ಸಂಸ್ಕೃತಿ ಸಚಿವಾಲಯ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಂದ ಸ್ಥಾಪಿತವಾದ ಆಜಾ಼ದ್ ಹಿಂದ್ ಸರ್ಕಾರ ರಚನೆಯ ವಾರ್ಷಿಕೋತ್ಸವವನ್ನು  ಆಚರಿಸಲಾಯಿತು


ಭಾರತ ಮತ್ತು ಆಗ್ನೇಯ ಏಷ್ಯಾದಾದ್ಯಂತ ಕಾರ್ಯಕ್ರಮಗಳು ನಡೆದವು

Posted On: 22 OCT 2021 3:41PM by PIB Bengaluru

ಮುಖ್ಯಾಂಶಗಳು:

  • ಸ್ಮರಣಾರ್ಥ ಕಾರ್ಯಕ್ರಮಗಳಲ್ಲಿ ಐಎನ್ಎ ಮಾಜಿ ಸೈನಿಕರು, ಶಾಲಾ ವಿದ್ಯಾರ್ಥಿಗಳು, ಸ್ಥಳೀಯ ಸಮುದಾಯಗಳು ಮತ್ತು ಇತರರು ಭಾಗವಹಿಸಿದ್ದು ಜನ್ ಭಾಗೀದಾರಿಯ ಕಲ್ಪನೆಯ ನಿಜವಾದ ಸಾಕಾರವಾಗಿದೆ
  • ಒಡಿಶಾ, ಮಣಿಪುರ, ನಾಗಾಲ್ಯಾಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು
  • ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಇತ್ತೀಚೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಭೇಟಿ ನೀಡಿದ್ದರು ಮತ್ತು ನೇತಾಜಿಯವರು ಹೊಂದಿದ್ದ ಅಲ್ಲಿನ ನಿಕಟ ಸಂಬಂಧವನ್ನು ಸ್ಮರಿಸಲು ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು
  • ಸಂದರ್ಭದಲ್ಲಿ ಭಾರತದ ಹೈ ಕಮಿಷನರ್, ಸಿಂಗಾಪುರ್ ಐಎನಎ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು

ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಂದ ಆಜಾ಼ದ್ ಹಿಂದ್ ಸರ್ಕಾರ ರಚನೆಯಾದ ವಾರ್ಷಿಕೋತ್ಸವದ ನೆನಪಿಗಾಗಿ ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಅಕ್ಟೋಬರ್ 21ರಂದು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆಸರ್ಕಾರದ ಸಕ್ರಿಯ ಪಾತ್ರದ ಭಾಗವಾಗಿ ಸಂಸ್ಕೃತಿ ಸಚಿವಾಲಯವು ಭಾರತದ ವಿವಿಧ ಸಚಿವಾಲಯಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಭಾಗವಹಿಸುವಿಕೆಯೊಂದಿಗೆ ಎಲ್ಲೆಡೆ ಸಮಗ್ರ ಕಾರ್ಯಕ್ರಮಗಳನ್ನು ಸಂಘಟಿಸಲು ಮುಂದಾಯಿತು.

ಸ್ಮರಣಾರ್ಥ ಕಾರ್ಯಕ್ರಮಗಳಲ್ಲಿ ಐಎನ್ಎ ಮಾಜಿ ಸೈನಿಕರು, ಶಾಲಾ ವಿದ್ಯಾರ್ಥಿಗಳು, ಸ್ಥಳೀಯ ಸಮುದಾಯಗಳು ಮತ್ತು ಇತರರು ಭಾಗವಹಿಸಿದ್ದು ಇದು ಜನ್ ಭಾಗೀದಾರಿಯ ಕಲ್ಪನೆಯ ನಿಜವಾದ ಸಾಕಾರವಾಗಿದೆ.

