ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವರ್ಚುವಲ್ ಮಾದರಿಯಲ್ಲಿ ನಡೆಯುವ 52ನೇ ಐ.ಎಫ್.ಎಫ್.ಐ (ಇಫ್ಪಿ)ಯಲ್ಲಿ ಪಾಲ್ಗೊಳ್ಳಲು ಮಾಧ್ಯಮ ನೋಂದಣಿ ಆರಂಭ

Posted On: 06 NOV 2021 12:22PM by PIB Bengaluru

ಗೋವಾದಲ್ಲಿ ಆನ್ ಲೈನ್ ಮಾದರಿಯಲ್ಲಿ ನಡೆಯಲಿರುವ 52ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಇಫ್ಫಿ)ಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಮಾಧ್ಯಮದವರು ಈಗ ನೋಂದಣಿ ಮಾಡಿಕೊಳ್ಳಬಹುದಾಗಿದೆ. 2021ರ ನವೆಂಬರ್ 20ರಿಂದ 28ರವರೆಗೆ ಡಿಜಿಟಲ್ ಮಾಧ್ಯಮದ ಮೂಲಕ  ವರ್ಚುವಲ್ ಆಗಿ ಪಾಲ್ಗೊಳ್ಳಲು ಬಯಸುವವರಿಗೆ ಈ ಪ್ರಕ್ರಿಯೆ ಅನ್ವಯವಾಗುತ್ತದೆ. ಈ ಕೆಳಗಿನ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. https://virtual.iffigoa.org

ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಏಷ್ಯಾದ ಅತ್ಯಂತ ಹಳೆಯ ಮತ್ತು ಭಾರತದ ಬೃಹತ್ ಚಲನ ಚಿತ್ರೋತ್ಸವದ 52ನೇ ಆವೃತ್ತಿಯು ಹೈಬ್ರೀಡ್ ಆಗಿದ್ದು, ವರ್ಚುವಲ್ ಮೂಲಕ ಉತ್ಸವ ಸಂಬಂಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.   ದೊಡ್ಡ ಸಂಖ್ಯೆಯ ಸಿನಿಮಾಗಳನ್ನು ಆನ್ ಲೈನ್ ನಲ್ಲಿ ಪ್ರದರ್ಶಿಸಲಾಗುವುದು. ಇದರ ಹೊರತಾಗಿ ಎಲ್ಲ ಮಾಧ್ಯಮ ಗೋಷ್ಠಿಗಳನ್ನು ಪಿಐಬಿ ಇಂಡಿಯಾ ಯೂಟ್ಯೂಬ್ ಚಾನೆಲ್ youtube.com/pibindia ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಪತ್ರಿಕಾಗೋಷ್ಠಿಯ ವೇಳೆ ಪತ್ರಕರ್ತರಿಗೆ ಪ್ರಶ್ನೆಗಳನ್ನು ಕೇಳಲೂ ಅವಕಾಶ ಕಲ್ಪಿಸಲಾಗುವುದು.

2921ರ ಜನವರಿ 1ಕ್ಕೆ 21 ವರ್ಷ ಮೇಲ್ಪಟ್ಟ ಮಾಧ್ಯಮ ವ್ಯಕ್ತಿಗಳಿಗೆ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಮಾನ್ಯತೆ ನೀಡಲಾಗುವುದು. ಮಾಧ್ಯಮ ನೋಂದಣಿ ಉಚಿತ. ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳಿಗೆ ಲಾಗಿನ್ ಕ್ರೆಡೆನ್ಷಿಯಲ್ ನೊಂದಿಗೆ ವರ್ಚುವಲ್ ಉತ್ಸವದಲ್ಲಿ ಪಾಲ್ಗೊಳ್ಳಲು ಇ-ಮೇಲ್/ ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡಲಾಗುವುದು. ಮಾಧ್ಯಮ ಪ್ರತಿನಿಧಿಗಳಿಗೆ ಒದಗಿಸಲಾಗುವ ವರ್ಚುವಲ್ ನೋಂದಣಿ ವರ್ಗಾವಣೆ ಮಾಡುವಂತಿರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಜೊತೆಗೆ 52ನೇ ಇಫ್ಫಿಯ ಈ ಕಾರ್ಯಕ್ರಮ ಕೇವಲ ವರ್ಚುವಲ್ ವೇದಿಕೆಗೆ ಮಾತ್ರವೇ ಸೀಮಿತವಾಗಿರುತ್ತದೆ ಮತ್ತು ಇದನ್ನು ಉತ್ಸವದ ಸ್ಥಳದಲ್ಲಿ ಬೌದ್ಧಿಕವಾಗಿ ಹಾಜರಾಗಲು ಬಳಸುವಂತಿಲ್ಲ.

