ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಬಾಲಾರೋಪಿಗಳ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಮಾದರಿ ನಿಯಮಗಳು, 2016 ರ ತಿದ್ದುಪಡಿಗಳ ಕುರಿತು ಪ್ರತಿಕ್ರಿಯೆಗಳು/ಸಲಹೆಗಳನ್ನು ಆಹ್ವಾನಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
Posted On:
28 OCT 2021 2:58PM by PIB Bengaluru
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಬಾಲಾರೋಪಿಗಳ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಮಾದರಿ ನಿಯಮಗಳು, 2016ರ ಕರಡು ತಿದ್ದುಪಡಿಗಳಿಗೆ ಎಲ್ಲಾ ಬಾಧ್ಯಸ್ಥರುಗಳಿಂದ ಪ್ರತಿಕ್ರಿಯೆಗಳು/ಸಲಹೆಗಳನ್ನು ಆಹ್ವಾನಿಸಿದೆ. ಮೇಲೆ ತಿಳಿಸಲಾದ ನಿಯಮಗಳಿಗೆ ಸಂಬಂಧಿಸಿದಂತೆ ತಮ್ಮ ಸಲಹೆಗಳು/ಪ್ರತಿಕ್ರಿಯೆಗಳನ್ನು 11.11.2021ರೊಳಗೆ cw2section-mwcd[at]gov[dot]in ಗೆ ಸಲ್ಲಿಸುವಂತೆ ಎಲ್ಲ ಬಾಧ್ಯಸ್ಥರುಗಳಿಗೂ ಮನವಿ ಮಾಡಲಾಗಿದೆ.
ಬಾಲಾರೋಪಿಗಳ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ತಿದ್ದುಪಡಿ ಮಸೂದೆ, 2021, ಬಾಲಾರೋಪಿಗಳ ಕಾಯಿದೆ, 2015ಕ್ಕೆ ತಿದ್ದುಪಡಿ ಮಾಡಲು ಬಯಸಿದ್ದು, 2021ರ ಜುಲೈ 28ರಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತು. ಈ ಮಸೂದೆಯನ್ನು ಸರ್ಕಾರ ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡಿಸಿತ್ತು. ಇದಕ್ಕೆ 24.03.2021ರಂದು ಲೋಕಸಭೆ ಅಂಗೀಕಾರ ನೀಡಿತ್ತು.
ಮಸೂದೆಯನ್ನು ಮಂಡಿಸುವ ಸಂದರ್ಭದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು, ವ್ಯವಸ್ಥೆಯಲ್ಲಿ ಚಾಲ್ತಿಯಲ್ಲಿರುವ ಅಸಮರ್ಪಕತೆಗಳ ಹಿನ್ನೆಲೆಯಲ್ಲಿ ದುರ್ಬಲ ಮಕ್ಕಳ ಆರೈಕೆ ಮತ್ತು ರಕ್ಷಣೆಯ ಜವಾಬ್ದಾರಿಯನ್ನು ಜಿಲ್ಲಾ ದಂಡಾಧಿಕಾರಿಗಳಿಗೆ ವಹಿಸುವ ಅಗತ್ಯವನ್ನು ಒತ್ತಿ ಹೇಳಿದ್ದರು. ಎಲ್ಲಾ ಸಮಸ್ಯೆಗಳಿಗಿಂತಲೂ ಉನ್ನತ ಆದ್ಯತೆಯನ್ನು ಭಾರತದ ಮಕ್ಕಳಿಗೆ ನೀಡುವ ನಿಟ್ಟಿನಲ್ಲಿ ಸಂಸತ್ತಿನ ಬದ್ಧತೆಯನ್ನು ಅವರು ವಿವರಿಸಿದ್ದರು.
ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಸಲುವಾಗಿ, ಕಾಯಿದೆಯ ಜೆಜೆ ಸೆಕ್ಷನ್ 61ರ ಅಡಿಯಲ್ಲಿ ದತ್ತು ಆದೇಶಗಳನ್ನು ನೀಡಲು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳಿಗೆ ಅಧಿಕಾರ ನೀಡುವುದೂ ಸೇರಿದಂತೆ ಜಿಲ್ಲಾ ದಂಡಾಧಿಕಾರಿಗಳ ಅಧಿಕಾರಗಳ ತಿದ್ದುಪಡಿಗಳನ್ನು ಇದು ಒಳಗೊಂಡಿದೆ. ಅದರ ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಮಕ್ಕಳ ಪರವಾಗಿ ಸಂಯೋಜಿತ ಪ್ರಯತ್ನಗಳನ್ನು ಕೈಗೊಳ್ಳಲು ಜಿಲ್ಲಾ ದಂಡಾಧಿಕಾರಿಗಳಿಗೆ ಕಾಯಿದೆಯಡಿಯಲ್ಲಿ ಮತ್ತಷ್ಟು ಅಧಿಕಾರ ನೀಡಲಾಗಿದೆ. ಕಾಯಿದೆಗೆ ತಿದ್ದುಪಡಿಯಾದ ನಿಬಂಧನೆಗಳ ಪ್ರಕಾರ, ಯಾವುದೇ ಮಕ್ಕಳ ಆರೈಕೆ ಸಂಸ್ಥೆಗಳನ್ನು ಜಿಲ್ಲಾ ದಂಡಾಧಿಕಾರಿಗಳ ಶಿಫಾರಸನ್ನು ಪರಿಗಣಿಸಿದ ನಂತರವೇ ನೋಂದಣಿ ಮಾಡಬೇಕು. ಜಿಲ್ಲಾ ದಂಡಾಧಿಕಾರಿಗಳು ಸ್ವತಂತ್ರವಾಗಿ ಜಿಲ್ಲಾ ಮಕ್ಕಳ ಸಂರಕ್ಷಣೆ ಘಟಕಗಳು, ಮಕ್ಕಳ ಕಲ್ಯಾಣ ಸಮಿತಿಗಳು, ಬಾಲಾರೋಪಿಗಳ ನ್ಯಾಯ ಮಂಡಳಿಗಳು, ವಿಶೇಷ ಬಾಲಾರೋಪಿ ಪೊಲೀಸ್ ಘಟಕಗಳು, ಮಕ್ಕಳ ಆರೈಕೆ ಸಂಸ್ಥೆಗಳು ಇತ್ಯಾದಿಗಳ ಕಾರ್ಯಾಚರಣೆಯ ಮೌಲ್ಯಮಾಪನ ಮಾಡುತ್ತಾರೆ.
ಬಾಲಾರೋಪಿಗಳ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಮಾದರಿ ನಿಯಮ 2016ರ ಕರಡು ತಿದ್ದುಪಡಿಗಳನ್ನು ನೋಡಲು ಈ ಕೆಳಗಿನ ಲಿಂಕ್ ಕ್ಲಿಂಕ್ ಮಾಡಿ.
https://wcd.nic.in/sites/default/files/Attachment-%20Working%20Draft%20on%20JJ%20Model%20Rules%202016-%20forwarding%20for%20comments%2027102021_0.pdf
***
(Release ID: 1767224)
Visitor Counter : 205