ಸ್ಮರಣಾರ್ಥ ಉಪಕ್ರಮದ ಭಾಗವಾಗಿ ನಡೆದ ಕೆಲವು ಪ್ರಮುಖ ಕಾರ್ಯಕ್ರಮಗಳು ಕೆಳಕಂಡಂತಿವೆ:

1.  ಮಣಿಪುರ (ಮೊಯಿರಾಂಗ್)

ಮಣಿಪುರದ ಮೊಯಿರಾಂಗ್ ಭಾರತೀಯ ರಾಷ್ಟ್ರೀಯ ಸೇನೆಯು 14 ಏಪ್ರಿಲ್ 1944 ರಂದು ಭಾರತೀಯ ನೆಲದಲ್ಲಿ ಮೊದಲಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ ಸ್ಥಳವಾಗಿದೆ. ಅಕ್ಟೋಬರ್ 19-22 ನಡುವೆ ಐಎನ್ಎ ಕುಟುಂಬ ಯಾತ್ರೆ ಆಯೋಜಿಸಲಾಗಿದೆ. ಐಎನ್ಎ ಸಿದ್ಧಾಂತವನ್ನು ಬಿಂಬಿಸುವ ಹಾಡುಗಳ ಜೊತೆಗೆ ಸ್ಥಳೀಯ ನೃತ್ಯ ಪ್ರಕಾರಗಳಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ವಿಶೇಷ ಸ್ಮರಣಾರ್ಥವಾಗಿ ಸ್ಮಾರಕ ಕಟ್ಟಡಕ್ಕೆ ದೀಪಾಲಂಕಾರ ಮಾಡಲಾಯಿತು. ಮೊಯಿರಾಂಗ್ನಲ್ಲಿ ರೆಕಾರ್ಡ್ ಮಾಡಲಾದ ಸಂಸ್ಕೃತಿ ಸಚಿವಾಲಯದ ಐಎನ್ಎ ಹಾಡುಗಳ ವಿಶೇಷ ಸಂಗ್ರಹವನ್ನು ಇಲ್ಲಿ ನೋಡಬಹುದು. (ಇಲ್ಲಿ ವೀಕ್ಷಿಸಿ https://fb.watch/8NgwJ3EKub/)

 

2.  ನಾಗಾಲ್ಯಾಂಡ್

ಆಜಾ಼ದ್ ಹಿಂದ್ ಸರ್ಕಾರ ರಚನೆಯ ವಾರ್ಷಿಕೋತ್ಸವದ ನೆನಪಿಗಾಗಿ ನಾಗಾಲ್ಯಾಂಡ್ನ ರುಜುಜೋ ಗ್ರಾಮದಲ್ಲಿ ನಡೆದ ಸಾಂಸ್ಕೃತಿಕ ವಲಯದ ಪೂರ್ವ ವಲಯ ಮತ್ತು ಈಶಾನ್ಯ ವಲಯದ ಸಾಂಸ್ಕೃತಿಕ ಕೇಂದ್ರಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ 1940 ದಶಕದಲ್ಲಿ ಗ್ರಾಮದಲ್ಲಿ ವಾಸವಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಮತ್ತು ಐಎನ್ಎ ಪಾತ್ರವನ್ನು ನೆನಪಿಸಿಕೊಳ್ಳುವಲ್ಲಿ ಸ್ಥಳೀಯ ಸಮುದಾಯದ ಉತ್ಸಾಹಭರಿತ ಭಾಗವಹಿಸುವಿಕೆಯು ಕಾರ್ಯಕ್ರಮದಲ್ಲಿ ಕಂಡುಬಂದಿತು.

Image

3. ಒಡಿಶಾ

ಕಟಕ್ ನೇತಾಜಿಯವರ ಜನ್ಮ ಸ್ಥಳವಾಗಿತ್ತು. ಒಡಿಶಾದಲ್ಲಿ ಎನ್ಸಿಸಿ ಕೆಡೆಟ್ಗಳ ಸೈಕಲ್ ರ‍್ಯಾಲಿಗಳು, ನೇತಾಜಿಯವರ ಬಗ್ಗೆ ಸೆಮಿನಾರ್ಗಳು, ರಾಜ್ಯ ಮ್ಯೂಸಿಯಂನಲ್ಲಿ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ರೋಡ್ ಶೋಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುವ ಕಾರ್ಯಕ್ರಮಗಳಿದ್ದವು.

4. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಇತ್ತೀಚೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಭೇಟಿ ನೀಡಿದ್ದರು ಮತ್ತು ನೇತಾಜಿಯವರ ನಿಕಟ ಸಂಬಂಧವನ್ನು ಸ್ಮರಿಸಲು ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಹೆಚ್ಚಿನ ವಿವರಗಳನ್ನು ಇಲ್ಲಿ ಕಾಣಬಹುದು (https://pib.gov.in/PressReleasePage )

5. ಪಶ್ಚಿಮ ಬಂಗಾಳ

ಟಾಗೋರ್ ಮತ್ತು ನೇತಾಜಿಯವರ ಅನನ್ಯ ಸಂಬಂಧದ ಕುರಿತು ಒಂದು ವಿಚಾರ ಸಂಕಿರಣ ಸೆಮಿನಾರ್ ಅನ್ನು ಇಝೆಡ್ ಸಿ ಸಿ ಆಯೋಜಿಸಿತು.

ಕಾರ್ಯಕ್ರಮದಲ್ಲಿ ಟಾಗೋರ್ ಅವರು ಬರೆದ ನೇತಾಜಿಗೆ ಅರ್ಪಿಸಿದ ತಷರ್ ದೇಶ್ ಎಂಬ ನಾಟಕದ ಪ್ರದರ್ಶನವಾಯಿತು. (ಟ್ಯಾಶರ್ ದೇಶ್ https://m.facebook.com/ezcckolkata/videos/618395409335137/?extid=NS-UNK-UNK-UNK-IOS_GK0T-GK1C&refsrc=deprecated&ref=watch_permalink&_rdr)

ನೃತ್ಯ ಸಂಯೋಜನೆಯ ನೃತ್ಯ ಆಧಾರಿತ ಪ್ರದರ್ಶನವನ್ನು ವಿಶೇಷವಾಗಿ ನೇತಾಜಿಯ ಪೂರ್ವಿಕರ ಮನೆಯಲ್ಲಿ ಸುಭಾಷ್ ಗ್ರಾಮ್, ಕೊಡಲಿಯಾದಲ್ಲಿ ಚಿತ್ರೀಕರಿಸಲಾಯಿತು.

6.  ಸಂಸ್ಕೃತಿ ಸಚಿವಾಲಯ

ಪಾಡ್ಕಾಸ್ಟ್ ಬಿಡುಗಡೆ - ಆಡಿಯೋ ಕಥೆಗಳು 'ಜರಾ ಯಾದ್

ಕರೋ ಕುರ್ಬಾನಿ 'ಪಾಡ್ಕಾಸ್ಟ್ ಟ್ರೈಲರ್ https://fb.watch/8NgJiNw5H-/  

ಪಾಡ್ಕ್ಯಾಸ್ಟ್ ಸರಣಿಯು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಗಮನಾರ್ಹ ಕೊಡುಗೆ ನೀಡಿದ ವ್ಯಕ್ತಿಗಳು ಮತ್ತು ಚಳುವಳಿಗಳಿಗೆ ಗೌರವವಾಗಿದೆ, ಅವುಗಳಲ್ಲಿ ಕೆಲವು ಸ್ವಾತಂತ್ರ್ಯ ಚಳುವಳಿ ಕಥಾಹಂದರದಲ್ಲಿ ಸ್ಥಾನ ಪಡೆಯಲಿಲ್ಲ. ಮಾಡಿದ ತ್ಯಾಗಗಳಿಗೆ ಪ್ರತೀಕವಾಗಿ, ಭಾರತದ ಸ್ವಾತಂತ್ರ್ಯದ 75ನೇ ವರ್ಷಗಳ ಸ್ಮರಣೆಯ ಭಾಗವಾಗಿ ವೀರರ ಧೈರ್ಯ ಮತ್ತು ಶೌರ್ಯದ ಕಥೆಗಳನ್ನು ನೆನಪಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸುವುದಾಗಿದೆ.

 

May be an image of one or more people and text

ನೇತಾಜಿ ವರ್ಣಚಿತ್ರಗಳ ಡಿಜಿಟಲ್ ಸಂಗ್ರಹ (ನೇತಾಜಿ ವರ್ಣಚಿತ್ರಗಳು https://www.facebook.com/AzadiKaAmritMahotsav/videos/220180520122810)

ಎಎಸ್ಐ ಯಿಂದ ಕೆಂಪು ಕೋಟೆಯಲ್ಲಿ ಸ್ಮರಣೀಯ ಕಾರ್ಯಕ್ರಮ (https://amritmahotsav.nic.in/weekly-highlights-detail.htm?26)

ಸಂಸ್ಕೃತಿ ರಾಜ್ಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್ ಮತ್ತು  ಸಂಸ್ಕೃತಿ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿಲೇಖಿ ಇಂದು ಕೆಂಪು ಕೋಟೆಯಲ್ಲಿ ಆಜಾದ್ ಹಿಂದ್ ಸರ್ಕಾರ್ 78 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು. ಸಂದರ್ಭದಲ್ಲಿ ಜನರಲ್ ಬಕ್ಷಿ, ಎಸ್ ಎಮ್, ಬಿ ಎಸ್ ಎಮ್ (ನಿವೃತ್ತ) ಅವರ 'ಬೋಸ್: ದಿ ಮಿಲಿಟರಿ ಡೈಮೆನ್ಶನ್: ದಿ ಮಿಲಿಟರಿ ಹಿಸ್ಟರಿ ಆಫ್ ಐಎನ್ & ನೇತಾಜಿ' ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

Image

Image

Image

7. ವಿದೇಶಾಂಗ ಸಚಿವಾಲಯ

ಮಲೇಶಿಯಾ

ರಾಯಭಾರಿ ಕಚೇರಿಯು 18 ಅಕ್ಟೋಬರ್ 2021 ರಂದು ರಾಯಲ್ ಸೆಲಾಂಗೋರ್ ಕ್ಲಬ್ನಲ್ಲಿ ಹೈಬ್ರಿಡ್ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿತು. ನೇತಾಜಿ ಸೇವಾ ಕೇಂದ್ರ, ನೇತಾಜಿ ವೆಲ್ಫೇರ್ ಫೌಂಡೇಶನ್, ಮಲೇಷ್ಯಾ-ಇಂಡಿಯಾ ಹೆರಿಟೇಜ್ ಗ್ರೂಪ್, ಮಲೇಷ್ಯನ್ ಬೆಂಗಾಲಿ ಅಸೋಸಿಯೇಷನ್, ಕೆಲಬ್ ರೆಕ್ರೆಸಿ ಅಭಿಜಾನ್ ಮತ್ತು ರಾಯಲ್ ಸೆಲಾಂಗರ್ ಕ್ಲಬ್ ಸಹಭಾಗಿತ್ವದಲ್ಲಿ ಆಚರಣೆಗಳನ್ನು ನಡೆಸಲಾಯಿತು.

ಆಚರಣೆ ಮಾಡಿದ ಸ್ಥಳವು ಐತಿಹಾಸಿಕವಾಗಿ ಮಹತ್ವದ್ದಾಗಿದೆ, ಏಕೆಂದರೆ ರಾಯಲ್ ಸೆಲಾಂಗೋರ್ ಕ್ಲಬ್ ಸೆಲಾಂಗೋರ್ ಪಡಂಗ್ (ಡಾಟರನ್ ಮೆರ್ಡೆಕಾ ಅಥವಾ ಇಂಡಿಪೆಂಡೆನ್ಸ್ ಸ್ಕ್ವೇರ್) ಪಕ್ಕದಲ್ಲಿದೆ, ಅಲ್ಲಿಂದ ಸೆಪ್ಟೆಂಬರ್ 1943ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಾವಿರಾರು ಅನುಯಾಯಿಗಳಿಗೆ ಉತ್ಸಾಹಭರಿತ ಭಾಷಣದಲ್ಲಿ ಭಾರತದ ಸ್ವಾತಂತ್ರ್ಯದ ಹೋರಾಟಕ್ಕೆ ಹಲವಾರು ಯುವಕರು ಸೇರುತ್ತಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖರಲ್ಲಿ 4 ಐಎನ್ ಮಾಜಿ ಸೈನಿಕರು ಇದ್ದರು, ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾರಂಭದಲ್ಲಿ ವೈಯುಕ್ತಿಕವಾಗಿ ಭಾಗವಹಿಸಲು ಸಾಧ್ಯವಾಗದಿದ್ದ ಐಎನ್ಎಯ ಮತ್ತು ರಾಣಿ ಆಫ್ ಝಾನ್ಸಿ ರೆಜಿಮೆಂಟ್ನ ಮಾಜಿ ಸೈನಿಕರ ಸಂದರ್ಶನದ ಆಯ್ದ ಭಾಗಗಳನ್ನು ಪ್ರಸಾರ ಮಾಡಲಾಯಿತು.

