ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಹಲವು ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ


ಭೋಪಾಲ್ ನಲ್ಲಿ ಮರು ಅಭಿವೃದ್ಧಿಗೊಳಿಸಿರುವ ರಾಣಿ ಕಮಲಪತಿ ರೈಲು ನಿಲ್ದಾಣ ರಾಷ್ಟ್ರಕ್ಕೆ ಅರ್ಪಿಸಿದ ಪ್ರಧಾನಿ

ಇಂದೋರ್ ಮತ್ತು ಉಜ್ಜಯಿನಿ ನಡುವೆ ಎರಡು ಹೊಸ ಮೆಮು ರೈಲುಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ

ಗೇಜ್ ಪರಿವರ್ತಿತ ಮತ್ತು ವಿದ್ಯುದೀಕರಿಸಿದ ಉಜ್ಜಯಿನಿ-ಫತೇಹಾಬಾದ್ ಚಂದ್ರಾವತಿ ಗಂಜ್ ಬ್ರಾಡ್ ಗೇಜ್ ವಿಭಾಗ, ಭೂಪಾಲ್-ಬಾರ್ಕೇರಾ ವಿಭಾಗದ ಮೂರನೇ ಮಾರ್ಗ, ಗೇಜ್ ಪರಿವರ್ತಿತ ಮತ್ತು ವಿದ್ಯುದೀಕರಿಸಿದ ಮಾತೇಲಾ-ನಿಮಾರ್ ಖೇರಿ ಬ್ರಾಂಡ್ ಗ್ರೇಜ್ ವಿಭಾಗ ಮತ್ತು ವಿದ್ಯುದೀಕರಿಸಿದ ಗುನಾ-ಗ್ವಾಲಿಯರ್ ವಿಭಾಗ ರಾಷ್ಟ್ರಕ್ಕೆ ಸಮರ್ಪಣೆ

“ಇಂದಿನ ಕಾರ್ಯಕ್ರಮ ವೈಭವದ ಇತಿಹಾಸ ಮತ್ತು ಸಮೃದ್ಧ ಆಧುನಿಕ ಭವಿಷ್ಯದ ಸಂಗಮದ ಸಂಕೇತ’’

“ದೇಶವು ತನ್ನ ನಿರ್ಣಯಗಳನ್ನು ಜಾರಿಗೊಳಿಸಲು ಪ್ರಾಮಾಣಿಕವಾಗಿ ಸಜ್ಜಾದಾಗ, ಇಂತಹ ಸುಧಾರಣೆಗಳಾಗುತ್ತವೆ ಮತ್ತು ಬದಲಾವಣೆ ಘಟಿಸುತ್ತದೆ, ಇದನ್ನು ನಾವು ಕಳೆದ ಕೆಲವು ವರ್ಷಗಳಿಂದ ಕಾಣುತ್ತಿದ್ದೇವೆ’’

“ಒಂದು ಕಾಲದಲ್ಲಿ ವಿಮಾನ ನಿಲ್ದಾಣದಲ್ಲಿ ಮಾತ್ರ ಲಭ್ಯವಿದ್ದ ಸೌಕರ್ಯಗಳು ಇಂದು ರೈಲ್ವೆ ನಿಲ್ದಾಣದಲ್ಲೂ ಲಭ್ಯವಿವೆ’’

“ಯೋಜನೆಗಳ ಅನುಷ್ಠಾನ ವಿಳಂಬವಾಗುವುದಿಲ್ಲ ಮತ್ತು ಯಾವುದೇ ಅಡೆತಡೆಗಳಿರುವುದಿಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಈ ನಿರ್ಣಯದ ಸಕಾರಕ್ಕೆ ಪಿಎಂ ಗತಿ ಶಕ್ತಿ ರಾಷ್ಟ್ರೀಯ ಕ್ರಿಯಾ ಯೋಜನೆ ದೇಶಕ್ಕೆ ಸಹಕಾರಿಯಾಗಲಿದೆ’’

“ಇದೇ ಮೊದಲ ಬಾರಿಗೆ ಸಾಮಾನ್ಯ ಜನರು ಪ

Posted On: 15 NOV 2021 5:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಭೋಪಾಲ್ ನಲ್ಲಿಂದು ಹಲವು ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಭೋಪಾಲ್ ನಲ್ಲಿ ಮರು ಅಭಿವೃದ್ಧಿಗೊಳಿಸಿರುವ ರಾಣಿ ಕಮಲಪತಿ ರೈಲು ನಿಲ್ದಾಣವನ್ನು ಅವರು ರಾಷ್ಟ್ರಕ್ಕೆ ಅರ್ಪಿಸಿದರು.