ಇಫ್ಫಿ 52ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಬಯಸುವ ಮಾಧ್ಯಮ ಪ್ರತಿನಿಧಿಗಲು ಇಲ್ಲಿ ನೋಂದಣಿ ಮಾಡಬಹುದು.: https://my.iffigoa.org/extranet/media/

ಇಫ್ಫಿ ಬಗ್ಗೆ:

ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಇಫ್ಫಿ)ಯನ್ನು 1952ರಲ್ಲಿ ಆರಂಭಿಸಲಾಗಿದ್ದು, ಇದು ಏಷ್ಯಾದ ಅತ್ಯಂತ  ಮಹತ್ವದ ಚಲನಚಿತ್ರೋತ್ಸವವಾಗಿದೆ. ಪ್ರಸ್ತುತ ಗೋವಾ ರಾಜ್ಯದಲ್ಲಿ ವಾರ್ಷಿಕವಾಗಿ ನಡೆಯುವ ಈ ಉತ್ಸವವು ಚಲನಚಿತ್ರ ಕಲೆಯ ಉತ್ಕೃಷ್ಟತೆಯನ್ನು ಪ್ರದರ್ಶಿಸಲು  ಪ್ರಪಂಚದ ಸಿನಿಮಾಗಳಿಗೆ ಸಾಮಾನ ವೇದಿಕೆಯನ್ನು ಒದಗಿಸುವ; ವಿವಿಧ ರಾಷ್ಟ್ರಗಳ ಚಲನಚಿತ್ರ ಸಂಸ್ಕೃತಿಗಳ ತಿಳಿವಳಿಕೆ ಮತ್ತು ಮೆಚ್ಚುಗೆಗೆ ಕೊಡುಗೆ ನೀಡುವ;  ಸಾಂಸ್ಕೃತಿಕ ನೀತಿಗಳ ನಿಟ್ಟಿನಲ್ಲಿ ಅವರ ಸಾಮಾಜಿಕ ಮತ್ತು ಪ್ರಪಂಚದ ಜನರ ನಡುವೆ ಸ್ನೇಹ ಮತ್ತು ಸಹಕಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಉತ್ಸವವನ್ನು ಚಲನಚಿತ್ರೋತ್ಸವಗಳ ನಿರ್ದೇಶನಾಲಯ (ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ) ಮತ್ತು ಗೋವಾ ರಾಜ್ಯ ಸರ್ಕಾರ ಜಂಟಿಯಾಗಿ ನಡೆಸುತ್ತದೆ.

52ನೇ ಇಫ್ಫಿಗೆ ಸಂಬಂಧಿಸಿದ ಎಲ್ಲ ಸೂಕ್ತ ನವೀಕರಣಗಳನ್ನು ಉತ್ಸವದ ಅಂತರ್ಜಾಲ ತಾಣ www.iffigoa.org, ಇಫ್ಫಿಯ ಟ್ವಿಟರ್ ಸಾಮಾಜಿಕ ಮಾಧ್ಯ ಹ್ಯಾಂಡಲ್, ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಹಾಗೂ ಪಿಐಬಿ ಗೋವಾ ಮತ್ತು ಪಿಐಬಿ ಮುಂಬೈನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳಲ್ಲಿಯೂ ಪಡೆಯಬಹುದು. ಚಿತ್ರೋತ್ಸವದ ಕೈಪಿಡಿ ಆನ್ ಲೈನ್ ನಲ್ಲಿ ಲಭ್ಯ.

***



(Release ID: 1769752) Visitor Counter : 200