ಸಿಂಗಾಪುರ

ಭಾರತದ ಹೈ ಕಮಿಷನರ್, ಸಿಂಗಾಪುರ್ ಐಎನ್ಎ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು. ಅಕ್ಟೋಬರ್ 21, 1943ರಂದು ನೇತಾಜಿಯವರು ಆಜಾ಼ದ್ ಹಿಂದ್ ಸರ್ಕಾರವನ್ನು ರಚಿಸಿರುವುದಾಗಿ ಘೋಷಿಸಿದರು, ಇದು ಸಿಂಗಾಪುರದಲ್ಲಿ 11 ಸಚಿವರು ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ ಎಂಟು ಪ್ರತಿನಿಧಿಗಳೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. (ಸಿಂಗಾಪುರದ ಕಾರ್ಯಕ್ರಮ)

 https://amritmahotsav.nic.in/whats-new-detail.htm?38   

Image

8. ಶಿಕ್ಷಣ ಸಚಿವಾಲಯ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸ್ಮರಣಾರ್ಥ  ವಿಶೇಷ ಸಭೆಗಳನ್ನು ಭಾರತದ ಶಾಲೆಗಳಲ್ಲಿ ನಡೆಸಲಾಯಿತು. ನೇತಾಜಿ ಮತ್ತು ಐಎನ್ಎ ಸೈನಿಕರಂತೆ ದಿರಿಸು ಧರಿಸಿರುವ ಮಕ್ಕಳು ಮತ್ತು ಐಎನ್ಎ ಮೆರವಣಿಗೆಯ ಹಾಡುಕದಂ ಕದಂ ಬಡಾಯೆ ಜಾಎಂದು ಹಾಡುವಲ್ಲಿ ಉತ್ಸಾಹದಿಂದ ಭಾಗವಹಿಸಿದರು.

Image

9. ಪ್ರವಾಸೋದ್ಯಮ ಸಚಿವಾಲಯ

ಪ್ರವಾಸೋದ್ಯಮ ಸಚಿವಾಲಯದಿಂದ ಸ್ವಾತಂತ್ರ್ಯದ ಪರಂಪರೆ ಎಂಬ ಶೀರ್ಷಿಕೆಯ ವಿಶೇಷ ಕರಪತ್ರವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ರವರಿಗೆ ಸಂಬಂಧಿಸಿದ ಸ್ಥಳಗಳನ್ನು  ವಿವರಗಳೊಂದಿಗೆ ಬಿಡುಗಡೆ ಮಾಡಲಾಯಿತು. (https://amritmahotsav.nic.in/flip-book/Travel-Itinerary-Brochure-on-Netaji-Subash-Chandra-Bose.html)

ನೇತಾಜಿಯ ಸ್ಮರಣೆಯ ಕಾರ್ಯಕ್ರಮವು  ಪ್ರಸ್ತುತ ನಡೆಯುತ್ತಿರುವ ಉಪಕ್ರಮವಾಗಿದ್ದು, ಅವರ ಜನ್ಮದಿನವಾದ ಜನವರಿ 23, 2022 ರಂದು ಒಂದು ದೊಡ್ಡ ಸಮಾರಂಭದಲ್ಲಿ ಮುಕ್ತಾಯವಾಗುತ್ತದೆ.

***



(Release ID: 1766898) Visitor Counter : 380