ಗೇಜ್ ಪರಿವರ್ತಿತ ಮತ್ತು ವಿದ್ಯುದೀಕರಿಸಿದ ಉಜ್ಜಯಿನಿ-ಫತೇಹಾಬಾದ್ ಚಂದ್ರಾವತಿ ಗಂಜ್ ಬ್ರಾಡ್ ಗೇಜ್ ವಿಭಾಗ, ಭೋಪಾಲ್-ಬಾರ್ಕೇರಾ ವಿಭಾಗದ ಮೂರನೇ ಮಾರ್ಗ, ಗೇಜ್ ಪರಿವರ್ತಿತ ಮತ್ತು ವಿದ್ಯುದೀಕರಿಸಿದ ಮಾತೇಲಾ-ನಿಮಾರ್ ಖೇರಿ ಬ್ರಾಂಡ್ ಗ್ರೇಜ್ ವಿಭಾಗ ಮತ್ತು ವಿದ್ಯುದೀಕರಿಸಿದ ಗುನಾ-ಗ್ವಾಲಿಯರ್ ವಿಭಾಗ ಸೇರಿದಂತೆ ಮಧ್ಯಪ್ರದೇಶದಲ್ಲಿ ರೈಲ್ವೆ ಕೈಗೊಂಡಿರುವ ಹಲವು ಉಪಕ್ರಮಗಳನ್ನು ಪ್ರಧಾನಮಂತ್ರಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಿದರು. ಅಲ್ಲದೆ, ಪ್ರಧಾನಿ ಅವರು ಇಂದೋರ್ ಮತ್ತು ಉಜ್ಜಯಿನಿ ನಡುವೆ ಎರಡು ಹೊಸ ಮೆಮು ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಮಧ್ಯಪ್ರದೇಶದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಹಾಗೂ ಕೇಂದ್ರ ರೈಲ್ವೆ ಸಚಿವರು ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭೋಪಾಲ್ ನ ಐತಿಹಾಸಿಕ ರೈಲ್ವೆ ನಿಲ್ದಾಣವನ್ನು ಪುನರುಜ್ಜೀವನಗೊಳಿಸಿರುವುದು ಮಾತ್ರವಲ್ಲದೆ, ರಾಣಿ ಕಮಲಪತಿ ಅವರು ಹೆಸರು ಸೇರ್ಪಡೆ ಮಾಡಿರುವುದರಿಂದ ಅದರ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಇಂದು ಗೊಂಡ್ವಾನದ ಹೆಮ್ಮೆಗೆ ಭಾರತೀಯ ರೈಲ್ವೆಯ ಹೆಮ್ಮೆಯೂ ಸೇರಿದೆ ಎಂದರು. ಆಧುನಿಕ ರೈಲ್ವೆ ಯೋಜನೆಯ ಸಮರ್ಪಣೆಯು ಭವ್ಯ ಇತಿಹಾಸ ಮತ್ತು ಸಮೃದ್ಧ ಆಧುನಿಕ ಭವಿಷ್ಯದ ಸಂಗಮವಾಗಿದೆ ಎಂದು ಪ್ರಧಾನಿ ಬಣ್ಣಿಸಿದರು. ಜಂಜಾತಿಯಾ ದಿನದ ಅಂಗವಾಗಿ ಪ್ರಧಾನಿ ಜನತೆಗೆ ಶುಭ ಕೋರಿದರು ಮತ್ತು ಈ ಯೋಜನೆಗಳು ಮಧ್ಯಪ್ರದೇಶದ ಜನರಿಗೆ ಅನುಕೂಲವಾಗಿವೆ ಎಂದು ಹೇಳಿದರು. 

ಭಾರತ ಹೇಗೆ ಬದಲಾಗುತ್ತಿದೆ, ಕನಸುಗಳು ಹೇಗೆ ನನಸಾಗುತ್ತಿವೆ ಎಂಬುದನ್ನು ಭಾರತೀಯ ರೈಲ್ವೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ 6-7 ವರ್ಷಗಳ ಹಿಂದಿನವರೆಗೆ ಭಾರತೀಯ ರೈಲ್ವೆಯೊಂದಿಗೆ ವ್ಯವಹರಿಸಬೇಕಾದವರು ಭಾರತೀಯ ರೈಲ್ವೆಯನ್ನು ಶಪಿಸುತ್ತಿದ್ದರು. ಜನರು ಪರಿಸ್ಥಿತಿ ಬದಲಾಗುತ್ತದೆ ಎನ್ನುವ ಭರವಸೆಯನ್ನೇ ಕೈ ಬಿಟ್ಟಿದ್ದರು. ಆದರೆ ದೇಶವು ತನ್ನ ನಿರ್ಣಯಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಸಿದ್ಧವಾದಾಗ, ಸುಧಾರಣೆಗಳು ಬರುತ್ತವೆ ಮತ್ತು ಬದಲಾವಣೆ ಘಟಿಸುತ್ತದೆ, ಇದನ್ನು ಕಳೆದ ಕೆಲವು ವರ್ಷಗಳಿಂದ ನಾವು ನೋಡುತ್ತಿದ್ದೇವೆ’’ಎಂದು ಪ್ರಧಾನಮಂತ್ರಿ ಹೇಳಿದರು. 

