುತ್ತಿತ್ತು ಎಂಬುದು ನಿಮಗೆಲ್ಲಾ ತಿಳಿಸಿದೆ” ಎಂದು ಹೇಳಿದರು.

“ಇಂದು ನಾವು ಹೊಸ ವ್ಯವಸ್ಥೆಯನ್ನು ರೂಪಿಸಿದ್ದೇವೆ. ಅದರಲ್ಲಿ ಸರ್ಕಾರವೇ ಎಲ್ಲವೂ ಆಗಿದೆ. ಸರ್ಕಾರದ ಹಸ್ತಕ್ಷೇಪ ಕಡಿಮೆಯಾಗುತ್ತಿದೆ ಮತ್ತು ನಿಮ್ಮ ಕೆಲಸ ಇಂದು ಸುಲಭವಾಗುತ್ತಿದೆ: ಕನಿಷ್ಠ ಸರ್ಕಾರ – ಗರಿಷ್ಠ ಆಡಳಿತ ಎಂಬುದಕ್ಕೆ ಅನುಗುಣವಾಗಿ ಆಡಳಿತ ನಡೆಯುತ್ತಿದೆ. “ಸಂಪರ್ಕ ರಹಿತ ವಿಧಾನ, ಸ್ವಯಂ ಚಾಲಿತ ನವೀಕರಣ, ಮುಖರಹಿತ ಮೌಲ್ಯಮಾಪನ, ಸೇವೆ ಒದಗಿಸಲು ಆನ್ ಲೈನ್ ಅಪ್ಲಿಕೇಷನ್ ಗಳು, ಈ ಎಲ್ಲಾ ಸುಧಾರಣೆಗಳು ಸರ್ಕಾರದ ಅನಗತ್ಯ ಹಸ್ತಕ್ಷೇಪವನ್ನು ಕೊನೆಗೊಳಿಸಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಕಡತಗಳನ್ನು ತಡಕಾಡುತ್ತಿರುವ ಕಾರ್ಯನಿರತ ವ್ಯಕ್ತಿಯ ಚಿತ್ರಣದಿಂದ ಸಿಎಜಿ ಹೊರ ಬಂದಿದೆ. “ಸಿಎಜಿ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತ್ವರಿತವಾಗಿ ಬದಲಾವಣೆಯಾಗಿದೆ. ಇಂದು ನೀವು ಸುಧಾರಿತ ವಿಶ್ಲೇಷಣಾ ಸಾಧನಗಳು, ಭೂ ಪ್ರಾದೇಶಿಕ ದತ್ತಾಂಶ ಮತ್ತು ಉಪಗ್ರಹ ಚಿತ್ರಗಳನ್ನು ಬಳಸುತ್ತಿದ್ದೀರಿ” ಎಂದರು.

ದೇಶದ ಅತಿದೊಡ್ಡ ಸಾಂಕ್ರಾಮಿಕ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಇದರ ವಿರುದ್ಧ ದೇಶ ಅಸಾಧಾರಣವಾಗಿ ಹೋರಾಟ ಮಾಡಿತು. ಇಂದು ನಾವು ಜಗತ್ತಿನ ಅತಿದೊಡ್ಡ ಲಸಿಕಾ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಕೆಲವು ವಾರಗಳ ಹಿಂದೆ ದೇಶ 100 ಕೋಟಿ ಡೋಸ್ ಲಸಿಕೆಯ ಮೈಲಿಗಲ್ಲು ದಾಟಿದೆ. ಈ ಮಹಾನ್ ಹೋರಾಟದ ಸಂದರ್ಭದಲ್ಲಿ ಹೊರ ಹೊಮ್ಮಿದ ಆಚರಣೆಗಳನ್ನು ಸಿಎಜಿ ಅಧ್ಯಯನ ಮಾಡಬಹುದು ಎಂದು ಪ್ರಧಾನಮಂತ್ರಿ ಅವರು ಸಲಹೆ ಮಾಡಿದರು.

ಹಿಂದಿನ ಕಾಲದಲ್ಲಿ ಕಥೆಗಳ ಮೂಲಕ ಮಾಹಿತಿ ಪ್ರಸರಣವಾಗುತ್ತಿತ್ತು. ಇತಿಹಾಸವನ್ನು ಕಥೆಗಳ ಮೂಲಕ ಬರೆಯಲಾಗುತ್ತಿತ್ತು. ಆದರೆ “21ನೇ ಶತಮಾನದಲ್ಲಿ ದತ್ತಾಂಶ ಮಾಹಿತಿಯಾಗಿದೆ ಮತ್ತು ಬರುವ ದಿನಗಳಲ್ಲಿ ಇತಿಹಾಸ ಇದನ್ನು ನೋಡಲಿದೆ ಹಾಗೂ ದತ್ತಾಂಶದ ಮೂಲಕ ಇದು ಅರ್ಥವಾಗಲಿದ್ದು, ಭವಿಷ್ಯದಲ್ಲಿ ದತ್ತಾಂಶ ಇತಿಹಾಸವನ್ನು ನಿರ್ದೇಶಿಸಲಿದೆ” ಎಂದು ಹೇಳಿದ ಪ್ರಧಾನಮಂತ್ರಿ ಅವರು ತಮ್ಮ ಭಾಷಣ ಪೂರ್ಣಗೊಳಿಸಿದರು.

***



(Release ID: 1772292) Visitor Counter : 205