ದೇಶದ ಮೊದಲ ಐಎಸ್ಒ ಪ್ರಮಾಣಿಕೃತ, ಮೊದಲ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಪಿಪಿಪಿ ಮಾದರಿಯ ರೈಲ್ವೆ ನಿಲ್ದಾಣವನ್ನು ಅಂದರೆ ರಾಣಿ ಕಲಮಪತಿ ರೈಲ್ವೆ ನಿಲ್ದಾಣವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಒಂದು ಕಾಲದಲ್ಲಿ ವಿಮಾನ ನಿಲ್ದಾಣಗಳಲ್ಲಿ ಲಭ್ಯವಾಗುತ್ತಿದ್ದಂತಹ ಸೌಕರ್ಯಗಳು ಈಗ ರೈಲು ನಿಲ್ದಾಣಗಳಲ್ಲಿ ಲಭ್ಯವಾಗುತ್ತಿವೆ ಎಂದು ಅವರು ಹೇಳಿದರು.

ಇಂದಿನ ಭಾರತವು ಆಧುನಿಕ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ದಾಖಲೆಯ ಹೂಡಿಕೆಗಳನ್ನು ಮಾಡುತ್ತಿಲ್ಲ, ಆದರೆ ಯೋಜನೆಗಳು ವಿಳಂಬವಾಗದಂತೆ ಮತ್ತು ಯಾವುದೇ ಆಡೆತಡೆಗಳಾಗದಂತೆ ಖಾತ್ರಿಪಡಿಸುತ್ತದೆ. ಇತ್ತೀಚೆಗೆ ಆರಂಭಿಸಲಾದ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಕ್ರಿಯಾ ಯೋಜನೆ ಈ ನಿರ್ಣಯಗಳ ಸಾಕಾರಕ್ಕೆ ದೇಶಕ್ಕೆ ಸಹಕಾರಿಯಾಗಲಿದೆ ಎಂದು ಪ್ರಧಾನಿ ಹೇಳಿದರು. ರೈಲ್ವೆ ಮೂಲ ಯೋಜನೆಗಳು ಡ್ರಾಯಿಂಗ್ ಬೋರ್ಡ್ ನಿಂದ ಹೊರಬರಲು ವರ್ಷಾನುಗಟ್ಟಲೆ ತೆಗೆದುಕೊಂಡ ನಿರ್ದಶನಗಳಿವೆ ಎಂಧು ಪ್ರಧಾನಿ ಹೇಳಿದರು. ಆದರೆ ಇಂದು ಭಾರತೀಯ ರೈಲ್ವೆ ಹೊಸ ಯೋಜನೆಗಳನ್ನು ರೂಪಿಸುವಲ್ಲಿ ಜರೂರು ತೋರುತ್ತಿದೆ ಮತ್ತು ಅದಕ್ಕೂ ಮುಖ್ಯವಾಗಿ ಅವುಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುತ್ತಿದೆ ಎಂದರು.

ಭಾರತೀಯ ರೈಲ್ವೆ ದೂರವನ್ನು ಸಂಪರ್ಕಿಸುವ ಮಾಧ್ಯಮ ಮಾತ್ರವಲ್ಲ, ದೇಶದ ಸಂಸ್ಕೃತಿ, ದೇಶದ ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಯನ್ನು ಸಂಪರ್ಕಿಸುವ ಪ್ರಮುಖ ಮಾಧ್ಯಮವಾಗಿದೆ ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯದ ಹಲವು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆ ಈ ಸಾಮರ್ಥ್ಯವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಅನ್ವೇಷಿಸಲಾಗುತ್ತಿದೆ. ಈ ಹಿಂದೆ ರೈಲ್ವೆಯನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಂಡರೂ ಸಹ ಅದು ಪ್ರೀಮಿಯಂ ಕ್ಲಬ್ ಗೆ ಸೀಮಿತವಾಗಿತ್ತು ಎಂದರು. ಆದರೆ ಇದೇ ಮೊದಲ ಬಾರಿಗೆ ಸಾಮಾನ್ಯ ಜನರು ಕಡಿಮೆ ದರದಲ್ಲಿ ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಯ ಆಧ್ಯಾತ್ಮಿಕ ಅನುಭವವನ್ನು ನೀಡುತ್ತಿದೆ. ರಾಮಾಯಣ ಸರ್ಕೀಟ್ ರೈಲು ಅಂತಹ ಒಂದು ವಿನೂತನ ಪ್ರಯತ್ನವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಬದಲಾವಣೆಯ ಸವಾಲನ್ನು ಸ್ವೀಕರಿಸಿ ಯಶಸ್ಸಿಯಾಗಿದ್ದಕ್ಕಾಗಿ ಅವರು ರೈಲ್ವೆಯನ್ನು ಅಭಿನಂದಿಸಿದರು.

***


(Release ID: 1772160) Visitor Counter : 232